/newsfirstlive-kannada/media/post_attachments/wp-content/uploads/2025/01/GAMBHIR-3.jpg)
ಆಸ್ಟ್ರೇಲಿಯಾ ಎದುರಿನ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದ್ದೇ ಆಗಿದ್ದು, ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ತಂಡದಲ್ಲಿರೋ ಒಳ ಮುನಿಸು ಈಗ ಜಗ್ಗಜಾಹೀರಾಗಿದೆ. ಇಷ್ಟು ದಿನ ಕೇವಲ ರೋಹಿತ್ ಶರ್ಮಾ ವರ್ಸಸ್ ಗೌತಮ್ ಗಂಭೀರ್ ಎಂಬಂತಿದ್ದ ಕಚ್ಚಾಟದಲ್ಲಿ ಮತ್ತಿಬ್ಬರ ಎಂಟ್ರಿಯಾಗಿದೆ. ಇದೇ ಕಚ್ಚಾಟ ಟೀಮ್ ಇಂಡಿಯಾದ ಗುಂಪುಗಳ ನಡುವಿನ ಘರ್ಷಣೆಗೆ ನಾಂದಿಯಾಡಿದೆ.
ಟೀಮ್ ಇಂಡಿಯಾದಲ್ಲಿ ನಡೀತಿರುವುದು ಕೇವಲ ರೋಹಿತ್ ಶರ್ಮಾ ವರ್ಸಸ್ ಗೌತಮ್ ಗಂಭೀರ್ ವಾರ್ ಅಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ವರ್ಸಸ್ ಹೆಡ್ ಕೋಚ್ ಗೌತಮ್ ಗಂಭೀರ್, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಮಹಾಕಾಳಗ. ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ಸೈಡ್​ಲೈನ್​​​​​ ಹಿಂದಿನ ಕುತಂತ್ರ ಟೀಮ್ ಇಂಡಿಯಾವನ್ನು ಒಡೆದ ಮನೆಯಾಗಿಸಿದೆ. ರೋಹಿತ್ ಶರ್ಮಾ, ವಿರಾಟ್​ ಕೊಹ್ಲಿ ಸೈಡ್​​ಲೈನ್​ಗೆ ಅಗರ್ಕರ್​, ಗಂಭೀರ್​​ ಟೊಂಕಕಟ್ಟಿ ನಿಂತಿದ್ದು ಬಟಾಬಯಲಾಗಿದೆ.
ಇದನ್ನೂ ಓದಿ: ಗರ್ಲ್​ಫ್ರೆಂಡ್​ ಜೊತೆ ವಿಡಿಯೋ ಹಂಚಿಕೊಂಡ ಹಾರ್ದಿಕ್ ಪಾಂಡ್ಯ - VIDEO
ಆಸ್ಟ್ರೇಲಿಯಾ ಪ್ರವಾಸಕ್ಕೆ ಟೀಮ್ ಇಂಡಿಯಾದ ಆಯ್ಕೆ.. ಕೇವಲ ಟೀಮ್ ಸೆಲೆಕ್ಷನ್ ಮಾತ್ರವಾಗಿರಲಿಲ್ಲ. ಭವಿಷ್ಯದ ತಂಡ ಕಟ್ಟೋ ಯೋಜನೆಯೂ ಆಗಿರಲಿಲ್ಲ. ಟೀಮ್​ ಸೆಲೆಕ್ಷನ್​ನ ಮೇನ್​ ಅಜೆಂಡಾನೇ ರೋಹಿತ್​​​ ಶರ್ಮಾರನ್ನ ನಾಯಕತ್ವದಿಂದ ಸೈಡ್​ಲೈನ್ ಮಾಡೋದಾಗಿತ್ತು. ನಿನ್ನೆ ಮೊನ್ನೆಯಿಂದಲ್ಲ.. ಗಂಭೀರ್​ ಕೋಚ್​ ಹುದ್ದೆಗೇರಿದ ದಿನದಿಂದಲೇ ಇದಕ್ಕೆ ತಂತ್ರ ಹೆಣೆಯಲಾಗಿತ್ತು.
ಹೆಡ್ ಕೋಚ್ ಹುದ್ದೆಗೇರಿದ ಬೆನ್ನಲ್ಲೇ ತಂಡದ ಮೇಲೆ ಬಿಗಿ ಪಟ್ಟು ಹೊಂದುವ ಮಹಾದಾಸೆ ಗಂಭೀರ್​ಗೆ ಇತ್ತು. ರೋಹಿತ್ ಶರ್ಮಾ ಮತ್ತು ವಿರಾಟ್​​ ಕೊಹ್ಲಿಯ ಉಪಸ್ಥಿತಿಯಲ್ಲಿ ಅದು ಅಸಾಧ್ಯದ ಮಾತಾಗಿತ್ತು. ಗೌತಮ್ ಗಂಭೀರ್​ಗೆ ಬಿಗ್​​ಬಾಸ್​ಗಳ ಕೃಪೆ ಇತ್ತು. ಇದರಿಂದ ಸಹಜವಾಗೇ ಚೀಫ್ ಸೆಲೆಕ್ಟರ್​ ಅಜಿತ್ ಅಗರ್ಕರ್​, ಗಂಭೀರ್ ಕೈಗೊಂಬೆಯಾಗಿಬಿಟ್ರು. ಮೊದಲೇ ಗಂಭೀರ್​​ ಕೈಗೊಂಬೆಯಾಗಿದ್ದ ಅಗರ್ಕರ್, ಆತನ ಒಂದೊಂದು ಪ್ಲಾನ್​ ಇಂಪ್ಲಿಮೆಂಟ್ ಮಾಡಿದ್ರು. ಇದರ ಮೊದಲ ಅಧ್ಯಾಯವೇ ಆಸ್ಟ್ರೇಲಿಯಾ ಪ್ರವಾಸದ ನಂತರ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್​ ರಿಟೈರ್ಮೆಂಟ್​ ಘೋಷಿಸಿದ್ದು.
ವಿರಾಟ್​, ರೋಹಿತ್​​ ಕರಿಯರ್​ಗೆ ಬ್ರೇಕ್ ಹಾಕುವ ಉದ್ದೇಶದಲ್ಲಿ ಆಟ ಶುರುಮಾಡಿದ್ದ ಗಂಭೀರ್​​​ ಮತ್ತು ಅಜಿತ್ ಅಗರ್ಕರ್​, ಆಸ್ಟ್ರೇಲಿಯಾ ಪ್ರವಾಸದ ವೇಳೆಯೇ ರೋಹಿತ್ ಹಾಗೂ ಕೊಹ್ಲಿ ಮೇಲೆ ಪರೋಕ್ಷ ಒತ್ತಡವೇರಿದ್ದರು. ಈಗ ಒಂದೆಜ್ಜೆ ಮುಂದೆ ಹೋಗಿ ಏಕದಿನ ನಾಯಕತ್ವದಿಂದಲೂ ರೋಹಿತ್​ಗೆ ಕೊಕ್ ನೀಡಿದ್ದಾರೆ. 2027ರ ವಿಶ್ವಕಪ್​ ಆಡಬೇಕಾದ್ರೆ ಡೊಮೆಸ್ಟಿಕ್ ಆಡಬೇಕು. ರನ್ ಗಳಿಸಬೇಕೆಂಬ ಮಾನದಂಡವನ್ನೂ ಹಾಕಿದ್ದಾರೆ. ಇದಕ್ಕೆಲ್ಲಾ ಈಗ ಉತ್ತರ ನೀಡಲು ರೋಹಿತ್, ವಿರಾಟ್ ರೆಡಿಯಾಗಿದ್ದಾರೆ.
ರೋಹಿತ್ ಹೊಸ ಆಟ..!
ಅಜಿತ್ ಅಗರ್ಕರ್ ಪ್ರೆಸ್​ಮೀಟ್​ನಲ್ಲಿ ಸೈಡ್​ಲೈನ್ ಆಟದ ಸೂಚನೆ ನೀಡಿದ್ದಾಗಿದೆ. ಡೊಮೆಸ್ಟಿಕ್ ಕ್ರಿಕೆಟ್​​ನ ಷರತ್ತು ಹಾಕಿದ್ದಾರೆ. ವಯಸ್ಸು, ಫಿಟ್ನೆಸ್​, ಫಾರ್ಮ್ ಮಾನದಂಡವೂ ಹಾಕಿದ್ದಾರೆ. ಆದ್ರೀಗ ಇದಕ್ಕೆಲ್ಲಾ ಸವಾಲ್ ಎಸೆಯಲು ಮುಂದಾಗಿರುವ ರೋಹಿತ್, ವಿರಾಟ್, ಹೊಸ ಆಟ ಶುರು ಮಾಡಿದ್ದಾರೆ. ಅಜಿತ್ ಅಗರ್ಕರ್​ ಮೇಲೆ ಫ್ಯಾನ್ಸ್​ ಕೆಂಡಕಾರುತ್ತಿರುವ ಹೊತ್ತಿನಲ್ಲೇ ವಿಜಯ್ ಹಜಾರೆ ಆಡಲು ನಿರ್ಧರಿಸಿರುವ ರೊ-ಕೊ ಜೋಡಿ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಫೈರಿ ಪರ್ಫಾಮೆನ್ಸ್ ಮೂಲಕ ಕೌಂಟರ್ ನೀಡೋ ಲೆಕ್ಕಾಚಾರ ಹಾಕಿದೆ.
ಶೀಘ್ರವೇ ಗೇಟ್​ಪಾಸ್
ರೋಹಿತ್ ಶರ್ಮಾ ಏಕದಿನ ತಂಡದ ನಾಯಕ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇದು ಭಾರೀ ಚರ್ಚೆಗೂ ಗ್ರಾಸವಾಗಿದೆ. ಅಜಿತ್ ಅಗರ್ಕರ್ ನಿರ್ಧಾರವನ್ನೇ ಎಲ್ಲರೂ​ ಪ್ರಶ್ನಿಸ್ತಿದ್ದಾರೆ. ಫ್ಯಾನ್ಸ್​ ಆಕ್ರೋಶ​ಗೊಂಡಿದ್ದಾರೆ. ಈ ಬೆನ್ನಲ್ಲೇ ರೋಹಿತ್​ ಕೆಳಗಿಳಿಸಿದ​ ಅಜಿತ್​​​ ಅಗರ್ಕರ್, ಪವರ್​ ಕಟ್​ ಮಾಡಲು ಬಿಸಿಸಿಐನ ಒಂದು ಬಣ ಮುಂದಾಗಿದೆ. ಶೀಘ್ರವೇ ಗೇಟ್​ಪಾಸ್ ನೀಡಲು ನಿರ್ಧರಿಸಿರುವ ಬಿಸಿಸಿಐ, ಹೊಸ ಚೀಫ್ ಸೆಲೆಕ್ಟರ್​ ನೇಮಕದೊಂದಿಗೆ ಫ್ಯಾನ್ಸ್​ ಆಕ್ರೋಶಕ್ಕೆ ಬ್ರೇಕ್ ಹಾಕಲು ಮುಂದಾಗಿದೆ ಎಂಬ ಸುದ್ದಿ ಸದ್ಯ ವರದಿಯಾಗಿದೆ. ಇದ್ರ ಸತ್ಯಾಸತ್ಯತೆ ಕೆಲವೇ ದಿನಗಳಲ್ಲಿ ತಿಳಿಯಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ