/newsfirstlive-kannada/media/media_files/2025/10/19/smriti_mandhana_1-2025-10-19-11-26-30.jpg)
ಸ್ಮೃತಿ ಮಂದಾನ.. ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್​​ ಬ್ಯಾಟರ್​​.. ಬ್ಯೂಟಿ ಕ್ವೀನ್​​.. ಅಷ್ಟೇ ಅಲ್ಲ ಲಾಯಲ್​​ ಆರ್​​ಸಿಬಿ ವುಮೆನ್ಸ್​​ ತಂಡದ ಕ್ಯಾಪ್ಟನ್​​.. ಎಲ್ಲವೂ ಸರಿಯಾಗಿ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಸ್ಮೃತಿ ಮಂದಾನ.. ತಮ್ಮ ಬಹುವರ್ಷಗಳ ಪ್ರಿಯಕರನ ಕೈ ಹಿಡಿದು.. ಜೀವನದ ಹೊಸ ಇನ್ನಿಂಗ್ಸ್​​ ಅನ್ನು ಆರಂಭಿಸಬೇಕಿತ್ತು.. ಆದ್ರೆ ಹಸೆಮಣೆ ಏರಬೇಕಿದ್ದ ದಿನ ಸ್ಮೃತಿ ತಂದೆ ಹೃದಾಯಾಘಾತದಿಂದ ಆಸ್ಪತ್ರೆ ಸೇರಿದ ಕಾರಣ, ಮದುವೆ ಮುಂದೂಡಿಕೆ ಆಗಿತ್ತು.. ಆದ್ರೆ ಮದುವೆ ಏಕಾಏಕಿ ಮುಂದೂಡಿಕೆ ಆಗಿದ್ದಕ್ಕೆ ಬೇರೆಯದ್ದೇ ಕಾರಣ ಹರಿದಾಡತೊಡಗಿದೆ.
ಇದನ್ನೂ ಓದಿ: ವಿಶ್ವಕಪ್ ದಂಡಯಾತ್ರೆಗೆ ಬ್ಲೂ ಪ್ರಿಂಟ್ ರೆಡಿ.. SKY ಪಡೆ ಮುಂದೆ ಬಿಗ್​ ಟಾಸ್ಕ್​..!
/filters:format(webp)/newsfirstlive-kannada/media/media_files/2025/11/23/smriti-mandana-2025-11-23-08-50-17.jpg)
ಸ್ಮೃತಿ ಮಂದಾನ ಹಳದಿ ಶಾಸ್ತ್ರ.. ಸಂಗೀತ ಕಾರ್ಯಕ್ರಮದಲ್ಲಿ ಭಾವಿ ಪತಿ ಮುಚ್ಚಲ್​​ ಜೊತೆ ಬಿಂದಾಸ್​ ಆಗಿ ಪೋಸ್​​ ಕೊಟ್ಟಿದ್ರು. ನಾಚಿಕೆ ಸ್ವಭಾವದ ಸ್ಮೃತಿ.. ಸಂಗೀತಾ ಕಾರ್ಯಕ್ರಮದಲ್ಲಂತೂ.. ಸಂಕೋಚ ಎಲ್ಲವನ್ನು ಬದಿಗಿಟ್ಟು, ವೇದಿಕೆ ಮೇಲೆ ಮುಚ್ಚಿಲ್​​ ಜೊತೆ ಕುಣಿದು ಕುಪ್ಪಳಿಸಿದ್ರು. ನವೆಂಬರ್​ 23 ಭಾನುವಾರಂದು ಹಸೆಮಣೆ ಏರಲು ಸಜ್ಜಾಗಿದ್ದ ಸ್ಮೃತಿಗೆ ಶಾಕ್​ ಆಗಿತ್ತು. ಮದುವೆ ದಿನವೇ ಸ್ಮೃತಿ ಮಂದಾನ ತಂದೆಗೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ ಕಾರಣ, ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಕುಟುಂಬಗಳು ಹೇಳಿಕೊಂಡಿದ್ವು.
ಆದ್ರೆ ಮಂಗಳವಾರ ಸ್ಮೃತಿ ಮಂದಾನ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಮುಚ್ಚಲ್​ ಜೊತೆಗಿನ ಎಂಗೇಜ್​​​ಮೆಂಟ್​ ಸೇರಿದಂತೆ ಮದುವೆ ಶಾಸ್ತ್ರದ ವಿಡಿಯೋ ಫೋಟೋಗಳನ್ನು ಡಿಲೀಟ್​ ಮಾಡಿದ್ದು. ಸಮ್​ಥಿಂಗ್​​ ಫಿಶಿಂಗ್​​ ಅನ್ಸಿತ್ತು. ಆದ್ರೀಗ ಸ್ಮೃತಿ ಮಂದಾನರ ಭಾವಿ ಪತಿಯ ಅಕ್ರಮ ಸಂಬಂಧವೇ ಮದುವೆ ಪೋಸ್ಟ್​ಪೋನ್​​ಗೆ ಕಾರಣ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಇದನ್ನೂ ಓದಿ: ರಾಹುಲ್ ಗಾಂಧಿಯಿಂದ ಸಂದೇಶ ಹೊತ್ತು ತಂದ ಪ್ರಿಯಾಂಕ್ ಖರ್ಗೆ.. ‘ಹೈ’ ಹೊಸ ಸೂತ್ರ..?
/filters:format(webp)/newsfirstlive-kannada/media/media_files/2025/11/22/smrit-mandana-4-2025-11-22-11-36-13.jpg)
ಪಲಾಶ್‌ಗೆ ಬೇರೆ ಸಂಬಂಧವಿದೆ ಎಂದು ಹೇಳಲಾಗುವ ಯುವತಿಯೊಂದಿಗಿನ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಭಾರೀ ಸದ್ದು ಮಾಡ್ತಿದೆ. ಇದರಲ್ಲಿ ಯುವತಿಯನ್ನು ಮ್ಯಾರಿಯಟ್ ಹೋಟೆಲ್‌ನ ಪೂಲ್‌ನಲ್ಲಿ ಒಟ್ಟಿಗೆ ಈಜಲು ಆಹ್ವಾನಿಸುವುದು. ಸ್ಮೃತಿ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆಗಳು ಮತ್ತು ಪಲಾಶ್ ಅವರ ಉತ್ತರಗಳು ವಾಟ್ಸಾಪ್ ಚಾಟ್‌ನಲ್ಲಿವೆ. ಆದರೆ, ಇದು ನಿಜವಾಗಿಯೂ ಪಲಾಶ್ ಜೊತೆಗಿನ ಸಂಭಾಷಣೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಎರಡೂ ಕುಟುಂಬಗಳು ಯಾವುದೇ ಸ್ಪಷ್ಟನೆ ನೀಡಿಲಿಲ್ಲ.
ಶೀಘ್ರವೇ ಮದುವೆ ನಡೆಯಲಿದೆ ಎಂದ ಮುಚ್ಚಲ್​ ತಾಯಿ
ಸ್ಮೃತಿ ಮತ್ತು ಮುಚ್ಚಲ್​ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇದೀಗ ಮುಂದೂಡಲ್ಪಟ್ಟ ಮದುವೆ ಯಾವಾಗ ನಡೆಯಲಿದೆ ಎಂಬುದರ ಕುರಿತು ಪಲಾಶ್ ಮುಚ್ಚಲ್ ಅವರ ತಾಯಿ ಅಮಿತಾ ಬಹುದೊಡ್ಡ ಅಪ್ಡೇಟ್ ನೀಡಿದ್ದಾರೆ. ಜೊತೆಗೆ ಮುಚ್ಚಲ್​ನನ್ನು ಆಸ್ಪತ್ರೆಗೆ ದಾಖಲಿಸಿದ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಗುವಾಹಟಿಯಲ್ಲಿ ಪಂತ್​ ಪಡೆ ಪರದಾಟ.. ಗೆಲುವಿನತ್ತ ಸೌತ್​ ಆಫ್ರಿಕಾ..!
/filters:format(webp)/newsfirstlive-kannada/media/media_files/2025/11/22/smrit-mandana-2025-11-22-11-35-21.jpg)
ಪಾಲಾಶ್ ಸ್ಮೃತಿಯ ತಂದೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾನೆ. ಸ್ಮೃತಿ ಮಂದಾನಗಿಂತಲೂ ಪಲಾಶ್​​ ಹೆಚ್ಚು ಹತ್ತಿರವಾಗಿದ್ದಾನೆ. ಹೀಗಾಗಿ ಸ್ಮೃತಿಯ ತಂದೆ ಅನಾರೋಗ್ಯಕ್ಕೆ ಒಳಗಾಗಿದ್ದಕ್ಕೆ ಮದುವೆ ಮುಂದೂಡಲು ನಿರ್ಧಾರ ಮಾಡಲಾಯ್ತು. ಇನ್ನು ಅರಶಿಣ ಕಾರ್ಯಕ್ರಮದ ಬಳಿಕ ಪಲಾಶ್​ನನ್ನು ಹೊರಗೆ ಹೋಗಲು ಬಿಟ್ಟಿರಲಿಲ್ಲ. ಅವನು ತುಂಬಾ ಅಳುತ್ತಿದ್ದ, ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಹೀಗಾಗಿ ಪಲಾಶ್ ಮುಚ್ಚಲ್​ನನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು. ಸದ್ಯ ಪಲಾಶ್​​ ಚೇತರಿಸಿಕೊಂಡಿದ್ದು, ವಿಶ್ರಾಂತಿ ಪಡೆಯುತ್ತಿದ್ದಾನೆ.. ಎಲ್ಲವೂ ಸರಿಯಾಗಿ ಶೀಘ್ರದಲ್ಲೇ ನಡೆಯಲಿದೆ ಎಂದು ಪಲಾಶ್​ ಮುಚ್ಚಲ್​ ತಾಯಿ ಮಾಹಿತಿ ನೀಡಿದ್ದಾರೆ.
ಅದೇನೆ ಇರಲಿ... ಮುಚ್ಚಲ್​ಗೆ ಸಂಬಂಧಿಸಿದವು ಎನ್ನಲಾದ ಚಾಟಿಂಗ್​ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ.. ಮತ್ತೊಂದೆಡೆ ಸ್ಮೃತಿ ಮಂಧಾನ.. ಎಂಗೇಜ್​ಮೆಂಟ್​​ ಸೇರಿದಂತೆ ಮದುವೆ ಶಾಸ್ತ್ರ ವಿಡಿಯೋಗಳನ್ನು ಡಿಲೀಟ್​ ಮಾಡಿರೋದು ಕೂಡ ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇದನ್ನೂ ಓದಿ: ಮುರುಘಾ ಶ್ರೀ ವಿರುದ್ಧದ ಪೋಕ್ಸೋ ಕೇಸ್​.. ಇವತ್ತು ತೀರ್ಪು ಪ್ರಕಟ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us