/newsfirstlive-kannada/media/media_files/2026/01/11/manjunath-2026-01-11-11-41-22.jpg)
ಕೆಲವು ದಿನಗಳ ಹಿಂದೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ವ್ಯಾಪ್ತಿಯಲ್ಲಿ ಯುವತಿಯೊಬ್ಬರು ಪತಿ ಮೇಲೆ ವಿಚಿತ್ರ ವರ್ತನೆಯ ಆರೋಪ ಮಾಡಿದ್ದರು. ಅಲ್ಲದೇ ಕೇಂದ್ರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದರು. ಇದೀಗ ಆ ಮಹಿಳೆ ವಿರುದ್ಧ ಆರೋಪಿತ ಪತಿ ಗಂಭೀರ ಆರೋಪ ಮಾಡಿದ್ದು, ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ.
/filters:format(webp)/newsfirstlive-kannada/media/media_files/2026/01/11/manjunath-case-1-2026-01-11-11-45-52.jpg)
ಆರೋಪ ಏನು..?
ಆರೋಪಿಯ ಹೆಸರು ಮಂಜುನಾಥ್. ಆಕೆಗೆ ನಾನು ಮೂರನೇ ಪತಿ. ಈಗಾಗಲೇ ಇಬ್ಬರನ್ನು ಮದುವೆ ಆಗಿ ವಂಚಿಸಿದ್ದಾಳೆ. ಇದೀಗ ನನಗೆ ಮೋಸ ಮಾಡಲು ಹೊರಟಿರುವ ಆಕೆ, ನಾಲ್ಕನೇ ಗಂಡ ಬೇಕಾಗಿದೆ. ಪೊಲೀಸ್ ಅಧಿಕಾರಿಗಳು ದಯವಿಟ್ಟು ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ವಿಲ್ಸನ್ ಗಾರ್ಡನ್ ಪೊಲೀಸರಿಗೆ ದೂರು ನೀಡಿದ್ದಾನೆ.
ಇದನ್ನೂ ಓದಿ:IND vs NZ: ಇವತ್ತು ಪ್ಲೇಯಿಂಗ್ -11 ಹೇಗಿರುತ್ತೆ..? ಅಭಿಮಾನಿಗಳ ನಿರೀಕ್ಷೆಗಳು ಏನೇನು?
/filters:format(webp)/newsfirstlive-kannada/media/media_files/2026/01/11/manjunath-case-3-2026-01-11-11-44-24.jpg)
ಮಹಿಳೆ ವಿರುದ್ಧ ಮೋಸದಾಟ ಆರೋಪ
ಆರೋಪ -1: ಒಂದಲ್ಲ, ಎರಡು ಅಲ್ಲ, 3 ಮುಗೀತು 4ನೇ ಗಂಡ ಬೇಕಂತೆ ಅಂತ ಆರೋಪ
ಆರೋಪ - 2: ಮೊದಲ ಗಂಡನ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಗೆ ದೂರು ನೀಡಿದ್ದಳು
ಆರೋಪ -3: ಎರಡನೇ ಗಂಡನ ವಿರುದ್ಧವೂ ಕೂಡ ವಿಲ್ಸನ್ ಗಾರ್ಡನ್ ಠಾಣೆಗೆ ದೂರು
ಆರೋಪ -4: ಇದೀಗ 3ನೇ ಗಂಡ ಎಂದು ಹೇಳಿಕೊಂಡು ಮಂಜುನಾಥ್ ವಿರುದ್ಧ ದೂರು
ಆರೋಪ -5: ಮದುವೆಗೆ ದಾಖಲಾತಿ ಕೇಳಿದಾಗ ಸಂತ್ರಸ್ತೆ ದಾಖಲಾತಿ ನೀಡಿಲ್ಲ ಎಂದು ಆರೋಪ
ಆರೋಪ - 6: ದೇವಸ್ಥಾನದಲ್ಲಿ ಹಾರ ಬದಲಿಸಿಕೊಂಡು ಗಂಡ ಅಂತ ದೂರು ನೀಡಿದ್ದ ಮಹಿಳೆ
ಆರೋಪ -7: ಹಾರ ಬದಲಿಸಿಕೊಂಡ ಬಳಿಕ 12 ಲಕ್ಷ ಹಣ ನೀಡಿ ಮನೆ ಲೀಸ್​ಗೆ ಕೊಡಿಸಿದ್ದೆ
ಆರೋಪ -8: ಮನೆಗೆ ಬಂದಾಗ ಬಟ್ಟೆ ಬದಲಿಸುವಾಗ ಕದ್ದು ಫೋಟೋ ತೆಗೆದ ಆರೋಪ
ಆರೋಪ -9: ಫೇಕ್ ದಾಖಲೆಗಳನ್ನ ನೀಡಿ ಟೆಕ್ ಮಹೇಂದ್ರದಲ್ಲಿ ಕೆಲಸಕ್ಕೆ ಸೇರಿದ್ದ ಆರೋಪ
ಆರೋಪ -10: ಮಹಿಳೆ ಕೇವಲ ಎಸ್ಎಸ್ಎಲ್​​​ಸಿ ವಿದ್ಯಾಭ್ಯಾಸ ಮಾಡಿರುವ ಆರೋಪ
ಆರೋಪ -11: ಕುಟ್ಟಿ ಅಲಿಯಾಸ್ ಕುಮಾರ್ ಎಂಬ ರೌಡಿಯಿಂದದ ಧಮ್ಕಿ ಹಾಕಿದ್ದ ಆರೋಪ
ಆರೋಪ -12: ಅಣ್ಣ ಅಂತ ರೌಡಿಶೀಟರ್ ಮೂಲಕ ಧಮ್ಕಿ ಹಾಕಿದ್ದಾಳೆಂದು ಆರೋಪ
ಇದನ್ನೂ ಓದಿ: ಸಿರಿಯಾ ಐಸಿಸ್ ನೆಲೆಗಳ ಮೇಲೆ ಅಮೆರಿಕ ಏರ್‌ಸ್ಟ್ರೈಕ್.. 35ಕ್ಕೂ ಹೆಚ್ಚು ಉಗ್ರರ ನೆಲೆಗಳು ಪುಡಿಪುಡಿ..!
/filters:format(webp)/newsfirstlive-kannada/media/media_files/2026/01/11/manjunath-case-2-2026-01-11-11-44-38.jpg)
ಆಕೆಯ ಕೆಲಸ ಬರೀ ಶೋಕಿ ಮಾಡೋದು. ಗಂಡಸರ ಹಣವನ್ನು ಬಳಸಿಕೊಂಡು ಮೋಸ ಮಾಡುತ್ತಿದ್ದಾಳೆ. ಮೊದಲ ಪತಿಯನ್ನು ಚೆನ್ನಾಗಿ ಬಳಸಿಕೊಂಡ ನಂತರ ಆತ ಷಂಡ ಎಂದು ಬಿಟ್ಟಿದ್ದಾಳಂತೆ. ಎರಡನೇ ಮದುವೆಯಾಗಿ ಆತನ ಜೊತೆ ಜಾಲಿ ಟ್ರಿಪ್ ಮಾಡಿದ್ದಾಳೆ. ಕೊನೆಗೆ ಎರಡನೇ ಗಂಡನಿಗೂ ಕೈಕೊಟ್ಟು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧವೂ ದೂರು ಕೊಟ್ಟಿದ್ದಾಳೆ.
/filters:format(webp)/newsfirstlive-kannada/media/media_files/2026/01/11/manjunath-case-2026-01-11-11-44-55.jpg)
ಈ ಪ್ರಕರಣ ಬಾಕಿ ಇರುವಾಗಲೇ ನನಗೆ ಮೋಸ ಮಾಡಲು ಹೊರಟಿದ್ದಾಳೆ. ಆಕೆಯ ಈ ಬಂಡವಾಳ ನನಗೆ ಗೊತ್ತಿರಲಿಲ್ಲ. ನನ್ನ ಬಳಿ ಬಂದು ಮದುವೆ ಎಂದಾಗ ಆಕೆಗೆ ಸಂಬಂಧಿಸಿದ ಪ್ರಮುಖ ದಾಖಲಾತಿಗಳನ್ನು ಕೇಳಿದೆ. ಆದರೆ ಅವರು ನೀಡಲಿಲ್ಲ. ಕೇವಲ ದೇವಾಸ್ಥಾನದಲ್ಲಿ ಹಾರ ಬದಲಿಸಿಕೊಂಡೆವು. ಆದರೆ ಅಧಿಕೃತವಾಗಿ ದಾಖಲಾತಿ ಮಾಡಿಸಬೇಕು ಎಂದು ನಾನು ಹೇಳಿದ್ದೆ. ಆದರೆ, ಆ ಯುವತಿ ಹಾಗೂ ಆಕೆಯ ಮನೆಯವರು ಯಾವುದೇ ದಾಖಲಾತಿಯನ್ನು ನೀಡಿಲ್ಲ. ಹಾರ ಬದಲಿಸಿಕೊಂಡ ಬಳಿಕ 12 ಲಕ್ಷ ಹಣ ನೀಡಿ ಮನೆಯನ್ನು ಲೀಸ್​ಗೆ ಕೊಡಿಸಿದ್ದೆ. ನನ್ನಿಂದ 30 ಲಕ್ಷ ಹಣ, 50 ಗ್ರಾಂ ಚಿನ್ನ, ಐಪೋನ್, ಐಪ್ಯಾಡ್, ಟ್ಯಾಬ್​ಗಳನ್ನು ಪಡೆದುಕೊಂಡಿದ್ದಾಳೆ ಎಂದು ಆರೋಪಿಸಿದ್ದಾನೆ.
ಇದನ್ನೂ ಓದಿ:ಸೀರಿಯಲ್‌ಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಸ್ಪರ್ಧಿ ಸೂರಜ್ ಸಿಂಗ್..! Video
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us