IND vs NZ: ಇವತ್ತು ಪ್ಲೇಯಿಂಗ್ -11 ಹೇಗಿರುತ್ತೆ..? ಅಭಿಮಾನಿಗಳ ನಿರೀಕ್ಷೆಗಳು ಏನೇನು?

ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೆ ಕೆಲವೇ ಕೆಲವು ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಗುಜರಾತ್​ನ ಬರೋಡಾದಲ್ಲಿ ನಡೆಯಲಿರುವ ಈ ಪಂದ್ಯ, ಟೀಮ್ ಇಂಡಿಯಾಗೆ ಅತ್ಯಂತ ಮಹತ್ವದಾಗಿದೆ. 2027 ಏಕದಿನ ವಿಶ್ವಕಪ್​ಗೆ ಈ ಸರಣಿಯಿಂದಲೇ ತಯಾರಿ ಶುರುವಾಗಲಿದೆ.

author-image
Ganesh Kerekuli
Gill (3)
Advertisment
  • ಇಂದು ಬರೋಡಾದಲ್ಲಿ ಮೊದಲ ಏಕದಿನ ಪಂದ್ಯ
  • ಹೊಸ ವರ್ಷ, ಹೊಸ ಸವಾಲ್, ಹೆಚ್ಚಿದ ನಿರೀಕ್ಷೆ..!
  • ರೋಹಿತ್​, ಶುಭ್ಮನ್ ಗಿಲ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ ಮಾಡ್ತಾರಾ ಕಮಾಲ್..?

ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೆ ಕೆಲವೇ ಕೆಲವು ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಗುಜರಾತ್​ನ ಬರೋಡಾದಲ್ಲಿ ನಡೆಯಲಿರುವ ಈ ಪಂದ್ಯ, ಟೀಮ್ ಇಂಡಿಯಾಗೆ ಅತ್ಯಂತ ಮಹತ್ವದಾಗಿದೆ. 2027 ಏಕದಿನ ವಿಶ್ವಕಪ್​ಗೆ ಈ ಸರಣಿಯಿಂದಲೇ ತಯಾರಿ ಶುರುವಾಗಲಿದೆ. ಏಕದಿನ ವಿಶ್ವಕಪ್​ಗೂ ಮುನ್ನ ಕೋರ್ ಟೀಮ್ ಕಟ್ಟೋಕೆ ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿದೆ.  

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ನಂತರ ಇದೀಗ ಟೀಮ್ ಇಂಡಿಯಾ ನ್ಯೂಜಿಲೆಂಡ್ ಚಾಲೆಂಜ್​​ಗೆ ಭರ್ಜರಿ ತಯಾರಿ ನಡೆಸಿಕೊಂಡಿದೆ.  ಕಿವೀಸ್​​​​​​ನ ಯುವ ಸೇನೆಯನ್ನ ವೈಟ್​ವಾಶ್​ ಮಾಡಲು ಪಣ ತೊಟ್ಟಿರುವ ಶುಭ್ಮನ್ ಗಿಲ್ ಪಡೆ, ಸರಣಿ ಕ್ಲೀನ್ ಸ್ವೀಪ್ ಮಾಡೋ ಲೆಕ್ಕಾಚಾರದಲ್ಲಿದೆ. ಆ ಮೂಲಕ ತವರು ಅಭಿಮಾನಿಗಳಿಗೆ ಫುಲ್​​ ಎಂಟರ್​ಟೈನ್ಮೆಂಟ್ ನೀಡೋ ವಿಶ್ವಾಸದಲ್ಲಿದೆ.     ​​​​​​​​​   
ಈ ವರ್ಷ ಟೀಮ್ ಇಂಡಿಯಾಕ್ಕೆ, ಇದೇ ಮೊದಲ ಇಂಟರ್​​ನ್ಯಾಷನಲ್ ಅಸೈನ್ಮೆಂಟ್. ಹೊಸ ವರ್ಷ, ಹೊಸ ಸವಾಲು, ಹೊಸ ಉತ್ಸಾಹದೊಂದಿಗೆ ಮೆನ್-ಇನ್-ಬ್ಲೂ ಪಡೆ ಇದೆ. ಅದ್ರಲ್ಲೂ ಅನುಭವಿ ಮತ್ತು ಸೂಪರ್​ಸ್ಟಾರ್ ಆಟಗಾರರು ಏಕದಿನ ತಂಡಕ್ಕೆ ಮರಳಿರೋದು, ತಂಡದ ಉತ್ಸಾಹದ ಜೊತೆಗೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಹಿರಿಯರ ಆಟವನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ. 

ಇದನ್ನೂ ಓದಿ: ತವರಿಗಾಗಿ ಕಾದು ಪರದಾಡಿದ ಆರ್​​ಸಿಬಿ.. ಈಗ ಮತ್ತೆರಡು ಮೈದಾನಗಳ ಮೇಲೆ ಕಣ್ಣು..!

Gill (2)

ರೋಹಿತ್​, ಗಿಲ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ ಮಾಡ್ತಾರಾ ಕಮಾಲ್..?

ಆಸಿಸ್ ಏಕದಿನ ಸರಣಿಯಲ್ಲಿ ಶತಕ, ಸೌತ್ ಆಫ್ರಿಕಾ ಏಕದಿನ ಸರಣಿಯಲ್ಲಿ 2 ಅರ್ಧಶತಕಗಳನ್ನ ಸಿಡಿಸಿರುವ ರೋಹಿತ್ ಶರ್ಮಾ, ವಿಜಯ್ ಹಜಾರೆ ಟೂರ್ನಿಯಲ್ಲಿ ಡೀಸೆಂಟ್ ಪರ್ಫಾಮೆನ್ಸ್ ನೀಡಿದ್ದಾರೆ. ಸೌತ್ ಆಫ್ರಿಕಾ ಏಕದಿನ ಸರಣಿಗೆ ಅಲಭ್ಯರಾಗಿದ್ದ ಕ್ಯಾಪ್ಟನ್ ಗಿಲ್, ಇದೀಗ ಏಕದಿನ ತಂಡವನ್ನ ಕೂಡಿಕೊಂಡಿದ್ದಾರೆ. ಆದ್ರೆ ಗಿಲ್ ಫಾರ್ಮ್, ಟೀಮ್ ಮ್ಯಾನೇಜ್ಮೆಂಟ್​​ಗೆ ಚಿಂತೆ ಉಂಟುಮಾಡಿದೆ.   ​​​

ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮತ್ತು ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ಕಿಂಗ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಡ್ರೀಮ್ ಫಾರ್ಮ್​​ನಲ್ಲಿ ರನ್​ ಕಲೆಹಾಕ್ತಿರುವ ವಿರಾಟ್, ನ್ಯೂಜಿಲೆಂಡ್ ವಿರುದ್ಧವೂ ಅದೇ ಫಾರ್ಮ್ ಮುಂದುವರೆಸಬೇಕು. ಕೊಹ್ಲಿ ವಿರಾಟ ರೂಪ ತೋರಿಸಿದ್ರೆ, ಕಿವೀಸ್ ಉಡೀಸ್​​ ಆಗೋದ್ರಲ್ಲಿ ಎರಡು ಮಾತಿಲ್ಲ.   

ಮಿಡಲ್ ಆರ್ಡರ್​​ನಲ್ಲಿ ಕಣಕ್ಕಿಳಿಯೋರು ಯಾಱರು..?

ಸಿಡ್ನಿ ಏಕದಿನ ಪಂದ್ಯದಲ್ಲಿ ಗಾಯಗೊಂಡಿದ್ದ ಉಪನಾಯಕ ಶ್ರೇಯಸ್ ಅಯ್ಯರ್ ಇದೀಗ ಸಂಪೂರ್ಣ ಚೇತರಿಸಿಕೊಂಡು ರಾಷ್ಟ್ರೀಯ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಶ್ರೇಯಸ್ ಉತ್ತಮ ಪ್ರದರ್ಶನ ನೀಡಿ, ಫಿಟ್ನೆಸ್ ಮತ್ತು ಫಾರ್ಮ್ ಕಂಡುಕೊಂಡಿದ್ದಾರೆ. ಕೆ.ಎಲ್.ರಾಹುಲ್​​​ಗೆ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ಕೂಡ ನೀಡಲಾಗಿದೆ. ಏಕದಿನ ಸರಣಿಯಲ್ಲಿ ಆರ್ಡಿನರಿ ಪರ್ಫಾಮೆನ್ಸ್ ನೀಡ್ತಿರುವ ರಾಹುಲ್​ ಬ್ಯಾಟ್​ನಿಂದ ಬಿಗ್ ಸ್ಕೋರ್ ನಿರೀಕ್ಷಿಸಲಾಗ್ತಿದೆ.   

ಇದನ್ನೂ ಓದಿ: ಹಲ್​ಚಲ್ ಎಬ್ಬಿಸಿದ RCB ಮಾಜಿ ಸ್ಟಾರ್​​ನ ಚಾಟ್​​ಗಳು..!

Rohit Kohli

ಮೀಡಿಯಮ್ ಪೇಸರ್ ನಿತೀಶ್ ಕುಮಾರ್ ರೆಡ್ಡಿ, ಎಡಗೈ ಸ್ಪಿನ್ನರ್ ರವಿಂದ್ರ ಜಡೇಜಾ ಮತ್ತು ಆಫ್​​ಸ್ಪಿನ್ನರ್ ವಾಶಿಂಗ್ಟನ್ ಸುಂದರ್​, ಈ ತ್ರಿಮೂರ್ತಿಗಳು ನ್ಯೂಜಿಲೆಂಡ್ ವಿರುದ್ಧ ಆಡಲಿರುವ ತ್ರಿವಳಿ ಆಲ್​ರೌಂಡರ್ಸ್. ಮೂವರು ಕ್ವಾಲಿಟಿ ಆಲ್​ರೌಂಡರ್ಸ್ ಆಗಿರೋದ್ರಿಂದ, ತಂಡಕ್ಕೆ ದೊಡ್ಡ ಲಾಭನೇ. ಬ್ಯಾಟ್, ಬಾಲ್​ನಿಂದ ಕಾಂಟ್ರಿಬ್ಯೂಟ್ ಮಾಡೋ ಇವರು, ತಂಡದ ಮ್ಯಾಚ್​ ವಿನ್ನರ್ಸ್​ ಸಹ ಹೌದು.

ಆರ್ಷ್​ದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಇಬ್ಬರು ತಂಡದ ಫ್ರಂಟ್​​ಲೈನ್ ಪೇಸರ್ಸ್​. ಆದ್ರೆ ಮೂರನೇ ವೇಗಿಯಾಗಿ ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಿತ್ ರಾಣಾ ನಡುವೆ ಟಾಸ್ ನಡೆಯೋದು ಪಕ್ಕಾ. ಮತ್ತೊಂದೆಡೆ ಕುಲ್​ದೀಪ್ ಯಾದವ್​​​​​ ಏಕೈಕ ಸ್ಪಿನ್ ಸ್ಪೆಷಲಿಸ್ಟ್, ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳೋ ಆಟಗಾರನಾದ್ದಾರೆ.​​

ಬರೋಡಾದಲ್ಲಿ ನ್ಯೂಜಿಲೆಂಡ್​​​​ ತಂಡವನ್ನ ಬಗ್ಗುಬಡಿಯೋದೇ ಟೀಮ್ ಇಂಡಿಯಾ ಗುರಿಯಾಗಿದೆ. ಪ್ರಮುಖ ಆಟಗಾರರಿಲ್ಲದ ಕಿವೀಸ್ ತಂಡ, ಬಲಿಷ್ಟ ಟೀಮ್ ಇಂಡಿಯಾಕ್ಕೆ ಸುಲಭವಾಗಿ ಶರಣಾಗುತ್ತಾ..? ಅಥವಾ ಟಫ್ ಫೈಟ್ ನೀಡುತ್ತಾ ಅನ್ನೋದನ್ನ ಕಾದುನೋಡೋಣ.

ಇದನ್ನೂ ಓದಿ:ಸಿರಿಯಾ ಐಸಿಸ್ ನೆಲೆಗಳ ಮೇಲೆ ಅಮೆರಿಕ ಏರ್‌ಸ್ಟ್ರೈಕ್..‌ 35ಕ್ಕೂ ಹೆಚ್ಚು ಉಗ್ರರ ನೆಲೆಗಳು ಪುಡಿಪುಡಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.  

Cricket news in Kannada ODI series India vs NewZealand IND vs NZ
Advertisment