/newsfirstlive-kannada/media/media_files/2026/01/11/bengaluru-majunath-2026-01-11-12-34-59.jpg)
ಕೆಲವು ದಿನಗಳ ಹಿಂದೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ವ್ಯಾಪ್ತಿಯಲ್ಲಿ ಯುವತಿಯೊಬ್ಬರು ಪತಿ ಮೇಲೆ ವಿಚಿತ್ರ ವರ್ತನೆಯ ಆರೋಪ ಮಾಡಿದ್ದರು. ಅಲ್ಲದೇ ಕೇಂದ್ರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ಇದೀಗ ಆ ಮಹಿಳೆ ವಿರುದ್ಧ ಆರೋಪಿತ ಪತಿ ಗಂಭೀರ ಆರೋಪ ಮಾಡಿದ್ದು, ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ.
ಪ್ರಕರಣದ ಆರೋಪಿ ಮಂಜುನಾಥ್, ತನ್ನ ಪತ್ನಿ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಆಕೆಗೆ ಒಂದಲ್ಲ, ಎರಡು ಮೂರು ಮದುವೆ ಆಗಿದೆ. ಈಗ 4ನೇ ಗಂಡ ಬೇಕಂತೆ. ನನ್ನ ಮದುವೆ ಬಳಿಕ ದಾಖಲಾತಿ ಕೇಳಿದಾಗ ಆಕೆ ಏನನ್ನೂ ನೀಡಿಲ್ಲ. ನಾವು ದೇವಸ್ಥಾನದಲ್ಲಿ ಹಾರ ಬದಲಿಸಿಕೊಂಡಿದ್ದೇವೆ. ಹಾರ ಬದಲಿಸಿಕೊಂಡ ಬಳಿಕ 12 ಲಕ್ಷ ಹಣ ನೀಡಿ ಮನೆ ಲೀಸ್​ಗೆ ಕೊಡಿಸಿದ್ದೆ. ಮನೆಗೆ ಬಂದಾಗ ಬಟ್ಟೆ ಬದಲಿಸುವಾಗ ಕದ್ದು ಫೋಟೋ ತೆಗೆದು, ನನ್ನ ಮೇಲೆ ಸೈಕೋ ಎಂದು ಆರೋಪ ಮಾಡಿದ್ದಾಳೆ. ಆಕೆ ಇರೋದೇ ಫೇಕ್. ಫೇಕ್ ದಾಖಲೆಗಳನ್ನ ನೀಡಿ ಟೆಕ್ ಮಹೇಂದ್ರದಲ್ಲಿ ಕೆಲಸಕ್ಕೆ ಸೇರಿದ್ದಳು. ಆಕೆ ಎಸ್ಎಸ್ಎಲ್​​​ಸಿ ವಿದ್ಯಾಭ್ಯಾಸ ಮಾಡಿದ್ದಾಳೆ ಅಷ್ಟೇ. ಕುಟ್ಟಿ ಅಲಿಯಾಸ್ ಕುಮಾರ್ ಎಂಬ ರೌಡಿಯಿಂದದ ನನಗೆ ಧಮ್ಕಿ ಹಾಕಿಸಿದ್ದಾಳೆ. ಅಣ್ಣ ಅಂತ ರೌಡಿಶೀಟರ್ ಮೂಲಕ ಧಮ್ಕಿ ಹಾಕಿಸಿದ್ದಾಳೆ ಎಂದು ಆರೋಪಿದ್ದಾನೆ.
/filters:format(webp)/newsfirstlive-kannada/media/media_files/2026/01/11/manjunath-2026-01-11-11-41-22.jpg)
ಸಂತ್ರಸ್ತೆ ಕೌಂಟರ್!
ಮಂಜುನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಂತ್ರಸ್ಥೆ.. ನನಗೆ ಮಂಜುನಾಥ್ ಮದುವೆಗೂ ಮೊದಲು ಎರಡು ಮದುವೆ ಆಗಿದ್ದು ನಿಜ. ಡಿವೋರ್ಸ್ ಆಗಿದೆ. ಆ ಎಲ್ಲ ವಿಚಾರವನ್ನು ತಿಳಿಸಿಯೇ ಮಂಜುನಾಥ್ ಜೊತೆ ಮದುವೆ ಆಗಲು ಒಪ್ಪಿಕೊಂಡೆ. ನಮ್ಮ ಮದುವೆಗೆ ಮಂಜುನಾಥ್ ಕುಟುಂಬ ಕೂಡ ಒಪ್ಪಿಕೊಂಡಿತ್ತು.
/filters:format(webp)/newsfirstlive-kannada/media/media_files/2026/01/11/manjunath-case-3-2026-01-11-11-44-24.jpg)
ನಿಜ ಹೇಳಬೇಕು ಅಂದ್ರೆ ಇವನು ಪತಿಯಲ್ಲ.. ವಿಕೃತ ಕಾಮಿ! ನಾನು ಎರಡನೇ ಗಂಡನಿಗೆ ಡಿವೋರ್ಸ್ ನೀಡಲು ಕಾರಣ ಈತನೇ. ಆತನಿಗೆ ನನ್ನ ಮೇಲೆ ಪ್ರೀತಿಯಾಗಿತ್ತು. 2ನೇ ಗಂಡ ಜೊತೆಯಲ್ಲಿದ್ದಾಗ್ಲೇ ಪ್ರಪೋಸ್ ಮಾಡಿದ್ದ. ಈಕೆ ನನಗೆ ಬೇಕು. ಆಕೆಯನ್ನು ಬಿಟ್ಟುಬಿಡು ಎಂದು ಹೆದರಿಸಿ, ಆತನಿಂದ ಡಿವೋರ್ಸ್ ಕೊಡಿಸಿದ. ಡಿವೋರ್ಸ್ ಪಡೆದ ಬಳಿಕವೇ ಮನೆಯವರನ್ನು ಒಪ್ಪಿಸಿ ಮದುವೆಯಾದೇವು. ಕಳೆದ ಸೆಪ್ಟೆಂಬರ್​ನಲ್ಲಿ ನಾವು ಮದುವೆ ಆಗಿದ್ದೇವೆ.
ಮೂರು ತಿಂಗಳ ನನ್ನ ಜೊತೆ ಸಂಸಾರ ಮಾಡಿದ್ದಾನೆ. ಕೆಲ ತಿಂಗಳ ಹಿಂದೆ ಚೆನ್ನಾಗಿದ್ದ ಮಂಜುನಾಥ್ ಇತ್ತೀಚೆಗೆ ವಿಚಿತ್ರ ವರ್ತನೆ ಮಾಡಲು ಶುರುಮಾಡಿದ್ದ. ಫೋನ್ ನೋಡಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಿದ್ದ. ಮನೆಯಲ್ಲಿ, ಪ್ಯಾಸೆಜ್​ನಲ್ಲಿ ಬೆತ್ತಲೆಯಾಗಿ ​ಓಡಾಟ ನಡೆಸ್ತಿದ್ದ. ನನ್ನ ಅಪ್ಪ, ಅಮ್ಮನ ಮುಂದೆಯೂ ಬೆತ್ತಲೆಯಾಗಿ ಓಡಾಡುತ್ತಿದ್ದ. ಈತನ ಈ ರೀತಿಯ ವರ್ತನೆಗಳನ್ನು ಸಹಿಸಲಾಗದೇ ಕೇಂದ್ರ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ್ದೆ. ಈಗ ನನ್ನ ಕೆಲವು ಫೋಟೋಗಳನ್ನ ತೆಗೆದುಕೊಂಡು ಮಾಧ್ಯಮಗಳಿಗೆ ನೀಡುತ್ತಿದ್ದಾನೆ. ಅದಕ್ಕೆಲ್ಲ ನಾನು ಕೋರ್ಟ್​ನಲ್ಲಿ ಉತ್ತರ ಕೊಡ್ತೀನಿ. ನಾನು ಈತನ ಸುಮ್ಮನೆ ಬಿಡಲ್ಲ. ನಾಳೆ ನನಗೆ ಏನಾದರೂ ಆದರೆ ಈತನೇ ಕಾರಣ ಎಂದಿದ್ದಾರೆ.
ಇದನ್ನೂ ಓದಿ: ಸಿರಿಯಾ ಐಸಿಸ್ ನೆಲೆಗಳ ಮೇಲೆ ಅಮೆರಿಕ ಏರ್‌ಸ್ಟ್ರೈಕ್.. 35ಕ್ಕೂ ಹೆಚ್ಚು ಉಗ್ರರ ನೆಲೆಗಳು ಪುಡಿಪುಡಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us