/newsfirstlive-kannada/media/media_files/2025/10/02/siraj-2025-10-02-13-32-03.jpg)
ಅಹ್ಮದಾಬಾದ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನಲ್ಲಿ ವೇಗಿ ಮೊಹ್ಮದ್ ಸಿರಾಜ್ ಮಿಂಚಿದ್ದಾರೆ. ಎದುರಾಳಿ ವೆಸ್ಟ್​​ ವಿಂಡೀಸ್​​ಗೆ ದೊಡ್ಡ ಆಘಾತ ನೀಡಿದ್ದು, ನಾಲ್ಕು ವಿಕೆಟ್​ ಕಿತ್ತಿದ್ದಾರೆ. ಪ್ರಸ್ತುತ ವೆಸ್ಟ್​ ವಿಂಡೀಸ್ 8 ವಿಕೆಟ್ ಕಳೆದುಕೊಂಡು 150 ರನ್​ಗಳಿಸಿ ಸಂಕಷ್ಟದಲ್ಲಿದೆ.
ಟಾಸ್​ ಗೆದ್ದ ವೆಸ್ಟ್​ ವಿಂಡೀಸ್​ ಮೊದಲು ಬ್ಯಾಟ್ ಮಾಡುವ ನಿರ್ಧಾರ ಮಾಡಿತು. ಆದರೆ ವಿಂಡೀಸ್​ ಲೆಕ್ಕಾಚಾರವನ್ನು ಟೀಂ ಇಂಡಿಯಾ ಬೌಲರ್​​ಗಳು ತಲೆಕೆಳಗೆ ಮಾಡಿದ್ದಾರೆ. ಅದರಲ್ಲೂ ಮೊಹ್ಮದ್ ಸಿರಾಜ್ ದೊಡ್ಡ ಪೆಟ್ಟು ನೀಡಿದ್ದಾರೆ. 11 ಓವರ್​ ಮಾಡಿರುವ ಸಿರಾಜ್ ಈಗಾಗಲೇ 4 ವಿಕೆಟ್ ಕಿತ್ತಿದ್ದಾರೆ.
ಇದನ್ನೂ ಓದಿ: ವಿಂಡೀಸ್ ಫಸ್ಟ್ ಬ್ಯಾಟಿಂಗ್.. ಬಲಿಷ್ಠ ತಂಡ ಕಣಕ್ಕಿಳಿಸಿದ ಭಾರತ..!
ಇನ್ನು ಜಸ್​ಪ್ರೀತ್ ಬುಮ್ರಾ ಎರಡು ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. ಟೀಮ್​ ಇಂಡಿಯಾ ತವರಿನಲ್ಲಿ ಆಡಿದ ಕೊನೆಯ ಸರಣಿಯಲ್ಲಿ ಹೀನಾಯ ಸೋಲುಂಡಿತ್ತು. 3-0 ಅಂತರದಲ್ಲಿ ನ್ಯೂಜಿಲೆಂಡ್​ ಎದುರು ಸೋತು ವೈಟ್​ವಾಷ್​ ಮುಖಭಂಗ ಅನುಭವಿಸಿತ್ತು. ತವರಿನಲ್ಲಿ ಅನುಭವಿಸಿದ ಅಪಮಾನದ ಬಳಿಕ ಟೀಮ್​ ಇಂಡಿಯಾದಲ್ಲಿ ಹಲವು ಬದಲಾವಣೆಯಾಗಿವೆ. ಯುವ ಆಟಗಾರ ಶುಭ್​ಮನ್​ ಗಿಲ್​ ನಾಯಕನ ಪಟ್ಟವನ್ನ ಏರಿದ್ದಾರೆ. ನಾಯಕನಾಗಿ ಇಂಗ್ಲೆಂಡ್​ ನೆಲದಲ್ಲಿ ಮೊದಲ ಸರಣಿಯಲ್ಲೇ ಸಕ್ಸಸ್​ ಕಂಡಿರೋ ಗಿಲ್​, ತವರಿನಲ್ಲೂ ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ. ಈ ಮೂಲಕ ವೈಟ್​ವಾಷ್​​ ಮುಖಭಂಗದ ಕರಾಳ ನೆನಪನ್ನ ಅಳಿಸೋ ಲೆಕ್ಕಾಚಾರದಲ್ಲಿದ್ದಾರೆ.
ಇದನ್ನೂ ಓದಿ: RCB ಖರೀದಿಸೋರು ಇವರೇನಾ? ಯಾರು ಇವರು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ