/newsfirstlive-kannada/media/media_files/2025/08/29/harbhajan-singh-and-shrishant-2025-08-29-21-02-05.jpg)
ಶ್ರೀಶಾಂತ್‌ಗೆ ಹರ್ಭಜನ್ ಸಿಂಗ್ (Harbhajan Singh and Shrishant) ಕಪಾಳಮೋಕ್ಷ ಮಾಡಿದ್ದು ಈಗ ಇತಿಹಾಸ. ಕ್ಷಮೆ ಕೇಳಿದ್ದೂ ಆಗಿದ್ದು, ಭಜ್ಜಿ ಪಶ್ಚಾತಾಪ ಪಟ್ಟಿದ್ದೂ ಆಗಿದೆ. ಇದೀಗ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ, (Lalith Modi) ಅವತ್ತು ಹರ್ಭಜನ್ ಸಿಂಗ್ ಅವರು ಶ್ರೀಶಾಂತ್ ಕೆನ್ನೆಗೆ ಬಾರಿಸಿದ ವಿಡಿಯೋವನ್ನು ರಿವೀಲ್ ಮಾಡಿದ್ದಾರೆ.
ಐಪಿಎಲ್ ಮೊದಲ ಸೀಸನ್ ಅಂದರೆ 2008ರಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ ಅದಾಗಿದೆ. ಮುಂಬೈ ಇಂಡಿಯನ್ಸ್‌ನಲ್ಲಿದ್ದ ಹರ್ಭಜನ್ ಸಿಂಗ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್‌ನ ಶ್ರೀಶಾಂತ್ ಮೇಲೆ ಅಟ್ಯಾಕ್ ಮಾಡಿದ್ದರು.
ಇದನ್ನೂ ಓದಿ: ಅನ್ನದಾತರಿಗಾಗಿ ನ್ಯೂಸ್ಫಸ್ಟ್ ವಿಶೇಷ ಕಾರ್ಯಕ್ರಮ; ನಾಳೆ ಬೆಳಗಾವಿಯಲ್ಲಿ ‘ಕೃಷಿ ದೇವೋಭವ’ ವಿಚಾರ ಸಂಕಿರಣ
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್‌ಗೆ ನೀಡಿದ ಸಂದರ್ಶನದಲ್ಲಿ ಲಲಿತ್ ಮೋದಿ ವಿಡಿಯೋ ರಿವೀಲ್ ಮಾಡಿದ್ದಾರೆ. ಅವತ್ತಿನ ಘಟನೆ ಬಗ್ಗೆ ವಿವರಿಸಿರುವ ಅವರು ‘ಪಂದ್ಯ ಮುಗಿದಿತ್ತು. ಎಲ್ಲಾ ಕ್ಯಾಮೆರಾಗಳು ಸಹ ಆಫ್ ಆಗಿದ್ದವು. ನನ್ನ ಭದ್ರತಾ ಕ್ಯಾಮೆರಾಗಳಲ್ಲಿ ಒಂದು ಮಾತ್ರ ಆನ್ ಆಗಿತ್ತು. ಇದರಲ್ಲಿ ಶ್ರೀಶಾಂತ್ ಮತ್ತು ಭಜ್ಜಿ ನಡುವಿನ ವಾಗ್ವಾದ ಸೆರೆಯಾಗಿದೆ. ಭಜ್ಜಿ ಶ್ರೀಶಾಂತ್‌ಗೆ ಬ್ಯಾಕ್‌ಹ್ಯಾಂಡರ್‌ನಿಂದ ಹೊಡೆದರು. ಅದರ ವಿಡಿಯೋ ಇದು ಎಂದಿದ್ದಾರೆ. ಈ ವಿಡಿಯೋದಲ್ಲಿ, ಇರ್ಫಾನ್ ಪಠಾಣ್ ಮತ್ತು ಮಹೇಲ ಜಯವರ್ಧನೆ ಮಧ್ಯಪ್ರವೇಶಿಸ್ತಿರೋದನ್ನ ನೋಡಬಹುದಾಗಿದೆ.
17 ವರ್ಷಗಳ ನಂತರವೂ ಹರ್ಭಜನ್ ಸಿಂಗ್ ವಿಷಾದ
ಭಾರತದ ಮಾಜಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್, ರವಿಚಂದ್ರನ್ ಅಶ್ವಿನ್ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈ ಘಟನೆಯನ್ನು ನನ್ನ ಜೀವನದಿಂದ ತೆಗೆದುಹಾಕಲು ಬಯಸುತ್ತೇನೆ. ನಾನು ಹಾಗೆ ಮಾಡಬಾರದಿತ್ತು. ನಾನು 200 ಬಾರಿ ಕ್ಷಮೆಯಾಚಿಸಿದ್ದೇನೆ. ಆ ಘಟನೆ ಬಗ್ಗೆ ನನಗೆ ಇನ್ನೂ ಬೇಸರವಿದೆ. ಅದಕ್ಕೆ ನಾನು ಕ್ಷಮೆಯಾಚಿಸಬಹುದು, ಆದರೆ ನಾನು ಮಾಡಿದ್ದು ತಪ್ಪು ಎಂದಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳಿಗೆ ಆರ್ಸಿಬಿ ಪ್ರತಿಜ್ಞೆ.. ಏನಿದು RCB cares..?
The famous slap in my podcast with @MClarke23 on #beyond23 - part 3 of my podcast. I love @harbhajan_singh - but after 17 years it was time to reveal it. Lots and lots more to reveal but that will now only be in the movie that’s in the works supervised by @SnehaRajani on my… pic.twitter.com/EhPaIRAZ0F
— Lalit Kumar Modi (@LalitKModi) August 29, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ