Advertisment

ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದ್ದು ದಕ್ಷಿಣ ಆಫ್ರಿಕಾದ ಈ ಸ್ಟಾರ್​​..!

ಟೀಮ್ ಇಂಡಿಯಾಗೆ ಸೌತ್ ಆಫ್ರಿಕನ್ ಎಡಗೈ ವೇಗಿ ಮಾರ್ಕೊ ಯಾನ್ಸನ್ ವಿಲನ್ ಆಗಿ ಕಾಡಿದರು. ದಕ್ಷಿಣ ಆಫ್ರಿಕಾ ಗುವಾಹಟಿ ಟೆಸ್ಟ್​ ಅನ್ನೂ ಗೆಲ್ಲುವ ಮೂಲಕ ಸರಣಿ ಕ್ಲೀಸ್​ಸ್ವೀಪ್ ಮಾಡಿದೆ. ಭಾರತದ ಬ್ಯಾಟರ್​​ಗಳಿಗೆ ಮಾರ್ಕೋ ಯಾನ್ಸನ್ ಇನ್ನಿಲ್ಲದಂತೆ ಕಾಡಿದರು.

author-image
Ganesh Kerekuli
Yashaswi jaiswal
Advertisment
  • ಎಡಗೈ ವೇಗಿಗಳು vs ಟೀಮ್ ಇಂಡಿಯಾ ಬ್ಯಾಟರ್ಸ್
  • ಭಾರತದಲ್ಲಿ ಮಾರ್ಕೊ ಯಾನ್ಸನ್ ವಿಕೆಟ್ ಬೇಟೆ ಹೇಗಿದೆ?
  • 4 ಇನ್ನಿಂಗ್ಸ್ 3 ಬಾರಿ ಯಾನ್ಸನ್​ಗೆ ಜೈಸ್ವಾಲ್ ಔಟ್..!

ಟೀಮ್ ಇಂಡಿಯಾಗೆ ಸೌತ್ ಆಫ್ರಿಕನ್ ಎಡಗೈ ವೇಗಿ ಮಾರ್ಕೊ ಯಾನ್ಸನ್ ವಿಲನ್ ಆಗಿ ಕಾಡಿದರು. ದಕ್ಷಿಣ ಆಫ್ರಿಕಾ ಗುವಾಹಟಿ ಟೆಸ್ಟ್​ ಅನ್ನೂ ಗೆಲ್ಲುವ ಮೂಲಕ ಸರಣಿ ಕ್ಲೀಸ್​ಸ್ವೀಪ್ ಮಾಡಿದೆ. ಭಾರತದ ಬ್ಯಾಟರ್​​ಗಳಿಗೆ ಮಾರ್ಕೋ ಯಾನ್ಸನ್ ಇನ್ನಿಲ್ಲದಂತೆ ಕಾಡಿದರು. 

Advertisment

6.10 ಅಡಿ ಎತ್ತರ, ನೋಡೋಕೆ ತೆಳ್ಳಗೆ, ಬೆಳ್ಳೆಗೆ ಇರುವ ಈ ವೇಗಿ ನೀವು ಅಂದುಕೊಂಡಂತೆ ಸಾಮಾನ್ಯ ವೇಗಿಯಲ್ಲ. ಗಂಟೆಗೆ 140 ರಿಂದ 145 ಕಿಲೋ ಮೀಟರ್ ವೇಗ, ಕಂಡೀಷನ್ಸ್ ಹೆಲ್ಫ್​ ಮಾಡಿದ್ರೆ ಇನ್​ಸ್ವಿಂಗ್ ಮತ್ತು ಔಟ್ ಸ್ವಿಂಗ್ ಎರಡನ್ನೂ ಮಾಡಬಲ್ಲ ಈ ವೇಗಿ, ಸದ್ಯ ಟೀಮ್ ಇಂಡಿಯಾ ವಿರುದ್ಧ ಬೊಂಬಾಟ್ ಬೌಲಿಂಗ್ ಸ್ಪೆಲ್ ಹಾಕ್ತಿದ್ದಾರೆ. ಈ ವೇಗಿಯ ದಾಳಿಗೆ ಟೀಮ್ ಇಂಡಿಯಾ ಬ್ಯಾಟರ್ಸ್​​​ ಅಡ್ರೆಸ್ ಇಲ್ಲದಂತಾಗ್ತಿದ್ದಾರೆ.

4 ಇನ್ನಿಂಗ್ಸ್ 3 ಬಾರಿ ಯಾನ್ಸನ್​ಗೆ ಜೈಸ್ವಾಲ್ ಔಟ್

ಪೇಸ್, ಬೌನ್ಸ್ ಮತ್ತು ಶಾಟ್ ಪಿಚ್​ ಡಿಲಿವರಿಗಳನ್ನ ಅದ್ಭುತವಾಗಿ ಎಕ್ಸಿಕ್ಯೂಟ್ ಮಾಡುವ ಮಾರ್ಕೊ ಯಾನ್ಸನ್, ಸದ್ಯ ಗುವಾಹಟಿ ಟೆಸ್ಟ್ ಪಂದ್ಯದಲ್ಲಿ ಮಿಂಚಿನ ದಾಳಿ ನಡೆಸ್ತಿದ್ದಾರೆ. ಯಾನ್ಸನ್ ದಾಳಿಗೆ, ಟೀಮ್ ಇಂಡಿಯಾ ಬ್ಯಾಟರ್ಸ್​ ಬಳಿ ಉತ್ತರವೇ ಇಲ್ಲದಂತಾಗಿದೆ. ಅದ್ರಲ್ಲೂ ನ್ಯೂ ಬಾಲ್​ನಲ್ಲಿ ಸಾಕಷ್ಟು ಎಫೆಕ್ಟೀವ್ ಆಗಿರುವ ಯಾನ್ಸನ್, ಎಡಗೈ ಬ್ಯಾಟ್ಸ್​ಮನ್​​ ಯಶಸ್ವಿ ಜೈಸ್ವಾಲ್​​ಗೆ, ಕನಸಿನಲ್ಲೂ ಕಾಡ್ತಿದ್ದಾರೆ. 

ಇದನ್ನೂ ಓದಿ: ಆಸ್ಪತ್ರೆ ಸೇರಿದ ಮುಚ್ಚಲ್, ಫೋಟೋಸ್ ಡಿಲೀಟ್ ಮಾಡಿದ ಮಂದಾನ.. ಆಗಿದ್ದೇನು?

Advertisment

marco jansen

ಇಂಡಿಯನ್ ಕಂಡೀಷನ್ಸ್​​ ಅನ್ನ ಯಾನ್ಸನ್, ಅದ್ಭುತವಾಗಿ ಸದುಪಯೋಗ ಪಡಿಸಿಕೊಳ್ತಿದ್ದಾರೆ. ಸದ್ಯ ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಶಾಟ್ ಪಿಚ್ ಬಾಲ್​ ಮತ್ತು ಬೌಲಿಂಗ್ ವೇರಿಯೇಷನ್ಸ್​ನಿಂದ ಕನ್ಸಿಸ್ಟೆಂಟ್ ವಿಕೆಟ್ ಪಡೆಯುತ್ತಿರುವ ಯಾನ್ಸನ್, ಗುವಾಹಟಿಯಲ್ಲಿ ಭರ್ಜರಿ ಬೇಟೆಯಾಡ್ತಿದ್ದಾರೆ. ಯಾನ್ಸನ್​ರ RAW ಪೇಸ್ ಒಂದೆಡೆಯಾದ್ರೆ ಮತ್ತೊಂದೆಡೆ ಟ್ಯಾಕ್ಟಿಕಲ್ ಆಗಿಯೂ ಜಾಣ್ಮೆಯನ್ನ ಪ್ರದರ್ಶಿಸುತ್ತಿದ್ದಾರೆ. ತಂಡಕ್ಕೆ ಬೇಕಾದಾಗ ಬ್ರೇಕ್ ಥ್ರೂ ಸಹ ನೀಡ್ತಿದ್ದಾರೆ.  

ಪಸಕ್ತ ಟೆಸ್ಟ್ ಸರಣಿಯಲ್ಲಿ ಯಾನ್ಸನ್

ಕೊಲ್ಕತ್ತಾ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಪಡೆದಿದ್ದ ಯಾನ್ಸನ್, ಗುವಾಹಟಿಯಲ್ಲಿ 7 ವಿಕೆಟ್ ಪಡೆದು ಮುನ್ನುಗ್ಗುತ್ತಿದ್ದಾರೆ. ಸರಣಿಯಲ್ಲಿ ಒಟ್ಟು 46.5 ಓವರ್ ಬೌಲ್ ಮಾಡಿರುವ ಯಾನ್ಸನ್, 12 ವಿಕೆಟ್ ಪಡೆದಿದ್ದಾರೆ. 48 ರನ್​​​​​ ನೀಡಿ 6 ವಿಕೆಟ್ ಪಡೆದಿರೋದು, ಆಫ್ರಿಕನ್ ವೇಗಿಯ ಬೆಸ್ಟ್ ಬೌಲಿಂಗ್ ಸ್ಪೆಲ್. ಮಾರ್ಕೊ ಯಾನ್ಸನ್ ಅಷ್ಟೇ ಅಲ್ಲ. ದಶಕಗಳಿಂದ ವಿಶ್ವ ಕ್ರಿಕೆಟ್​ನ ಇತರೆ ಎಡಗೈ ವೇಗಿಗಳು, ಟೀಮ್ ಇಂಡಿಯಾವನ್ನ ರೆಡ್ ಬಾಲ್ ಕ್ರಿಕೆಟ್​​ನಲ್ಲಿ ಕಾಡುತ್ತಲೇ ಇದ್ದಾರೆ.

ಇದನ್ನೂ ಓದಿ: IND vs SA: ಪಂತ್ ಪಡೆಗೆ ಮತ್ತೊಂದು ಮುಖಭಂಗ.. 408 ರನ್​ಗಳ ಹೀನಾಯ ಸೋಲು..!

Advertisment

ಪಾಕಿಸ್ತಾನ ತಂಡದ ಮಾಜಿ ವೇಗಿ ವಾಸೀಂ ಅಕ್ರಂ, ಆಸ್ಟ್ರೇಲಿಯಾ ಮಿಚ್ಚೆಲ್ ಜಾನ್ಸನ್, ನ್ಯೂಜಿಲೆಂಡ್​ನ ಟ್ರೆಂಟ್ ಬೋಲ್ಟ್ ಹೀಗೆ, ವಿಶ್ವಕ್ರಿಕೆಟ್​​ನ ಶ್ರೇಷ್ಟ ಎಡಗೈ ವೇಗಿಗಳು, ಟೀಮ್ ಇಂಡಿಯಾಕ್ಕೆ ವಿಲನ್​ಗಳಾಗಿ ಕಾಡುತ್ತಲೇ ಇದ್ದಾರೆ. ಪೇಸ್, ಬೌನ್ಸ್, ಌಂಗಲ್, ಸ್ವಿಂಗ್, ಌಕ್ಯುರೆಸಿ, ಎಲ್ಲವನ್ನೂ ಟ್ಯಾಕಲ್ ಮಾಡಲು ಟೀಮ್ ಇಂಡಿಯಾ ಬ್ಯಾಟರ್ಸ್​, ಸಂಪೂರ್ಣ ವಿಫಲರಾಗಿದ್ದಾರೆ. 

ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ವಿರುದ್ಧ ವಾಸೀಂ ಅಕ್ರಂ 29 ವಿಕೆಟ್ ಪಡೆದಿದ್ದಾರೆ. ಮಿಚ್ಚೆಲ್ ಜಾನ್ಸನ್ 14 ವಿಕೆಟ್ ಪಡೆದಿದ್ರೆ ಮಾರ್ಕೊ ಯಾನ್ಸನ್ 12 ವಿಕೆಟ್ ಪಡೆದು, ಮೂರನೇ ಸ್ಥಾನದಲ್ಲಿದ್ದಾರೆ. ಟ್ರೆಂಟ್ ಬೋಲ್ಟ್ 10 ವಿಕೆಟ್ ಪಡೆದು, ಟೀಮ್ ಇಂಡಿಯಾ ಬ್ಯಾಟ್ಸ್​ಮನ್​​ಗಳಿಗೆ ಕಾಟ ಕೊಟ್ಟ ಲಿಸ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾ ಬ್ಯಾಟರ್ಸ್, ಎಡಗೈ ವೇಗಿಗಳಿಗೆ ಔಟ್ ಆಗ್ತಿರೋದು ಹೊಸದೇನಲ್ಲ. ಟೀಮ್ ಇಂಡಿಯಾ ಬ್ಯಾಟರ್ಸ್​ ವೀಕ್ನೆಸ್, ಪದೇ ಪದೇ ಎಕ್ಸ್​ಪೋಸ್ ಆಗುತ್ತಲೇ ಇದೆ. ಆದ್ರೆ ವೀಕ್ನೆಸ್ ಸರಿಪಡಿಸಿಕೊಳ್ಳೋದು ಯಾವಾಗ ಅನ್ನೋದೇ ದೊಡ್ಡ ಪ್ರಶ್ನೆ.

Advertisment

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Yashasvi Jaiswal Ind vs SA India vs South Africa marco jansen
Advertisment
Advertisment
Advertisment