Advertisment

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಕ್ರಿಕೆಟರ್, ಕನ್ನಡಿಗ ವೈಶಾಕ್ ವಿಜಯಕುಮಾರ್.. ಹುಡುಗಿ ಯಾರು..?

ಟೀಮ್ ಇಂಡಿಯಾ ಹಾಗೂ ಕರ್ನಾಟಕ ರಾಜ್ಯ ತಂಡದ ಪ್ರತಿಭಾವಂತ ವೇಗದ ಬೌಲರ್ ವೈಶಾಕ್ ವಿಜಯ್‌ಕುಮಾರ್ ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾರ (ಮಾರ್ಚ್ 5) ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವೈಶಾಕ್ ತಮ್ಮ ಬಹುಕಾಲದ ಗೆಳತಿ ಸಾಗರಿಕ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

author-image
Ganesh Kerekuli
vyshak vijaykumar (4)
Advertisment

ಟೀಮ್ ಇಂಡಿಯಾ ಹಾಗೂ ಕರ್ನಾಟಕ ರಾಜ್ಯ ತಂಡದ ಪ್ರತಿಭಾವಂತ ವೇಗದ ಬೌಲರ್ ವೈಶಾಕ್ ವಿಜಯ್‌ಕುಮಾರ್ ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುವಾರ (ಮಾರ್ಚ್ 5) ಬೆಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವೈಶಾಕ್ ತಮ್ಮ ಬಹುಕಾಲದ ಗೆಳತಿ ಸಾಗರಿಕ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

Advertisment

ಕಿಚ್ಚ ಸುದೀಪ್ ಶುಭ ಹಾರೈಕೆ

ಬೆಂಗಳೂರಿನ 'ಮೈನ್ ಪ್ಯಾಲೇಸ್​'ನಲ್ಲಿ ನಡೆದ ಈ ವೈವಾಹಿಕ ಸಂಭ್ರಮಕ್ಕೆ ಕುಟುಂಬಸ್ಥರು, ಆಪ್ತರು ಹಾಗೂ ಕ್ರಿಕೆಟ್ ಲೋಕದ ಗಣ್ಯರು ಸಾಕ್ಷಿಯಾಗಿದ್ದರು. ವಿಶೇಷವೆಂದರೆ, ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಅವರು ಮದುವೆಗೆ ಆಗಮಿಸಿ ನವಜೋಡಿಗೆ ಶುಭ ಹಾರೈಸಿದರು. ಸುದೀಪ್ ಅವರ ಭೇಟಿ ಮದುವೆ ಮನೆಯ ಕಳೆಯನ್ನು ಹೆಚ್ಚಿಸಿತ್ತು.

vyshak vijaykumar (3)

ಬ್ಯಾಟರ್ ಆಗಿ ಶುರುವಾದ ಹಾದಿ, ಇಂದು ಸ್ಟಾರ್ ಬೌಲರ್!

ಜನವರಿ 31, 1997 ರಂದು ಬೆಂಗಳೂರಿನಲ್ಲಿ ಜನಿಸಿದ ವೈಶಾಕ್ ಅವರ ಕ್ರಿಕೆಟ್ ಜೀವನ ಸ್ಫೂರ್ತಿದಾಯಕವಾಗಿದೆ. ಆರಂಭದಲ್ಲಿ ಬ್ಯಾಟರ್ ಆಗಿ ಕರ್ನಾಟಕದ ಅಂಡರ್-16 ತಂಡವನ್ನು ಮುನ್ನಡೆಸಿದ್ದ ಇವರು, ನಂತರ ವೇಗದ ಬೌಲರ್ ಆಗಿ ರೂಪಾಂತರಗೊಂಡರು. ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಅವರ ತಂದೆ ತಮ್ಮ ಕೆಲಸವನ್ನೇ ತ್ಯಾಗ ಮಾಡಿದ್ದರು. ತಂದೆಯ ಶ್ರಮಕ್ಕೆ ತಕ್ಕ ಪ್ರತಿಫಲ ನೀಡಿದ ವೈಶಾಕ್, ಇಂದು ದೇಶದ ಪ್ರಮುಖ ವೇಗಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕರ್ನಾಟಕ ಬಜೆಟ್: ಸಿದ್ದು ಲೆಕ್ಕದ ಮೇಲೆ ಬೆಟ್ಟದಷ್ಟು ನಿರೀಕ್ಷೆ.. ಶಿಕ್ಷಣ, ಕೃಷಿ, ಸಾರಿಗೆ ಕ್ಷೇತ್ರದಲ್ಲಿನ ಡಿಮ್ಯಾಂಡ್ ಏನೇನು?

Advertisment

vyshak vijaykumar (2)

ಆರ್​ಸಿಬಿಯಿಂದ ಪಂಜಾಬ್ ಕಿಂಗ್ಸ್‌ವರೆಗೆ..

2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೂಲಕ ಐಪಿಎಲ್ ಪ್ರವೇಶಿಸಿದ ವೈಶಾಕ್, ತಮ್ಮ ಚೊಚ್ಚಲ ಪಂದ್ಯದಲ್ಲೇ 3 ವಿಕೆಟ್ ಪಡೆದು ಮಿಂಚಿದ್ದರು. ಆರ್​ಸಿಬಿ ತಂಡದಲ್ಲಿ ನೆಟ್ ಬೌಲರ್ ಆಗಿ ಆರಂಭಿಸಿ, ನಂತರ ಮುಖ್ಯ ತಂಡದಲ್ಲಿ ಸ್ಥಾನ ಪಡೆದ ಇವರ ಶ್ರಮಕ್ಕೆ ದೊಡ್ಡ ಗೌರವ ಸಿಕ್ಕಿದೆ. ಇತ್ತೀಚೆಗೆ ನಡೆದ 2025ರ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ವೈಶಾಕ್ ಅವರನ್ನು 1.80 ಕೋಟಿ ರೂ. ನೀಡಿ ಖರೀದಿಸಿದೆ.

vyshak vijaykumar

ದೇಶಿ ಕ್ರಿಕೆಟ್‌ನ 'ಡೆತ್ ಓವರ್' ಸ್ಪೆಷಲಿಸ್ಟ್:

ಕರ್ನಾಟಕ ತಂಡದ ಪರ ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 100ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ವೈಶಾಕ್, ಪವರ್‌ಪ್ಲೇ ಹಾಗೂ ಸ್ಲಾಗ್ ಓವರ್‌ಗಳಲ್ಲಿ ವಿಕೆಟ್ ಪಡೆಯುವ ಚತುರತೆ ಹೊಂದಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ಟೀಮ್ ಇಂಡಿಯಾ ಪರ ಕಾಣಿಸಿಕೊಂಡಿದ್ದರು. ಈಗ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಈ ಕನ್ನಡದ ಪ್ರತಿಭೆಗೆ ಅಭಿಮಾನಿಗಳು ಮತ್ತು ಕ್ರಿಕೆಟ್ ಲೋಕದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

ಇದನ್ನೂ ಓದಿ:ನಿಮ್ಮ ಬೆತ್ತಲೆ ದೇಹ, ಬೆಡ್‌ರೂಮ್ ದೃಶ್ಯಗಳನ್ನೂ ನೋಡ್ತಿದ್ದಾರೆ ಮೆಟಾ ಟೆಕ್ಕಿಗಳು..? ಸಂಚಲನ ಸೃಷ್ಟಿಸಿದ AI ಸ್ಮಾರ್ಟ್ ಗ್ಲಾಸ್ ಹಗರಣ!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

vyshak vijaykumar
Advertisment
Advertisment
Advertisment