ಧೋನಿ ಸ್ಪೆಷಲ್ ಟ್ರೈನಿಂಗ್..! MSD ಫ್ಯಾನ್ಸ್ ಓದಲೇಬೇಕಾದ ಸ್ಟೋರಿ..!

ಐಪಿಎಲ್ ಕ್ರಿಕೆಟ್ ಲೋಕದ 'ಮಹಾ ನಾಯಕ' ಮಹೇಂದ್ರ ಸಿಂಗ್ ಧೋನಿ ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಐಪಿಎಲ್ ಸೀಸನ್-19 ಆರಂಭಕ್ಕೆ ಇನ್ನೂ ಕಾಲಾವಕಾಶವಿದ್ದರೂ, ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ನೆಚ್ಚಿನ 'ಮಾಹಿ' ಈಗಲೇ ತಮ್ಮ ಅಭ್ಯಾಸ ಶುರು ಮಾಡಿದ್ದಾರೆ.

author-image
Ganesh Kerekuli
MS Dhoni
Advertisment
  • ಜಿಮ್​ನಲ್ಲಿ ಸತತ ಎರಡು ಗಂಟೆಗಳ ಕಾಲ ವರ್ಕ್​ಔಟ್
  • ಸ್ವಿಮ್ಮಿಂಗ್ ಪೂಲ್​ನಲ್ಲಿ 1 ಗಂಟೆ ಫುಲ್ ಬಾಡಿ ಎಕ್ಸಸೈಸ್
  • ಮತ್ತೆ ಕಡಿಮೆ ತೂಕದ ಬ್ಯಾಟ್​​​​​​ ಮೊರೆ ಹೋದ ಧೊನಿ

ಐಪಿಎಲ್ ಕ್ರಿಕೆಟ್ ಲೋಕದ 'ಮಹಾ ನಾಯಕ' ಮಹೇಂದ್ರ ಸಿಂಗ್ ಧೋನಿ ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಐಪಿಎಲ್ ಸೀಸನ್-19 ಆರಂಭಕ್ಕೆ ಇನ್ನೂ ಕಾಲಾವಕಾಶವಿದ್ದರೂ, ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ನೆಚ್ಚಿನ 'ಮಾಹಿ' ಈಗಲೇ ತಮ್ಮ ಅಭ್ಯಾಸ ಶುರು ಮಾಡಿದ್ದಾರೆ. ಈ ಬಾರಿ ಅಭಿಮಾನಿಗಳಿಗಾಗಿ 'ಒನ್ ಲಾಸ್ಟ್ ಟೈಮ್' (One Last Time) ಅದ್ಭುತ ಪ್ರದರ್ಶನ ನೀಡಲು ಧೋನಿ ವಿಶೇಷ ತಯಾರಿ ನಡೆಸುತ್ತಿದ್ದಾರೆ.

ತವರಿನ ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (JSCA) ಮೈದಾನದಲ್ಲಿ ಧೋನಿ ಪ್ರತಿದಿನ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬೆವರಿಳಿಸುತ್ತಿದ್ದಾರೆ. ಸಾಮಾನ್ಯವಾಗಿ ಆಟಗಾರರು ಬೆಳಿಗ್ಗೆ ಅಥವಾ ಸಂಜೆ ಅಭ್ಯಾಸ ನಡೆಸಿದರೆ, ಧೋನಿ ಮಾತ್ರ ಬಿರು ಬಿಸಿಲನ್ನೇ ಆರಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಚೆನ್ನೈನ ಅತಿಯಾದ ಉಷ್ಣಾಂಶ. ಚೆನ್ನೈನ ಹವಾಮಾನಕ್ಕೆ ದೇಹವನ್ನು ಹೊಂದಿಸಿಕೊಳ್ಳಲು ಮಾಹಿ ಈ ತಂತ್ರ ಹೂಡಿದ್ದಾರೆ.

ಇದನ್ನೂ ಓದಿ: ಮತ್ತೆ ಸುದ್ದಿಯಲ್ಲಿ ಅಯ್ಯರ್​.. T20 ತಂಡದ ನಾಯಕನಾಗಲು ಮಾಸ್ಟರ್ ಪ್ಲಾನ್..!

DHONI_CSK_AUCTION

ಧೋನಿ ಜೆಎಸ್​ಸಿಎ ಸ್ಟೇಡಿಯಂನ ಇನ್​ಡೋರ್ ಪಿಚ್‌ಗಳಲ್ಲಿ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಅಲ್ಲಿರುವ ಬ್ಲಾಕ್ ಸಾಯಿಲ್ (ಕಪ್ಪು ಮಣ್ಣು) ಮತ್ತು ಮಿಕ್ಸ್ಡ್ ಸಾಯಿಲ್ ಪಿಚ್‌ಗಳಲ್ಲಿ ಸ್ಪಿನ್ನರ್ ಹಾಗೂ ವೇಗಿಗಳ ಎಸೆತಗಳನ್ನು ಎದುರಿಸುತ್ತಿದ್ದಾರೆ. ತಾಂತ್ರಿಕವಾಗಿ ಇನ್ನಷ್ಟು ಬಲಿಷ್ಠರಾಗಲು ಈ ವಿಭಿನ್ನ ಪಿಚ್‌ಗಳು ಅವರಿಗೆ ನೆರವಾಗುತ್ತಿವೆ.

ಫಿಟ್ನೆಸ್ ಮಂತ್ರ: ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್

40ರ ಹರೆಯದಲ್ಲೂ ಯುವಕರಿಗೆ ಮಾದರಿಯಾಗಿರುವ ಧೋನಿ, ಪ್ರತಿದಿನ 2 ಗಂಟೆಗಳ ಕಾಲ ಜಿಮ್‌ನಲ್ಲಿ ಕಳೆಯುತ್ತಿದ್ದಾರೆ. ಮಸಲ್ ಮಾಸ್ ಮತ್ತು ಸ್ಟ್ರೆಂತ್ ಹೆಚ್ಚಿಸಿಕೊಳ್ಳಲು ಶೋಲ್ಡರ್ಸ್ ಹಾಗೂ ಲೋವರ್ ಬಾಡಿ ಟ್ರೈನಿಂಗ್‌ಗೆ ಒತ್ತು ನೀಡುತ್ತಿದ್ದಾರೆ. ಜಿಮ್ ಮುಗಿದ ಬಳಿಕ 1 ಗಂಟೆ ಕಾಲ ಸ್ವಿಮ್ಮಿಂಗ್ ಪೂಲ್‌ನಲ್ಲಿ ಫುಲ್ ಬಾಡಿ ಎಕ್ಸಸೈಸ್ ಮಾಡುವ ಮೂಲಕ ದೇಹವನ್ನು ಫಿಟ್ ಆಗಿರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಫೈನಲ್ ಮ್ಯಾಚ್​.. ಮತ್ತೊಂದು ಕಪ್ ಎತ್ತುವ ಹುಮ್ಮಸ್ಸಿನಲ್ಲಿ ನಮ್ಮ ಆರ್​​ಸಿಬಿ..!

Dhoni and shrinivasan

ಈ ಬಾರಿಯ ಐಪಿಎಲ್‌ನಲ್ಲಿ ಧೋನಿ ಬ್ಯಾಟಿಂಗ್‌ನಲ್ಲಿ ಒಂದು ಪ್ರಮುಖ ಬದಲಾವಣೆ ಮಾಡಿಕೊಂಡಿದ್ದಾರೆ. ಕಳೆದ ಬಾರಿ 1.300 ಕೆಜಿ ತೂಕದ ಬ್ಯಾಟ್ ಬಳಸಿದ್ದ ಧೋನಿ, ಈ ಬಾರಿ 1.230 ಕೆಜಿ ತೂಕದ ಹಗುರವಾದ ಬ್ಯಾಟ್ ಬಳಸುತ್ತಿದ್ದಾರೆ. SS ಕಂಪನಿಯಿಂದ ವಿಶೇಷವಾಗಿ ತಯಾರಿಸಲ್ಪಟ್ಟ ಈ ಲೈಟ್ ವೇಯ್ಟ್ ಬ್ಯಾಟ್ ಮೂಲಕ ವೇಗವಾಗಿ ಬ್ಯಾಟ್ ಸ್ವಿಂಗ್ ಮಾಡಲು ಮತ್ತು ಉತ್ತಮ ಟೈಮಿಂಗ್ ಸಾಧಿಸಲು ಧೋನಿ ಪ್ಲಾನ್ ಮಾಡಿದ್ದಾರೆ.

ಕಳೆದ ಸೀಸನ್‌ನಲ್ಲಿ ಧೋನಿ ಪ್ರದರ್ಶನ ಅಭಿಮಾನಿಗಳಿಗೆ ಅಷ್ಟಾಗಿ ತೃಪ್ತಿ ನೀಡಿರಲಿಲ್ಲ. ಆದರೆ ಈ ಬಾರಿ ಧೋನಿ ನಡೆಸುತ್ತಿರುವ ಈ ಮಟ್ಟದ ಸಿದ್ಧತೆ ನೋಡಿದರೆ, ಮೈದಾನದಲ್ಲಿ ಮತ್ತೆ ಹಳೆಯ 'ಫಿನಿಶರ್' ಧೋನಿಯನ್ನು ನೋಡಬಹುದು ಎಂಬ ಭರವಸೆ ಅಭಿಮಾನಿಗಳಲ್ಲಿ ಮೂಡಿದೆ. ಧೋನಿಯ ಈ ಕಮಿಟ್‌ಮೆಂಟ್ ಮತ್ತು ಶ್ರಮವೇ ಅವರನ್ನು ಕ್ರಿಕೆಟ್ ಲೋಕದ ದಂತಕಥೆಯನ್ನಾಗಿ ಮಾಡಿದೆ.

ಇದನ್ನೂ ಓದಿ: ರಾಜಸ್ಥಾನ್​ ರಾಯಲ್ಸ್​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MS Dhoni investment MS Dhoni car craze MS Dhoni cinema MS Dhoni
Advertisment