/newsfirstlive-kannada/media/media_files/2025/09/21/pressclub-2025-09-21-14-32-45.jpg)
ಪೇಸ್ ಸ್ಪೋರ್ಟ್ಸ್ ಅರೆನಾ ಅಕಾಡೆಮಿ, ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ದಸರಾ ಕಪ್ –2025 ಬ್ಯಾಡ್ಮಿಂಟನ್ ಟೂರ್ನಿ ಯಶಸ್ವಿ ಅಂತ್ಯಕಂಡಿದೆ. ಎರಡು ದಿನಗಳ ಕಾಲ ನಡೆದ ಬ್ಯಾಡ್ಮಿಂಟನ್ ಟೂರ್ನಿಯ ವಿಜೇತರಿಗೆ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪ ಪ್ರಶಸ್ತಿ ಪ್ರದಾನ ಮಾಡಿದರು.
ದೀಪಾಂಜಲಿ ನಗರದ ಪ್ರಮೋದ್ ಲೇಔಟ್​​​ನಲ್ಲಿರುವ ಪೇಸ್ ಸ್ಪೋರ್ಟ್ಸ್ ಅರೆನಾ ಅಕಾಡೆಮಿಯ ಬ್ಯಾಡ್ಮಿಂಟನ್ ಕೋರ್ಟ್​ನಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪ, ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿ ತಟ್ಟೆ, ಪ್ರೆಸ್ ಕ್ಲಬ್​​​ ಕ್ರೀಡಾ ಸಮಿತಿ ಅಧ್ಯಕ್ಷ ಮಂಜುನಾಥ್, ಖಜಾಂಚಿ ಶರಣಬಸಪ್ಪ ಪ್ರಶಸ್ತಿ ವಿತರಿಸಿದರು.
ಇದನ್ನೂ ಓದಿ:ಈ ವಾರ ಹೃದಯಗೆದ್ದ ಸೀರಿಯಲ್ ಕರ್ಣ.. ನೀವು ನೋಡುವ ಧಾರವಾಹಿ TRP ಎಷ್ಟು ಗೊತ್ತಾ?
ಮಾಧ್ಯಮ ವಿಭಾಗದ ಪುರುಷರ ಸಿಂಗಲ್ಸ್​ನಲ್ಲಿ ವಿ.ಜೆ.ಮಂಜು ಚಾಂಪಿಯನ್ ಆಗಿ ಹೊರ ಹೊಮ್ಮಿದರೆ, ಶ್ರೀಧರ್ ರನ್ನರ್ ಅಪ್ ಪ್ರಶಸ್ತಿ ಪಡೆದರು. ಪುರುಷರ ಡಬಲ್ಸ್​ನಲ್ಲಿ ಶ್ರೀನಿವಾಸ್, ಸತೀಶ್ ಜೋಡಿ ಚಾಂಪಿಯನ್ಸ್ ಆಗಿ ಮೆರೆದಾಡಿದರೆ. ಅಶ್ವಿನ್ ಗೌತಮ್ ಮತ್ತು ಕುಮಾರ್ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಮಿಶ್ರ ಡಬಲ್ಸ್​ನಲ್ಲಿ ಅನಿತಾ, ಪವನ್ ಜೋಡಿ ಗೆಲುವು ಸಾಧಿಸಿದ್ರೆ. ರಾಘವ್ ಮತ್ತು ನೇಹಾ ಜೋಡಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು..
ಇದನ್ನೂ ಓದಿ:ನಾಳೆಯಿಂದ ಜನರಿಗೆ ಡಬ್ಬಲ್ ಸಂಭ್ರಮ.. ಖುಷಿಯೋ ಖುಷಿ..! ಫುಲ್ ಲಿಸ್ಟ್
ಸೆಲೆಬ್ರಿಟಿ ವಿಭಾಗದ ಪುರುಷರ ಡಬಲ್ಸ್​ನಲ್ಲಿ ಮಂಜಯ್ಯ ಚಾವಡಿ, ಇಂದ್ರಜಿತ್ ಲಂಕೇಶ್ ಜೋಡಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಇಮ್ರಾನ್ ಸರ್ದಾರಿಯಾ, ಅಶ್ವಿನ್ ಗೌತಮ್ ಜೋಡಿ ರನ್ನರ್ ಅಪ್ ಪ್ರಶಸ್ತಿ ಪಡೆಯಿತು. ಮಿಶ್ರ ಡಬಲ್ಸ್​ನಲ್ಲಿ ರಷ್ಮಿಗೌಡ, ಮಂಜುನಾಥ್ ಗೌಡ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರೆ. ವಿ.ಜೆ. ಮಂಜು, ಮೈತ್ರೇಯಾ ಜೋಡಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ