/newsfirstlive-kannada/media/media_files/2025/11/26/priyank-kharge-1-2025-11-26-08-21-41.jpg)
ರಾಜ್ಯ ಕಾಂಗ್ರೆಸ್​​ಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಫೈಟ್ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕರ್ನಾಟಕದ ಕುರ್ಚಿ ಕಿತ್ತಾಟ ಕಾಂಗ್ರೆಸ್​​ ಹೈಕಮಾಂಡ್​​ಗೆ ಬಿಸಿ ತುಪ್ಪವಾಗಿ ಪರಿಣಮಿಸಿ.. ನುಂಗೋಕು ಆಗದೇ ಉಗುಳೋಕು ಆಗದೇ ತ್ರಿಶಂಕು ಸ್ಥಿತಿಗೆ ಸಿಲುಕಿದೆ. ಸಿಎಂ ಸಿದ್ದರಾಮಯ್ಯ ಬಣದ ತಂತ್ರ ಒಂದು ಕಡೆಯಾದರೆ ಡಿಸಿಎಂ ಡಿಕೆ ಶಿವಕುಮಾರ್ ಬಣವೂ ಪ್ರತಿತಂತ್ರ ರೂಪಿಸುತ್ತಿದೆ. ಇದರಿಂದ ಚಿಂತೆಗೀಡಾದ ಹೈಕಮಾಂಡ್​​ ಸಂಧಾನಕ್ಕೆ ಕೈ ಹಾಕಿದಂತೆ ಕಾಣ್ತಿದೆ.
ಸಿಎಂ-ಡಿಸಿಎಂ ಕುರ್ಚಿ ಕದನದಲ್ಲಿ ‘ಹೈ’ ಸಂಧಾನ ಸೂತ್ರ
ಸಿಎಂ ಕುರ್ಚಿ ಕದನ ಕ್ಲ್ಯಮ್ಯಾಕ್ಸ್ ಹಂತಕ್ಕೆ ಬಂದಿದ್ದು ಬಣ ಕಿತ್ತಾಟ ಉಲ್ಬಣ ತೀವ್ರಗೊಳ್ಳುತ್ತಿದ್ದಂತೆಯೇ ಪ್ರಿಯಾಂಕ್ ಖರ್ಗೆ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ರು. ಈ ವೇಳೆ ಕರ್ನಾಟಕ ಕಾಂಗ್ರೆಸ್​​ನಲ್ಲಿ ನಡೆಯತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗೂ ರಾಹುಲ್​ರಿಂದ ಸಂದೇಶ ಹೊತ್ತು ದೆಹಲಿಯಿಂದ ಬಂದ ಪ್ರಿಯಾಂಕ್​ ಖರ್ಗೆ ನೇರವಾಗಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ್ರು.. ಇದಾದ ಬಳಿಕ ಡಿಸಿಎಂ ಡಿಕೆಶಿಯನ್ನು ಭೇಟಿಯಾಗಿ ಅರ್ಧ ಗಂಟೆ ಚರ್ಚಿಸಿದ ಪ್ರಿಯಾಂಕ್​ ಖರ್ಗೆ ಇಬ್ಬರಿಗೂ ರಾಹುಲ್​ ಗಾಂಧಿಯ ಸಂದೇಶವನ್ನು ರವಾನೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಎಣ್ಣೆ ಮಾರಾಟ ಕುಸಿತ! ಆದಾಯ ಕುಸಿತದಿಂದ ಕಂಗಾಲಾದ ರಾಜ್ಯ ಸರ್ಕಾರ!!
/filters:format(webp)/newsfirstlive-kannada/media/media_files/2025/11/26/priyank-kharge-2025-11-26-08-24-20.jpg)
ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಿವಾಸಗಳು ರಾಜ್ಯ ಕಾಂಗ್ರೆಸ್‌ನ ಪವರ್ ಸೆಂಟರ್‌ಗಳಾಗಿವೆ. ಹಿರಿ, ಕಿರಿಯ ನಾಯಕರು ಸಿಎಂ, ಡಿಸಿಎಂ ನಿವಾಸಕ್ಕೆ ಬಂದು, ಚರ್ಚೆ ನಡೆಸುತ್ತಿದ್ದಾರೆ. ಶಕ್ತಿಸೌಧದಲ್ಲೂ ಕೆಲ ಹಿರಿಯ ಸಚಿವರು ಸಿಎಂ ರನ್ನು ಭೇಟಿಯಾಗಿ ಚರ್ಚೆ ನಡೆಸಿದ್ರು. ಇತ್ತ ಡಿಸಿಎಂ ನಿವಾಸದಲ್ಲಿ ಸಚಿವರು ಎಡತಾಕಿದ್ರು. ಡಿಕೆಶಿ ದೆಹಲಿಗೆ ಹೋಗ್ತಿರೋ ಕಾರಣ, ಹೈಕಮಾಂಡ್​ ಮುಂದೆ ಒಮ್ಮತ ಅಭಿಪ್ರಾಯ ವ್ಯಕ್ತಪಡಿಸಲು ಚರ್ಚೆ ನಡೆಸಿದ್ದಾರೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಆಪ್ತ ಬಣದ ಸಚಿವ ಜಮೀರ್ ಅಹ್ಮದ್ ಖಾನ್, ಡಿಸಿಎಂ ಡಿಕೆಶಿ ನಿವಾಸಕ್ಕೆ ಭೇಟಿ ನೀಡಿ, ಒನ್​ ಟು ಒನ್​ ಮಾತುಕತೆ ನಡೆಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಸಿದ್ದರಾಮಯ್ಯ ಅಭಿಪ್ರಾಯವನ್ನು ಜಮೀರ್​ ಡಿಕೆಶಿಗೆ ಮುಟ್ಟಿಸಿದ್ರಾ ಎಂಬ ಪ್ರಶ್ನೆ ಮೂಡಿದೆ.
ದೆಹಲಿಯಿಂದ ವಾಪಸ್​ ಆದ ಡಿಕೆಶಿ ಬಣದ 2ನೇ ಟೀಂ
ತಮ್ಮ ನಾಯಕನನ್ನು ಸಿಎಂ ಮಾಡಬೇಕೆಂದು ಡಿ.ಕೆ.ಶಿವಕುಕುಮಾರ್ ಬಣದ ಶಾಸಕರ 2ನೇ ಟೀಮ್​​ ದೆಹಲಿ ಪರೇಡ್ ನಡೆಸಿ ಬೆಂಗಳೂರಿಗೆ ವಾಪಸ್​ ಆಗಿದೆ. ಶಾಸಕ ಬಾಲಕೃಷ್ಣ, ಉದಯ್, ಇಕ್ಬಾಲ್ ಹುಸೇನ್ ಕೆಂಪೇಗೌಡ ಏರ್ಪೋಟ್​ ಹೊರಗೆ ತಮ್ಮ ನಾಯಕನ ಪರ ಬ್ಯಾಟ್​​ ಬೀಸಿ.. ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್​ ನಿವಾಸದತ್ತ ತೆರಳಿದ್ರು.
ಇದನ್ನೂ ಓದಿ: ನನ್ನ ಸರದಿ ಯಾವಾಗ? ನನ್ನ ಟೈಮ್ ಯಾವಾಗ ಬರುತ್ತೆ? ಹೈಕಮ್ಯಾಂಡ್ ಮುಂದೆ ಡಿಕೆಶಿ ಪ್ರಶ್ನೆಗಳು
/filters:format(webp)/newsfirstlive-kannada/media/media_files/2025/11/25/dcm-dks-prayer-at-kenkeramma-2025-11-25-17-59-52.jpg)
ಇಂದು ರಾಜ್ಯಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಪಸ್​​
ಮೂರು ದಿನಗಳ ಕಾಲ ಬೆಂಗಳೂರಿನ ಬೀಡು ಬಿಟ್ಟು.. ಕುರ್ಚಿ ಕದನ ಸಂಬಂಧ.. ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರ ಜೊತೆ ಮಾತನಾಡಿ, ಮಾಹಿತಿ ಸಂಗ್ರಹಿಸಿದ್ದ ಖರ್ಗೆ.. ನಿನ್ನೆ ದೆಹಲಿಗೆ ತೆರಳಿ ರಾಹುಲ್​ ಗಾಂಧಿಗೆ ವರದಿ ಒಪ್ಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇವತ್ತು ದೆಹಲಿಯಿಂದ ಖರ್ಗೆ ಮತ್ತೆ ಬೆಂಗಳೂರಿಗೆ ಬರ್ತಿರೋದು... ರಾಜ್ಯ ಕೈ ನಾಯಕರಲ್ಲಿ ಸಂಚಲನವನ್ನು ಸೃಷ್ಟಿಸಿದೆ.
ಒಟ್ಟಾರೆ. ರಾಜ್ಯ ಕಾಂಗ್ರೆಸ್​​ನಲ್ಲಿ ಕುರ್ಚಿ ಕದನದ ಮೇಲಾಟಗಳನ್ನು ಹೊಸ ಹೊಸ ಸ್ವರೂಪ ಪಡೆದುಕೊಳ್ತಿದ್ದು.. ಇವತ್ತು ಖರ್ಗೆ ರಾಜ್ಯಕ್ಕೆ ವಾಪಸ್​ ಬರ್ತಿರೋದ್ರಿಂದ ಗೊಂದಲಗಳಿಗೆಲ್ಲ ತೆರೆ ಬೀಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ: ಕಾರ್ ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು : ಸೆಲ್ಪ್ ಆಕ್ಸಿಡೆಂಟ್ ನಿಂದ ಉರುಳಿಬಿದ್ದ ಕಾರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us