ಪಹಲ್ಗಾಮ್ ಸಂತ್ರಸ್ತರು, ಸೇನೆಗೆ ಗೆಲುವು ಅರ್ಪಿಸಿದ ಟೀಂ ಇಂಡಿಯಾ

ಬದ್ಧವೈರಿಗಳ ಎದುರಿನ ಕದನದಲ್ಲಿ ಟೀಮ್​ ಇಂಡಿಯಾ ಘರ್ಜಿಸಿತು. ಮೆನ್​ ಇನ್​ ಬ್ಲೂ ಪಡೆಯ ಬೊಂಬಾಟ್​​ ಆಟದ ಮುಂದೆ ಪಾಕಿಸ್ತಾನ ಬ್ಯಾಟರ್​ಗಳು ವಿಲವಿಲ ಒದ್ದಾಡಿದ್ರು. ದುಬೈನಲ್ಲಿ ಟೀಮ್​ ಇಂಡಿಯಾ ದರ್ಬಾರ್​ ನಡೆಸಿದ್ರೆ, ಪಾಕ್​ ಪಡೆಯ ಸೈಲೆಂಟಾಯ್ತು. ಇಂಡೋ ಪಾಕ್​ ಕದನದ ಹೈಲೆಟ್ಸ್​

author-image
Ganesh Kerekuli
Team india (14)
Advertisment

ಬದ್ಧವೈರಿಗಳ ಎದುರಿನ ಕದನದಲ್ಲಿ ಟೀಮ್​ ಇಂಡಿಯಾ ಘರ್ಜಿಸಿತು. ಮೆನ್​ ಇನ್​ ಬ್ಲೂ ಪಡೆಯ ಬೊಂಬಾಟ್​​ ಆಟದ ಮುಂದೆ ಪಾಕಿಸ್ತಾನ ಬ್ಯಾಟರ್​ಗಳು ವಿಲವಿಲ ಒದ್ದಾಡಿದ್ರು. ದುಬೈನಲ್ಲಿ ಟೀಮ್​ ಇಂಡಿಯಾ ದರ್ಬಾರ್​ ನಡೆಸಿದ್ರೆ, ಪಾಕ್​ ಪಡೆಯ ಸೈಲೆಂಟಾಯ್ತು. ಇಂಡೋ ಪಾಕ್​ ಕದನದ ಹೈಲೆಟ್ಸ್ ಇಲ್ಲಿದೆ.​

ಗೆದ್ದ ಬಳಿಕ ಪೆಹಲ್ಗಾಮ್​ ಸಂತ್ರಸ್ಥರ ನೆನೆದ ಸೂರ್ಯ ಕುಮಾರ್​!

ಬದ್ಧವೈರಿಗಳ ವಿರುದ್ಧದ ಜಯವನ್ನು ಕಫ್ತಾನ ಸೂರ್ಯಕುಮಾರ್ ಯಾದವ್, ಪೆಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದವರ ಹಾಗೂ ಸೇನೆಗೆ ಅರ್ಪಿಸಿದ್ದಾರೆ. ಅಂದಾಗೆ ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ದುಕೊಂಡ ಪಾಕಿಸ್ತಾನದ ಆತ್ಮವಿಶ್ವಾಸ ಮೊದಲ ಎಸೆತದಲ್ಲೇ ಠುಸ್​ ಪಟಾಕಿಯಾಯ್ತು. ಹಾರ್ದಿಕ್​ ಪಾಂಡ್ಯ ಹಾಕಿದ 2ನೇ ಎಸೆತದಲ್ಲಿ ಸೈಮ್​ ಅಯುಬ್​ಗೆ ಪೆವಿಲಿಯನ್​ ದಾರಿ ತೋರಿಸಿದ್ರು. ಆರಂಭಿಕ ಆಘಾತ ಕಂಡ ತಂಡಕ್ಕೆ 2ನೇ ಓವರ್​​ನಲ್ಲಿ ಬೂಮ್ರಾ ಮತ್ತೊಂದು ಶಾಕ್​ ನೀಡಿದ್ರು. ವಿಕೆಟ್​ ಕೀಪರ್​​ ಮೊಹಮ್ಮದ್​ ಹ್ಯಾರೀಸ್​​ ಬಲಿಯಾದ್ರು. ಫರ್ಹಾನ್​ ಹಾಗೂ ಫಕರ್​ ಜಮಾನ್​, ಶಾಹೀನ್​ ಅಫ್ರಿದಿ ಬಿಟ್ರೆ ಬೇರಾವ ಬ್ಯಾಟರ್​ ಕೂಡ ಕ್ರಿಸ್​ ಕಚ್ಚಿ ನಿಲ್ಲಲಿಲ್ಲ. ಕುಲ್​​ದೀಪ್​ ಯಾದವ್​, ಅಕ್ಷರ್​ ಪಟೇಲ್​, ಜಸ್​ಪ್ರಿತ್​ ಬೂಮ್ರಾ ಪಾಕ್​ ಪಡೆಯನ್ನ ಪಂಚರ್​ ಮಾಡಿದ್ರು. ಅಂತಿಮವಾಗಿ 127 ರನ್​ಗಳಿಗೆ ಪಾಕಿಸ್ತಾನ ಆಲೌಟ್​ ಆಯ್ತು. 

ಇದನ್ನೂ ಓದಿ:ಪಾಕಿಸ್ತಾನಕ್ಕೆ ಗುಮ್ಮಿದ ಟೀಮ್ ಇಂಡಿಯಾ.. ಜಯಭೇರಿ ಬಾರಿಸಿದ ಸೂರ್ಯಕುಮಾರ್ ಸೇನೆ

SURYAKUMAR_DUBE

128 ರನ್​ಗಳ ಸುಲಭದ ಟಾರ್ಗೆಟ್​ ಬೆನ್ನತ್ತಿದ ಅಭಿಷೇಕ್​ ಶರ್ಮಾ ಸಿಡಿಲಬ್ಬರದ ಓಪನಿಂಗ್​ ನೀಡಿದ್ರು. ಆದ್ರೆ, ಶುಭ್​ಮನ್​ ಗಿಲ್​ ಬಹು ಬೇಗ ಔಟಾದ್ರೂ, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ನಾಯಕ ಸೂರ್ಯಕುಮಾರ್​ ಯಾದವ್​ ಅಭಿಷೇಕ್​ ಶರ್ಮಾಗೆ ಸಖತ್​ ಸಾಥ್​ ನೀಡಿದ್ರು. ತಿಲಕ್​​ ವರ್ಮಾ ಕೂಡ ತಾಳ್ಮೆಯ ಇನ್ನಿಂಗ್ಸ್​ ಕಟ್ಟಿ 31 ರನ್​ಗಳ ಕಾಣಿಕೆ ನೀಡಿದ್ರು. 15.5ನೇ ಎಸೆತವನ್ನ ಸಿಕ್ಸರ್​ ಸಿಡಿಸಿದ ​ ಸೂರ್ಯಕುಮಾರ್​ ಯಾದವ್​ ಟೀಮ್​ ಇಂಡಿಯಾವನ್ನ ಗೆಲುವಿನ ದಡ ಸೇರಿಸಿದ್ರು. 15.5 ಓವರ್​​ಗಳಲ್ಲಿ ಗುರಿ ಮುಟ್ಟಿದ ಟೀಮ್​ ಇಂಡಿಯಾ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. 

ಇದನ್ನೂ ಓದಿ:ಫಸ್ಟ್ ಓವರ್,​ ಫಸ್ಟ್ ಬಾಲ್​, ಫಸ್ಟ್ ವಿಕೆಟ್ ಡಕೌಟ್​​.. ಪಾಂಡ್ಯ, ಬೂಮ್ರಾ ಬೌಲಿಂಗ್​ಗೆ ನಡುಗಿದ ಪಾಕ್

SURYAKUMAR_PAK

ಗೆಲುವನ್ನು ಸೇನೆಗೆ ಅರ್ಪಿಸಿದ ಟೀಮ್​ ಇಂಡಿಯಾ

ಟೀಮ್​ ಇಂಡಿಯಾ ಗೆಲುವಿನ ಜೊತೆಗೆ ನಿನ್ನೆಯ ಪಂದ್ಯದ ಹೈಲೆಟ್​ ಅಂಶ ಅಂದ್ರೆ ಅದು ಸೂರ್ಯನ ಸೈನ್ಯ ನೀಡಿದ ಪರೋಕ್ಷ ಸಂದೇಶ. ಟಾಸ್​ ವೇಳೆಯೂ ಪಾಕ್​ ನಾಯಕನ ಜೊತೆಗೆ ಸೂರ್ಯಕುಮಾರ್​, ಶೇಕ್​ ಹ್ಯಾಂಡ್​ ಮಾಡಲಿಲ್ಲ. ಪಂದ್ಯ ಮುಗಿದ ಬಳಿಕ ಕೂಡ ಶೇಕ್​​ ಹ್ಯಾಂಡ್​ ಮಾಡದೇ ಇಡೀ ತಂಡ ಅಂತರ ಕಾಯ್ದುಕೊಳ್ತು. ಪಂದ್ಯದ ಬಳಿಕ ಪೆಹಲ್ಗಾಮ್​ ಸಂತ್ರಸ್ಥರ ನೆನೆದ ಸೂರ್ಯ, ಗೆಲುವನ್ನ ಸೇನೆಗೆ ಅರ್ಪಿಸಿದ್ರು. 

ಇದು ಸರಿಯಾದ ಸಂದರ್ಭ ಎಂದು ಅನಿಸ್ತಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳ ಬೆಂಬಲಕ್ಕೆ ನಾವು ನಿಲ್ಲುತ್ತೇವೆ. ನಾವು ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತೇವೆ. ಧೈರ್ಯವನ್ನು ತೋರಿಸಿದ ನಮ್ಮ ಎಲ್ಲಾ ಸಶಸ್ತ್ರ ಪಡೆಗಳಿಗೆ ಗೆಲುವನ್ನು ಅರ್ಪಿಸುತ್ತೆವೆ. ಅವರು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇರುತ್ತಾರೆ. ನಮಗೆ ಅವಕಾಶ ಸಿಕ್ಕಾಗಲೆಲ್ಲಾ ನಾವು ಅವರನ್ನ ಅವರನ್ನು ನಗಿಸಲು ಪ್ರಯತ್ನಿಸುತ್ತೆವೆ 

ಸೂರ್ಯಕುಮಾರ್ ಯಾದವ್, ಟೀಂ ಇಂಡಿಯಾ ನಾಯಕ

ಇದನ್ನೂ ಓದಿ:ಪಾಕಿಸ್ತಾನಕ್ಕೆ ಭಾರೀ ಅವಮಾನ.. ಕುಲ್​ದೀಪ್, ಅಕ್ಷರ್, ಬೂಮ್ರಾ ಮುಂದೆ ಸಲ್ಮಾನ್ ಪಡೆ ವಿಲ..ವಿಲ!

TILAK_VARMA

ಮ್ಯಾರ್ಚ್​ ಸ್ಟಾರ್ಟ್​ ಆದಾಗ ಅಂದ್ರೆ ಟಾಸ್ ವೇಳೆ ಟೀಮ್ ಇಂಡಿಯಾ ಕ್ಯಾಪ್ಟನ್​  ಸೂರ್ಯ ಕುಮಾರ್​ ಯಾದವ್ ಶೇಕ್​​ ಹ್ಯಾಂಡ್ ಮಾಡಿಲ್ಲ.. ಪಂದ್ಯ ಮುಗಿದ ಬಳಿಕವೂ ನೋ ಶೇಕ್​ ಹ್ಯಾಂಡ್​ ಅಂತ ಫಿಕ್ಸ್​ ಹಾಗಿದ್ರು.. ಅದೇ ರೀತಿ ನಮ್ಮ ಪ್ಲೇಯರ್ಸ್ ಪಾಕಿಸ್ತಾನ ಆಟಗಾರರ ಜೊತೆಗೆ ಕೈ ಕುಲುಕದೆ ಸ್ಟೇಡಿಯಂನಿಂದ ಹೊರ ಬಂದಿದ್ದಾರೆ. ಇನ್ನು ಟೀಂ ಇಂಡಿಯಾ ಪಂದ್ಯ ಗೆಲ್ತಿದ್ದಂತೆ ದೇಶಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ರಾಜ್ಯದಲ್ಲಂತೂ ಪಬ್​ ಹಾಗೂ ಸಾರ್ವಜನಿಕವಾಗಿ ಕುಣಿದು ಕುಪ್ಪಳಿಸಿ ಸಂಭ್ರಮಿಸಲಾಯ್ತು.

ಬದ್ಧವೈರಿಯನ್ನ ಆನ್​ಫೀಲ್ಡ್​ ಕಾಳಗದಲ್ಲಿ ಬಗ್ಗು ಬಡಿದು ಸೂರ್ಯ ಸೇನೆಗೆ ಗೆಲುವನ್ನ ಸಮರ್ಪಿಸಿ ಅಭಿಮಾನಿಗಳ ಮನ ಗೆದ್ರು. ಇದ್ರ ಜೊತೆಗೆ ಟೀಮ್​ ಇಂಡಿಯಾ ಭಾರತೀಯ ಸೇನೆ ಹಾಗೂ ಭಾರತೀಯರ ವಿಚಾರದಲ್ಲಿ ಒಟ್ಟಾಗಿ ನಿಲ್ಲುತ್ತದೆ ಎಂಬ ಸಂದೇಶವನ್ನೂ ಸಾರಿದ್ರು.

ಇದನ್ನೂ ಓದಿ:ಟಾಸ್ ಹಾಕುವಾಗ, ಮ್ಯಾಚ್ ಗೆದ್ದ ಮೇಲೆ ಪಾಕ್​ಗೆ ಭಾರೀ ಅವಮಾನ.. ಟೀಮ್ ಇಂಡಿಯಾ ಮಾಡಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

India Win Asia Cup 2025 india vs pakistan asia cup PAK vs IND
Advertisment