/newsfirstlive-kannada/media/media_files/2025/12/02/kl-rahul-1-2025-12-02-09-07-28.jpg)
ಇಂಡೋ-ನ್ಯೂಜಿಲೆಂಡ್​ ಟಿ20 ಸರಣಿಯ ಕಾವಿನ ನಡುವೆ ಕನ್ನಡಿಗ ಕೆ.ಎಲ್​ ರಾಹುಲ್​ ಕ್ರಿಕೆಟ್​ ಅಭಿಮಾನಿಗಳಿಗೆ ಶಾಕ್​ ನೀಡಿದ್ದಾರೆ. ಇದ್ದಕ್ಕಿದ್ದಂತೆ ನಿವೃತ್ತಿ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ವಿದಾಯ ಹೇಳೋದು ನನಗೆ ಕಷ್ಟವಲ್ಲ. ವಿಳಂಬ ಮಾಡೋದ್ರಲ್ಲಿ ಅರ್ಥವೂ ಇಲ್ಲ ಅನ್ನೋ ಮಾತುಗಳನ್ನಾಡಿ ಫ್ಯಾನ್ಸ್​ ತಲೆಗೆ ಹುಳಬಿಟ್ಟಿದ್ದಾರೆ.
ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಕೆ.ಎಲ್​ ರಾಹುಲ್
ಟಿ20 ಫಾರ್ಮೆಟ್​ನಿಂದ ದೂರ ಉಳಿದಿದ್ರೂ ಟೆಸ್ಟ್​ ಹಾಗೂ ಏಕದಿನ ಫಾರ್ಮೆಟ್​​ನಲ್ಲಿ ರಾಹುಲ್​ ಟೀಮ್​ ಇಂಡಿಯಾದ ರಿಯಲ್​ ಮ್ಯಾಚ್​ ವಿನ್ನರ್ ಎನಿಸಿದ್ದಾರೆ. ಟೆಸ್ಟ್​ ಫಾರ್ಮೆಟ್​ನಲ್ಲಿ ಆರಂಭಿಕನಾಗಿ, ಏಕದಿನ ಫಾರ್ಮೆಟ್​ನಲ್ಲಿ ಮಿಡಲ್​ ಆರ್ಡರ್​ ಬ್ಯಾಟರ್​ ಆಗಿ ಕನ್ಸಿಸ್ಟೆಂಟ್​​ ಆಟದಿಂದ ಮಿಂಚ್ತಿದ್ದಾರೆ. ಬ್ಯಾಟಿಂಗ್​ ಜೊತೆಗೆ ಚಾಣಾಕ್ಷ ಕೀಪಿಂಗ್​ನಿಂದಲೂ ಎದುರಾಳಿಗಳ ಪಾಲಿಗೆ ವಿಲನ್​ ಆಗಿದ್ದಾರೆ. ಅದ್ಭುತ ಆಟದಿಂದ ಟೀಮ್​ ಇಂಡಿಯಾದ ಸೈಲೆಂಟ್​ ಸೂಪರ್​ಸ್ಟಾರ್​ ಪಟ್ಟವೇರಿರುವ ರಾಹುಲ್​, ಇದೀಗ ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದಾರೆ.
ಇದನ್ನೂ ಓದಿ: ಸಾಕು ನಾಯಿಯನ್ನು ಆಸ್ಟ್ರೇಲಿಯಾಕ್ಕೆ ಕರೆದೊಯ್ಯಲು 15 ಲಕ್ಷ ಖರ್ಚು ಮಾಡಿದ ದಂಪತಿ!! : ಸಾಕು ನಾಯಿಯೇ ನಮ್ಮ ಮಗು ಎಂದ ದಂಪತಿ
/filters:format(webp)/newsfirstlive-kannada/media/media_files/2025/12/03/kl-rahul-2-2025-12-03-08-26-43.jpg)
ಕನ್ನಡಿಗ ರಾಹುಲ್​ ಓಪನ್​ ಟಾಕ್
ಕೆ.ಎಲ್​ ರಾಹುಲ್​ಗೀಗ 33 ವರ್ಷ. ಸಾಲಿಡ್​ ಫಾರ್ಮ್​ನಲ್ಲಿರೋ ರಾಹುಲ್​ಗೆ ಇನ್ನೂ 2ರಿಂದ 3 ವರ್ಷಗಳ ಕಾಲ ಕ್ರಿಕೆಟ್​ ಆಡುವ ಸಾಮರ್ಥ್ಯವಿದೆ. ಫಿಟ್​ನೆಸ್​ ವಿಚಾರದಲ್ಲೂ ರಾಹುಲ್​ ಟಾಪ್​ ಕ್ಲಾಸ್​ ಅಥ್ಲೀಟ್​! ಇಷ್ಟೇಲ್ಲ ಇದ್ದರೂ ಕನ್ನಡಿಗನ ಬಾಯಿಂದ ವಿದಾಯದ ಮಾತುಗಳು ಹೊರಬಿದ್ದಿದೆ. ಇದಕ್ಕಿದ್ದಂತೆ ನಿವೃತ್ತಿ ಬಗ್ಗೆ ಕನ್ನಡಿಗ ರಾಹುಲ್​ ಓಪನ್​ ಸ್ಟೇಟ್​​ಮೆಂಟ್​ ನೀಡಿದ್ದಾರೆ. ಕೆ.ಎಲ್​ ರಾಹುಲ್​ ಹೇಳಿಕೆ ಹಲವು ರೀತಿಯಲ್ಲಿ ಚರ್ಚೆಯಾಗ್ತಿದೆ.
ವಿದಾಯ ಹೇಳೋದು ನನಗೆ ಕಷ್ಟವಲ್ಲ
ರಿಟೈರ್​ಮೆಂಟ್​ ಅನ್ನೋದು ಒಬ್ಬ ಅಥ್ಲೀಟ್​ ಜೀವನದ ಕಠಿಣವಾದ ನಿರ್ಧಾರ. ಇದ್ರಿಂದ ಕ್ರಿಕೆಟರ್ಸ್​ ಕೂಡ ಹೊರತಾಗಿಲ್ಲ. ರಾಹುಲ್​ ಪಾಲಿಗೆ ನಿವೃತ್ತಿ ಅನ್ನೋದು ಬಿಗ್​ ಡೀಲ್ ಅಲ್ಲವಂತೆ. ಇಂಗ್ಲೆಂಡ್​ ತಂಡದ ಮಾಜಿ ಆಟಗಾರ ಕೆವಿನ್​ ಪೀಟರ್​ಸನ್​ ಜೊತೆಗಿನ ಸಂದರ್ಶನವೊಂದರಲ್ಲಿ ರಾಹುಲ್​ ಹೀಗೆ ಮಾತನಾಡಿದ್ದಾರೆ. ರಿಟೈರ್​ಮೆಂಟ್​ ಬಗೆಗಿನ ಪ್ರಶ್ನೆಗೆ ಅದು ತಂಬಾ ಕಷ್ಟ ಅಂತಾ ನನಗೆ ಅನ್ನಿಸಿಲ್ಲ. ಅದನ್ನ ವಿಳಂಬ ಮಾಡೋದ್ರಲ್ಲೂ ಅರ್ಥವಿಲ್ಲ ಎಂಬ ಎರಡು ಮಾತುಗಳನ್ನ ಆಡಿದ್ದಾರೆ. ಈ ವಿಳಂಬ ಮಾಡೋದ್ರಲ್ಲಿ ಅರ್ಥವಿಲ್ಲ ಎಂಬ ಸ್ಟೇಟ್​ಮೆಂಟ್​ ರಿಟೈರ್​ಮೆಂಟ್​ ರೂಮರ್ಸ್​ಗೆ ಕಾರಣವಾಗಿದೆ.
ಇದನ್ನೂ ಓದಿ: ‘ನಾ ಡ್ರೈವರ’ ಹಾಡಿಗೆ ಶ್ರೇಯಾಂಕ ಸಖತ್ ಆ್ಯಕ್ಟಿಂಗ್​.. ಮಸ್ತ್ ವಿಡಿಯೋ..!
/filters:format(webp)/newsfirstlive-kannada/media/media_files/2025/10/03/kl-rahul-2-2025-10-03-13-11-34.jpg)
ನಿವೃತ್ತಿ ವಿಚಾರದಲ್ಲಿ ಮತ್ತೊಂದು ಪ್ರಮುಖ ಅಂಶವನ್ನೂ ರಾಹುಲ್​ ಹೇಳಿದ್ದಾರೆ. ನಮಗೆ ಕುಟುಂಬ ಇದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು ಎಂದಿರೋ ರಾಹುಲ್​, ಅದಕ್ಕಿಂತ ನಾನು ಮುಖ್ಯವಲ್ಲ ಎಂದಿದ್ದಾರೆ. ಜೊತೆಗೆ ನಮ್ಮ ದೇಶದಲ್ಲಿ ಹಾಗೂ ಜಗತ್ತಿನಲ್ಲಿ ಕ್ರಿಕೆಟ್ ಯಾವಾಗಲೂ ಮುಂದುವರೆಯುತ್ತದೆ. ಆದ್ರೆ, ನಮ್ಮ ಜೀವನದಲ್ಲೂ ಹೆಚ್ಚು ಮುಖ್ಯವಾದ ವಿಚಾರಗಳಿವೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಈ ಮಾತು ರಾಹುಲ್​ಗೆ ಆಟಕ್ಕಿಂತ, ಕುಟುಂಬವೇ ಮುಖ್ಯವಾಯ್ತಾ.? ಎಂಬ ಚರ್ಚೆಗೂ ದಾರಿ ಮಾಡಿಕೊಟ್ಟಿದೆ.
ರಾಹುಲ್​ ಹೀಗೆ ಕುಟುಂಬ ಅನ್ನೋದಕ್ಕೆ ಮುಖ್ಯ ಕಾರಣವೇ ಮಗಳು ಇವಾರಾ. ರಾಕ್​ಸ್ಟಾರ್​​ ರಾಹುಲ್​ ಮಗಳ ಹುಟ್ಟಿನ ಬಳಿಕ ಕಂಪ್ಲೀಟ್​ ಫ್ಯಾಮಿಲಿ ಮ್ಯಾನ್​ ಆಗಿ ಬದಲಾಗಿದ್ದಾರೆ. ಯಾವುದೇ ಸರಣಿ, ಟೂರ್ನಿ ನಡುವೆ ಬಿಡುವು ಸಿಕ್ಕರೇ ಸಾಕು ಕುಟುಂಬಕ್ಕೆ ಸಮಯ ಮೀಸಲಿಡ್ತಿದ್ದಾರೆ. ಆನ್​ಫೀಲ್ಡ್​ನಲ್ಲಿ ಕ್ರಿಕೆಟ್ ಆಡೋದ್ರ ಹೊರತಾಗಿ ಆಫ್​​ ಫೀಲ್ಡ್​​ನಲ್ಲಿ ರಾಹುಲ್​ ದರ್ಶನ ಸಿಗೋದು ಕುಟುಂಬದ ಜೊತೆಗೆ ಹೆಚ್ಚು. ಕುಟುಂಬಕ್ಕೆ ಹೆಚ್ಚು ಸಮಯ ನೀಡಬೇಕು ಅನ್ನೋ ನಿಟ್ಟಿನಲ್ಲೇ ರಾಹುಲ್​, ನಿವೃತ್ತಿ ನನಗೆ ಅಷ್ಟು ಕಷ್ಟವೇನಲ್ಲಾ ಎಂಬ ಸ್ಟೇಟ್​ಮೆಂಟ್​ ನೀಡಿದ್ದು.
ರಾಹುಲ್​ಗೆ ಇನ್ನೂ 2ರಿಂದ 3 ವರ್ಷ ಅರಾಮಾಗಿ ಕ್ರಿಕೆಟ್​ ಆಡೋ ಸಾಮರ್ಥ್ಯವಿದೆ. ನಮ್ಮ ಟೀಮ್​ ಇಂಡಿಯಾಗೂ ಹೆಮ್ಮೆಯ ಕನ್ನಡಿಗನ ಅಗತ್ಯತೆ ಹೆಚ್ಚಿದೆ. ಹೀಗಾಗಿ ಏನೇ ಮಾತನಾಡಿದ್ರೂ, ರಾಹುಲ್​ ಸದ್ಯಕ್ಕಂತೂ ಕ್ರಿಕೆಟ್​​ಗೆ ಗುಡ್​ ಬೈ ಹೇಳೋದು ದೂರದ ಮಾತೇ.
ಇದನ್ನೂ ಓದಿ: ವಿವಿ, ಕಾಲೇಜುಗಳಲ್ಲಿ ಜಾತಿ ತಾರತಮ್ಯ ನಿಯಮಕ್ಕೆ ಸುಪ್ರೀಂಕೋರ್ಟ್ ನಿಂದ ತಡೆಯಾಜ್ಞೆ : UGC ನಿಯಮಕ್ಕೆ ಮೇಲ್ವರ್ಗದ ವಿರೋಧ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us