/newsfirstlive-kannada/media/media_files/2025/11/26/team-india-6-2025-11-26-13-16-22.jpg)
ದಕ್ಷಿಣ ಆಫ್ರಿಕಾ ವಿರುದ್ಧ ಗುವಾಹಟಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಹೀನಾಯವಾಗಿ ಸೋತಿದೆ. ಬರೋಬ್ಬರಿ 408 ರನ್​​ಗಳ ಅಂತರದಿಂದ ಸೋಲುವ ಮೂಲಕ ದೊಡ್ಡ ಮುಖಭಂಗ ಎದುರಿಸಿದೆ. ಜೊತೆಗೆ ಮತ್ತೊಂದು ವೈಟ್​ವಾಶ್ ಅವಮಾನ ಎದುರಿಸಿದೆ.
ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣಾ ಆಫ್ರಿಕಾ 151.1 ಓವರ್​ಗೆ ಎಲ್ಲಾ ವಿಕೆಟ್ ಕಳೆದುಕೊಂಡು 489 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಟೀಂ ಇಂಡಿಯಾ, 83.1 ಓವರ್​​ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 201 ರನ್​ಗಳಿಸಿತ್ತು. ಆ ಮೂಲಕ ಟೀಂ ಇಂಡಿಯಾ 288 ರನ್​ಗಳ ಭಾರೀ ಹಿನ್ನಡೆ ಅನುಭವಿಸಿತ್ತು.
ಇದನ್ನೂ ಓದಿ: ಆಸ್ಪತ್ರೆ ಸೇರಿದ ಮುಚ್ಚಲ್, ಫೋಟೋಸ್ ಡಿಲೀಟ್ ಮಾಡಿದ ಮಂದಾನ.. ಆಗಿದ್ದೇನು?
/filters:format(webp)/newsfirstlive-kannada/media/media_files/2025/10/10/team-india-2025-10-10-07-15-09.jpg)
ಭಾರತಕ್ಕೆ ಫಾಲೋ ಆನ್ ಹೇರುವ ಅವಕಾಶ ಇದ್ದರೂ, ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್​ ಆರಂಭಿಸಲು ಬ್ಯಾಟಿಂಗ್​ಗೆ ಆಗಮಿಸಿತ್ತು. ಎರಡನೇ ಇನ್ನಿಂಗ್ಸ್​ನಲ್ಲೂ ಅದ್ಭುತ ಆಟವಾಡಿದ ದಕ್ಷಿಣ ಆಫ್ರಿಕಾ, ಐದು ವಿಕೆಟ್ ಕಳೆದುಕೊಂಡು 260 ರನ್​ಗಳಿಸಿ ಡಿಕ್ಲೇರ್ ಮಾಡಿತು. ಆ ಮೂಲಕ ದಕ್ಷಿಣ ಆಫ್ರಿಕಾ 548 ರನ್​ಗಳ ಮುನ್ನಡೆ ಸಾಧಿಸಿತು.
ಇದನ್ನೂ ಓದಿ: ಡಿಸೆಂಬರ್ 1 ರೊಳಗೆ ಕರ್ನಾಟಕದ ಸಿಎಂ ಸ್ಥಾನದ ಬಗ್ಗೆ ಕಾಂಗ್ರೆಸ್ ಹೈಕಮ್ಯಾಂಡ್ ತೀರ್ಮಾನ: ಹೈಕಮ್ಯಾಂಡ್ ಪ್ಲ್ಯಾನ್ ಏನು ಗೊತ್ತಾ?
/filters:format(webp)/newsfirstlive-kannada/media/media_files/2025/11/26/team-india-5-2025-11-26-08-39-28.jpg)
ಆಗ ಭಾರತದ ಗೆಲುವಿಗೆ 549 ರನ್​ಗಳ ಅಗತ್ಯ ಇತ್ತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀ ಇಂಡಿಯಾ ಸ್ಟಾರ್ಸ್​, ಬಂದ ಪುಟ್ಟ, ಹೋದ ಪುಟ್ಟ ಮಾಡಿದರು. ಪರಿಣಾಮ ಬರೀ 140 ರನ್​ಗಳಿಸಿ ಭಾರತ ಸೋಲನ್ನು ಒಪ್ಪಿಕೊಳ್ತು. ಆ ಮೂಲಕ ದಕ್ಷಿಣ ಆಫ್ರಿಕಾ 408 ರನ್​ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಎರಡು ಟೆಸ್ಟ್​ಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಈಗಾಗಲೇ ಎರಡು ಪಂದ್ಯ ಗೆದ್ದಿರೋದ್ರಿಂದ ಸರಣಿ ಅವರ ಪಾಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us