‘ಪ್ಲೀಸ್​ ಪಪ್ಪಾ ನಮ್ಮನ್ನ ಕಾಪಾಡು..’ ಕಮಲಾಕರ್ ಭಟ್ ಕೇಸ್​ನಲ್ಲಿ ಮಕ್ಕಳ ಅಳಲು ಏನಾಗಿತ್ತು..?

ಆ ಮನೆಯೇ ರಕ್ತದಿಂದ ಸಾರಿಸಿದಂತಾಗಿತ್ತು. ಖಾವಿಧಾರಿಯ ಅಟ್ಟಹಾಸ.. ಗ್ಯಾಂಗ್​ನ ವೀರಾವೇಶ.. ಸುಚಿತ್ರಾಳ ಪತಿ ಮೇಲಿನ ದ್ವೇಷ.. ಮತ್ತೊಂದು ಹಂತಕ್ಕೆ ತಲುಪಿತ್ತು. ಇಬ್ಬರು ಮಕ್ಕಳಲ್ಲಿ ನಡುಕ, ಇಡೀ ಗ್ರಾಮವೇ ಬೆಚ್ಚಿಬಿದ್ದಿದ್ದ ಕ್ಷಣ ಅದು!

author-image
Ganesh Kerekuli
kamalakar guruji
Advertisment

ಆ ಮನೆಯೇ ರಕ್ತದಿಂದ ಸಾರಿಸಿದಂತಾಗಿತ್ತು. ಖಾವಿಧಾರಿಯ ಅಟ್ಟಹಾಸ.. ಗ್ಯಾಂಗ್​ನ ವೀರಾವೇಶ.. ಸುಚಿತ್ರಾಳ ಪತಿ ಮೇಲಿನ ದ್ವೇಷ.. ಮತ್ತೊಂದು ಹಂತಕ್ಕೆ ತಲುಪಿತ್ತು. ಇಬ್ಬರು ಮಕ್ಕಳಲ್ಲಿ ನಡುಕ, ಇಡೀ ಗ್ರಾಮವೇ ಬೆಚ್ಚಿಬಿದ್ದಿದ್ದ ಕ್ಷಣ ಅದು!

ಹೆತ್ತವಳು ದಾರಿ ತಪ್ಪಿದ್ಲು.. ಖಾವಿಧಾರಿ ನಿಗ್ರಹ ತಪ್ಪಿದ್ರು.. ಮಕ್ಕಳು ಗತಿ ಇಲ್ಲದಾಗಿದ್ರು. ಆ ಪತಿಗೆ ಪರಿಸ್ಥಿತಿ ಕೆಟ್ಟಿತ್ತು. ಇಷ್ಟೆಲ್ಲಾ ಇದ್ದಾಗ ಆ ತಂದೆಗೆ ಮಗಳಿಂದ ಒಂದು ಮೆಸೇಜ್​ ಬರುತ್ತೆ. ಆ ಮೆಸೆಜ್​ ನೋಡಿದ್ದ ಅಪ್ಪ.. ಒದ್ದಾಡಿ ಹಾಗೋ ಹೀಗೋ ಮಗಳನ್ನ ಮನೆಗೆ ಕರೆಸಿಕೊಂಡಿದ್ದ. ಅಲ್ಲಿಂದ ಶುರುವಾಗಿದ್ದೇ ಈ ಮರಣತಾಂಡವ.

ಇದನ್ನೂ ಓದಿ:ಗಂಡ- ಹೆಂಡತಿ ನಡುವೆ ಫೈಟ್: ಅಡ್ಡ ಬಂದ ವ್ಯಕ್ತಿಯ ಹತ್ಯೆ- ಜ್ಯೋತಿಷಿ ಕಮಲಾಕರ್ ಸೇರಿ 7 ಮಂದಿ ಬಂಧನ

kamalakar guruji (3)

ಸುಚಿತ್ರಾ ಗಂಡನನ್ನ ಬಿಟ್ಟು, ಮಕ್ಕಳೊಟ್ಟಿಗೆ ಗುರೂಜಿ ಮನೆ ಸೇರಿಬಿಟ್ಟಿದ್ಲು. ಬಟ್​ ಇಲ್ಲೇ ಊರಿನ ಜನ ಆಡಿಕೊಂಡಿದ್ದು ಗಂಡನ ಕಿವಿಗೆ ಬಿದ್ದಿದ್ದು ನಿಜಾ ಅಂತ ಅನಿಸಿಬಿಟ್ಟಿತ್ತು. ಈ ವಿಷ್ಯ ಮಕ್ಕಳಲ್ಲೂ ಬೇಸರ ತರಿಸಿತ್ತು. ಆಗ ಆ ಮಗಳು ತಂದೆಗೆ ಒಂದು ಮೆಸೆಜ್​ ಕಳಿಸಿದ್ಲು. ಅಲ್ಲಿಂದಲೇ ತಾನೊಂದು ತೀರ, ಆಕೆಯೊಂದು ತೀರವಾಗಿದ್ದ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು.

ತಂದೆ ಮನೆಯಲ್ಲಿ ಮಗಳಿದ್ಲು.. ತಾಯಿ ಕೆರಳಿ ಬಂದಿದ್ಲು

ಸುಚಿತ್ರಾಳನ್ನ ಕಮಲಾಕರ ಗುರೂಜಿ ಮನೆಯಲ್ಲೇ ಇಟ್ಕೊಂಡು ಗಂಡನಿಂದ ದೂರ ಮಾಡಿದ್ದಾರೆ ಅನ್ನೋ ಆರೋಪ ಹೊತ್ತಿದ್ದಾರೆ. ಬಟ್​ ಸುಚಿತ್ರಾಳೆ ಸ್ವಾಮೀಜಿಯನ್ನ ಬಯಸಿ ಬಂದಿದ್ಲು ಅನ್ನೋ ಕೂಗೂ ಇದೆ. ಇದೆಲ್ಲಾ ಸುಚಿತ್ರಾ ಮಕ್ಕಳಿಗೆ ಹಿಡಿಸಿಲ್ಲ. ಸುಚಿತ್ರಾಗೂ ಕಮಲಾಕರ ಗುರೂಜಿಗೂ ಅಕ್ರಮ ಸಂಬಂಧ ಇರೋ ವಿಷ್ಯ ಎಲ್ಲರಿಗೂ ಕನ್ಫರ್ಮ್​ ಆಗಿತ್ತಂತೆ. ಆಗ ಮಹೇಶ್​ ಸಹ ಸಹಾಯಕನಾಗಿ ಅಣ್ಣನ ಮನೆಯಲ್ಲೇ ಉಳಿದುಬಿಟ್ಟಿದ್ನಂತೆ. ಆ ಸಮಯದಲ್ಲೇ ತನ್ನ ಮಗಳು ಅಪ್ಪನಿಗೆ ಒಂದು ಮೆಸೇಜ್​ ಕಳಿಸಿರ್ತಾಳೆ.

ಇದನ್ನೂ ಓದಿ: ಕಮಲಾಕರ್ ಭಟ್ ಕೇಸ್​: ಬಿಕೆ ಹರಿಪ್ರಸಾದ್ vs ಸುರೇಶ್ ಕುಮಾರ್..!

kamalakar guruji (1)

ಕಮಲಾಕರ ಗುರೂಜಿಗೆ ಸುಚಿತ್ರಾ ಮಾತ್ರವೇ ಬೇಕಿತ್ತಂತೆ. ಬಟ್​ ಸುಚಿತ್ರಾ ತನ್ನಿಬ್ಬರು ಮಕ್ಕಳನ್ನೂ ಕರ್ಕೊಂಡು ಗುರೂಜಿ ಮನೆಯಲ್ಲಿದ್ಲು. ಬಟ್​ ಅಲ್ಲಿ ಗುರೂಜಿ ಆ ಮಕ್ಕಳಿಗೆ ಟಾರ್ಚರ್​ ಕೊಡ್ತಿದ್ರಂತೆ. ಮನೆ ಬಿಟ್ಟು ಹೋಗಿಲ್ಲ ಅಂದ್ರೆ ವಿಷ ಕೊಟ್ಟು ಕೊಲ್ತೀನಿ ಅಂತ ಬೆದರಿಕೆ ಹಾಕ್ತಿದ್ರಂತೆ. ಇದಕ್ಕೆ ತಾಯಿಯ ಕುಮ್ಮಕ್ಕು ಇತ್ತಂತೆ.

ಮಗಳು ಸುಮಶ್ರೀ ಅನ್ನೋರು ಅಲ್ಲಿ ವಿದ್ಯಾಭ್ಯಾಸ ಮಾಡುತ್ತ ಇರುತ್ತಾಳೆ. ಈಕೆಗೆ ತಾಯಿ ಸುಚಿತ್ರ ಹಾಗೂ ಕಮಲಾಕರ್ ಸ್ವಾಮೀಜಿ ತೊಂದರೆ ಕೊಡ್ತಾ ಇರ್ತಾರೆ. ನೀವು ನಿಮ್ಮ ತಂದೆಯ ಜೊತೆ ಹೋಗಿ. ಇಲ್ಲದಿದ್ದರೆ ನಿಮ್ಮನ್ನು ಮುಗಿಸಿ ಬಿಡ್ತೀನಿ ಎಂದು ಹೆದರಿಸಿದ್ದನಂತೆ ಗುರೂಜಿ. ಈ ವಿಚಾರವನ್ನು ಸುಮಶ್ರೀ ತನ್ನ ತಂದೆಗೆ ಹೇಳಿದ್ದಾಳೆ. ಅಲ್ಲಿಗೆ ಬಂದ ಮಹೇಶ್ ಬಾಬು ತನ್ನ ಮಕ್ಕಳನ್ನು ಕರೆದುಕೊಂಡು ಹೋಗಿದ್ದ. 

ದೀಪನ್​ ಎಂ.ಎನ್​, ಎಸ್​​ಪಿ

ಪತ್ನಿಯ ಹುಚ್ಚಾಟಕ್ಕೆ ಬೇಸತ್ತು.. ಅವ್ರಳಿಗಿದ್ದ ಅಕ್ರಮ ಸಂಬಂಧಕ್ಕೆ ನಾಚಿಕೆ ಪಟ್ಟು ಗಂಡ ಮಹೇಶ್​ ಮೌನವಾಗಿ ಇದ್ಬಿಡ್ತಾರೆ. ಬಟ್​ ಅಪ್ಪ ಇಲ್ಲಿ ಟಾರ್ಚರ್​ ಕೊಡ್ತಿದ್ದಾರೆ. ನಾನು ತಂಗಿ ಒಂದು ರೂಮ್​ನಲ್ಲಿ. ಮಮ್ಮಿ, ಸ್ವಾಮೀಜಿ ಇನ್ನೊಂದು ರೂಮ್​ನಲ್ಲಿ. ನನ್ನ ಸೇವ್​ ಮಾಡಪ್ಪ ಅಂತ ಮಗಳು ಕೇಳಿದ್ರೆ ಯಾವ ತಂದೆ ತಾನೆ ಸುಮ್ನಿರ್ತಾನೆ. ಮಗಳನ್ನ ಆ ತಂದೆ ಕಾಪಾಡಿದ್ದ. ಆದರೆ, ನಂತರ ಆಗಿದ್ದೇ ಬೇರೆ. 

ಮದುವೆ ಆಗಿ 15 ವರ್ಷ ಆಗಿತ್ತು. ಇಬ್ಬರು ಮಕ್ಕಳು. ನಾವು ಚೆನ್ನಾಗಿದ್ದೇವು. ನಾನು ಬೆಂಗಳೂರಿನಲ್ಲಿ ಹೋಟೆಲ್ ಕೆಲಸ ಮಾಡಿಕೊಂಡು ಇದ್ದೆ. ಎರಡು ತಿಂಗಳಿಗೊಮ್ಮೆ ಮನೆಗೆ ಹೋಗ ಬರುತ್ತಿದ್ದೆ. ಈ ಮಧ್ಯೆ ಅವಳು ಫೇಸ್​ಬುಕ್​ನಲ್ಲಿ ಚಾಟಿಂಗ್ ಮಾಡಿ, ಫ್ರೆಂಡು ಅಂತೆಲ್ಲ ತಿರುಗಾಡೋಕೆ ಶುರುಮಾಡಿದ್ದಳು. ಅದಕ್ಕೆ ನಾನು ಬುದ್ಧಿ ಹೇಳಿದ್ದೆ. ಹಾಗೆಲ್ಲ ಮಾಡಬೇಡ. ಇಬ್ಬರು ಮಕ್ಕಳಿದ್ದಾರೆ. ಅದಕ್ಕೆ ಅವಳು ಕೇಳಲಿಲ್ಲ. ಐದು ತಿಂಗಳ ಹಿಂದೆ ಮಕ್ಕಳ ಕರೆದುಕೊಂಡು ಮನೆಬಿಟ್ಟು ಹೋಗಿದ್ದಳು. ಆಗ ನಾನು ಸುಮ್ಮನಾಗಿಬಿಟ್ಟಿದ್ದೆ.  

ಮಹೇಶ್ ಜಟ್ಯಾ ನಾಯ್ಕ್, ಅಣ್ಣನನ್ನು ಕಳೆದುಕೊಂಡ ನತದೃಷ್ಟ


ಫೆಬ್ರವರಿ 1ಕ್ಕೆ ಮಹೇಶ್ ಮಗಳು ಸುಮಶ್ರೀ, ತಂದೆಗೆ ಮೊಬೈಲ್​ನಿಂದ ತಾಯಿ ಮತ್ತು ಸ್ವಾಮೀಜಿಯ ಕಿರುಕುಳದ ಬಗ್ಗೆ ಮೆಸೆಜ್​ ಕಳಿಸಿದ್ದನ್ನ ಕಂಡ ತಂದೆ ಮಹೇಶ್ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಹಾಯದಿಂದ ಮಗಳನ್ನ ರಕ್ಷಿಸಿ, ತನ್ನ ಅಣ್ಣ ವಸಂತ ನಾಯ್ಕ್ ಅವ್ರ ಮನೆಗೆ ಕರ್ಕೊಂಡು ಬಂದಿದ್ರು. ಆ ರಾತ್ರಿಯೇ ಸುಚಿತ್ರಾಳ ಗೂಂಡಾಗಿರಿಗೆ ದೊಡ್ಡ ವಿದ್ವಂಸವೇ ನಡೆದುಬಿಟ್ಟಿತ್ತು.

ಇದನ್ನೂ ಓದಿ:ನನ್ನ ಉಳಿಸಲು ಹೋಗಿ ಅಣ್ಣ ಬಲಿಯಾದ -ಕಮಲಾಕರ್ ಭಟ್ ಕೇಸ್​ನಲ್ಲಿ ಸಂತ್ರಸ್ತ ಕಣ್ಣೀರು..!

kamalakara bhat (1)

ತಂದೆ ಕರೆತಂದಿದ್ದ ಮಗಳನ್ನ ಕರ್ಕೊಂಡು ಹೋಗ್ಲೇಬೇಕು ಅಂತ ಮೊದಲೇ ಪ್ರೀಪ್ಲ್ಯಾನ್ಡ್​ ಆಗಿ ಬಂದಿದ್ದ ಸುಚಿತ್ರಾ. ಕಮಲಾಕರ ಸ್ವಾಮಿ ಜೊತೆಗೆ ಒಂದು ದೊಡ್ಡ ಗ್ಯಾಂಗನ್ನೇ ಕಟ್ಕೊಂಡು ಬಂದಿದ್ಲಂತೆ. ಆಗ ಅಲ್ಲಿನ ಹಿರಿಯರ ಮಾತು ಸಹ ಲೆಕ್ಕಿಸದೇ ಕ್ರೌರ್ಯ ಮೆರೆದಿದ್ರಂತೆ.
ಮೊದಲು ಇದು ಕೌಟುಂಬಿಕ ಕಲಹ.. ಆಮೇಲೆ ಅನೈತಿಕ ಮೋಹ.. ಆನಂತರ ದ್ವೇಷದ ರೂಪ. ಕೊನೆಗೆ ಕೊಲೆಯಲ್ಲಿ ಈ ಕತೆ ಅಂತ್ಯವಾಗಿದೆ. ಈ ದುರ್ಘಟನೆಯಲ್ಲಿ ಮಹೇಶ್ ಜಟ್ಯಾ ನಾಯ್ಕ್.. ಕುಮಾರ್ ನಾರಾಯಣ ನಾಯ್ಕ್ ಗಂಭೀರವಾಗಿ ಗಾಯಗೊಂಡಿದ್ರೆ. ಗಲಾಟೆ ತಡೆಯಲು ಹೋಗಿದ್ದ ಮಕ್ಕಳ ದೊಡ್ಡಪ್ಪ ವಸಂತ ನಾಯ್ಕ್ ಗೂಂಡಾಗಳು ಎದೆಗೆ ಇರಿದ್ದಿದಕ್ಕೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಉಸಿರಿನ ಲೆಕ್ಕ ಮುಗಿಸಿದ್ರು.

ಶಿವಮೊಗ್ಗದ ಕಮಲಾಕರ ಭಟ್ ಗುರೂಜಿ ಮೂಲತಃ ಸಿದ್ದಾಪುರದ ಹೆಮ್ಮನಬೈಲ್ ಗ್ರಾಮದವ್ರು. ಅಲ್ಲೇ ಹತ್ತಿರದಲ್ಲಿರೋ ಈ ಸುಚಿತ್ರಾಳನ್ನ ಬಲೆಗೆ ಬೀಳಿಸಿಕೊಂಡು.. ಗಂಡನಿಗೆ ದೂರ ಮಾಡಿದ್ದಲ್ಲದೇ.. ಮಕ್ಕಳ ಭವಿಷ್ಯದ ಜೊತೆ ಆಟವಾಡಿದ್ದಾರೆ. ಅಷ್ಟೇ ಅಲ್ಲದೇ ಒಂದು ಸಂಸಾರವನ್ನ ಹಾಳು ಮಾಡಿ.. ಒಂದು ಪ್ರಾಣ ಹೋಗೋಕೆ ಕಾರಣರಾಗಿದ್ದಾರೆ. ಅವ್ರಿಗೆ ಶಿಕ್ಷೆ ಆಗ್ಬೇಕು ಅನ್ನೋದು ಮಹೇಶ್​ ಕುಟುಂಬಸ್ಥರು.. ಗ್ರಾಮಸ್ಥರ ಆಕ್ರೋಶ. ಸದ್ಯ ಗಾಯಗೊಂಡಿರೋ ಇಬ್ಬರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸ್ಲಾಗ್ತಿದೆ. ಕೃತ್ಯವೆಸಗಿ ಪರಾರಿಯಾಗುತ್ತಿದ್ದ ಕಮಲಾಕರ ಗುರೂಜಿ ಸೇರಿ 7 ಜನರನ್ನ ಬಂಧಿಸಲಾಗಿದೆ. 

ಈ ಕೇಸ್​ನಲ್ಲಿ ಸುಚಿತ್ರಾಳೇ ಎ1 ಆಗಿದ್ರೆ, ಎ2 ಆಕೆಯ ತಂದೆ ಲೋಕನಾಥ ಚೌಡಪ್ಪ ನಾಯ್ಕ್ ಆಗಿದ್ದಾರೆ. ಎ3 ಅಪರಿಚಿತರು ಹಾಗೂ ಎ4 ಕಮಲಾಕರ ಭಟ್​​ ಸ್ವಾಮೀಜಿ ಆಗಿದ್ದು, ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್​ ಫೈಲ್​ ಆಗಿದೆ. 

ಇದನ್ನೂ ಓದಿ: ತಂದೆ ಮನೆಯಲ್ಲಿ ಮಗಳಿದ್ಲು, ತಾಯಿ ಕೆರಳಿ ಬಂದಿದ್ಲು! ಈ ಸುಚಿತ್ರ ಮತ್ತು ಗುರೂಜಿ ಯಾರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Siddapura astrologer Kamalakar bhat
Advertisment