ಇಶಾನ್ ಕಿಶನ್ ಹೊಗಳಿದ ಪಾಕ್ ಕೋಚ್​; ಪಾಕಿಸ್ತಾನ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಅಸಲಿ ಸತ್ಯ ಬಿಚ್ಚಿಟ್ಟ ಮೈಕ್ ಹೆಸ್ಸನ್..!

2026ರ ಟಿ20 ವಿಶ್ವಕಪ್ (T20 World Cup 2026) ಪಂದ್ಯದಲ್ಲಿ 61 ರನ್‌ಗಳ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ ತಂಡ ತೀವ್ರ ಮುಖಭಂಗ ಅನುಭವಿಸಿದೆ. ಈ ಸೋಲಿನ ಬಳಿಕ ಪಾಕ್ ಪಾಳಯದ ಪರಿಸ್ಥಿತಿ ಹೇಗಿದೆ ಎಂಬುದನ್ನು ಮುಖ್ಯ ಕೋಚ್ ಮೈಕ್ ಹೆಸ್ಸನ್ (Mike Hesson) ಬಿಚ್ಚಿಟ್ಟಿದ್ದಾರೆ.

author-image
Ganesh Kerekuli
Mike Hesson
Advertisment

2026ರ ಟಿ20 ವಿಶ್ವಕಪ್ (T20 World Cup 2026) ಪಂದ್ಯದಲ್ಲಿ 61 ರನ್‌ಗಳ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ ತಂಡ ತೀವ್ರ ಮುಖಭಂಗ ಅನುಭವಿಸಿದೆ. ಈ ಸೋಲಿನ ಬಳಿಕ ಪಾಕ್ ಪಾಳಯದ ಪರಿಸ್ಥಿತಿ ಹೇಗಿದೆ ಎಂಬುದನ್ನು ಮುಖ್ಯ ಕೋಚ್ ಮೈಕ್ ಹೆಸ್ಸನ್ (Mike Hesson) ಬಿಚ್ಚಿಟ್ಟಿದ್ದಾರೆ.

‘ನಮ್ಮ ಆಟಗಾರರು ನೊಂದಿದ್ದಾರೆ’

ಪಂದ್ಯದ ಬಳಿಕ ಮಾತನಾಡಿದ ಹೆಸ್ಸನ್, ‘ಸದ್ಯ ನಮ್ಮ ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲರೂ ತೀವ್ರ ನಿರಾಶರಾಗಿದ್ದಾರೆ. ಪಾಕಿಸ್ತಾನಕ್ಕೆ ಭಾರತದ ವಿರುದ್ಧದ ಪಂದ್ಯ ಎಷ್ಟು ಮಹತ್ವದ್ದು ಎಂಬುದು ಪ್ರತಿಯೊಬ್ಬ ಆಟಗಾರನಿಗೂ ತಿಳಿದಿದೆ. ಸೋಲಿನಿಂದ ಅವರೆಲ್ಲರೂ ನೊಂದಿದ್ದಾರೆ (Hurting). ಈ ಪಂದ್ಯಕ್ಕೂ ಮುನ್ನ ನಾವು ಸತತ 5 ಪಂದ್ಯಗಳನ್ನು ಗೆದ್ದಿದ್ದೆವು, ಹೀಗಾಗಿ ಆತ್ಮವಿಶ್ವಾಸವಿತ್ತು. ಇಂದು ಭಾರತ ನಮ್ಮನ್ನು ಎಲ್ಲಾ ವಿಭಾಗಗಳಲ್ಲೂ ಸೋಲಿಸಿತು ಎಂದು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಪಾಕ್ ವಿರುದ್ಧ ಗೆದ್ದರೂ ಕುಲ್ದೀಪ್ ಮೇಲೆ ಹಾರ್ದಿಕ್, ಸೂರ್ಯ ಗರಂ! ಮೈದಾನದಲ್ಲಿ ಆಗಿದ್ದೇನು..? VIDEO

Shoaib Akhtar

ಇಶಾನ್ ಕಿಶನ್ ಆಟಕ್ಕೆ ಶಹಬ್ಬಾಸ್

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಿರ್ಧಾರವನ್ನು ಹೆಸ್ಸನ್ ಸಮರ್ಥಿಸಿಕೊಂಡರು. ‘ಆರಂಭದಲ್ಲಿ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುತ್ತಿತ್ತು. ನಾವು ಉತ್ತಮವಾಗಿಯೇ ಆರಂಭಿಸಿದೆವು. ಆದರೆ ಇಶಾನ್ ಕಿಶನ್ (77 ರನ್) ಆಡಿದ ರೀತಿ ಪಂದ್ಯದ ಗತಿಯನ್ನೇ ಬದಲಿಸಿತು. ಅವರು ನಮ್ಮ ಕೈಯಿಂದ ಪಂದ್ಯವನ್ನು ಕಸಿದುಕೊಂಡರು’ ಎಂದು ಹೆಸ್ಸನ್ ಭಾರತದ ಬ್ಯಾಟಿಂಗ್ ಅನ್ನು ಹೊಗಳಿದ್ದಾರೆ.

ಮುಂದಿನ ಹಾದಿ ಕಠಿಣ

ಭಾರತ ನೀಡಿದ್ದ 176 ರನ್ ಗುರಿ ಬೆನ್ನತ್ತಿದ ಪಾಕಿಸ್ತಾನ, ಜಸ್ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿ ಕೇವಲ 114 ರನ್‌ಗಳಿಗೆ ಆಲೌಟ್ ಆಯ್ತು. ಈ ಗೆಲುವಿನೊಂದಿಗೆ ಭಾರತ ‘ಸೂಪರ್-8’ ಹಂತಕ್ಕೆ ಲಗ್ಗೆ ಇಟ್ಟಿದೆ. ಇತ್ತ ಸೋಲನುಭವಿಸಿರುವ ಪಾಕಿಸ್ತಾನ, ಟೂರ್ನಿಯಲ್ಲಿ ಉಳಿಯಬೇಕಾದರೆ ಬುಧವಾರ ನಡೆಯಲಿರುವ ನಮೀಬಿಯಾ (Namibia) ವಿರುದ್ಧದ ಪಂದ್ಯದಲ್ಲಿ ಕಡ್ಡಾಯವಾಗಿ ಗೆಲ್ಲಲೇಬೇಕಿದೆ.

‘ನಾವು ಈ ಸೋಲಿನಿಂದ ಪಾಠ ಕಲಿಯಬೇಕಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ನಾವು ಚೇತರಿಸಿಕೊಂಡು ಮತ್ತೆ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ’ ಎಂದು ಹೆಸ್ಸನ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಮಹಿಳೆಯರಿಗೆ ಗುಡ್ ನ್ಯೂಸ್: ರಸ್ತೆಗಿಳಿದ 2000 ‘ಸಖಿ ಆಟೋ’ಗಳು! Whatsappನಲ್ಲೇ ಬುಕ್ಕಿಂಗ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

T20 world cup india vs pakistan
Advertisment