/newsfirstlive-kannada/media/media_files/2026/01/11/rohit-sharma-1-2026-01-11-11-58-44.jpg)
ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಗೆ ಮಾಜಿ ನಾಯಕ ರೋಹಿತ್ ಶರ್ಮಾ ರೆಡಿಯಾಗಿದ್ದಾರೆ. ನ್ಯೂಜಿಲೆಂಡ್​ ಸರಣಿಯನ್ನ ಪ್ರತಿಷ್ಟೆಯಾಗಿಸಿಕೊಂಡಿರೋ ರೋಹಿತ್ ವಿರೋಧಿಗಳಿಗೆ ತಕ್ಕ ಉತ್ತರ ಕೊಡಲು ರೆಡಿಯಾಗಿದ್ದಾರೆ. ಬ್ಕ್ಯಾಕ್​ ಕ್ಯಾಪ್ಸ್​ ಬೇಟೆಯಾಡಿ, ಆಯ್ಕೆ ಸಮಿತಿ ಮತ್ತು ಹೆಡ್ ಕೋಚ್​​​​ ಗಂಭೀರ್​ಗೆ ಮೆಸೇಜ್ ನೀಡಲು ಹೊರಟಿದ್ದಾರೆ.
ಇಂಡೋ-ನ್ಯೂಜಿಲೆಂಡ್​​ ಮೊದಲ ಏಕದಿನ ಕದನಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ವಡೋದರಾದ ಕೊಟಂಬಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಮದಗಜಗಳ ಕಾದಾಟ ನಡೆಯಲಿದೆ. ಏಕದಿನ ಕ್ರಿಕೆಟ್​ನ ವಿಶ್ವದ ನಂಬರ್​ 1 ಬ್ಯಾಟರ್​ ರೋಹಿತ್​ ಶರ್ಮಾ ಈ ಸರಣಿಯ ಸೆಂಟರ್​ ಆಫ್​ ಅಟ್ರಾಕ್ಷನ್​ ಎನಿಸಿದ್ದಾರೆ. ಕಿವೀಸ್​ ವಿರುದ್ಧವೂ ಸೂಪರ್ ಹಿಟ್​ ಪರ್ಫಾಮೆನ್ಸ್​ ನೀಡಲು, ಹಿಟ್​ಮ್ಯಾನ್​ ತುದಿಗಾಲಲ್ಲಿ ನಿಂತಿದ್ದಾರೆ.
ಇದನ್ನೂ ಓದಿ: IND vs NZ: ಇವತ್ತು ಪ್ಲೇಯಿಂಗ್ -11 ಹೇಗಿರುತ್ತೆ..? ಅಭಿಮಾನಿಗಳ ನಿರೀಕ್ಷೆಗಳು ಏನೇನು?
ಹಿಟ್​ಮ್ಯಾನ್​ ರೋಹಿತ್​ ರೆಡಿ
ನ್ಯೂಜಿಲೆಂಡ್​ ವಿರುದ್ಧದ ಸರಣಿಯನ್ನ ಹಿಟ್​​ಮ್ಯಾನ್​​ ರೋಹಿತ್​ ಶರ್ಮಾ ಫುಲ್ ಸೀರಿಯಸ್ಸಾಗಿ ಪರಿಗಣಿಸಿದ್ದಾರೆ. ಡಿಸೆಂಬರ್​ನಲ್ಲಿ ತವರಿನಲ್ಲಿ ನಡೆದ ಸೌತ್​ ಆಫ್ರಿಕಾ ವಿರುದ್ಧದ ಸರಣಿಯಲ್ಲಿ 2 ಭರ್ಜರಿ ಹಾಫ್​ ಸೆಂಚುರಿ ಸಿಡಿಸಿದ್ರೂ ರೋಹಿತ್​ಗದು ಸಮಾಧಾನ ತರಿಸಿದಂತೆ ಕಾಣ್ತಿಲ್ಲ. ನ್ಯೂಜಿಲೆಂಡ್​ ವಿರುದ್ಧದ ಸರಣಿಯಲ್ಲಿ ಹಿಟ್​ಮ್ಯಾನ್​, ಬಿಗ್​ ಇನ್ನಿಂಗ್ಸ್​​​ಗಳ ನಿರೀಕ್ಷೆಯಲ್ಲಿದ್ದಾರೆ. ರನ್​ಭೂಮಿಯಲ್ಲಿ ಬ್ಯ್ಲಾಕ್​ಕ್ಯಾಪ್ಸ್​​ ಬೇಟೆಯಾಡಲು ಭರ್ಜರಿ ತಯಾರಿ ನಡೆಸಿದ್ದಾರೆ.
ನೆಟ್ಸ್​ನಲ್ಲಿ ನಂ.1 ಬ್ಯಾಟರ್​ ಸುದೀರ್ಘ ಅಭ್ಯಾಸ.!
ನ್ಯೂಜಿಲೆಂಡ್​ ವಿರುದ್ಧದ ಸರಣಿಗೆ ರೋಹಿತ್​ ಶರ್ಮಾ ಫುಲ್​ ಡಿಫರೆಂಟ್​ ಸಿದ್ಧತೆ ನಡೆಸಿದ್ದಾರೆ. ಮೊದಲ ಪಂದ್ಯ ನಡೆಯೋ ಕೊಟಂಬಿ ಮೈದಾನದ ನೆಟ್ಸ್​ನಲ್ಲಿ ಕಳೆದ 2 ದಿನಗಳಿಂದ ರೋಹಿತ್​ ಸುದೀರ್ಘ ಅಭ್ಯಾಸ ನಡೆಸಿ ಬೆವರಿಳಿಸಿದ್ದಾರೆ. ನೆಟ್ಸ್​ನಲ್ಲಿ ವೇಗಿಗಳನ್ನ ಟ್ಯಾಕಲ್​ ಮಾಡೋದ್ರ ಮೇಲೆ ಹೆಚ್ಚು ಗಮನಹರಿಸಿರೋ ರೋಹಿತ್​, ಥ್ರೋಡೌನ್​ ಎಸೆತಗಳನ್ನ ಹೆಚ್ಚು ಹೆಚ್ಚು ಎದುರಿಸಿದ್ರು. ಟೀಮ್​ ಇಂಡಿಯಾ ವೇಗಿಗಳು ಹಾಗೂ ನೆಟ್​​ ಬೌಲರ್​ಗಳ ಬೌಲಿಂಗ್​ಗೆ ಸುದೀರ್ಘ ಕಾಲ ಅಭ್ಯಾಸ ನಡೆಸಿ ಸಜ್ಜಾಗಿದ್ದಾರೆ.
/filters:format(webp)/newsfirstlive-kannada/media/media_files/2025/11/12/rohit-kohli-2025-11-12-19-37-21.jpg)
2027ರ ಏಕದಿನ ವಿಶ್ವಕಪ್ ಆಡಲು ರೋಹಿತ್ ಶಪಥ..?
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ, 2023ರ ಏಕದಿನ ವಿಶ್ವಕಪ್ ಫೈನಲ್​​​​​ನಲ್ಲಿ ಎಡವಿತ್ತು. ಆದ್ರೆ ರೋಹಿತ್ ಅಂದೇ ಶಪಥ ಮಾಡಿದ್ರು. 2027ರ ಏಕದಿನ ವಿಶ್ವಕಪ್ ಗೆಲ್ಲಲೇಬೇಕು. ಅಲ್ಲಿವರೆಗೂ ಏನೇ ಅಡೆತಡೆ ಬಂದರೂ, ತಲೆಕೆಡಿಸಿಕೊಳ್ಳೋದಿಲ್ಲ ಅಂತ. ಅಂದು ರೋಹಿತ್ ಮಾಡಿದ ಧೃಢ ನಿರ್ಧಾರವೇ, ಇಂದು ಅವರಲ್ಲಿ ಆ ಟಫ್ ಕ್ಯಾರೆಕ್ಟರ್ ಕಾಣಿಸಿಕೊಳ್ಳೋದಕ್ಕೆ ಕಾರಣ. ಸೌತ್ ಆಫ್ರಿಕಾದಲ್ಲಿ ನಡೆಯಲಿರೋ ಆ ಒಂದು ವಿಶ್ವಕಪ್ ಗೆಲ್ಲಿಸಿಕೊಟ್ಟು, ಸೈಲೆಂಟ್ ಆಗಿ ಕ್ರಿಕೆಟ್​ನಿಂದ ದೂರ ಸರಿಯುವ ಪ್ಲಾನ್, ಹಿಟ್​ಮ್ಯಾನ್ ರೋಹಿತ್​ದ್ದಾಗಿದೆ. ಅಲ್ಲಿಯವರೆಗೂ ಯಾರೇ ಏನೇ ಕೂಗಾಡಿದ್ರೂ, ರೋಹಿತ್ ಉತ್ತರ ಮೌನವಷ್ಟೇ.
ಇದನ್ನೂ ಓದಿ: ತವರಿಗಾಗಿ ಕಾದು ಪರದಾಡಿದ ಆರ್​​ಸಿಬಿ.. ಈಗ ಮತ್ತೆರಡು ಮೈದಾನಗಳ ಮೇಲೆ ಕಣ್ಣು..!
/filters:format(webp)/newsfirstlive-kannada/media/media_files/2025/10/28/abhishek-nayar-and-rohit-sharma-2025-10-28-19-29-33.jpg)
2026.. ಇದು ರೋಹಿತ್​ ಶರ್ಮಾ ಕರಿಯರ್​ನ ಕಠಿಣ ವರ್ಷ. ಒಂದರ್ಥದಲ್ಲಿ ಇದು ಡು ಆರ್​​ ಡೈ ಕಣ. 2027ರ ವಿಶ್ವಕಪ್​ ಆಡೋ ಕನಸು ನನಸಾಗಬೇಕಂದ್ರೆ, ಈ ವರ್ಷದಲ್ಲಿ ರೋಹಿತ್​ ಶರ್ಮಾ ಭರ್ಜರಿ ಫಾರ್ಮ್​ನಲ್ಲಿ ಬ್ಯಾಟಿಂಗ್​ ನಡೆಸಲೇಬೇಕಿದೆ. ಇದನ್ನ ಅರಿತಿರೋ ರೋಹಿತ್​ ಭರ್ಜರಿ ಸಮರಾಭ್ಯಾಸ ನಡೆಸ್ತಿರೋದು. ಬಿಡುವು ಸಿಕ್ಕರೆ ಸಾಕು ಗೆಳೆಯ ಅಭಿಷೇಕ್ ನಾಯರ್​ ಜೊತೆಗೆ ರೋಹಿತ್ ಅಭ್ಯಾಸಕ್ಕೆ ಹಾಜರ್​ ಆಗ್ತಿದ್ದಾರೆ. ರೋಹಿತ್ ತನ್ನ ಕ್ರಿಕೆಟ್​ ಕರಿಯರ್​ನಲ್ಲಿ ಯಾವತ್ತೂ, ಇಷ್ಟು ಸೀರಿಯಸ್ ಆಗಿ ಪ್ರಾಕ್ಟೀಸ್ ಮಾಡಿದ್ದನ್ನ ನೋಡಿಲ್ಲ. ಆದ್ರೀಗ ರೋಹಿತ್​ ಒಂದೊಂದು ಬ್ಯಾಟಿಂಗ್ ಸೆಷನ್​​​ನನ್ನ, ಗಂಭೀರವಾಗಿ ಪರಿಗಣಿಸುತ್ತಿದ್ದಾರೆ.
ತೊಡೆ ತಟ್ಟಿದ್ರಾ ಮುಂಬೈಕರ್..?
ಸದ್ಯಕ್ಕಿರೋ ರೋಹಿತ್ ಶರ್ಮಾರ ಮೊದಲ ವಿಲನ್ನೇ, ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್. ಕೋಚ್ ಗಂಭೀರ್​ಗೆ ತಂಡದಲ್ಲಿ ರೋಹಿತ್, ವಿರಾಟ್ ಕೊಹ್ಲಿಯಂತ ಹಿರಿಯ ಆಟಗಾರರು ಇರೋದು ಇಷ್ಟವಿಲ್ಲ. ತನ್ನ ತಾಳಕ್ಕೆ ಕುಣಿಯೋ ಯುವ ಕ್ರಿಕೆಟಿಗರು ಬೇಕು. ಹಾಗಾಗಿ ಗಂಭೀರ್, ರೋಹಿತ್ ವಿರುದ್ಧ ಮೊದಲ ದಿನದಿಂದಲೇ, ಸೈಲೆಂಟ್​ ಆಗೇ ಸ್ಕೆಚ್ ಹಾಕ್ತಿದ್ದಾರೆ. ಚಾನ್ಸ್​ ಸಿಕ್ರೆ ಕರಿಯರ್​ ಮುಗಿಸೋಕೆ ಕಾಯ್ತಿದ್ದಾರೆ. ರೋಹಿತ್​ಗೆ ಇದೆಲ್ಲಾ ಗೊತ್ತಿಲ್ಲ ಅಂತಲ್ಲ. ಗೊತ್ತಿರೋದ್ರಿಂದಲೇ ರೋಹಿತ್, ಪರ್ಫಾಮೆನ್ಸ್ ಮೂಲಕವೇ ಎಲ್ಲರಿಗೂ ಉತ್ತರಿಸಬೇಕು ಅಂತ ತೊಡೆತಟ್ಟಿರೋದು.
39 ವರ್ಷದಲ್ಲೂ ರೋಹಿತ್​​​​​​​​​​​​​​​​ ಒಳಗೆ ಬೆಂಕಿ ಕುದಿಯುತ್ತಿದೆ. ಮೈದಾನದಲ್ಲಿ ತನ್ನ ಸಾಮರ್ಥ್ಯ ತೋರಿಸಬೇಕು ಅನ್ನೋ ಹಠ, ಛಲ, ದಿನೇ ದಿನೇ ಹೆಚ್ಚಾಗ್ತಿದೆ. ಯುದ್ಧಕ್ಕೆ ಭರ್ಜರಿಯಾಗಿ ಸಜ್ಜಾಗಿರೋ ಹಿಟ್​ಮ್ಯಾನ್ ನ್ಯೂಜಿಲೆಂಡ್​ ವಿರುದ್ಧವೂ ಸೂಪರ್​ಹಿಟ್ ಪರ್ಫಾಮೆನ್ಸ್​ ನೀಡಲಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us