/newsfirstlive-kannada/media/media_files/2025/09/23/abhishek-sharma-2025-09-23-13-24-53.jpg)
ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಪಾಕಿಸ್ತಾನದ ವಿರುದ್ಧ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಹೃದಯ ಗೆದ್ದರು. ಕೇವಲ 39 ಎಸೆತಗಳಲ್ಲಿ 189.74 ಸ್ಟ್ರೈಕ್ ರೇಟ್‌ನಲ್ಲಿ 74 ರನ್ ಗಳಿಸಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು. ಈ ವೀರೋಚಿತ ಪಂದ್ಯದ ನಂತರ ‘ಎಲ್’ ಆಕಾರದಲ್ಲಿ ಬೆರಳುಗಳನ್ನು ತೋರಿಸಿ ಸಂಭ್ರಮಿಸಿದರು.
ಅಭಿಷೇಕ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಇದು ಪಾಕಿಸ್ತಾನ ವಿರುದ್ಧ ಭಾರತೀಯ ಆಟಗಾರನೊಬ್ಬ ಗಳಿಸಿದ ವೇಗದ ಅರ್ಧಶತಕ. ಅಭಿಷೇಕ್ ಅವರ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಕುಟುಂಬ ಕೂಡ ಪ್ರೇಕ್ಷಕರ ಗ್ಯಾಲರಿಯಲ್ಲಿತ್ತು. ಅಭಿಷೇಕ್ ಪ್ರೇಕ್ಷಕರ ಗ್ಯಾಲರಿಗೆ ಕಡೆಗೆ ಮುತ್ತುಗಳನ್ನು ಹಾರಿಬಿಟ್ಟರು. ನಂತರ 'L' ಸನ್ನೆ ಮಾಡಿದರು. ಈ ಎಲ್​​ ಸನ್ನೆ ಏನನ್ನು ಸೂಚಿಸುತ್ತದೆ ಎಂಬ ಚರ್ಚೆ ಶುರುವಾಗಿದೆ.
ಇದನ್ನೂ ಓದಿ:ಕವಾಸಾಕಿ ಬೈಕ್ ಗಳ ಬೆಲೆಯೂ ಭಾರಿ ಇಳಿಕೆ: ಹೊಸ ರೇಟ್ ವಿವರ ಇಲ್ಲಿದೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಷೇಕ್, ಕುಟುಂಬದ ಸದಸ್ಯರು ಕ್ರೀಡಾಂಗಣಕ್ಕೆ ಬಂದಾಗ ವಿಶೇಷ ಎನರ್ಜಿ ಸಿಗುತ್ತದೆ, ಏಕಪಕ್ಷೀಯವಾಗಿ ಗೆಲ್ಲುತ್ತೇವೆ. ಇಂದು ನಾವು ಏಕಪಕ್ಷೀಯವಾಗಿ ಗೆದ್ದಿದ್ದೇವೆ. ಕುಟುಂಬ ಸದಸ್ಯರು ಬಂದಾಗ ಅದು ವಿಶೇಷ ಭಾವನೆ ಎಂದು ಅಭಿಷೇಕ್ ಕುಟುಂಬದ ಉಪಸ್ಥಿತಿಯ ಬಗ್ಗೆ ಹೇಳಿದರು.
L ಸಿಂಬಲ್ ಬಗ್ಗೆ ಪ್ರತಿಕ್ರಿಯಿಸಿ.. ಈ ಸನ್ನೆ ತುಂಬಾನೇ ವಿಶೇಷವಾಗಿದೆ. ಇದು ಭಾರತ ತಂಡವನ್ನು ಬೆಂಬಲಿಸುವವರಿಗೆ. ಇದು ಭಾರತಕ್ಕಾಗಿ, ಇದರಲ್ಲಿ ಪ್ರೀತಿ ಇದೆ. ‘L’ ಸೆಲೆಬ್ರೇಷನ್ ಸ್ನೇಹ, ಕಠಿಣ ಪರಿಶ್ರಮ, ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಬರುತ್ತದೆ ಎಂಬ ಅಂಶವನ್ನು ಸಂಕೇತಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಸುಂಕದಕಟ್ಟೆಯಲ್ಲಿ ರೇಖಾ ಕೊಲೆ ಕೇಸ್ ಆರೋಪಿ ಬಂಧನ: ಆರೋಪಿ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ