/newsfirstlive-kannada/media/media_files/2025/09/15/surya-kumar-yadav-2025-09-15-07-38-15.jpg)
ಬದ್ಧವೈರಿ ಪಾಕಿಸ್ತಾನ ವಿರುದ್ಧದ ಜಯವನ್ನು ಟೀಂ ಇಂಡಿಯಾದ ಕಫ್ತಾನ ಸೂರ್ಯಕುಮಾರ್ ಯಾದವ್, ಪೆಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಹಾಗೂ ಭಾರತೀಯ ಸೇನೆಗೆ ಅರ್ಪಿಸಿದ್ದಾರೆ.
ಇದನ್ನೂ ಓದಿ:ಪಾಕಿಸ್ತಾನಕ್ಕೆ ಗುಮ್ಮಿದ ಟೀಮ್ ಇಂಡಿಯಾ.. ಜಯಭೇರಿ ಬಾರಿಸಿದ ಸೂರ್ಯಕುಮಾರ್ ಸೇನೆ
/filters:format(webp)/newsfirstlive-kannada/media/media_files/2025/09/15/team-india-14-2025-09-15-07-07-19.jpg)
ಟೀಮ್​ ಇಂಡಿಯಾ ಗೆಲುವಿನ ಜೊತೆಗೆ ನಿನ್ನೆಯ ಪಂದ್ಯದ ಹೈಲೆಟ್​ ಅಂಶ ಅಂದ್ರೆ ಅದು ಸೂರ್ಯನ ಸೈನ್ಯ ನೀಡಿದ ಪರೋಕ್ಷ ಸಂದೇಶ. ಟಾಸ್​ ವೇಳೆಯೂ ಪಾಕ್​ ನಾಯಕನ ಜೊತೆಗೆ ಸೂರ್ಯಕುಮಾರ್​, ಶೇಕ್​ ಹ್ಯಾಂಡ್​ ಮಾಡಲಿಲ್ಲ. ಪಂದ್ಯ ಮುಗಿದ ಬಳಿಕ ಕೂಡ ಶೇಕ್​​ ಹ್ಯಾಂಡ್​ ಮಾಡದೇ ಇಡೀ ತಂಡ ಅಂತರ ಕಾಯ್ದುಕೊಳ್ತು. ಪಂದ್ಯದ ಬಳಿಕ ಪೆಹಲ್ಗಾಮ್​ ಸಂತ್ರಸ್ತರ ನೆನೆದ ಸೂರ್ಯ, ಗೆಲುವನ್ನ ಸೇನೆಗೆ ಅರ್ಪಿಸಿದ್ರು.
ಇದು ಸರಿಯಾದ ಸಂದರ್ಭ ಎಂದು ಅನಿಸ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ. ಧೈರ್ಯವನ್ನು ತೋರಿಸಿದ ನಮ್ಮ ಎಲ್ಲಾ ಸಶಸ್ತ್ರ ಪಡೆಗಳಿಗೆ ಗೆಲುವನ್ನು ಅರ್ಪಿಸುತ್ತೆವೆ. ಅವರು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇರುತ್ತಾರೆ. ನಮಗೆ ಅವಕಾಶ ಸಿಕ್ಕಾಗಲೆಲ್ಲಾ ನಾವು ಅವರನ್ನ ಅವರನ್ನು ನಗಿಸಲು ಪ್ರಯತ್ನಿಸುತ್ತೆವೆ
ಸೂರ್ಯಕುಮಾರ್ ಯಾದವ್, ಟೀಂ ಇಂಡಿಯಾ ನಾಯಕ
ಇದನ್ನೂ ಓದಿ:ಪಾಕಿಸ್ತಾನಕ್ಕೆ ಗುಮ್ಮಿದ ಟೀಮ್ ಇಂಡಿಯಾ.. ಜಯಭೇರಿ ಬಾರಿಸಿದ ಸೂರ್ಯಕುಮಾರ್ ಸೇನೆ
/filters:format(webp)/newsfirstlive-kannada/media/media_files/2025/09/14/suryakumar_dube-2025-09-14-23-42-13.jpg)
ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಪಾಕಿಸ್ತಾನ 127 ರನ್​ಗಳಿಗೆ ಪಾಕಿಸ್ತಾನ ಆಲೌಟ್​ ಆಯ್ತು. 128 ರನ್​ಗಳ ಸುಲಭದ ಟಾರ್ಗೆಟ್​ ಬೆನ್ನತ್ತಿದ ಅಭಿಷೇಕ್​ ಶರ್ಮಾ ಸಿಡಿಲಬ್ಬರದ ಓಪನಿಂಗ್​ ನೀಡಿದ್ರು. ಆದ್ರೆ, ಶುಭ್​ಮನ್​ ಗಿಲ್​ ಬಹು ಬೇಗ ಔಟಾದ್ರೂ, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ನಾಯಕ ಸೂರ್ಯಕುಮಾರ್​ ಯಾದವ್​ ಅಭಿಷೇಕ್​ ಶರ್ಮಾಗೆ ಸಖತ್​ ಸಾಥ್​ ನೀಡಿದ್ರು. ತಿಲಕ್​​ ವರ್ಮಾ ಕೂಡ ತಾಳ್ಮೆಯ ಇನ್ನಿಂಗ್ಸ್​ ಕಟ್ಟಿ 31 ರನ್​ಗಳ ಕಾಣಿಕೆ ನೀಡಿದ್ರು. 15.5ನೇ ಎಸೆತವನ್ನ ಸಿಕ್ಸರ್​ ಸಿಡಿಸಿದ ​ ಸೂರ್ಯಕುಮಾರ್​ ಯಾದವ್​ ಟೀಮ್​ ಇಂಡಿಯಾವನ್ನ ಗೆಲುವಿನ ದಡ ಸೇರಿಸಿದ್ರು. 15.5 ಓವರ್​​ಗಳಲ್ಲಿ ಗುರಿ ಮುಟ್ಟಿದ ಟೀಮ್​ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.
ಇದನ್ನೂ ಓದಿ:ಪಹಲ್ಗಾಮ್ ಸಂತ್ರಸ್ತರು, ಸೇನೆಗೆ ಗೆಲುವು ಅರ್ಪಿಸಿದ ಟೀಂ ಇಂಡಿಯಾ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us