/newsfirstlive-kannada/media/media_files/2025/08/28/team-india-11-2025-08-28-18-35-25.jpg)
ಭಾರತ ವಿರುದ್ಧ ನ್ಯೂಜಿಲೆಂಡ್ ಏಕದಿನ ಸರಣಿ ಇವತ್ತಿನಿಂದ ಆರಂಭವಾಗಿದೆ. ಬೆನ್ನಲ್ಲೇ ಟೀಂ ಇಂಡಿಯಾದಿಂದ ಕೆಟ್ಟ ಸುದ್ದಿ ಹೊರಬಿದ್ದಿದೆ. ವಿಕೆಟ್ ಕೀಪರ್ ರಿಷಬ್ ಪಂತ್ (Rishab Pant) ಗಾಯದಿಂದಾಗಿ ಏಕದಿನ ತಂಡದಿಂದ ಹೊರಗುಳಿದಿದ್ದಾರೆ. ಅಭ್ಯಾಸದ ಸಮಯದಲ್ಲಿ ಬೆನ್ನಿಗೆ ಗಾಯ ಮಾಡ್ಕೊಂಡಿದ್ದಾರೆ. ವರದಿ ಪ್ರಕಾರ, ಪಂತ್ ತೀವ್ರ ನೋವಿನಿಂದ ನರಳುತ್ತ ಮೈದಾನದಿಂದ ಹೊರ ಬಂದಿದ್ದಾರೆ.
ರಿಷಭ್ ಪಂತ್ ಜೊತೆಗೆ, ಕೆಎಲ್ ರಾಹುಲ್ ಕೂಡ ಏಕದಿನ ತಂಡದಲ್ಲಿ ವಿಕೆಟ್ ಕೀಪರ್ ಆಗಿದ್ದಾರೆ. ಗಾಯಗೊಂಡಿರುವ ಪಂತ್ ಬದಲಿಗೆ ಬಿಸಿಸಿಐ ಇನ್ನೂ ಯಾರನ್ನು ಘೋಷಿಸಿಲ್ಲ. 2026 ರ ಟಿ20 ವಿಶ್ವಕಪ್‌ಗೆ ಆಯ್ಕೆ ಆಗಿರುವ ಇಶಾನ್ ಕಿಶನ್ ಅವರ ಸ್ಥಾನ ತುಂಬಬಹುದು ಎಂಬ ಊಹಾಪೋಹಗಳಿವೆ.
/filters:format(webp)/newsfirstlive-kannada/media/post_attachments/wp-content/uploads/2025/01/KL_RAHUL_PANT-1.jpg)
ಥ್ರೋಡೌನ್ ತಜ್ಞರು ಅವರಿಗೆ ತರಬೇತಿ ನೀಡುತ್ತಿದ್ದಾಗ ಡಿಫೆನ್ಸ್ ಮಾಡುವ ವೇಳೆ ಚೆಂಡು ಬೆನ್ನಿಗೆ ತಗುಲಿದೆ. ಬೆನ್ನಲ್ಲೇ ಗಂಭೀರ್ ಮತ್ತು ಸಹಾಯಕ ಸಿಬ್ಬಂದಿ ಪಂತ್ ಆರೋಗ್ಯ ವಿಚಾರಿಸಲು ಮೈದಾನಕ್ಕೆ ದೌಡಾಯಿಸಿದ್ದಾರೆ. ವೈದ್ಯಕೀಯ ತಂಡದ ಆರಂಭಿಕ ಚಿಕಿತ್ಸೆಯ ನಂತರ, ಪಂತ್ ಬಿಸಿಎ ಕ್ರೀಡಾಂಗಣದಿಂದ ಹೊರಬಂದಿದ್ದಾರೆ.
ರಿಷಭ್ ಪಂತ್ ಕೊನೆಯ ಬಾರಿಗೆ ಜುಲೈ 2024 ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡಿದ್ದರು. ಅವರು 2025 ರ ಚಾಂಪಿಯನ್ಸ್ ಟ್ರೋಫಿಗೆ ಭಾರತೀಯ ತಂಡದ ಭಾಗವಾಗಿದ್ದರು. ಆದರೆ ಒಂದೇ ಒಂದು ಪಂದ್ಯ ಆಡಲಿಲ್ಲ. 2025-26 ರ ವಿಜಯ್ ಹಜಾರೆ ಟ್ರೋಫಿಯಲ್ಲಿ ದೆಹಲಿ ತಂಡದ ನಾಯಕರಾಗಿದ್ದರು. ಈ ದೇಶೀಯ ಲಿಸ್ಟ್ ಎ ಟೂರ್ನಮೆಂಟ್‌ನಲ್ಲಿ ಎರಡು ಅರ್ಧಶತಕ ಗಳಿಸಿದರು.
ಇದನ್ನೂ ಓದಿ:‘ಇವನು ಪತಿಯಲ್ಲ, ವಿಕೃತ ಕಾಮಿ’ 3ನೇ ಪತಿಯ ಆರೋಪಕ್ಕೆ ಸಂತ್ರಸ್ತೆ ಕೌಂಟರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us