ಪತ್ನಿಯ ಯಡವಟ್ಟು, ಜಡೇಜಾಗೆ ಸಂಕಷ್ಟ..? ಫ್ಯಾನ್ಸ್ ಆಕ್ರೋಶ

ಕ್ರಿಕೆಟ್​ ಲೋಕಕ್ಕೂ ಕಾಂಟ್ರವರ್ಸಿಗೂ ಒಂಥರಾ ಸಂಬಂಧ. ಸದಾ ಒಂದಿಲ್ಲೊಂದು ಕಾಂಟ್ರವರ್ಸಿ ಸದ್ದು ಮಾಡುತ್ತಲೇ ಇರುತ್ವೆ. ಭಾರತೀಯ ಕ್ರಿಕೆಟ್​​ನಲ್ಲೀಗ ಹೊಸ ವಿವಾದ ಭುಗಿಲೆದ್ದಿದೆ. ಟೀಮ್​ ಇಂಡಿಯಾ ಆಲ್​​​ರೌಂಡರ್​ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ನೀಡಿದ ಒಂದು ಸ್ಟೇಟ್​ಮೆಂಟ್​ ಬಿರುಗಾಳಿಯನ್ನೇ ಎಬ್ಬಿಸಿದೆ.

author-image
Ganesh Kerekuli
Jadeja wife
Advertisment

ಟೀಮ್​ ಇಂಡಿಯಾದ ಆಟಗಾರರೆಲ್ಲಾ ದುಶ್ಚಟಗಳ ದಾಸರಾ? ರವೀಂದ್ರ ಜಡೇಜಾ ಒಬ್ಬರನ್ನ ಬಿಟ್ಟು ಉಳಿದವರೆಲ್ಲಾ ಚಟಗಾರರಾ? ಟೀಮ್​ ಇಂಡಿಯಾ ಆಲ್​​ರೌಂಡರ್​ ರವೀಂದ್ರ ಜಡೇಜಾ ಪತ್ನಿ ನೀಡಿರೋ ವಿವಾದಾತ್ಮಕ ಹೇಳಿಕೆ ಭಾರತೀಯ ಕ್ರಿಕೆಟ್​ನಲ್ಲಿ ಬಿರುಗಾಳಿಯನ್ನ ಎಬ್ಬಿಸಿದೆ. ಜಡೇಜಾ ಪತ್ನಿಯ ಹೇಳಿಕೆಗೆ ಟೀಮ್​ ಇಂಡಿಯಾದ ಸೀನಿಯರ್​ ಆಟಗಾರರು ಬೇಸರಗೊಂಡಿದ್ರೆ, ಅಭಿಮಾನಿಗಳು ಕೆಂಡವಾಗಿದ್ದಾರೆ. 

ಕ್ರಿಕೆಟ್​ ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ ಹೊಸ ವಿವಾದ


ಗುಜರಾತ್​ನ ಶಿಕ್ಷಣ ಸಚಿವೆ, ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಸದ್ಯ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ತನ್ನ ಪತಿಯನ್ನ ಹೊಗಳೋ ಭರದಲ್ಲಿ ಟೀಮ್​ ಇಂಡಿಯಾ ಉಳಿದ ಆಟಗಾರರ ಮೇಲೆ ಗಂಭೀರ ಆರೋಪ ಮಾಡಿಬಿಟ್ಟಿದ್ದಾರೆ. ರಿವಾಬಾ ಜಡೇಜಾ ಪ್ರಕಾರ ತನ್ನ ಪತಿ ರವೀಂದ್ರ ಜಡೇಜಾ ಮಾತ್ರ ಒಳ್ಳೆಯವರಂತೆ. ರವೀಂದ್ರ ಜಡೇಜಾ ಬಿಟ್ಟು ಟೀಮ್​ ಇಂಡಿಯಾದ ಉಳಿದೆಲ್ಲಾ ಕ್ರಿಕೆಟರ್ಸ್​ ದುಶ್ಚಟಗಳ ದಾಸರಂತೆ!

ಇದನ್ನೂ ಓದಿ: ಟೀಮ್ ಇಂಡಿಯಾ ನಾಯಕನಾದ್ರೆ ಸ್ಪೆಷಲ್ ರೂಲ್ಸ್.. ಅದಕ್ಕೆ ಸೂರ್ಯನೇ ಎಕ್ಸಾಂಪಲ್​..!

ಜಡೇಜಾಗೆ ಇಂದಿಗೂ ಯಾವುದೇ ರೀತಿಯ ವ್ಯಸನಗಳಿಲ್ಲ. ಏಕೆಂದರೆ, ಅವರು ತಮ್ಮ ಜವಾಬ್ದಾರಿ ಏನೆಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ತಂಡದ ಉಳಿದ ಆಟಗಾರರು ದುಶ್ಚಟಗಳಲ್ಲಿ ತೊಡಗುತ್ತಾರೆ. ಅವುಗಳ ಮೇಲೆ ಯಾವುದೇ ನಿರ್ಬಂಧವಿಲ್ಲ. 

ನನ್ನ ಪತಿ ರವೀಂದ್ರ ಜಡೇಜಾ ಕ್ರಿಕೆಟ್ ಆಡಲು ಲಂಡನ್, ದುಬೈ ಮತ್ತು ಆಸ್ಟ್ರೇಲಿಯಾದಂತಹ ಅನೇಕ ಸ್ಥಳಗಳಿಗೆ ವಿದೇಶಕ್ಕೆ ಪ್ರಯಾಣಿಸಬೇಕಾಗಿರುತ್ತದೆ. ಅವರಿಗೆ ಇಂದಿಗೂ ಯಾವುದೇ ರೀತಿಯ ವ್ಯಸನಗಳಿಲ್ಲ. ಏಕೆಂದರೆ, ಅವರು ತಮ್ಮ ಜವಾಬ್ದಾರಿ ಏನೆಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ತಂಡದ ಉಳಿದ ಆಟಗಾರರು ದುಶ್ಚಟಗಳಲ್ಲಿ ತೊಡಗುತ್ತಾರೆ. ಅವುಗಳ ಮೇಲೆ ಯಾವುದೇ ನಿರ್ಬಂಧವಿಲ್ಲ. ನನ್ನ ಪತಿ ಹನ್ನೆರಡು ವರ್ಷಗಳಿಂದ ಮನೆಯಿಂದ ದೂರವಿದ್ದಾರೆ. ಅವರು ಏನು ಬೇಕಾದರೂ ಮಾಡಬಹುದು. ಆದರೆ ಅವರು ನೈತಿಕ ಕರ್ತವ್ಯವನ್ನ ಮತ್ತು ಏನು ಮಾಡಬೇಕೆಂದನ್ನ ಅರ್ಥ ಮಾಡಿಕೊಂಡಿದ್ದಾರೆ. 

ರಿವಾಬಾ ಜಡೇಜಾ, ಜಡೇಜಾ ಪತ್ನಿ 


ಗುಜರಾತ್​ನ ದ್ವಾರಕಾದಲ್ಲಿ ನಡೆದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ರಿವಾಬಾ ಜಡೇಜಾ ನಾಲಿಗೆ ಹರಿಬಿಟ್ಟಿದ್ದಾರೆ. ತನ್ನ ಗಂಡ ರವೀಂದ್ರ ಜಡೇಜಾ ಜವಾಬ್ಧಾರಿ ಹಾಗೂ ಬದ್ಧತೆಯನ್ನ ಹಾಡಿ ಹೊಗಳೋ ಭರದಲ್ಲಿ ರಿವಾಬಾ ಜಡೇಜಾ ಉಳಿದ ಆಟಗಾರರು ಕೆಟ್ಟವರು ಎಂಬರ್ಥದಲ್ಲಿ ಮಾತನಾಡಿದ್ದಾರೆ.  ನನ್ನ ಗಂಡ ತಂಡದ ಇತರ ಆಟಗಾರರಂತೆ ದುಶ್ಚಟಗಳನ್ನ ಹೊಂದಿಲ್ಲ ಎಂದು ಹೇಳಿಕೆ ನೀಡಿ ಹೊಸ ವಿವಾದ ಸೃಷ್ಠಿಸಿದ್ದಾರೆ. 

ರವೀಂದ್ರ ಜಡೇಜಾ ಪತ್ನಿಯ ಹೇಳಿಕೆ ಭಾರತೀಯ ಕ್ರಿಕೆಟ್​ ಅಭಿಮಾನಿಗಳನ್ನ ಕೆರಳಿಸಿದೆ. ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕ್ರಿಕೆಟ್​ನ ಎಳೆದು ತಂದಿದ್ದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸ್ತಿದ್ದಾರೆ. ತನ್ನ ಪತ್ನಿಯನ್ನ ಹೊಗಳಲು, ಜನರ ಮುಂದೆ ಒಳ್ಳೆಯವರು ಎಂದು ಬಿಂಬಿಸಲು ಉಳಿದ ಕ್ರಿಕೆಟರ್ಸ್​ ಕೆಟ್ಟವರು ಎಂದು ಹೇಳಿಕೆ ನೀಡಿರೋದಕ್ಕೆ ಕೆಲ ಕ್ರಿಕೆಟಿಗರ ಅಭಿಮಾನಿಗಳಂತೂ ಕೆಂಡವಾಗಿದ್ದಾರೆ. ಬಹಿರಂಗವಾಗಿ ಗಂಭೀರ ಆರೋಪ ಮಾಡಿರುವ ರಿವಾಬಾ ಜಡೇಜಾ ಬಹಿರಂಗವಾಗಿಯೇ ಕ್ಷಮೆ ಕೇಳಬೇಕು​​ ಎಂದು ಆಗ್ರಹಿಸಿದ್ದಾರೆ. 

ಇದನ್ನೂ ಓದಿ:ಕೊಹ್ಲಿ ಬ್ಯಾಟಿಂಗ್ ಆರ್ಡರ್ ಸ್ಥಾನ ತುಂಬಲು ತಂಡಕ್ಕೆ ಸಿಕ್ಕೇ ಬಿಟ್ರು ಭಲೇ ಆಟಗಾರ..!

ರವೀಂದ್ರ ಜಡೇಜಾ ಹೇಳಿಕೆ ಅಭಿಮಾನಿಗಳ ವಲಯದಲ್ಲಿ ಮಾತ್ರವಲ್ಲ. ಟೀಮ್​ ಇಂಡಿಯಾ ಡ್ರೆಸ್ಸಿಂಗ್​ ರೂಮ್​ನಲ್ಲೂ ಚರ್ಚೆಯಾಗಿದೆಯಂತೆ. ಟಿ20 ತಂಡದ ಹೊರತಾಗಿ ಟೀಮ್​ ಇಂಡಿಯಾದ ಸೀನಿಯರ್​ ಆಟಗಾರರು ಕೂಡ ಜಡೇಜಾ ಪತ್ನಿಯ ಸ್ಟೇಟ್​ಮೆಂಟ್​ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಮೊದಲ ಟೀಮ್​ ಇಂಡಿಯಾದಲ್ಲಿ ಒಳಗೊಳಗೆ ಹಲವು ಪೈಟ್​ಗಳು ನಡೀತಿವೆ. ಇದೀಗ ಈ ವಿವಾದಾತ್ಮಕ ಹೇಳಿಕೆ ಟೀಮ್​ ಇಂಡಿಯಾ ಒಗ್ಗಟ್ಟಿಗೆ ಎಲ್ಲಿ ಹೊಡೆತ ಕೊಡುತ್ತೋ ಅನ್ನೋ ಚಿಂತೆ ಬಿಸಿಸಿಐ ವಲಯದಲ್ಲಿ ಮನೆ ಮಾಡಿದೆ. 

ರವೀಂದ್ರ ಜಡೇಜಾ ಕಾಂಟ್ರವರ್ಸಿಗಳ ಕಾರಣಕ್ಕೆ ಹೆಚ್ಚು ಸುದ್ದಿಯಾದ ಆಟಗಾರ ಅಲ್ಲವೇ ಅಲ್ಲ. ಕರಿಯರ್​ನ ಸಂದ್ಯಾಕಾಲದಲ್ಲಿರೋವಾಗ ಪತ್ನಿ ಮಾಡಿರೋ ಯಡವಟ್ಟು ರವೀಂದ್ರ ಜಡೇಜಾನ ಸಂಕಷ್ಟಕ್ಕೆ ಸಿಲುಕಿಸಿದೆ. ಯುವ ಆಟಗಾರರ ಜೊತೆಗೆ ಸ್ಥಾನದ ಪೈಪೋಟಿ ನಡೆಸ್ತಿರೋ ಜಡೇಜಾಗೆ ವಯಸ್ಸೇ ವಿಲನ್​ ಅಗಿದೆ. ಇದ್ರ ನಡುವೆ ಪತ್ನಿ ನೀಡಿರೋ ಯಡವಟ್ಟಿನ ಹೇಳಿಕೆ ಆಟಗಾರರು, ಬಿಸಿಸಿಐ ಬಾಸ್​ಗಳನ್ನ ಕೆರಳಿಸಿದೆ. ಮುಂದಿನ ದಿನಗಳಲ್ಲಿ ರಿವಾಬಾ ವಿವಾದಾತ್ಮಕ ಹೇಳಿಕೆ ರವೀಂದ್ರನಿಗೆ ಸಂಕಷ್ಟ ತಂದಿಟ್ರೂ ಅಚ್ಚರಿಯಿಲ್ಲ. 

ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ravindra Jadeja Rivaba Jadeja
Advertisment