/newsfirstlive-kannada/media/media_files/2025/09/25/surya-kumar-yadav-1-2025-09-25-07-36-14.jpg)
ಬಾಂಗ್ಲಾದೇಶ ತಂಡವನ್ನು ಟೀಂ ಇಂಡಿಯಾ 41 ರನ್​ಗಳಿಂದ ಸೋಲಿಸಿ ಏಷ್ಯಾಕಪ್​​ ಫೈನಲ್​​ಗೆ ಲಗ್ಗೆ ಇಟ್ಟಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 168 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ಕೇವಲ 127 ರನ್‌ಗಳಿಗೆ ಆಲೌಟ್ ಆಯಿತು.
ಕ್ಯಾಪ್ಟನ್ ಸೂರ್ಯ ದೊಡ್ಡ ಹೇಳಿಕೆ
ಫೈನಲ್​​ಗೆ ಎಂಟ್ರಿ ಬೆನ್ನಲ್ಲೇ ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್ ಪ್ರತಿಕ್ರಿಯಿಸಿ.. ‘ಈ ಟೂರ್ನಮೆಂಟ್‌ನಲ್ಲಿ ಫಸ್ಟ್​ ಬ್ಯಾಟಿಂಗ್​ಗೆ ಅವಕಾಶ ಸಿಕ್ಕಿರಲಿಲ್ಲ. ಓಮನ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದೇವು ಎಂದು ಭಾವಿಸುತ್ತೇನೆ. ಸೂಪರ್ ಫೋರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಪ್ರಯೋಗ ಬಯಸಿದ್ದೇವು ಎಂದರು.
ಇದನ್ನೂ ಓದಿ:6, 6, 6, 6, 6; ಬಾಂಗ್ಲಾ ವಿರುದ್ಧವೂ ಮುಂದುವರೆದ ಅಭಿಷೇಕ್ ಶರ್ಮಾ ಘರ್ಜನೆ.. ಹಾಫ್ ಸೆಂಚುರಿ
ಬ್ಯಾಟಿಂಗ್ ವೇಳೆ ಅವರ ಬೌಲಿಂಗ್ ಲೈನ್​ ಅಪ್ ನೋಡಿದಾಗ ಲೆಗ್​ ಸ್ಪಿನ್ ಹಾಗೂ ಲೆಫ್ಟ್ ಆರ್ಮ್​​ ಸ್ಪಿನ್ನರ್ ಹೊಂದಿದ್ದರು. ನನ್ನ ಪ್ರಕಾರ ಶಿವಂ ದುಬೆ 7 ರಿಂದ 15 ಓವರ್​​​​​ಗೆ ಪರಿಪೂರ್ಣ ಎಂದು ಭಾವಿಸಿದೆ. ಆದರೆ ಅದು ಕೆಲಸ ಮಾಡಲಿಲ್ಲ, ಕೆಲವೊಮ್ಮೆ ಹಾಗೆ ಆಗುತ್ತದೆ. ನಮ್ಮ ಔಟ್‌ಫೀಲ್ಡ್ ನಿಜವಾಗಿಯೂ ವೇಗವಾಗಿದ್ದರೆ 180 ರಿಂದ 185 ರನ್‌ಗಳಾಗುತ್ತಿತ್ತು. ಆದರೆ ನಮ್ಮಲ್ಲಿರುವ ಬೌಲಿಂಗ್ ಲೈನ್ ಅಪ್​ನಲ್ಲಿ 12-14 ಓವರ್​ಗಳನ್ನು ಉತ್ತಮವಾಗಿ ಮಾಡಿದ್ರೆ ಹೆಚ್ಚಿನ ಸಮಯದಲ್ಲಿ ನಾವೇ ಗೆಲ್ಲುತ್ತೇವೆ ಎಂದರು.
ಟೀಮ್ ಇಂಡಿಯಾಗೆ ಭರ್ಜರಿ ಗೆಲುವು
ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (75 ರನ್) ಸತತ ಎರಡನೇ ಅರ್ಧಶತಕ ಮತ್ತು ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ (ಮೂರು ವಿಕೆಟ್) ಮತ್ತು ವರುಣ್ ಚಕ್ರವರ್ತಿ (ಎರಡು ವಿಕೆಟ್) ಪಡೆದರು. ಟೀಂ ಇಂಡಿಯಾ 37 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಐದು ಸಿಕ್ಸರ್‌ಗಳ ನೆರವಿನಿಂದ ಬಾಂಗ್ಲಾದೇಶವನ್ನು 41 ರನ್‌ಗಳಿಂದ ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.