ವಿರಾಟ್ ಕೊಹ್ಲಿ ಹಾದಿಯಲ್ಲೇ ಶುಭ್ಮನ್ ಗಿಲ್..? ಬ್ಯ್ರಾಂಡ್​​ಗಳಿಗೆ ನಯಾ ಕಿಂಗ್..!

ಟೀಮ್ ಇಂಡಿಯಾ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಗಿಲ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಕಾರ್ಪೊರೇಟ್ ಲೋಕದ ಡಾರ್ಲಿಂಗ್ ಎನಿಸಿಕೊಂಡಿರೋ ಗಿಲ್, ಬಹು ಬೇಡಿಕೆಯ ಕ್ರಿಕೆಟರ್ ಆಗಿದ್ದಾರೆ. ವಿಶ್ವಕ್ರಿಕೆಟ್​ನ ರೈಸಿಂಗ್ ಸೂಪರ್​ಸ್ಟಾರ್ ಗಿಲ್​ ಹಿಂದೆ, ಜಾಹಿರಾತುದಾರರು ಮುಗಿಬೀಳ್ತಿದ್ದಾರೆ.

author-image
Ganesh Kerekuli
Shubman Gill
Advertisment

ಟೀಮ್ ಇಂಡಿಯಾ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಗಿಲ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಕಾರ್ಪೊರೇಟ್ ಲೋಕದ ಡಾರ್ಲಿಂಗ್ ಎನಿಸಿಕೊಂಡಿರೋ ಗಿಲ್, ಬಹು ಬೇಡಿಕೆಯ ಕ್ರಿಕೆಟರ್ ಆಗಿದ್ದಾರೆ. ವಿಶ್ವಕ್ರಿಕೆಟ್​ನ ರೈಸಿಂಗ್ ಸೂಪರ್​ಸ್ಟಾರ್ ಗಿಲ್​ ಹಿಂದೆ, ಜಾಹಿರಾತುದಾರರು ಮುಗಿಬೀಳ್ತಿದ್ದಾರೆ. ಅಷ್ಟಕ್ಕೂ ಗಿಲ್​​​ ಬ್ಯಾಂಡ್​ ವ್ಯಾಲ್ಯೂ ದಿಢೀರಂತೆ ಹೆಚ್ಚಾಗಿರೋದು ಏಕೆ?

ದಶಕಕ್ಕೂ ಅಧಿಕ ಕಾಲ ಕ್ರಿಕೆಟ್​​ ಲೋಕವನ್ನ ರಾಜನಂತೆ ಆಳಿದ ವಿರಾಟ್​ ಕೊಹ್ಲಿ ನಿಧಾನವಾಗಿ ಮೈದಾನದಿಂದ ದೂರಾಗ್ತಿದ್ದಾರೆ. ಟಿ20, ಟೆಸ್ಟ್​ ಫಾರ್ಮೆಟ್​​ಗೆ ಗುಡ್​ ಬೈ ಹೇಳಿರೋ ಕೊಹ್ಲಿ, ಈಗ ಏಕದಿನ ಮತ್ತು ಐಪಿಎಲ್​ಗೆ ಮಾತ್ರ ಸೀಮಿತವಾಗಿದ್ದಾರೆ. ಆನ್​​​ಫೀಲ್ಡ್​​ಗಿಂತ ಆಫ್​ ಫೀಲ್ಡ್​ನಲ್ಲೇ ಕೊಹ್ಲಿ ಉಳಿದಿದ್ದು, ಕೊಹ್ಲಿಯ ಖದರ್​​ ಕೂಡ ನಿಧಾನವಾಗಿ ಕಡಿಮೆಯಾಗ್ತಿದೆ. ಕಿಂಗ್​ ಪಟ್ಟ ಇದೀಗ ಪ್ರಿನ್ಸ್​ ಶುಭ್​ಮನ್​ ಗಿಲ್​ನ ಅರಸಿಕೊಂಡು ಬರ್ತಿದೆ. 

SHUBMAN_GILL (6)

ಕೊಹ್ಲಿ ಹಾದಿಯಲ್ಲಿ ಶುಭ್ಮನ್ ಗಿಲ್?

ವಿರಾಟ್​ ಕೊಹ್ಲಿ, ವಿಶ್ವ ಕ್ರಿಕೆಟ್​​ನ ಕಿಂಗ್ ಮಾತ್ರವಲ್ಲ. ಕಾರ್ಪೋರೇಟ್​ ಜಗತ್ತಿನ ಕಿಂಗ್ ಕೂಡ ಆಗಿದ್ದರು. ಇದೀಗ ಅದೇ ಹಾದಿಯಲ್ಲೇ ಗಿಲ್ ಹೆಜ್ಜೆ ಹಾಕ್ತಿದ್ದಾರೆ. ಕ್ರಿಕೆಟ್​​ನಿಂದ ನಿಧಾನವಾಗಿ  ಕೊಹ್ಲಿ ದೂರಾಗ್ತಿರೊದ್ರಿಂದ ಉತ್ತರಾಧಿಕಾರಿಯ ಹುಡುಕಾಟ ಜಾಹೀರಾತು ಲೋಕದಲ್ಲೂ ನಡೆದಿತ್ತು. ಕಾರ್ಪೋರೇಟ್​​ ಜಗತ್ತಿಗೆ ಕೊಹ್ಲಿಗೆ ಪರ್ಯಾಯವಾಗಿ ಕಂಡಿರೋದು ಶುಭ್​ಮನ್​ ಗಿಲ್. ಗಿಲ್​ ಕಾಲ್​​ಶೀಟ್​​ಗಾಗಿ ಇದೀಗ ಖ್ಯಾತ ಬ್ರ್ಯಾಂಡ್​ಗಳೆಲ್ಲಾ ಕಾದು ನಿಂತಿವೆ. ಕಳೆದ ಕೆಲ ತಿಂಗಳ ಅವಧಿಯಲ್ಲಿ ಗಿಲ್​ ಹೊಸದಾಗಿ 10 ರಿಂದ 15 ಬ್ರ್ಯಾಂಡ್​ಗಳಿಗೆ ಸಹಿ ಹಾಕಿದ್ದಾರೆ. ಪ್ರಿನ್ಸ್​ ಡಿಮ್ಯಾಂಡ್​ ಎಷ್ಟು ಹೆಚ್ಚಿದೆ ಅನ್ನೋದಕ್ಕೆ ಇದೇ ಸಾಕ್ಷಿ.

ಆನ್​​ಫೀಲ್ಡ್​ ಆಟದ ಜೊತೆಗೆ ಆಫ್​ ದ ಫೀಲ್ಡ್​ನಲ್ಲಿ ಗಿಲ್​ ಬ್ರ್ಯಾಂಡ್​​ಗಳ ಹೃದಯ ಗೆಲ್ತಿದ್ದಾರೆ. ಕಾರ್ಪೊರೇಟ್ ಕಂಪನಿಗಳ ನಯಾ ಡಾರ್ಲಿಂಗ್ ಆಗಿರುವ ಶುಭ್​ಮನ್​, ಈಗ ನ್ಯೂ ಬ್ರ್ಯಾಂಡ್ ಮಷಿನ್ ಆಗುವತ್ತ ಹೆಜ್ಜೆ ಹಾಕಿದ್ದಾರೆ. ಶುಭ್​ಮನ್ ಗಿಲ್​​ಗಾಗಿ ಪ್ರಖ್ಯಾತ ಬ್ರ್ಯಾಂಡ್ ಕಂಪನಿಗಳೇ ಕ್ಯೂ ನಿಲ್ತಿವೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಹಿಂದೆ ತಿಂಗಳಿಗೆ ನಾಲ್ಕೈದು ಕಂಪನಿಗಳು ಕಾಯ್ತಾ ಇದ್ವು. ಈಗ ಅದು ಬರೋಬ್ಬರಿ 10ರಿಂದ 15ಕ್ಕೆ ಏರಿಕೆಯಾಗಿವೆ.

ಇದನ್ನೂ ಓದಿ: ‘ಪ್ಲೀಸ್​ ಪಪ್ಪಾ ನಮ್ಮನ್ನ ಕಾಪಾಡು..’ ಕಮಲಾಕರ್ ಭಟ್ ಕೇಸ್​ನಲ್ಲಿ ಮಕ್ಕಳ ಅಳಲು ಏನಾಗಿತ್ತು..?

Abhishek sharma and Shubman Gill

MRF, ನೈಕಿ, ಟಾಟಾ ಕ್ಯಾಪಿಟಲ್ಸ್,  ಕೋಕಾ-ಕೋಲಾ, ಬಜಾಜ್ ಅಲಿಯಾನ್ಸ್, ಆಪಲ್ ಒಡೆತನದ ಬೀಟ್ಸ್ ಎಲೆಕ್ಟ್ರಾನಿಕ್ಸ್ ಸೇರಿದಂತೆ ಪ್ರಖ್ಯಾತ ಬ್ರ್ಯಾಂಡ್​​ಗಳ ಪ್ರಚಾರಕನಾಗಿರುವ ಶುಭ್​ಮನ್, 2023ರ ಅಂತ್ಯದಲ್ಲಿ ಕೇವಲ 8 ಬ್ರ್ಯಾಂಡ್​​​​ಗಳ ರಾಯಭಾರಿಯಾಗಿದ್ದರು. 2024ರ ಅಂತ್ಯಕ್ಕೆ ಇದರ ಸಂಖ್ಯೆ 15ರ ಆಸುಪಾಸಲ್ಲಿತ್ತು. ಇದೀಗ 20ಕ್ಕೂ ಅಧಿಕ ಬ್ರ್ಯಾಂಡ್​ಗಳಿಗೆ ಗಿಲ್​ ರಾಯಭಾರಿಯಾಗಿದ್ದಾರೆ. 

ಬೇಡಿಕೆ ಹೆಚ್ಚಾದಂತೆ ಶುಭ್​ಮನ್​ ಗಿಲ್​ ಬ್ರ್ಯಾಂಡ್​​ವ್ಯಾಲ್ಯೂ ಕೂಡ ಏರಿಕೆ ಕಂಡಿದೆ. ಕಾರ್ಪೋರೇಟ್ ಜಗತ್ತಿನ ನಯಾ ಡಾರ್ಲಿಂಗ್ ಶುಭ್​​ಮನ್ ಗಿಲ್​​, ಈಗ ಫುಲ್ ಕಾಸ್ಟ್ಲಿಯಾಗಿದ್ದಾರೆ. ಈ ಹಿಂದೆ ಬ್ರ್ಯಾಂಡ್​ಗಳ ಒಪ್ಪಂದಗಳಿಗೆ ವರ್ಷಕ್ಕೆ ಸುಮಾರು 4 ಕೋಟಿ ಪಡೀತ್ತಿದ್ದ ಶುಭ್​ಮನ್ ಗಿಲ್​​​, ಈಗ 10 ಚಾರ್ಜ್ ಮಾಡ್ತಿದ್ದಾರಂತೆ. 

ಗಿಲ್ ಹಿಂದೆ ಬಿದ್ದಿದ್ಯಾಕೆ ಬ್ರ್ಯಾಂಡ್ಸ್?

ಕೊಹ್ಲಿ ದೂರ ಸರೀತಿದಾರೆ ಎಂದ ಬೆನ್ನಲ್ಲೇ ಬಿಸಿಸಿಐ ನೆಕ್ಸ್ಟ್​ ಸೂಪರ್​ ಸ್ಟಾರ್​​ನ ಹುಟ್ಟು ಹಾಕೋ ಪ್ರಯತ್ನಕ್ಕೆ ಕೈ ಹಾಕಿತ್ತು. ಕಿಂಗ್​ ಕೊಹ್ಲಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಯುವರಾಜ ಶುಭ್​ಮನ್​ ಗಿಲ್​ಗೆ ಟೆಸ್ಟ್​ ತಂಡದ ನಾಯಕನ ಪಟ್ಟಕಟ್ಟಿತ್ತು. ಬಳಿಕ ರೋಹಿತ್​ ಶರ್ಮಾನ ಕೆಳಗಿಳಿಸಿ ಏಕದಿನ ತಂಡದ ನಾಯಕತ್ವವನ್ನೂ ನೀಡಲಾಯ್ತು. ಸದ್ಯ ಟಿ20 ಫಾರ್ಮೆಟ್​ನಿಂದ ಹೊರಬಿದ್ದಿದ್ರೂ, ಮುಂದೊಮ್ಮೆ ಗಿಲ್​ ಆಲ್​​ ಫಾರ್ಮೆಟ್​ ಕ್ಯಾಪ್ಟನ್​ ಆಗೋ ಸಾಧ್ಯತೆ ದಟ್ಟವಾಗಿದೆ. ಹೀಗಾಗಿಯೇ ಜಾಹೀರಾತು ಲೋಕ ಗಿಲ್​ ಹಿಂದೆ ಬಿದ್ದಿದೆ. 

ಗಿಲ್​ ಮೇನಿಯಾ ದಿನೇ ದಿನೇ ಹೆಚ್ಚಾಗ್ತಿದೆ. ಕೊಹ್ಲಿ ಉತ್ತರಾಧಿಕಾರಿ ಎಂದು ಈ ಹಿಂದೆಯೇ ಬಿಂಬಿತವಾಗಿದ್ದ ಗಿಲ್​, ನಿಧಾನವಾಗಿ ಕಿಂಗ್​ ಪಟ್ಟವನ್ನ ಕಬ್ಜಾ ಮಾಡ್ತಿದ್ದಾರೆ. ಆನ್​ಫೀಲ್ಡ್​ನಲ್ಲಿ ಗಿಲ್​​ ಇನ್ನಷ್ಟು ಮಿಂಚಿದ್ರೆ ನೆಕ್ಸ್ಟ್​ ಸೂಪರ್​ ಸ್ಟಾರ್​ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ:ಸಂಸತ್‌ ಮುಂದೆ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ವರ್ಸಸ್ ರಾಹುಲ್ ಗಾಂಧಿ: ದೇಶದ್ರೋಹಿ ವರ್ಸಸ್ ದೇಶ ಕೆ ದುಷ್ಮನ್‌!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shubman Gill
Advertisment