ಕಿವೀಸ್​ ಕ್ಯಾಂಪ್​ನಲ್ಲಿ ಕಿಂಗ್​ ಕೊಹ್ಲಿಯದ್ದೇ ಭಯ.. ನ್ಯೂಜಿಲೆಂಡ್​​ಗೆ ಕಾಡ್ತಿರೋ ಕರಾಳ ನೆನಪುಗಳು..

ಹೊಸ ವರ್ಷ, ಹೊಸ ಹುರುಪು.. ಅದೇ ಹಳೆಯ ಗುರಿ.. 2025ರ ಅಂತ್ಯದಲ್ಲಿ ಹರಿಣಗಳ ಭೇಟೆಯಾಡಿ ಪ್ರೈಮ್​ ಫಾರ್ಮ್​ ನೆನಪಿಸಿದ್ದ ಕೊಹ್ಲಿ ಅದೇ ಖದರ್​ನಲ್ಲಿ 2026ನ್ನ ಆರಂಭಿಸೋಕೆ ರೆಡಿಯಾಗಿದ್ದಾರೆ. ಕೊಹ್ಲಿಯ ಅನ್ನೋ ಹೆಸರು ನ್ಯೂಜಿಲೆಂಡ್​ ಕ್ಯಾಂಪ್​ನಲ್ಲಿ ಭಯ ಹುಟ್ಟಿಸಿದೆ.

author-image
Ganesh Kerekuli
newzealand
Advertisment
  • ವಿರಾಟ್​​ ಕೊಹ್ಲಿ ಕಮ್​ಬ್ಯಾಕ್​ಗೆ ಕೌಂಟ್​​ಡೌನ್​
  • ವಿರಾಟ್​ ವೀರಾವೇಷಕ್ಕೆ ಬೆಚ್ಚಿ ಬಿದ್ದಿದ್ದ ನ್ಯೂಜಿಲೆಂಡ್​
  • ಕೊಹ್ಲಿಯಂದ್ರೆ ಕಿವೀಸ್​ ಬೌಲರ್ಸ್​ಗೆ ಭಯ ಯಾಕೆ..?

ಹೊಸ ವರ್ಷ, ಹೊಸ ಹುರುಪು.. ಅದೇ ಹಳೆಯ ಗುರಿ.. 2025ರ ಅಂತ್ಯದಲ್ಲಿ ಹರಿಣಗಳ ಭೇಟೆಯಾಡಿ ಪ್ರೈಮ್​ ಫಾರ್ಮ್​ ನೆನಪಿಸಿದ್ದ ಕೊಹ್ಲಿ ಅದೇ ಖದರ್​ನಲ್ಲಿ 2026ನ್ನ ಆರಂಭಿಸೋಕೆ ರೆಡಿಯಾಗಿದ್ದಾರೆ. ವರ್ಷದ ಮೊದಲ ಟಾಸ್ಕ್​ನಲ್ಲಿ ಕಿವೀಸ್​ ಕಿವಿ ಹಿಂಡೋಕೆ ಸಜ್ಜಾಗಿದ್ದಾರೆ. ವಿರಾಟ್​ ಕೊಹ್ಲಿಯ ಅನ್ನೋ ಹೆಸರು ನ್ಯೂಜಿಲೆಂಡ್​ ಕ್ಯಾಂಪ್​ನಲ್ಲಿ ಭಯ ಹುಟ್ಟಿಸಿದೆ. ಕಿವೀಸ್​ ಸವಾಲು ಎದುರಾದಾಗೆಲ್ಲಾ ರನ್​ಮಷೀನ್​ ರಣಾರ್ಭಟ ನಡೆಸಿದ್ದಾರೆ. 

ಕಿಂಗ್​ ವಿರಾಟ್​ ಕೊಹ್ಲಿಯ ಕಮ್​ಬ್ಯಾಕ್​​ಗೆ ವೇದಿಕೆ ಸಜ್ಜಾಗಿದೆ. ಕಿವೀಸ್​ ಬೇಟೆಯೊಂದಿಗೆ ಹೊಸ ವರ್ಷವನ್ನ ಹೊಸ ಜೋಷ್​​ನೊಂದಿಗೆ ಆರಂಭಿಸೋಕೆ ರನ್​ಮಷೀನ್​ ರೆಡಿಯಾಗಿದ್ದಾರೆ. ವೀರಾವೇಷದ ಪರ್ಫಾಮೆನ್ಸ್​ನಿಂದ ಬ್ಲ್ಯಾಕ್​ಕ್ಯಾಪ್ಸ್​​ ಪಡೆಯನ್ನ ಹಲವು ಬಾರಿ ಕಂಗಾಲ್ ಮಾಡಿರುವ ಕೊಹ್ಲಿ ಇದೀಗ ಮತ್ತೆ ಸಿಡಿದೇಳಲು ರೆಡಿಯಾಗಿದ್ದಾರೆ. ಈ ಹಿಂದೆ ಹಲವು ಬಾರಿ ಕೊಹ್ಲಿ ಕೊಟ್ಟ ಏಟಿಗೆ ನ್ಯೂಜಿಲೆಂಡ್​ ನಲುಗಿ ಹೋಗಿದೆ. ಅದ್ರಲ್ಲೂ ಈ ಐದು ಇನ್ನಿಂಗ್ಸ್​ಗಳನ್ನ ನೆನೆಸಿಕೊಂಡರೆ ಕಿವೀಸ್​ ಪಡೆ ಈಗಲೂ ಬೆಚ್ಚಿ ಬೀಳುತ್ತೆ. 

‘ವೀರಾವೇಷ’ದ ಶತಕ.!

ಆಗಿನ್ನೂ ಕೊಹ್ಲಿಗೆ 25 ವರ್ಷ. ಬಿಸಿರಕ್ತದ ಯುವಕ ವಿರಾಟ್​​ ವೀರಾವೇಷಕ್ಕೆ ನ್ಯೂಜಿಲೆಂಡ್​ ಪಡೆ ಅಂದು ಕಕ್ಕಾಬಿಕ್ಕಿಯಾಗಿತ್ತು. ನ್ಯೂಜಿಲೆಂಡ್​ನ ಟಫ್ ಕಂಡೀಷನ್​​ನಲ್ಲಿ ವಿರಾಟ್​ ಕೊಹ್ಲಿ ದಿಟ್ಟ ಇನ್ನಿಂಗ್ಸ್​ ಕಟ್ಟಿದ್ರು. ಅತ್ಯಾದ್ಭುತ ಕವರ್​​ಡ್ರೈವ್​ ಬಾರಿಸಿ ಅಕೌಂಟ್​ ಓಪನ್​ ಮಾಡಿದ್ದ ಕೊಹ್ಲಿ, 93ನೇ ಎಸೆತವನ್ನ ಮತ್ತೊಂದು ಸಾಲಿಡ್​ ಕವರ್​​ಡ್ರೈವ್​ ಬಾರಿಸೋ ಮೂಲಕವೇ ಶತಕ ಪೂರೈಸಿದ್ರು. 111 ಎಸೆತಗಳಲ್ಲಿ 123 ರನ್​ಗಳಿಸಿ ಮಿಂಚಿದ್ರು. 

ಇದನ್ನೂ ಓದಿ: ಬೆತ್ತಲೆ ಓಡಾಟ, ಸೈಕೋ ಪತಿ ಕೇಸ್​ಗೆ​​ ಟ್ವಿಸ್ಟ್; ಪ್ರಕರಣಕ್ಕೆ ರೋಚಕ ತಿರುವು ಕೊಟ್ಟ ಮೂರನೇ ಪತಿ..!

Kohli

2016ರ ನ್ಯೂಜಿಲೆಂಡ್​ ಪ್ರವಾಸದ 3ನೇ ಏಕದಿನ ಪಂದ್ಯ ಅದು. ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ನ್ಯೂಜಿಲೆಂಡ್​ 286 ರನ್​ಗಳ ಬಿಗ್​ ಟಾರ್ಗೆಟ್​ ಸೆಟ್​ ಮಾಡಿತ್ತು. ಈ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ 41 ರನ್​ಗೆ 2 ವಿಕೆಟ್​ ಕಳೆದುಕೊಂಡಿತ್ತು. ಆ ಒತ್ತಡದ ಸಂದರ್ಭದಲ್ಲಿ ಬೊಂಬಾಟ್​ ಬ್ಯಾಟಿಂಗ್​ ನಡೆಸಿದ್ದ ಕೊಹ್ಲಿ, ನ್ಯೂಜಿಲೆಂಡ್​ ಬೌಲರ್​ಗಳ ಬೆಂಡೆತ್ತಿದ್ರು. 134 ಎಸೆತಗಳಲ್ಲಿ 154 ರನ್​ ಚಚ್ಚಿ, ತಂಡವನ್ನ ಗೆಲುವಿನ ದಡ ಸೇರಿಸಿದ್ರು. 

ಕಾನ್ಪುರದಲ್ಲಿ ಕಿಂಗ್​ ಕೊಹ್ಲಿ ಕ್ಲಾಸಿಕ್​ ಸೆಂಚುರಿ.!

2017ರ ಏಕದಿನ ಸರಣಿಯ 3ನೇ ಪಂದ್ಯದಲ್ಲಿ ಫ್ಯಾನ್ಸ್​ಗೆ ಪೈಸಾ ವಸೂಲ್​ ಎಂಟರ್​​ಟೈನ್​ಮೆಂಟ್​ ಸಿಕ್ಕಿತ್ತು. ರನ್​​ಮಷೀನ್​ ವಿರಾಟ್​ ಕೊಹ್ಲಿ-ಹಿಟ್​ಮ್ಯಾನ್ ರೋಹಿತ್​ ಶರ್ಮಾ ಸೂಪರ್​ ಹಿಟ್​ ಆಟವಾಡಿದ್ರು. ಕ್ಲಾಸ್​​​ ಆಟದಿಂದಲೇ ವಿರಾಟ್​​ ಕೊಹ್ಲಿ, ಬ್ಲ್ಯಾಕ್​​ಕ್ಯಾಪ್ಸ್​ ಬೌಲಿಂಗ್​ ದಾಳಿಯನ್ನ ಪುಡಿಗಟ್ಟಿದ್ರು. ಕ್ಲಾಸಿಕ್​ ಸೆಂಚುರಿ ಸಿಡಿಸಿದ ಕೊಹ್ಲಿ, 106 ಎಸೆತಗಳಲ್ಲಿ 113 ರನ್​ಗಳಿಸಿದ್ರು.  

ಇದನ್ನೂ ಓದಿ: ಗಂಭೀರ್ ವಿರುದ್ಧ ತೊಡೆ ತಟ್ಟಿದ್ರಾ? ಬ್ಲ್ಯಾಕ್​​ಕ್ಯಾಪ್ಸ್​ ಬೇಟೆಗೆ ರೋಹಿತ್ ಹೊಂಚು..!

Virat kohli (5)

ಧರ್ಮಶಾಲಾದಲ್ಲಿ ಕಿವೀಸ್​ಗೆ ಕೊಹ್ಲಿ ಏಕಾಂಗಿ ಕಾಟ..!

2023ರ ಏಕದಿನ ವಿಶ್ವಕಪ್​ನ  ಧರ್ಮಶಾಲಾದಲ್ಲಿ ನಡೀತಾ ಇದ್ದ ಲೀಗ್​ ಪಂದ್ಯದಲ್ಲಿ ಪಿಚ್​​ ಬೌಲರ್​ಗಳಿಗೆ ಹೆಚ್ಚು ನೆರವಾಗ್ತಿತ್ತು. ಟ್ರಿಕ್ಕಿ ಕಂಡಿಷನ್ಸ್​ನಲ್ಲಿ ಎಚ್ಚರಿಕೆಯ ಆಟವಾಡಿದ ವಿರಾಟ್​ ಕೊಹ್ಲಿ, ಚೇಸಿಂಗ್​ ಮಾಸ್ಟರ್​ ಅನ್ನೋದನ್ನ ಮತ್ತೊಮ್ಮೆ ನಿರೂಪಿಸಿದ್ರು. ಏಕಾಂಗಿಯಾಗಿ ಹೋರಾಟ ನಡೆಸಿದ ವಿರಾಟ್​​ ಕೊಹ್ಲಿ, ಸೈಲೆಂಟ್​ ಆಟದಿಂದಲೇ ನ್ಯೂಜಿಲೆಂಡ್​ ಕಥೆ ಮುಗಿಸಿದ್ರು. 95 ರನ್​ಗಳ ಬ್ಯೂಟಿಫುಲ್​ ಇನ್ನಿಂಗ್ಸ್​​ ಕಟ್ಟಿ ತಂಡದ ಗೆಲುವಿಗೆ ಕಾರಣರಾಗಿದ್ರು. ​ 

ವಾಂಖೆಡೆಯಲ್ಲಿ ಆರ್ಭಟ, ಶತಕದ ಅರ್ಧಶತಕ..!

2023ರ ಏಕದಿನ ವಿಶ್ವಕಪ್​ನ​ ಇಂಡೋ-ಕಿವೀಸ್​ ಫೈಟ್​ನ ಯಾವೊಬ್ಬ ಅಭಿಮಾನಿ ಕೂಡ ಮರೆಯೋಕೆ ಸಾಧ್ಯವಿಲ್ಲ. ಹೈಪ್ರೆಷರ್​ ಗೇಮ್​ನಲ್ಲಿ ವಿರಾಟ್​ ಕೊಹ್ಲಿ ಅಕ್ಷರಶಃ ಘರ್ಜಿಸಿದ್ರು. ಮೈದಾನದ ಅಷ್ಟದಿಕ್ಕಿಗೂ ಚೆಂಡಿನ ದರ್ಶನ ಮಾಡಿಸಿದ ಕೊಹ್ಲಿ, ಕರಿಯರ್​ನ ಅವಿಸ್ಮರಣೀಯ ಶತಕ ಸಿಡಿಸಿದ್ರು. ಕ್ರಿಕೆಟ್​ ದೇವರು, ಗುರು ಸಚಿನ್​ ತೆಂಡುಲ್ಕರ್​ ಮುಂದೆ 50ನೇ ಏಕದಿನ ಶತಕ ಸಿಡಿಸಿ ಸಂಭ್ರಮಿಸಿದ್ರು. 

ನ್ಯೂಜಿಲೆಂಡ್​​ ವಿರಾಟ್​​ ಕೊಹ್ಲಿಯ ಒನ್​ ಆಫ್​ ದ ಫೇವರಿಟ್​ ಎದುರಾಳಿ. ಏಕದಿನ ಕ್ರಿಕೆಟ್​ನಲ್ಲಿ 6 ಸೆಂಚುರಿ, 9 ಹಾಫ್​​ ಸೆಂಚುರಿ ಚಚ್ಚಿರೋ ಕೊಹ್ಲಿ, 55.23ರ ಸರಾಸರಿಯಲ್ಲಿ ರನ್​ ಕೊಳ್ಳೆ ಹೊಡೆದಿದ್ದಾರೆ. ಸದ್ಯ, ಸೌತ್​ ಆಫ್ರಿಕಾ ಸರಣಿ, ವಿಜಯ್​ ಹಜಾರೆ ಟೂರ್ನಿಯಲ್ಲಿ ಘರ್ಜಿಸಿರೋ ಕೊಹ್ಲಿ, ಇದೀಗ ಕಿವೀಸ್​ ಕಿವಿ ಹಿಂಡೋಕೆ ಪ್ರೆಶ್​ ಆಗಿ ರೆಡಿಯಾಗಿದ್ದಾರೆ. ಹೊಸ ವರ್ಷ, ಹೊಸ ಹುರುಪಿನಲ್ಲಿ ಹಳೆ ಆಟವನ್ನ ಕೊಹ್ಲಿ ಮುಂದುವರೆಸಲಿ. 

ಇದನ್ನೂ ಓದಿ:‘ಇವನು ಪತಿಯಲ್ಲ, ವಿಕೃತ ಕಾಮಿ’ 3ನೇ ಪತಿಯ ಆರೋಪಕ್ಕೆ ಸಂತ್ರಸ್ತೆ ಕೌಂಟರ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rohith Sharma Virat Kohli
Advertisment