Advertisment

ತಾವೇ ತೋಡಿದ್ದ ಹಳ್ಳಕ್ಕೆ ಮತ್ತೆ ಬಿದ್ದ ಅಯ್ಯರ್​.. ಏನಿದು ಹೈಡ್ರಾಮಾ..?

ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಶ್ರೇಯಸ್​ ಅಯ್ಯರ್​ ಕರಿಯರ್​ ಅತಂತ್ರಕ್ಕೆ ಸಿಲುಕಿದೆ. ಕಾರಣ ಆತನೇ ಮಾಡಿಕೊಂಡ ಯಡವಟ್ಟಾ? ಇಲ್ಲ ಆತನ ನಿರ್ಲಕ್ಷ್ಯವಾ? ಆತನ ಗಾಂಚಲಿಯೇ ಕರಿಯರ್​ ಮುಳ್ಳಾಗ್ತಿದೆಯಾ ಎಂಬ ಅನುಮಾನ ಮೂಡಿದೆ.

author-image
Ganesh Kerekuli
Shreyas iyer (4)

ಶ್ರೇಯಸ್ ಅಯ್ಯರ್

Advertisment

ಶ್ರೇಯಸ್ ಅಯ್ಯರ್, ಟೀಮ್ ಇಂಡಿಯಾದ ಆಲ್​ ಫಾರ್ಮೆಟ್​ ಪ್ಲೇಯರ್. ಮಿಡಲ್ ಆರ್ಡರ್​ನ ನಂಬಿಕಸ್ಥ ಬ್ಯಾಟರ್​. ಈ ನಂಬಿಕಸ್ಥ ಶ್ರೇಯಸ್ ಅಯ್ಯರ್​, ಒಂದಿಲ್ಲೊಂದು ಚರ್ಚೆಯಲ್ಲಿರ್ತಾರೆ. ಇನ್ನೇನು ಟೀಮ್ ಇಂಡಿಯಾ ಟೆಸ್ಟ್​ ತಂಡಕ್ಕೆ ಕಮ್​ಬ್ಯಾಕ್ ಮಾಡ್ತಾರೆ. ವಿಂಡೀಸ್ ಸರಣಿಯಲ್ಲಿ ಕಾಣಿಸಿಕೊಳ್ತಾರೆ ಎಂಬ ನಿರೀಕ್ಷೆ ಹುಟ್ಟುಹಾಕಿದ್ದ ಶ್ರೇಯಸ್, ಫ್ಯಾನ್ಸ್​ಗೆ ಶಾಕ್ ನೀಡಿದ್ದಾರೆ. ಶ್ರೇಯಸ್ ಅಯ್ಯರ್ ಕರಿಯರ್ ಮುಂದೇನು ಎಂಬ ಪ್ರಶ್ನೆಗೂ ನಾಂದಿಯಾಡಿದೆ. 

Advertisment

‘ಗಾಂಚಲಿ’ಯೇ ಕ್ರಿಕೆಟ್​ ಕರಿಯರ್​ಗೆ ಕುತ್ತು

2024, ಫೆಬ್ರವರಿ ಇಂಗ್ಲೆಂಡ್ ಎದುರಿನ ವಿಶಾಖಪಟ್ಟಣಂ ಟೆಸ್ಟ್. ಈ ಟೆಸ್ಟ್​ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಶ್ರೇಯಸ್​​​, ನಂತರದ 3 ಟೆಸ್ಟ್​ ಪಂದ್ಯಗಳಿಂದ ಡ್ರಾಪ್ ಆಗಿದ್ದರು. ಟೆಸ್ಟ್​ನಿಂದ ಡ್ರಾಪ್ ಮಾಡಿದ್ದ ಸೆಲೆಕ್ಷನ್ ಕಮಿಟಿ ಮತ್ತು ಬಿಗ್​ಬಾಸ್​ಗಳು, ರಣಜಿ ಟ್ರೋಫಿಯನ್ನಾಡುವ ಖಡಕ್ ಸೂಚನೆ ನೀಡಿತ್ತು. ಬೆನ್ನು ನೋವಿನ ಕಾರಣ ನೀಡಿದ್ದ ಶ್ರೇಯಸ್​, ಕ್ವಾರ್ಟರ್ ಫೈನಲ್​​ನಿಂದ ದೂರ ಉಳಿದಿದ್ದರು. ಅವತ್ತು ಅಯ್ಯರ್ ನಾಟಕ ಬಟಾಬಯಲಾಗಿತ್ತು. 

ಬೆನ್ನು ನೋವಿನ ಕಾರಣ ನೀಡಿ ರಣಜಿಗೆ ಚಕ್ಕರ್​ ಹಾಕಿದ್ದ ಮುಂಬೈಕರ್​ಗೆ ಎನ್​ಸಿಎ ಶಾಕ್ ನೀಡಿತ್ತು. ಅಯ್ಯರ್​ಗೆ ಹೊಸ ಇಂಜುರಿಯಾಗಿಲ್ಲ ಅಂತಾನೇ ಬಿಸಿಸಿಐಗೆ ವರದಿ ನೀಡಿತ್ತು. ಈ ವರದಿ ಬೆನ್ನಲ್ಲೇ ವಾರ್ಷಿಕ ಒಪ್ಪಂದದಿಂದ ಶ್ರೇಯಸ್​ ಅಯ್ಯರ್​ಗೆ ಕೊಕ್ ನೀಡಲಾಯ್ತು. ಇದರಿಂದ ಎಚ್ಚೆತ್ತ ಶ್ರೇಯಸ್ ಅಯ್ಯರ್​, ರಣಜಿ ಸೆಮಿಫೈನಲ್​​ನಲ್ಲಿ ಕಣಕ್ಕಿಳಿದ್ದರು. ಇದು ಶ್ರೇಯಸ್ ಅಯ್ಯರ್ ಇಂಜುರಿ ಡ್ರಾಮಾಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು. ಆದ್ರೀಗ ಅದೇ ಹಾದಿಯಲ್ಲೇ ಶ್ರೇಯಸ್​, ಮತ್ತೆ ಹೆಜ್ಜೆಹಾಕಿದ್ದಾರೆ. 

ಇದನ್ನೂ ಓದಿ:ಹ್ಯಾರಿಸ್ ರೌಫ್, ಫರ್ಹಾನ್​​ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ..! ಏನಾಯ್ತು..?

Advertisment

ಶ್ರೇಯಸ್ ಅಯ್ಯರ್ ಇಂಜುರಿ ಡ್ರಾಮಾ, ವೃತ್ತಿ ಜೀವನಕ್ಕೆ ಪೆಟ್ಟು ನೀಡಿತ್ತು. ರೋಹಿತ್ ಶರ್ಮಾ ಬಳಿಕ ನಾಯಕನಾಗಬೇಕಿದ್ದ ಅಯ್ಯರ್, ಟೀಮ್ ಇಂಡಿಯಾದಿಂದಲೇ ಹೊರ ಬೀಳುವಂತೆ ಮಾಡ್ತು. ಟೆಸ್ಟ್​, ಟಿ20, ಏಕದಿನದಿಂದಲೂ ದೂರವಾಗಿದ್ದ ಶ್ರೇಯಸ್, 2025ರ ಚಾಂಪಿಯನ್ಸ್​ ಟ್ರೋಫಿ ವೇಳೆ ತಂಡಕ್ಕೆ ಕಮ್​​ಬ್ಯಾಕ್ ಮಾಡಿದ್ದರು. ಟಿ20, ಟೆಸ್ಟ್​ನಿಂದ ದೂರ ಉಳಿದಿದ್ದ ಶ್ರೇಯಸ್, ವೆಸ್ಟ್​ ಇಂಡೀಸ್ ಎದುರಿನ ಟೆಸ್ಟ್ ಸರಣಿಗೆ ಆಯ್ಕೆ ಆಗ್ತಾರೆ ಎನ್ನಲಾಗಿತ್ತು. ಆದ್ರೀಗ ಕಮ್​​​ಬ್ಯಾಕ್ ಹೊತ್ತಿನಲ್ಲೇ ಶ್ರೇಯಸ್​ ನಡೆ  ಭವಿಷ್ಯವನ್ನು ಅತಂತ್ರಕ್ಕೆ ಸಿಲುಕಿಸಿದೆ.

ಬೆನ್ನು ನೋವಿನ ಪತ್ರ..!

ಆಸ್ಟ್ರೇಲಿಯಾ ಎ ಎದುರಿನ 2ನೇ ಅನಧಿಕೃತ ಟೆಸ್ಟ್ ನಡೀತಿದೆ. ಇದೇ ಟೆಸ್ಟ್ ಸರಣಿಯಲ್ಲಿ ಭಾರತ ಎ ತಂಡ ನಾಯಕರಾಗಿದ್ದ ಶ್ರೇಯಸ್, 2ನೇ ಟೆಸ್ಟ್​ ಪಂದ್ಯದ ಆರಂಭಕ್ಕೂ ಮುನ್ನ ಹಿಂದೆ ಸರಿದಿದ್ದಾರೆ. ವಿಶ್ರಾಂತಿ ಕುರಿತು ಅಜಿತ್ ಅಗರ್ಕರ್ ಜೊತೆ ಮಾತುಕತೆ ನಡೆಸಿರುವ ಶ್ರೇಯಸ್, ವಿಶ್ರಾಂತಿ ಕೋರಿ ಬಿಸಿಸಿಐಗೆ ಪತ್ರ ಬರೆದಿದ್ದಾರೆ. ಬೆನ್ನು ನೋವಿನ ಕಾರಣಕ್ಕೆ ಮೈದಾನದಲ್ಲಿ ಹೆಚ್ಚು ಸಮಯ ಕಳೆಯಲು ಆಗ್ತಿಲ್ಲ. ಹೀಗಾಗಿ ರೆಡ್ ಬಾಲ್ ಕ್ರಿಕೆಟ್​ನಿಂದ ಕೆಲ ದಿನಗಳು ವಿಶ್ರಾಂತಿ ತೆಗೆದುಕೊಳ್ಳಲು ಬಯಸಿದ್ದಾಗಿ ತಿಳಿಸಿದ್ದಾರೆ. ಇದೇ ಇ ಮೇಲ್​ ಶ್ರೇಯಸ್ ಅಯ್ಯರ್ ಭವಿಷ್ಯ ಮುಂದೇನು ಎಂಬ ಪ್ರಶ್ನೆಗೆ ನಾಂದಿಯಾಡಿದೆ.

ಕರಿಯರ್​ಗೆ ಮುಳ್ಳು?

ಏಕದಿನ ಕ್ರಿಕೆಟ್​ಗೆ ಮಾತ್ರವೇ ಸೀಮಿತವಾಗಿದ್ದ ಶ್ರೇಯಸ್, ಟೆಸ್ಟ್​ ಕಮ್​​ಬ್ಯಾಕ್​ಗೆ ಕಾಲವೂ ಕೂಡಿ ಬಂದಿತ್ತು. ಇದೇ ಹೊತ್ತಲ್ಲೇ ಶ್ರೇಯಸ್​, ಬಿಸಿಸಿಐಗೆ ಬರೆದ ಪತ್ರ ಕೇವಲ ಟೆಸ್ಟ್ ಕರಿಯರ್​ ಅನ್ನೇ ಅಲ್ಲ. ಏಕದಿನ ಕ್ರಿಕೆಟ್ ಭವಿಷ್ಯವನ್ನ ಅಂತತ್ರಕ್ಕೆ ಸಿಲುಕಿಸಲಿದೆ. ಇನ್​​ಫ್ಯಾಕ್ಟ್​_ ಈಗಾಗಲೇ ಟಿ20ಯಿಂದ ದೂರ ಉಳಿದಿರುವ ಶ್ರೇಯಸ್​, ಇನ್ಮುಂದೆ ಟೀಮ್ ಇಂಡಿಯಾದಿಂದ ಕಂಪ್ಲೀಟ್ ದೂರವಾಗಿ, ಐಪಿಎಲ್​ಗೆ ಮಾತ್ರವೇ ಸೀಮಿತವಾದರು ಅಚ್ಚರಿಪಡಬೇಕಿಲ್ಲ. 

Advertisment

ಇದನ್ನೂ ಓದಿ:ಬಂಗ್ಲಾ ಬಡಿದು ಫೈನಲ್​ಗೆ ಎಂಟ್ರಿ.. ಬ್ಯಾಟರ್​​ಗಳ ಫೇಲ್ಯೂರ್​ ಬಗ್ಗೆ ಸೂರ್ಯ ದೊಡ್ಡ ಹೇಳಿಕೆ

ರೆಡ್​ ಬಾಲ್ ಕ್ರಿಕೆಟ್ ಆಡಲು ಸೂಚಿಸಿದಾಗೆಲ್ಲ, ಬೆನ್ನು ನೋವಿನ ವಿಚಾರವನ್ನೇ ಪ್ರಸ್ತಾಪಿಸುವ ಶ್ರೇಯಸ್, ಟೀಮ್ ಇಂಡಿಯಾ ಕಮ್​ಬ್ಯಾಕ್​​​​ಗೆ ಇನ್ನಿಲ್ಲದ ಕಸರತ್ತು ನಡೆಸಬೇಕಾಗೋದ್ರಲ್ಲಿ ಡೌಟಿಲ್ಲ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Shreyas Iyer
Advertisment
Advertisment
Advertisment