Advertisment

ಬೆಂಗಳೂರಿನ ಮಹಿಳೆಯರಿಗೆ ಗುಡ್ ನ್ಯೂಸ್: ರಸ್ತೆಗಿಳಿದ 2000 ‘ಸಖಿ ಆಟೋ’ಗಳು! Whatsappನಲ್ಲೇ ಬುಕ್ಕಿಂಗ್..!

ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ಮಹತ್ವದ ಸೇವೆ ಆರಂಭವಾಗಿದೆ. ಕೇವಲ ಮಹಿಳೆಯರಿಗಾಗಿಯೇ ಇದೀಗ ‘ಸಖಿ ಆಟೋ’ (Sakhi Auto) ಸೇವೆ ರಸ್ತೆಗಿಳಿದಿದ್ದು, ಆಟೋಗಳಿಗಾಗಿ ಪರದಾಡುವ ಅಥವಾ ಸುರಕ್ಷತೆಯ ಬಗ್ಗೆ ಚಿಂತಿಸುವ ಮಹಿಳೆಯರಿಗೆ ಇದು ವರದಾನವಾಗಲಿದೆ.

author-image
Ganesh Kerekuli
Sakhi Auto Bengaluru (3)
Advertisment

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ಮಹತ್ವದ ಸೇವೆ ಆರಂಭವಾಗಿದೆ. ಕೇವಲ ಮಹಿಳೆಯರಿಗಾಗಿಯೇ ಇದೀಗ ‘ಸಖಿ ಆಟೋ’ (Sakhi Auto) ಸೇವೆ ರಸ್ತೆಗಿಳಿದಿದ್ದು, ಆಟೋಗಳಿಗಾಗಿ ಪರದಾಡುವ ಅಥವಾ ಸುರಕ್ಷತೆಯ ಬಗ್ಗೆ ಚಿಂತಿಸುವ ಮಹಿಳೆಯರಿಗೆ ಇದು ವರದಾನವಾಗಲಿದೆ.

Advertisment

ನಗರದಲ್ಲಿ ಈಗಾಗಲೇ 2,000 ಸಖಿ ಆಟೋಗಳು ಕಾರ್ಯಾಚರಣೆ ಆರಂಭಿಸಿದ್ದು, ಈ ಸೇವೆಯನ್ನು ಹೇಗೆ ಪಡೆಯುವುದು? ದರ ಎಷ್ಟು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪಿಸಿಬಿ ಅಧ್ಯಕ್ಷ ಒಬ್ಬ ಅನಕ್ಷರಸ್ಥ.. ಸೋತ ಬೆನ್ನಲ್ಲೇ ಆಟಗಾರರ ಮೇಲೆ ಉರಿದುಬಿದ್ದ ಅಖ್ತರ್..!

Sakhi Auto Bengaluru (1)

ಸಖಿ ಆಟೋ ವಿಶೇಷತೆಗಳೇನು?

ಬೆಂಗಳೂರಿನಲ್ಲಿ ಸದ್ಯ 2,000 ಸಖಿ ಆಟೋಗಳು ಸಂಚರಿಸುತ್ತಿವೆ. ಸದ್ಯಕ್ಕೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಈ ಆಟೋಗಳು ಸೇವೆ ನೀಡಲಿವೆ. ಮಹಿಳೆಯರಿಗೆ ಸುರಕ್ಷಿತ ಮತ್ತು ನೆಮ್ಮದಿಯ ಪ್ರಯಾಣ ಒದಗಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮುಂಬರುವ ದಿನಗಳಲ್ಲಿ ದಿನದ 24 ಗಂಟೆಯೂ (24/7) ಸೇವೆ ಒದಗಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.

Advertisment

ಬುಕ್ ಮಾಡುವುದು ಹೇಗೆ?

ಸಖಿ ಆಟೋವನ್ನು ಬಹಳ ಸುಲಭವಾಗಿ ನಿಮ್ಮ ಮೊಬೈಲ್ ಮೂಲಕವೇ ಬುಕ್ ಮಾಡಬಹುದು.
ವಾಟ್ಸಾಪ್ ಮೂಲಕ: ಗ್ರಾಹಕರು 6361933364 ಸಂಖ್ಯೆಗೆ ವಾಟ್ಸಾಪ್ ಮೆಸೇಜ್ ಮಾಡುವ ಮೂಲಕ ಆಟೋ ಬುಕ್ ಮಾಡಬಹುದು.
ವೆಬ್‌ಸೈಟ್ ಮೂಲಕ: ride.sakhiwomen.in ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿಯೂ ಆಟೋ ಕಾಯ್ದಿರಿಸಬಹುದು.

Sakhi Auto Bengaluru (2)

ಪ್ರಯಾಣ ದರ  ಎಷ್ಟು?

  • ಸಾಮಾನ್ಯ ಆಟೋಗಳ ದರಕ್ಕೂ ಮತ್ತು ಸಖಿ ಆಟೋ ದರಕ್ಕೂ ಹೆಚ್ಚು ವ್ಯತ್ಯಾಸವಿಲ್ಲ ಎಂದು ಹೇಳಲಾಗಿದೆ.
  • ಕನಿಷ್ಠ ದರ: ಮೊದಲ 2 ಕಿಲೋಮೀಟರ್‌ಗೆ 50 ರೂ. ನಿಗದಿಪಡಿಸಲಾಗಿದೆ.
  • ನಂತರದ ದರ: ಆನಂತರದ ಪ್ರತಿ ಕಿಲೋಮೀಟರ್‌ಗೆ 20 ರೂ. ದರವಿರುತ್ತದೆ.
  • ಮಳೆಗಾಲದಲ್ಲಿ ಹಾಗೂ ಪೀಕ್ ಅವರ್‌ಗಳಲ್ಲಿ (ಹೆಚ್ಚು ಟ್ರಾಫಿಕ್ ಇರುವ ಸಮಯ) ದರದಲ್ಲಿ ಏರಿಕೆ ಅಥವಾ ಬದಲಾವಣೆಗಳಾಗುವ
  • ಸಾಧ್ಯತೆ ಇದೆ. ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿ ಆರಂಭವಾಗಿರುವ ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಪಾಕ್ ವಿರುದ್ಧ ಗೆದ್ದರೂ ಕುಲ್ದೀಪ್ ಮೇಲೆ ಹಾರ್ದಿಕ್, ಸೂರ್ಯ ಗರಂ! ಮೈದಾನದಲ್ಲಿ ಆಗಿದ್ದೇನು..? VIDEO

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bengaluru Auto Booking Women Safety Auto Sakhi Auto Bengaluru
Advertisment
Advertisment
Advertisment