/newsfirstlive-kannada/media/media_files/2025/08/26/rcb_team-1-2025-08-26-10-46-49.jpg)
ಚಿನ್ನಸ್ವಾಮಿ ಕಾಲ್ತುಳಿತ ಇವತ್ತಿಗೂ ಮರೆಯಲಾಗದ ದುರ್ಘಟನೆ. ಈ ಘಟನೆ ಬಳಿಕ ಮೌನಕ್ಕೆ ಶರಣಾಗಿದ್ದ ಆರ್​ಸಿಬಿ, ಈಗ ಲಾಯಲ್ ಫ್ಯಾನ್ಸ್​ಗೆ ಭಾವುಕ ಪತ್ರ ಬರೆದಿದೆ. ಅಷ್ಟೇ ಅಲ್ಲ. ಹೊಸ ಪ್ರತಿಜ್ಞೆ ಮಾಡಿರುವ ಆರ್​ಸಿಬಿ, ಫ್ಯಾನ್ಸ್​ಗಾಗಿ ಹೊಸ ಯೋಜನೆ ರೂಪಿಸ್ತಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ದುರ್ಘಟನೆ. ದುರ್ಘಟನೆಯಲ್ಲಿ 11 ಮಂದಿಯ ಸಾವು, ಆರ್​ಸಿಬಿಗೆ ಮಾತ್ರವಲ್ಲ. ಇಡೀ ರಾಜ್ಯಕ್ಕೆ ಕಪ್ಪು ಚುಕ್ಕೆಯಾಗಿತ್ತು. ಸಂಭ್ರಮದಲ್ಲಿ ತೇಲಾಡಬೇಕಿದ್ದ ಆರ್​ಸಿಬಿ ಅಭಿಮಾನಿಗಳಲ್ಲಿ ಸೂತಕದ ಛಾಯೆ ಆವರಿಸಿತ್ತು. ಆ ಘಟನೆಯಿಂದ ಟೀಕೆ, ಟಿಪ್ಪಣೆ ಎದುರಿಸಬೇಕಾಯ್ತು. ಕೆಎಸ್‌ಸಿಎ, ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಕೆಲವರ ಅರೆಸ್ಟ್​ನಿಂದ ಅಪಮಾನಕ್ಕೂ ಗುರಿಯಾಗಿತ್ತು. ಇಡೀ ಕ್ರಿಕೆಟ್ ವಲಯವನ್ನೇ ಶೋಕಾಚರಣೆಯಲ್ಲಿ ಮುಳುಗಿಸಿತ್ತು. ಆದ್ರೀಗ ಆ ಶೋಕಾಚರಣೆಯಿಂದ ಆರ್​​ಸಿಬಿ ಹೊರುತ್ತಿದೆ.
ಇದನ್ನೂ ಓದಿ: ಕೊಹ್ಲಿ ಮಾಡಿದ ಒಂದು ಯಡವಟ್ಟು.. ಈಕೆಯ ಅದೃಷ್ಟವೇ ಬದಲಾಗಿದೆ ನೋಡಿ..!
ರಾಯಲ್ ಚಾಲೆಂಜರ್ಸ್​ ಭಾವುಕ ಪೋಸ್ಟ್..!
ಜೂನ್ 4. ಆರ್​ಸಿಬಿ ಪಾಲಿನ ಕರಾಳ ದಿನ. ಆ ದಿನ ಸಂಭ್ರಮದಲ್ಲಿ ಮಿಂದೇಳಬೇಕಿದ್ದ ಆಟಗಾರರು, ಅಭಿಮಾನಿಗಳು ಮೌನಕ್ಕೆ ಜಾರಬೇಕಾಯ್ತು. ಸೋಸಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಇದ್ದ ಫ್ರಾಂಚೈಸಿ, ಜೂನ್ 5ರಂದು ವಿಷಾದದ ಪೋಸ್ಟ್ ನಂತರ ಸಂಪೂರ್ಣ ಸ್ಥಬ್ಧವಾಗಿತ್ತು. ಬರೋಬ್ಬರಿ 3 ತಿಂಗಳುಗಳ ಕಾಲ ಮೌನಕ್ಕೆ ಜಾರಿದ್ದ ಫ್ರಾಂಚೈಸಿ, 86 ದಿನಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್​ ಮಾಡಿದೆ. ಅಭಿಮಾನಿಗಳಿಗೆ ಪತ್ರದ ಬರೆದಿರುವ ಆರ್​​ಸಿಬಿ, ಅಭಿಮಾನಿಗಳಿಗಾಗಿಯೇ ಹೊಸ ಯೋಜನೆ ಘೋಷಿಸಿದೆ.
ಇದನ್ನೂ ಓದಿ: ಒಂದಕ್ಕಿಂತ ಒಂದು ಸೂಪರ್ ಲವ್ ಸ್ಟೋರಿ.. ಕ್ರಿಕೆಟರ್ಸ್​ ಪ್ರೇಮಕಥೆಗಳು..!
ಆರ್‌ಸಿಬಿ ಭಾವುಕ ಪತ್ರ
ನಮ್ಮ ತಂಡದ ಪ್ರೀತಿಯ 12ನೇ ಸೈನಿಕರಿಗೆ ನಮ್ಮ ಹೃದಯ ತುಂಬಿ ಬರೆಯುತ್ತಿರುವ ಪತ್ರವಿದು. ನಾವು ಪೋಸ್ಟ್ ಮಾಡಿ ಸುಮಾರು 3 ತಿಂಗಳು ಕಳೆದಿದೆ. ನಮ್ಮ ಈ ಮೌನಕ್ಕೆ ಖಾಲಿತನ ಕಾರಣವಲ್ಲ. ಇದು ದುಃಖದಿಂದ ತುಂಬಿದ ಮೌನ. ಈ ಮಾಧ್ಯಮದ ಮೂಲಕ ಖುಷಿ ಸಂಗತಿಗಳನ್ನ ಹಂಚಿಕೊಳ್ಳುತ್ತಿದ್ದೆವು. ಆದ್ರೆ, ಜೂನ್ 4ರಂದು ನಡೆದ ದುರಂತ ಎಲ್ಲವನ್ನ ಬದಲಾಯಿಸಿತು. ಆ ದಿನ ನಮ್ಮ ಹೃದಯ ಮುರಿದು ಹೋಗಿತ್ತು. ನಂತರದ ಮೌನ ಕೇವಲ ನಿಶ್ಶಬ್ದವಲ್ಲ. ಅದು ಶ್ರದ್ದೆಯಿಂದ ತುಂಬಿದ ಶಾಂತ ಶ್ರದ್ಧಾಂಜಲಿ. ಈ ಮೌನದೊಳಗೆ ನೋವನ್ನ ಅನುಭವಿಸುತ್ತಾ, ನಾವು ಆಳವಾದ ಚಿಂತನೆಯಲ್ಲಿದ್ದೆವು. ನಾವು ಅನೇಕ ಸಂಗತಿಯಗಳನ್ನ ಕಲಿತೆವು. ನೋವನ್ನೇ ಶ್ರದ್ದೆಯಾಗಿ, ನಂಬಿಕೆಯಾಗಿ ರೂಪಿಸಬೇಕೆಂದು ತೀರ್ಮಾನಿಸಿದ್ದೆವು.
ಅದರ ಫಲವೇ `ಆರ್‌ಸಿಬಿ ಕೇರ್ಸ್'.. ನಮ್ಮ ಅಭಿಮಾನಿಗಳು & ಸಮುದಾಯಕ್ಕಾಗಿ ನಿಷ್ಢೆಯಿಂದ ರೂಪಿಸಿದ ಒಂದು ಯೋಜನೆ. ಇಂದು ನಾವು ಮರಳಿದ್ದೇವೆ. ನಿಮ್ಮೊಂದಿಗೆ ನಿಲ್ಲುವ ಭರವಸೆ ನೀಡುತ್ತಾ, ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ.
ಆರ್‌ಸಿಬಿ ಕೇರ್ಸ್
ನಾವು ಸದಾ ನಿಮ್ಮೊಂದಿಗಿದ್ದೇವೆ
ಈ ಪೋಸ್ಟ್ ಮೂಲಕ ಆರ್​​ಸಿಬಿ, ಅಭಿಮಾನಿಗಳಿಗಾಗಿ ಭಾವುಕ ಸಂದೇಶ ನೀಡಿದೆ. ಆದ್ರೆ, ಇದೇ ವೇಳೆ ಆರ್​ಸಿಬಿ ಅಭಿಮಾನಿಗಳೊಂದಿಗಿರುವ ಪ್ರತಿಜ್ಞೆಯೂ ಮಾಡಿದೆ. ಆರ್​ಸಿಬಿ ಕೇರ್ಸ್​ ಎಂಬ ಯೋಜನೆಯನ್ನ ಘೋಷಿಸಿದೆ. ಇದು ಸಹಜವಾಗೇ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹುಟ್ಟುಹಾಕಿದೆ.
ಏನಿದು ‘ಆರ್​ಸಿಬಿ ಕೇರ್ಸ್’ ಯೋಜನೆ​..?
ಕಹಿ ದುರಂತದ ನೆನಪಿನಿಂದ ಹೊರಬರುವ ಯತ್ನದಲ್ಲಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಇದೀಗ ಅಭಿಮಾನಿಗಳಿಗಾಗಿ ಆರ್​​​ಸಿಬಿ ಕೇರ್ಸ್ ಎಂಬ ಯೋಜನೆ ಘೋಷಿಸಿದೆ. ಸದ್ಯಕ್ಕೆ ಈ ಬಗ್ಗೆ ಹೆಚ್ಚಿನ ವಿವರ ನೀಡದ ಆರ್​​ಸಿಬಿ, ಶೀಘ್ರದಲ್ಲೇ ಎಲ್ಲವನ್ನು ತಿಳಿಸುವುದಾಗಿ ಹೇಳಿದೆ. ಫೋಸ್ಟ್​ನಲ್ಲಿ ಉಲ್ಲೇಖಿಸಿದಂತೆ ಆರ್​ಸಿಬಿ ಅಭಿಮಾನಿಗಳ ಕಾಳಜಿಗಾಗಿ ಹೊಸ ಯೋಜನೆ ರೂಪಿಸ್ತಿದೆ. ಅಭಿಮಾನಿಗಳಿಗಾಗಿ ಜೀವ ವಿಮೆ, ಆರೋಗ್ಯ ವಿಮೆ, ತುರ್ತು ಆರೋಗ್ಯ ಚಿಕಿತ್ಸೆಯಂತ ಯೋಜನೆ ಪರಿಚಯಿಸ್ತಿದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗ್ತಿದೆ. ಈ ಬಗ್ಗೆ ಪ್ರತಿಜ್ಞೆಯನ್ನು ಮಾಡಿರುವ ಆರ್​ಸಿಬಿ, ಲಾಯಲ್ ಫ್ಯಾನ್ಸ್​ಗೆ ಯಾವ ರೀತಿಯ ಸುರಕ್ಷತೆ ನೀಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ಒಟ್ನಲ್ಲಿ ಕಳೆದ 3 ತಿಂಗಳುಗಳಿಂದ ಮೌನವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಆರ್‌ಸಿಬಿ ಕೇರ್ಸ್ ಪೋಸ್ಟ್​ ಮಾಡಿದೆ. ಇದಕ್ಕೆ ಅಭಿಮಾನಿಗಳು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ. ಮೌನ ಮುರಿದಿರುವ ಆರ್​ಸಿಬಿ, ಇನ್ಮುಂದೆ ಪ್ರತಿ ಅಪ್​​ಡೇಟ್​​ನ ಹಂಚಿಕೊಂಡು ಫ್ಯಾನ್ಸ್​ಗೆ ಹತ್ತಿರವಾಗೋದ್ರಲ್ಲಿ ಡೌಟೇ ಇಲ್ಲ. ಸದ್ಯ ಆರ್​ಸಿಬಿಯ ಈ ಪೋಸ್ಟ್​, ಫ್ಯಾನ್ಸ್​ಗೆ ಮಂದಹಾಸ ಮೂಡಿದ್ರೂ, ಆ ಕಪ್ಪು ಚುಕ್ಕೆ ಕಿಡಿಯಾಗಿ ಉಳಿದ್ರಲ್ಲಿ ಅನುಮಾನ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ