/newsfirstlive-kannada/media/media_files/2025/09/15/pakisthan-cricket-team-2025-09-15-10-17-40.jpg)
ಏಷ್ಯಾಕಪ್ನಲ್ಲಿ ನಿನ್ನೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆದವು. ಭಾರತದ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿದ ಪಾಕಿಸ್ತಾನ, ಒಂದರ ನಂತರ ಒಂದರಂತೆ ಮುಖಭಂಗ ಅನುಭವಿಸಿತು.
ಟೀಮ್ ಇಂಡಿಯಾ ಗೆಲುವಿನ ಜೊತೆಗೆ ಪಂದ್ಯದ ಹೈಲೆಟ್ ಅಂಶ ಅಂದ್ರೆ ಅದು ಸೂರ್ಯನ ಸೈನ್ಯ ನೀಡಿದ ಪರೋಕ್ಷ ಸಂದೇಶ. ಟಾಸ್ ವೇಳೆಯೂ ಪಾಕ್ ನಾಯಕನ ಜೊತೆಗೆ ಸೂರ್ಯಕುಮಾರ್, ಶೇಕ್ ಹ್ಯಾಂಡ್ ಮಾಡಲಿಲ್ಲ. ಪಂದ್ಯ ಮುಗಿದ ಬಳಿಕ ಕೂಡ ಶೇಕ್ ಹ್ಯಾಂಡ್ ಮಾಡದೇ ಇಡೀ ತಂಡ ಅಂತರ ಕಾಯ್ದುಕೊಳ್ತು. ಪಂದ್ಯದ ಬಳಿಕ ಪೆಹಲ್ಗಾಮ್ ಸಂತ್ರಸ್ಥರ ನೆನೆದ ಸೂರ್ಯ, ಗೆಲುವನ್ನ ಸೇನೆಗೆ ಅರ್ಪಿಸಿದ್ರು.
ಇದನ್ನೂ ಓದಿ:ಪಾಕ್ ವಿರುದ್ಧ ಗೆದ್ದು ಸೂರ್ಯ ಖಡಕ್ ಸಂದೇಶ.. ಕ್ಯಾಪ್ಟನ್ ಹೇಳಿದ್ದೇನು..?
ಇನ್ನು ಪಂದ್ಯ ಆರಂಭದ ವೇಳೆಯೂ ಪಾಕ್ ತಲೆ ಬಾಗುವಂತಹ ಘಟನೆಯೊಂದು ನಡೆಯಿತು. ಟಾಸ್ ಸಮಯದಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾಗೆ ಕೈಕುಲುಕಲಿಲ್ಲ. ಎರಡನೇ ಬಾರಿ ರಾಷ್ಟ್ರಗೀತೆಯ ಸಮಯ ಬಂದಾಗ ಪಾಕಿಸ್ತಾನದ ರಾಷ್ಟ್ರಗೀತೆಯ ಬದಲಿಗೆ, ಕ್ರೀಡಾಂಗಣದಲ್ಲಿ ‘ಜಲೇಬಿ ಬೇಬಿ’ ಹಾಡು ಪ್ಲೇ ಆಗಿದೆ. ಒಂದು ಕಡೆ ಪಾಕಿಸ್ತಾನಿ ಆಟಗಾರರು ತಮ್ಮ ರಾಷ್ಟ್ರಗೀತೆಯನ್ನು ಕೇಳಲು ಕಾಯುತ್ತಿದ್ದರೆ, ಮತ್ತೊಂದೆಡೆ ಜಲೇಬಿ ಬೇಬಿ ಹಾಡು ಕ್ರೀಡಾಂಗಣದಲ್ಲಿ ಪ್ರತಿಧ್ವನಿಸಿತು.
ಇದನ್ನೂ ಓದಿ:ಪಹಲ್ಗಾಮ್ ಸಂತ್ರಸ್ತರು, ಸೇನೆಗೆ ಗೆಲುವು ಅರ್ಪಿಸಿದ ಟೀಂ ಇಂಡಿಯಾ
DJ played Jalebi Baby song on Pakistan National anthem 🤣#INDvsPAK#BoycottINDvPAKpic.twitter.com/rJBmfvqedI
— 𝗩 𝗔 𝗥 𝗗 𝗛 𝗔 𝗡 (@ImHvardhan21) September 14, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ