/newsfirstlive-kannada/media/media_files/2025/10/17/ipl-2025-10-17-07-34-23.jpg)
- ವಿಶ್ವದ ಶ್ರೀಮಂತ ಲೀಗ್ IPLನ ಶಾಕಿಂಗ್ ಸುದ್ದಿ ರಿವೀಲ್
- ವರ್ಷದಿಂದ ವರ್ಷಕ್ಕೆ ವ್ಯಾಲ್ಯೂವೇಶನ್ನಲ್ಲಿ ಕುಸಿತ
- 76,100 ಕೋಟಿಗೆ ಕುಸಿತ ಕಂಡ IPL ವ್ಯಾಲ್ಯೂವೇಶನ್
ಐಪಿಎಲ್​.. ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​​.. ಸಾವಿರಾರು ಕೋಟಿ ಲೆಕ್ಕದಲ್ಲಿ ಈ ಕಲರ್​​ಫುಲ್​ ಲೀಗ್​ನಿಂದ ಬಿಸಿಸಿಐಗೆ ಆದಾಯ ಹರಿದು ಬರುತ್ತೆ. ಇದೇ ಐಪಿಎಲ್​ ಬಿಸಿಸಿಐ ಬಾಸ್​​ಗಳನ್ನ ಚಿಂತೆಗೆ ದೂಡಿದೆ. ರಿಚೆಸ್ಟ್​ ಲೀಗ್​ನ ವ್ಯಾಲ್ಯೂವೇಷನ್​​ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕುಸಿತ ಕಂಡಿದೆ.
ಇಂಡಿಯನ್​ ಪ್ರೀಮಿಯರ್​​ ಲೀಗ್​.. ವಿಶ್ವದ ರಿಚ್ಚೆಸ್ಟ್​ ಕ್ರಿಕೆಟ್​​ ಲೀಗ್​.. ಬೌಂಡರಿ, ಸಿಕ್ಸರ್​ಗಳ ಅಬ್ಬರ ಹೇಗಿರುತ್ತೋ ಹಾಗೇ ಝಣ ಝಣ ಕಾಂಚಾಣದ ಸದ್ದು ಕೂಡ ಈ ಲೀಗ್​ನಲ್ಲಿ ಜೋರಾಗಿ ಕೇಳಿ ಬರುತ್ತೆ. ಪ್ಲೇಯರ್ಸ್​ಯಿಂದ ಹಿಡಿದು ಚಿಯರ್​ಗರ್ಲ್ಸ್​ವರೆಗೆ ಕಾಂಚಾಣಾದ್ದೆ ಕಾರು ಬಾರು. ಎಲ್ಲಾ ಕೋಟಿ-ಕೋಟಿ ಲೆಕ್ಕದಲ್ಲೇ ವ್ಯವಹಾರ.
IPLನ ಶಾಕಿಂಗ್​ ಸುದ್ದಿ ರಿವೀಲ್​
ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ ಐಪಿಎಲ್​ ಟೂರ್ನಿಯ ಶಾಕಿಂಗ್​ ಸುದ್ದಿಯೊಂದು ಇದೀಗ ಹೊರಬಿದ್ದಿದೆ. ವರ್ಷದಿಂದ ವರ್ಷಕ್ಕೆ ಐಪಿಎಲ್​ನ ಕ್ರೇಜ್​ ಹೆಚ್ಚಾಗ್ತಿದೆ. ವಿಶ್ವದಾದ್ಯಂತ ಐಪಿಎಲ್​ ಟೂರ್ನಿಯನ್ನ ಫ್ಯಾನ್ಸ್​ ಹುಚ್ಚೆದ್ದು ನೋಡ್ತಿದ್ದಾರೆ. ವ್ಯಾಲ್ಯೂವೇಷನ್ ಮಾತ್ರ ವರ್ಷದಿಂದ ವರ್ಷಕ್ಕೆ ಕುಸಿತ ಕಾಣ್ತಿದೆ. ಹೊಸದಾಗಿ ರಿವೀಲ್​ ಆಗಿರುವ ಡಾಟಾ ಇಂತದ್ದೊಂದು ಶಾಕಿಂಗ್​ ಸುದ್ದಿಯನ್ನ ರಿವೀಲ್​ ಮಾಡಿದೆ.
76,100 ಕೋಟಿಗೆ ಕುಸಿತ ಕಂಡ IPL ವ್ಯಾಲ್ಯೂವೇಶನ್
2025ರ ಐಪಿಎಲ್​ ಈ ಹಿಂದೆದಿಗಿಂತ ಫ್ಯಾನ್ಸ್​ಗೆ ಭರ್ಜರಿ ಮನರಂಜನೆ ನೀಡಿತು. ಐಪಿಎಲ್ ಫ್ರಾಂಚೈಸಿಗಳ ಪೈಕಿ ಅತೊ ಹೆಚ್ಚು ಫ್ಯಾನ್​ ಫಾಲೋವಿಂಗ್​ ಹೊಂದಿರೋ ಆರ್​​ಸಿಬಿ ಬೊಂಬಾಟ್​ ಪರ್ಫಾಮೆನ್ಸ್​​ ನೀಡಿತ್ತು. ಬೌಂಡರಿ, ಸಿಕ್ಸರ್​ಗಳ ಸುರಿಮಳೆ, ರಣರೋಚಕ ಪಂದ್ಯಗಳು, ಜಿದ್ದಾಜಿದ್ದಿನ ಕಾಳಗಗಳಿಗೆ ಸೀಸನ್​ ಸಾಕ್ಷಿಯಾಗಿತ್ತು. ಆದರೂ ಐಪಿಎಲ್​ನ ವ್ಯಾಲ್ಯೂವೇಶನ್​ ಕುಸಿತ ಕಂಡಿದೆ. 2024ಕ್ಕೆ ಹೋಲಿಸಿದ್ರೆ ಶ್ರೇಕಡಾ 8 ರಷ್ಟು ಕುಸಿತ ಕಂಡುಬಂದಿದೆ. 2024ರಲ್ಲಿ 82,700 ಕೋಟಿ ಇದ್ದ ವ್ಯಾಲ್ಯೂವೇಶನ್​ ಇದೀಗ 76,100 ಕೋಟಿಗೆ ಕುಸಿದಿದೆ.
ಶ್ರೀಮಂತ ಲೀಗ್​ನ ವ್ಯಾಲ್ಯೂವೇಶನ್
2025ರ ಕತೆ ಮಾತ್ರವಲ್ಲ, 2024ರಲ್ಲೂ ಆಗಿದ್ದು ಇದೇ. ಆ ಸೀಸನ್​ನಲ್ಲಿ ಬರೋಬ್ಬರಿ ಶೇಕಡಾ 10.6ರಷ್ಟು ವ್ಯಾಲ್ಯೂವೇಶನ್​ ಬಿದ್ದೊಗಿತ್ತು. ಅಂದ್ರೆ 2023ರ ಟೂರ್ನಿಯ ಅಂತ್ಯಕ್ಕೆ 92,500 ಕೋಟಿಯಷ್ಟಿದ್ದ ಶ್ರೀಮಂತ ಲೀಗ್​ನ ವ್ಯಾಲ್ಯೂವೇಶನ್​ 82,700 ಕೋಟಿಗೆ ಬಿದ್ದೊಗಿತ್ತು. ಅಂದ್ರೆ 9,800 ಕೋಟಿ ಹಣ ಕಡಿಮೆಯಾಗಿತ್ತು. ಕೇವಲ ಇಂಡಿಯನ್​​ ಪ್ರೀಮಿಯರ್​ ಲೀಗ್​ ಮಾತ್ರವಲ್ಲ. ವುಮೆನ್ಸ್​ ಪ್ರೀಮಿಯರ್​​ ಲೀಗ್​​ನ ವ್ಯಾಲ್ಯೂವೇಶನ್​ ಕೂಡ ಕುಸಿತ ಕಂಡಿದೆ. 2024 ಮಹಿಳಾ ಪ್ರೀಮಿಯರ್​ ಲೀಗ್​ನ ಅಂತ್ಯಕ್ಕೆ 1350 ಕೋಟಿಯಷ್ಟಿದ್ದ ವ್ಯಾಲ್ಯೂ 2025ರ ಸೀಸನ್​ ಅಂತ್ಯದ ಬಳಿಕ 1,275 ಕೋಟಿಗೆ ಬಿದ್ದೊಗಿದೆ.
IPL ವ್ಯಾಲ್ಯೂವೇಶನ್ ಕುಸಿತಕ್ಕೆ ಕಾರಣ ಏನು?
ಚಿನ್ನದ ಮೊಟ್ಟೆ ಇಡೋ ಕೋಳಿ ಅನಿಸಿಕೊಂಡಿದ್ದ ಐಪಿಎಲ್​ನ ವ್ಯಾಲ್ಯೂ ವರ್ಷದಿಂದ ವರ್ಷಕ್ಕೆ ಕುಸಿತ ಕಾಣ್ತಿರೋದು ಬಿಸಿಸಿಐ ವಲಯದಲ್ಲಿ ಟೆನ್ಶನ್​ ಹೆಚ್ಚಿಸಿದೆ. ವ್ಯಾಲ್ಯೂವೇಶನ್​ ಕುಸಿತಕ್ಕೆ ಕಾರಣ ಏನು ಅನ್ನೋ ಉತ್ತರ ಹುಡುಕಾಟ ಜೋರಾಗಿ ನಡೀತಿದೆ. ಈ ಪ್ರಶ್ನೆಗೆ ಮೊದಲು ಸಿಕ್ಕಿರೋ ಉತ್ತರವೇ ಜಿಯೋ ಮತ್ತು ಹಾಟ್​​ಸ್ಟಾರ್​. ಮೊದಲು ಐಪಿಎಲ್​ ಪ್ರಸಾರದ ಹಕ್ಕಿಗಾಗಿ ದೊಡ್ಡ ಮಟ್ಟದ ಪೈಪೋಟಿ ನಡೀತಿತ್ತು. ಜಿಯೋ ಹಾಗೂ ಹಾಟ್​​ಸ್ಟಾರ್​​ ಜಿದ್ದಿಗೆ ಬಿದ್ದು ಫೈಟ್​ ನಡೆಸ್ತಿದ್ವು. ಆದ್ರೀಗ ಹಾಟ್​​ಸ್ಟಾರ್​ನ ಜಿಯೋ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಡಿಜಿಟಿಲ್​ ರೈಟ್ಸ್​ ಹರಾಜಿನಲ್ಲಿ ಪೈಪೋಟಿಯೇ ಇಲ್ಲದಂತಾಗಿದೆ. ಇದು ವ್ಯಾಲ್ಯೂವೇಶನ್​ಗೆ​ ಹೊಡೆತ ಕೊಟ್ಟಿದೆ ಅನ್ನೋದು ಎಕ್ಸ್ಟ್​​ಪರ್ಟ್​ಗಳ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಗಂಭೀರ್ ಮಾಡಿರುವ ಕಿರಿಕ್ ಒಂದಾ, ಎರಡಾ.. ಹೆಡ್​ ಕೋಚ್​ ಕಂಡ್ರೆ ಟೀಮ್ ಇಂಡಿಯಾಗೆ ಭಯನಾ?
ಈ ಹಿಂದಿನ ಸೀಸನ್​​ಗಳಲ್ಲಿ ಕೆಲ ಮಟ್ಟಿಗೆ ಐಪಿಎಲ್​ ವ್ಯಾಲ್ಯೂವೇಷನ್​ ಕುಸಿತ ಕಂಡಿದೆ. ಮುಂದಿನ ಸೀಸನ್​ನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಾಣುವ ಆತಂಕ ಬಿಸಿಸಿಐ ವಲಯದಲ್ಲಿ ಆರಂಭವಾಗಿದೆ. ಕೇಂದ್ರ ಸರ್ಕಾರ ಆನ್​​ ಲೈನ್​ ಬೆಟ್ಟಿಂಗ್​ ಆ್ಯಪ್​​​ಗಳನ್ನ ನಿಷೇಧಿಸಿದೆ. ಬೆಟ್ಟಿಂಗ್​ ಆ್ಯಪ್​​​ಗಳ ನಿಷೇಧ ಐಪಿಎಲ್​ ಟೂರ್ನಿಯ ಮೇಲೆ ಹೆಚ್ಚಿನ ಪ್ರಭಾವ ಬೀರಲಿದ್ದು, ಇದ್ರಿಂದ ಜನಪ್ರೀಯತೆಗೂ ಹೊಡೆತ ಬೀಳೋ ಸಾಧ್ಯತೆಯಿದೆ. ಐಪಿಎಲ್​ನ ವ್ಯಾಲ್ಯೂ ಗಣನೀಯ ಪ್ರಮಾಣದಲ್ಲಿ ಕುಸಿತ ಕಾಣಲಿದೆ. ಇದೇ ಆತಂಕ ಸದ್ಯ ಬಿಸಿಸಿಐ ವಲಯವನ್ನ ಆವರಿಸಿಕೊಂಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ