Advertisment

2ನೇ ಇನ್ನಿಂಗ್ಸ್​​ನಲ್ಲಿ ವಿಂಡೀಸ್​ ದಿಟ್ಟ ಹೋರಾಟ.. ಗಿಲ್​​ ಪಡೆಗೆ ಶಾಕ್..!

ಇಂಡೋ-ವಿಂಡೀಸ್​​​ ನಡುವಿನ ಡೆಲ್ಲಿ ದಂಗಲ್​ ಕ್ಲೈಮ್ಯಾಕ್ಸ್​ ಹಂತ ತಲುಪಿದೆ. ಮೂರೇ ದಿನಕ್ಕೆ ಟೆಸ್ಟ್​ಗೆ ಮುಕ್ತಾಯ ಹಾಡೋ ಲೆಕ್ಕಾಚಾರದಲ್ಲಿದ್ದ ಟೀಮ್​ ಇಂಡಿಯಾಗೆ ನಿನ್ನೆ ಕೆರಬಿಯನ್​ ಪಡೆ ಶಾಕ್​ ನೀಡಿದೆ. ಆರಂಭಿಕ 2 ಸೆಷನ್​​ಗಳಲ್ಲಿ ಮೇಲುಗೈ ಸಾಧಿಸಿದ್ದ ಟೀಮ್​ ಇಂಡಿಯಾ ಅಂತಿಮ ಸೆಷನ್​ನಲ್ಲಿ ಹಿನ್ನಡೆ ಆಗಿದೆ.

author-image
Ganesh Kerekuli
Siddaramaiah (2)
Advertisment

ಇಂಡೋ-ವಿಂಡೀಸ್​​​ ನಡುವಿನ ಡೆಲ್ಲಿ ದಂಗಲ್​ ಕ್ಲೈಮ್ಯಾಕ್ಸ್​ ಹಂತ ತಲುಪಿದೆ. ಮೂರೇ ದಿನಕ್ಕೆ ಟೆಸ್ಟ್​ಗೆ ಮುಕ್ತಾಯ ಹಾಡೋ ಲೆಕ್ಕಾಚಾರದಲ್ಲಿದ್ದ ಟೀಮ್​ ಇಂಡಿಯಾಗೆ ನಿನ್ನೆ ಕೆರಬಿಯನ್​ ಪಡೆ ಶಾಕ್​ ನೀಡಿದೆ. ಆರಂಭಿಕ 2 ಸೆಷನ್​​ಗಳಲ್ಲಿ ಮೇಲುಗೈ ಸಾಧಿಸಿದ್ದ ಟೀಮ್​ ಇಂಡಿಯಾ ಅಂತಿಮ ಸೆಷನ್​ನಲ್ಲಿ ಹಿನ್ನಡೆ ಅನುಭವಿಸಿತು. 

Advertisment

4 ವಿಕೆಟ್​​ ನಷ್ಟಕ್ಕೆ 140 ರನ್​ಗಳೊಂದಿಗೆ 3ನೇ ದಿನದಾಟ ಆರಂಭಿಸಿದ ವೆಸ್ಟ್​ ಇಂಡೀಸ್​ ತಂಡ ಶಾಯ್​ ಹೋಪ್​, ಟೆವಿನ್​ ಇಮ್ಲಾಚ್​​ ಕೆಲ ಕಾಲ ಆಸರೆರಾಗಿದ್ರು. ಈ ಆಟ ಹೆಚ್ಚು ಹೊತ್ತು ನಡೀಲಿಲ್ಲ. 

ಕುಲ್​​ದೀಪ್​ ಕೈಚಳಕಕ್ಕೆ ವಿಂಡೀಸ್​ ಉಡೀಸ್​

ಕುಲ್​​​ದೀಪ್​ ಯಾದವ್​ ಕೈಚಳಕಕ್ಕೆ ವಿಂಡೀಸ್​ ಉಡೀಸ್​ ಆಯ್ತು. ಶಾಯ್​ ಹೋಪ್,​ ಟೆವಿನ್​ ಇಮ್ಲಾಚ್​ ಹಾಗೂ ಆ ಬಳಿಕ ಕಣಕ್ಕಿಳಿದ ಜಸ್ಟಿಬ್​ ಗ್ರೀವ್ಸ್​​ ಬ್ಯಾಕ್​ ಟು ಬ್ಯಾಕ್​ ಪೆವಿಲಿಯನ್​ ಸೇರಿದ್ರು. ಜೊಮೆಲ್​ ವೆರಿಕನ್​ ಸಿರಾಜ್​ ಬೌಲಿಂಗ್​ನಲ್ಲಿ ಕ್ಲೀನ್​ ಬೋಲ್ಡ್​​ ಆದ್ರೆ, ಬೂಮ್ರಾ ಬಿರುಗಾಳಿಯ ದಾಳಿಗೆ ಖಾರಿ ಪಿಯರೆ ಸ್ಟನ್​ ಆದ್ರು. 13 ರನ್​ಗಳಿಸಿದ್ದ ಜೇಡನ್​ ಸೀಲ್ಸ್​​ ಕುಲ್​ದೀಪ್​ ಯಾದವ್​ಗೆ 5ನೇ ಬಲಿಯಾದ್ರು.

ಇದನ್ನೂ ಓದಿ: ಕುಲ್​ದೀಪ್ ವರ್ಲ್ಡ್​ ರೆಕಾರ್ಡ್.. ಚೈನಾಮನ್ ಸ್ಪಿನ್​ಗೆ ವೆಸ್ಟ್​ ಇಂಡೀಸ್ ಮೊದಲ ಇನ್ನಿಂಗ್ಸ್​​ ಉಡೀಸ್​!

Advertisment

81.5 ಓವರ್​​ಗಳಲ್ಲಿ 248 ರನ್​ಗಳಿಗೆ ವೆಸ್ಟ್​ ಇಂಡೀಸ್​ ತಂಡ ಸರ್ವಪತನ ಕಾಣ್ತು. 270 ರನ್​ಗಳ ಮುನ್ನಡೆಯಲ್ಲಿದ್ದ ಟೀಮ್​ ಇಂಡಿಯಾ ತಡಮಾಡದೇ ಫಾಲೋಆನ್​ ಹೇರಿತು. ಬಳಿಕ 2ನೇ ಇನ್ನಿಂಗ್ಸ್​ ಆರಂಭಿಸಿದ ವೆಸ್ಟ್​ ಇಂಡೀಸ್​ಗೆ ಇಲ್ಲೂ ಗುಡ್​ ಸ್ಟಾರ್ಟ್​ ಸಿಗಲಿಲ್ಲ. ತೇಜ್​ನರೇನ್ ಚಂದ್ರಪಾಲ್​, ಅಲಿಕ್​​ ಅಥನಾಜೆ ಆರಂಭದಲ್ಲೇ ಕೈ ಕೊಟ್ರು. 10 ರನ್​ಗಳಿಸಿ ಚಂದ್ರೊಆಕ್​ ಔಟಾದ್ರೆ, ಜಸ್ಟ್​ 7 ರನ್​ಗಳಿಗೆ ಅಥನಾಜೆ ಆಟ ಅಂತ್ಯವಾಯ್ತು. 

ದಿನದಾಟದ ಅಂತಿಮ ಸೆಷನ್​ನಲ್ಲಿ ವೆಸ್ಟ್​ ಇಂಡೀಸ್​ ತಂಡ ಸಾಲಿಡ್​ ಫೈಟ್​ ಬ್ಯಾಕ್​ ಮಾಡ್ತು. ಜಾಬ್​ ಕ್ಯಾಂಪ್​ಬೆಲ್​, ಶಾಯ್​ ಹೋಪ್​ ಟೀಮ್​ ಇಂಡಿಯಾದ ಬಿಗಿ ಬೌಲಿಂಗ್​ ದಾಳಿಯ ಎದುರು ದಿಟ್ಟ ಹೋರಾಟ ನಡೆಸಿದ್ರು. ಬೌಂಡರಿ-ಸಿಕ್ಸರ್​ ಬಾರಿಸಿ ಮಿಂಚಿದ ಇಬ್ಬರೂ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. 145 ಎಸೆತಗಳನ್ನ ಎದುರಿಸಿದ ಜಾನ್​ ಚಾಂಪ್​ಬೆಲ್​ 9 ಬೌಂಡರಿ, 2 ಸಿಕ್ಸರ್​ ಸಿಡಿಸಿದ್ದು ಅಜೇಯ 87 ರನ್​ಗಳಿಸಿದ್ದಾರೆ. 103 ಎಸೆತ ಎದುರಿಸಿ 8 ಬೌಂಡರಿ, 2 ಸಿಕ್ಸರ್​​ ಬಾರಿಸಿರೋ ಶಾಯ್​ ಹೋಪ್​ ಅಜೇಯ 66 ರನ್​ಗಳಿಸಿದ್ದಾರೆ. 

ಇದನ್ನೂ ಓದಿ:ವಿಶ್ವಕಪ್​ನಲ್ಲಿ 330 ರನ್​ ಚೇಸಿಂಗ್​.. ಟೀಮ್ ಇಂಡಿಯಾಗೆ ಬಿಗ್ ಶಾಕ್​ ಕೊಟ್ಟ ಆಸಿಸ್​

Advertisment

ದಿನದಾಟದ ಅಂತ್ಯಕ್ಕೆ ವಿಂಡೀಸ್​ 2 ವಿಕೆಟ್​ ನಷ್ಟಕ್ಕೆ 173 ರನ್​ಗಳಿಸಿದ್ದು, ಇನ್ನೂ 97 ರನ್​ಗಳಿಂದ ಹಿನ್ನಡೆಯಲ್ಲಿದೆ. ಆತ್ಮವಿಶ್ವಾಸದಲ್ಲಿರೋ ವಿಂಡೀಸ್​ ಬ್ಯಾಟರ್ಸ್​​ ಇಂದೂ ದಿಟ್ಟ ಹೋರಾಟ ನಡೆಸೋ ಲೆಕ್ಕಾಚಾರದಲ್ಲಿದ್ದಾರೆ. ಟೀಮ್​ ಇಂಡಿಯಾ ಬೌಲರ್ಸ್​ ಕಮ್​ಬ್ಯಾಕ್​ನ ಎದುರು ನೋಡ್ತಿದ್ದಾರೆ. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Test series against West Indies IND vs WI India vs West Indies
Advertisment
Advertisment
Advertisment