/newsfirstlive-kannada/media/media_files/2025/11/22/smrit-mandana-1-2025-11-22-11-33-15.jpg)
ಟೀಮ್​ ಇಂಡಿಯಾ ಉಪನಾಯಕಿ, ಆರ್​​ಸಿಬಿ ನಾಯಕಿ ಸ್ಮೃತಿ ಮಂದಾನ ಮದುವೆ ಇಡೀ ದೇಶದ ಗಮನ ಸೆಳೆದಿತ್ತು. ಅರಿಶಿಣ ಶಾಸ್ತ್ರದಿಂದ ಹಿಡಿದು ಸಂಗೀತ್​ ಸೆರಮನಿಯವರೆಗೆ ಮಂದಾನ ವಿವಾಹ ಸಖತ್​ ಸೌಂಡ್​ ಮಾಡಿತ್ತು. ಮಹಾರಾಷ್ಟ್ರದ ಸಾಂಗ್ಲಿಯ ಸಂಬೋಲ್​​ನಲ್ಲಿ ಅಕ್ಷರಶಃ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ತಾಳಿ ಕಟ್ಟೋ ಮುಂಚೆ ವಿವಾಹಕ್ಕೆ ‘ವಿಘ್ನ’
ಸಾಂಗ್ಲಿಯ ಸ್ಮೃತಿ ಫಾರ್ಮ್​ಹೌಸ್​ನಲ್ಲಿ ನಡೀತಿದ್ದ ಸಂಭ್ರಮ ಸಡಗರ ಇಡೀ ದೇಶದ ಗಮನವನ್ನೇ ಸೆಳೆದಿತ್ತು. ಇನ್ನೇನು ಕೆಲವು ಗಂಟೆಗಳಲ್ಲಿ ಸ್ಮೃತಿ ಮಂದಾನ ಕೊರಳಿಗೆ ಪಲಾಶ್​ ಮುಚ್ಚಲ್​ ತಾಳ ಕಟ್ಟಬೇಕಿತ್ತು. ಅಷ್ಟರಲ್ಲೇ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ವಿವಾಹವೇ ಮುಂದೂಡಿಕೆಯಾಯ್ತು. ವಿವಾಹದ ದಿನ ಬೆಳಗ್ಗೆ ಸ್ಮೃತಿ ತಂದೆ ಶ್ರೀನಿವಾಸ್​ ಆರೋಗ್ಯದಲ್ಲಿ ಏರುಪೇರಾಯ್ತು. ಹೀಗಾಗಿ ವಿವಾಹವನ್ನೇ ಮುಂದೂಡಿಕೆ ಮಾಡಲಾಗಿದೆ ಎಂದು ಸ್ವತಃ ಸ್ಮೃತಿ ಮ್ಯಾನೇಜರ್​ ತಿಳಿಸಿದರು.
ಇದನ್ನೂ ಓದಿ:‘ಮದುವೆ ನಡೆಯುತ್ತದೆ..’ ಪಾಲಶ್ ಮುಚ್ಚಲ್ ತಾಯಿ ಹೇಳಿದ್ದೇನು?
/filters:format(webp)/newsfirstlive-kannada/media/media_files/2025/11/23/smriti-mandana-2025-11-23-08-50-17.jpg)
ಬೆಳಗ್ಗೆ ತಿಂಡಿ ವೇಳೆ ಇದಕ್ಕಿದ್ದಂತೆ ಸ್ಮೃತಿ ಮಂದಾನ ತಂದೆ ಶ್ರೀನಿವಾಸ್​ ಮಂದಾನ ಆರೋಗ್ಯದಲ್ಲಿ ಏರುಪೇರಾಯಿತು. ನಾವು ಸರಿ ಹೋಗಬಹುದು ಎಂದು ಕೆಲ ಕಾಲ ಕಾದೆವು. ಕಂಡೀಷನ್​ ಹೆಚ್ಚು ಹದಗೆಡತೊಡಗಿತು. ಹೀಗಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳದಿರಲು ನಿರ್ಧರಿಸಿದೆವು. ತಕ್ಷಣ ಅಂಬುಲೆನ್ಸ್​ ಕರೆಸಿ ಆಸ್ಪತ್ರೆಗೆ ಕೊಂಡೊಯ್ದೆವು. ಸದ್ಯ ಅವರು ವೈದ್ಯರ ನಿಗಾದಲ್ಲಿದ್ದಾರೆ. ನಿಮಗೆ ಗೊತ್ತಿರುವಂತೆ ಸ್ಮೃತಿ ಮಂದಾನ ತಂದೆಯ ಜೊತೆಗೆ ಹೆಚ್ಚು ಆಪ್ತರಾಗಿದ್ರು. ಹೀಗಾಗಿ ತಂದೆಯ ಆರೋಗ್ಯ ಸರಿ ಹೋಗುವವರೆಗೂ ಇಂದು ಆಗಬೇಕಿದ್ದ ವಿವಾಹವನ್ನ ಮುಂದೂಡಲು ಸ್ಮೃತಿ ನಿರ್ಧರಿಸಿದ್ದಾರೆ
-ತುಹಿನ್​ ಮಿಶ್ರಾ, ಸ್ಮೃತಿ ಮ್ಯಾನೇಜರ್
ವಿವಾಹ ಮುಂದೂಡಲು ಅನಾರೋಗ್ಯ ನೆಪ?
ತಂದೆಯ ಅನಾರೋಗ್ಯದ ಕಾರಣಕ್ಕೆ ಸ್ವತಃ ಸ್ಮೃತಿ ಮಂದಾನ ವಿವಾಹ ಮುಂದೂಡಿಕೆ ಮಾಡಿದ್ದಾರೆ ಎಂದು ಮ್ಯಾನೇಜರ್​ ತಿಳಿಸಿದ್ರು. ಕಳೆದ 2 ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಬೇರೆಯದ್ದೇ ಸುದ್ದಿ ಹರಿದಾಡ್ತಿದೆ. ಈ ಚರ್ಚೆ ಮದುವೆ ಮುಂದೂಡಿಕೆಯ ವಿಚಾರದಲ್ಲಿ ಹಲವು ಅನುಮಾನಗಳನ್ನ ಹುಟ್ಟು ಹಾಕಿದೆ. ವಿವಾಹ ಮುಂದೂಡಿಕೆಗೆ ತಂದೆಯ ಅನಾರೋಗ್ಯ ನೆಪ ಮಾತ್ರ. ಇದಕ್ಕೆ ಅಸಲಿ ಕಾರಣ ಪಲಾಶ್​ ಮುಚ್ಚಲ್​ ನಡತೆ ಅನ್ನೋ ಸುದ್ದಿ ಬಿರುಗಾಳಿಯಂತೆ ಹಬ್ಬಿದೆ.
ಇದನ್ನೂ ಓದಿ: ಸ್ಮೃತಿ ಮಂದಾನಗೆ ಮೋಸ ಮಾಡಿಬಿಟ್ರಾ ಪಾಲಶ್..? ಮದುವೆ ನಿಂತ ಹಿಂದಿನ ಅಸಲಿ ರಹಸ್ಯ..!
/filters:format(webp)/newsfirstlive-kannada/media/media_files/2025/11/22/smrit-mandana-4-2025-11-22-11-36-13.jpg)
ಸೋಷಿಯಲ್​ ಮೀಡಿಯಾದಲ್ಲಿ ಪಲಾಶ್​ ಮುಚ್ಚಲ್​ ಸ್ಮೃತಿ ಮಂದಾನಗೆ ಮೋಸ ಮಾಡಿದ್ದಾರೆ ಅನ್ನೋ ಸುದ್ದಿ ಬಿರುಗಾಳಿಯಂತೆ ಹಬ್ಬಿದೆ. ಕೊರಿಯೊಗ್ರಫರ್​​ ಒಬ್ಬರ ಜೊತೆಗೆ ಪಲಾಶ್​ ಮುಚ್ಚಲ್​ ರಿಲೇಶನ್​ಶಿಪ್​ನಲ್ಲಿದ್ರು. ಪ್ರೀ ವೆಡ್ಡಿಂಗ್​ ಇವೆಂಟ್​ಗಳಲ್ಲೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ರು ಅನ್ನೋ ಸುದ್ದಿ ಸಿಕ್ಕಾಪಟ್ಟೆ ಜೋರಾಗಿ ಸದ್ದು ಮಾಡ್ತಿದೆ. ಇದೇ ವೇಳೆ ಪಲಾಶ್​ ಮುಚ್ಚಲ್​ ಹುಡುಗಿ ಒಬ್ಬಳೊಂದಿಗೆ ಫ್ಲರ್ಟ್​ ಮಾಡಿದ್ದಾರೆ ಎನ್ನಲಾದ ಚಾಟಿಂಗ್​ನ ಸ್ಕ್ರೀನ್​ ಶಾಟ್​​ ಕೂಡ ವೈರಲ್​ ಆಗಿದೆ. ಇದನ್ನ ಆಧಾರವಾಗಿ ಇಟ್ಟುಕೊಂಡೆ ಮಂದಾನಾಗೆ ಪಲಾಶ್​ ಮೋಸ ಮಾಡಿದ್ದಾರೆ. ಹೀಗಾಗಿ ಸ್ಮೃತಿ ವಿವಾಹ ಮುರಿದುಕೊಂಡಿದ್ದಾರೆ ಎಂಬ ಹಬ್ಬಿದೆ. ಮದುವೆ ಮುಂದೂಡಿಕೆಯಾದ ನಂತರ ನಡೆದ ಘಟನೆಗಳು ಕೂಡ ಈ ಹಬ್ಬಿರುವ ಈ ಸುದ್ದಿಗೆ ಪುಷ್ಟಿ ನೀಡುವಂತೆ ಇವೆ.
ಪ್ರೀ ವೆಡ್ಡಿಂಗ್​ ಫೋಟೋಸ್​ ಡಿಲೀಟ್​ ಮಾಡಿದ ಸ್ಮೃತಿ
ಒಂದು ಕಡೆ ಪಲಾಶ್​ ಮುಚ್ಚಲ್​ ಸ್ಮೃತಿಗೆ ಮೋಸ ಮಾಡಿದ್ದಾರೆ ಎಂಬ ಗಾಸಿಪ್​ ಹಬ್ಬಿರುವಾಗಲೇ ಸ್ಮೃತಿ ಮಂದಾನ ವಿವಾಹಕ್ಕೆ ಸಂಭದಿಸಿದ ಫೋಟೋಸ್​, ವಿಡಿಯೋಗಳನ್ನ ಡಿಲೀಟ್​ ಮಾಡಿದ್ದಾರೆ. ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ಮಂದಾನಗೆ ಮುಚ್ಚಲ್​ ಮಂಡಿಯೂರಿ ಪ್ರಪೋಸ್​ ಮಾಡಿದ್ದ ವಿಡಿಯೋ ಸೇರಿ ವಿವಾಹಕ್ಕೆ ಸಂಭಂದಿಸಿದ ಎಲ್ಲಾ ಪೋಸ್ಟ್​ಗಳನ್ನ ಡಿಲೀಟ್​ ಮಾಡಿದ್ದಾರೆ. ಸ್ಮೃತಿ ಮಾತ್ರವಲ್ಲ.. ಮಂದಾನ ವಿವಾಹದಲ್ಲಿ ಭಾಗಿಯಾಗಿದ್ರಲ್ವಾ.? ಭಾರತೀಯ ಮಹಿಳಾ ಕ್ರಿಕೆಟರ್ಸ್​ ಅವರೂ ಕೂಡ ಪ್ರಿ ವೆಡ್ಡಿಂಗ್​ ಇವೆಂಟ್ಸ್​ನ ಫೋಟೋಸ್​, ವಿಡಿಯೋಸ್​ನ ಡಿಲೀಟ್​ ಮಾಡಿದ್ದಾರೆ. ಇದಕ್ಕಿದ್ದಂತೆ ಪೋಸ್ಟ್​ಗಳನ್ನ ಡಿಲೀಟ್​ ಮಾಡಿರೋದು ಹಬ್ಬಿರೋ ಗಾಸಿಪ್​ಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.
ಇದನ್ನೂ ಓದಿ: ಮುಂದಿನ ವರ್ಷದಿಂದಲೇ ಪೂರ್ಣ ಪ್ರಮಾಣದಲ್ಲಿ SEP ಜಾರಿ..!? ಮಹತ್ವದ ಕ್ರಮ
ಮದುವೆ ಮುಂದೂಡಿಕೆಯಾದ ಕೆಲ ಗಂಟೆಗಳ ಬಳಿಕ ಸಾಂಗ್ಲಿಯಿಂದ ಮುಂಬೈಗೆ ಪಲಾಶ್​ ಮುಚ್ಚಲ್​ ಕುಟುಂಬ ವಾಪಾಸ್ಸಾಗಿತ್ತು. ಇದಾದ ಕೆಲ ಹೊತ್ತಲ್ಲೇ ಪಲಾಶ್​ ಮುಚ್ಚಲ್​ ಅನಾರೋಗ್ಯದ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ರು. ಈ ವೇಳೆ ಮಾತನಾಡಿದ್ದ ಪಲಾಶ್​ ತಾಯಿ ಮಗ ಮನೆಗೆ ಬಂದ ಬಳಿಕ 4 ಗಂಟೆಗೂ ಅಧಿಕ ಕಾಲ ಅತ್ತಿದ್ದ. ಸ್ಟ್ರೆಸ್​​ ಹಾಗೂ ಬಳಲಿಕೆಯಿಂದಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದಾನೆ ಎಂದು ಹೇಳಿದ್ರು. ಪಲಾಶ್​ ಆಸ್ಪತ್ರೆ ಸೇರಿದ್ದು ಕೂಡ ನಾಟಕ ಎಂದು ಸೋಷಿಯಲ್​ ಮೀಡಿಯಾದಲ್ಲಿ ಕೆಲವರು ಹೇಳಿಕೊಳ್ತಿದ್ದಾರೆ.
ಅದೇನೆ ಇದ್ರೂ ಪಲಾಶ್​ ಮುಚ್ಚಲ್​ ಸ್ಮೃತಿಗೆ ಮೋಸ ಮಾಡಿದ್ದಾರೆ ಯಾವುದೇ ಸರಿಯಾದ ಸಾಕ್ಷ್ಯ ಯಾರ ಬಳಿಯೂ ಇಲ್ಲ. ಸ್ಮೃತಿಯಾಗಲಿ, ಪಲಾಶ್​ ಆಗಲಿ ಅಥವಾ ಅವರ ಕುಟುಂಬಸ್ಥರೇ ಆಗಲಿ ಯಾರೂ ಈ ವಿಚಾರವನ್ನೇ ಎತ್ತಿಲ್ಲ. ಸ್ಮೃತಿ ಮಂದಾನ ವಿವಾಹ ಮುಂದೂಡಿಕೆಯೇ ಹೊರ ಪ್ರಪಂಚಕ್ಕೆ ಒಂದು ರೀತಿ ಅಚ್ಚರಿಯ ಹಾಗೂ ನಿಗೂಢವಾದ ಬೆಳವಣಿಗೆ. ಹೀಗಾಗಿ ಹಲವು ಅಂತೆ-ಕಂತೆಗಳು ಹುಟ್ಟಿಕೊಂಡಿವೆ. ಆದ್ರೆ, ವಿವಾಹ ಮುಂದೂಡಿಕೆಯಾದ ಬಳಿಕ ಸ್ಮೃತಿ ಸಂಪೂರ್ಣ ಮೌನಕ್ಕೆ ಜಾರಿದ್ದಾರೆ. ಸ್ಮೃತಿ ಮೌನ ಮುರಿದಾಗ ಮಾತ್ರ ನಿಜಕ್ಕೂ ಏನಾಗಿದೆ ಅನ್ನೋದು ತಿಳಿಯಲಿದೆ.
ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us