Advertisment

ನಿಮ್ಮ ಬೆತ್ತಲೆ ದೇಹ, ಬೆಡ್‌ರೂಮ್ ದೃಶ್ಯಗಳನ್ನೂ ನೋಡ್ತಿದ್ದಾರೆ ಮೆಟಾ ಟೆಕ್ಕಿಗಳು..? ಸಂಚಲನ ಸೃಷ್ಟಿಸಿದ AI ಸ್ಮಾರ್ಟ್ ಗ್ಲಾಸ್ ಹಗರಣ!

ನೀವು ಧರಿಸುವ ಮೆಟಾ ರೇ-ಬಾನ್ ಸ್ಮಾರ್ಟ್ ಗ್ಲಾಸ್‌ಗಳು ಕೇವಲ ಸ್ಟೈಲಿಶ್ ಆಗಿರಲಾರವು, ಅವು ನಿಮ್ಮ ಅತಿ ವೈಯಕ್ತಿಕ ಕ್ಷಣಗಳನ್ನೂ ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಅಪರಿಚಿತರಿಗೆ ತಲುಪಿಸುತ್ತಿರಬಹುದು! ಇನ್ಮುಂದೆ ಇರಲಿ ಎಚ್ಚರ.

author-image
Ganesh Kerekuli
AI Glass
Advertisment

ನೀವು ಧರಿಸುವ ಮೆಟಾ ರೇ-ಬಾನ್ (Meta Ray-Ban) ಸ್ಮಾರ್ಟ್ ಗ್ಲಾಸ್‌ಗಳು ಕೇವಲ ಸ್ಟೈಲಿಶ್ ಆಗಿರಲಾರವು, ಅವು ನಿಮ್ಮ ಅತಿ ವೈಯಕ್ತಿಕ ಕ್ಷಣಗಳನ್ನೂ ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಅಪರಿಚಿತರಿಗೆ ತಲುಪಿಸುತ್ತಿರಬಹುದು! ಇರಲಿ ಎಚ್ಚರ.

Advertisment

ಹೌದು, ಸಾವಿರಾರು ಕಿಲೋಮೀಟರ್ ದೂರದ ಕೀನ್ಯಾದಲ್ಲಿ ಕುಳಿತಿರುವ ಟೆಕ್ ಉದ್ಯೋಗಿಗಳು ನೀವು ಈ ಗ್ಲಾಸ್ ಮೂಲಕ ಸೆರೆಹಿಡಿದ ದೃಶ್ಯಗಳನ್ನು ನೋಡುತ್ತಿದ್ದಾರೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಏನಿದು ಹಗರಣ?

ಮೆಟಾ ಕಂಪನಿಯ ಎಐ ಮಾಡೆಲ್‌ಗಳನ್ನು ತರಬೇತಿಗೊಳಿಸಲು 'ಡೇಟಾ ಲೇಬಲಿಂಗ್' (Data Labelling) ಎಂಬ ಪ್ರಕ್ರಿಯೆ ನಡೆಯುತ್ತದೆ. ಇದಕ್ಕಾಗಿ ಮೆಟಾ ಕಂಪನಿಯು 'ಸಮಾ' (Sama) ಎಂಬ ಹೊರಗುತ್ತಿಗೆ ಸಂಸ್ಥೆಯನ್ನು ಅವಲಂಬಿಸಿದೆ. ಈ ಸಂಸ್ಥೆಯ ಅಡಿಯಲ್ಲಿ ಕೀನ್ಯಾದಲ್ಲಿ ಕೆಲಸ ಮಾಡುವ ನೂರಾರು ಉದ್ಯೋಗಿಗಳು, ಸ್ಮಾರ್ಟ್ ಗ್ಲಾಸ್‌ನಿಂದ ಸೆರೆಹಿಡಿಯಲಾದ ವಿಡಿಯೋಗಳನ್ನು ನೋಡಿ ಅವುಗಳಿಗೆ ವಿವರಣೆಗಳನ್ನು (Annotation) ನೀಡುತ್ತಿದ್ದಾರೆ ಎಂಬ ವಿಚಾರ ಈಗ ಸಂಚಲನಕ್ಕೆ ಕಾರಣವಾಗಿದೆ. 

ಬೆತ್ತಲೆ ದೇಹ, ಲೈಂಗಿಕ ದೃಶ್ಯಗಳ ವೀಕ್ಷಣೆ!

ಸ್ವೀಡಿಷ್ ಪತ್ರಿಕೆಗಳ ವರದಿಯ ಪ್ರಕಾರ, ಈ ಡೇಟಾ ವಿಶ್ಲೇಷಕರು ಸ್ಮಾರ್ಟ್ ಗ್ಲಾಸ್ ಮೂಲಕ ಸೆರೆಯಾದ ಅತ್ಯಂತ ಖಾಸಗಿ ವಿಡಿಯೋಗಳನ್ನು ನೋಡುತ್ತಿದ್ದಾರೆ. ‘ನಾವು ಎಲ್ಲವನ್ನೂ ನೋಡುತ್ತೇವೆ - ಲಿವಿಂಗ್ ರೂಮ್‌ಗಳಿಂದ ಹಿಡಿದು ಬೆತ್ತಲೆ ದೇಹಗಳವರೆಗೆ. ಈ ಗ್ಲಾಸ್ ಧರಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯಗಳೂ ನಮಗೆ ಕಾಣಿಸುತ್ತವೆ’ ಎಂದು ಒಬ್ಬ ಉದ್ಯೋಗಿ ಹೇಳಿಕೊಂಡಿದ್ದಾರೆ.
ಬಳಕೆದಾರರು ಶೌಚಾಲಯಕ್ಕೆ ಹೋಗುವ ದೃಶ್ಯಗಳು, ಬಟ್ಟೆ ಬದಲಿಸುವ ದೃಶ್ಯಗಳು ಸಹ ಸೆರೆಯಾಗಿವೆ. ಬಳಕೆದಾರರಿಗೆ ಈ ವಿಷಯ ತಿಳಿದಿದೆ ಎಂದು ನನಗೆ ಅನಿಸುವುದಿಲ್ಲ. ತಿಳಿದಿದ್ದರೆ ಅವರು ಖಂಡಿತಾ ರೆಕಾರ್ಡ್ ಮಾಡುತ್ತಿರಲಿಲ್ಲ ಎಂದು ಉದ್ಯೋಗಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

Advertisment

ಇದನ್ನೂ ಓದಿ:ಸಿದ್ದರಾಮಯ್ಯರಿಂದ ದಾಖಲೆಯ ಬಜೆಟ್‌ ಮಂಡನೆಗೆ ಕ್ಷಣಗಣನೆ- ಗುಡ್​ನ್ಯೂಸ್​ ನಿರೀಕ್ಷೆಯಲ್ಲಿ ರಾಜ್ಯದ ಜನ..!

ನಿಮ್ಮಲ್ಲಿ ಈ 5 ಹವ್ಯಾಸಗಳು ಇವೆಯೇ? ಹಾಗಾದ್ರೆ ನಿಮ್ಮ ಕಣ್ಣಿಗೆ ಅಪಾಯ ಕಟ್ಟಿಟ್ಟ ಬುತ್ತಿ; ತಪ್ಪದೇ ಸ್ಟೋರಿ ಓದಿ

ಹಣಕಾಸಿನ ಮಾಹಿತಿ ಕೂಡ ಅಪಾಯದಲ್ಲಿದೆ!

ಕೆಲವು ವಿಡಿಯೋಗಳಲ್ಲಿ ಬಳಕೆದಾರರ ಬ್ಯಾಂಕ್ ಕಾರ್ಡ್‌ಗಳು ಮತ್ತು ಪೇಮೆಂಟ್ ಮಾಹಿತಿಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಇವು ಸೋರಿಕೆಯಾದರೆ ಬೃಹತ್ ಹಗರಣಗಳಿಗೆ ಕಾರಣವಾಗಬಹುದು ಎಂದು ಉದ್ಯೋಗಿಗಳು ಎಚ್ಚರಿಸಿದ್ದಾರೆ. ಕೆಲಸ ಕಳೆದುಕೊಳ್ಳುವ ಭೀತಿಯಿಂದ ಈ ಉದ್ಯೋಗಿಗಳು ಯಾವುದನ್ನೂ ಪ್ರಶ್ನಿಸುವಂತಿಲ್ಲ.

ಮೆಟಾ ಕಂಪನಿಯ ಗೌಪ್ಯತಾ ನೀತಿ ಏನು ಹೇಳುತ್ತದೆ?

ಮೆಟಾ ತನ್ನ ಸ್ಮಾರ್ಟ್ ಗ್ಲಾಸ್ ಸುರಕ್ಷಿತ ಎಂದು ಹೇಳಿಕೊಳ್ಳುತ್ತದೆಯಾದರೂ, ಅದರ ನಿಯಮಗಳಲ್ಲಿ (Terms and Conditions) ಅಸ್ಪಷ್ಟತೆ ಇದೆ. ಕೆಲವು ಸಂದರ್ಭಗಳಲ್ಲಿ ನಿಮ್ಮ ಸಂವಹನಗಳನ್ನು ಮತ್ತು ಡೇಟಾವನ್ನು ಮನುಷ್ಯರು (Human Review) ಪರಿಶೀಲಿಸಬಹುದು ಎಂದು ಮೆಟಾ ತನ್ನ ಗೌಪ್ಯತಾ ನೀತಿಯಲ್ಲಿ ತಿಳಿಸಿದೆ. ನೀವು ಎಐ ಜೊತೆ ಹಂಚಿಕೊಳ್ಳಲು ಇಚ್ಛಿಸದ ವಿಷಯಗಳನ್ನು ಹಂಚಿಕೊಳ್ಳಬೇಡಿ ಎಂಬ ಎಚ್ಚರಿಕೆಯನ್ನೂ ನೀಡಿದೆ.

Advertisment

ಮಾರಾಟದಲ್ಲಿ ದಾಖಲೆ

ದಿನದಿಂದ ದಿನಕ್ಕೆ ಇಂತಹ ಸ್ಮಾರ್ಟ್ ಗ್ಲಾಸ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. 2025 ರಲ್ಲೇ ಮೆಟಾ ಸುಮಾರು 70 ಲಕ್ಷ ಸ್ಮಾರ್ಟ್ ಗ್ಲಾಸ್‌ಗಳನ್ನು ಮಾರಾಟ ಮಾಡಿದೆ. 'ಹೇ ಮೆಟಾ' (Hey Meta) ಎನ್ನುವ ಮೂಲಕ ಈ ಗ್ಲಾಸ್‌ಗಳನ್ನು ಸಕ್ರಿಯಗೊಳಿಸಿ ವಿಡಿಯೋ ಕಾಲ್ ಅಥವಾ ಫೋಟೋಗಳನ್ನು ತೆಗೆಯಬಹುದು. ಆದರೆ, ಈ ತಂತ್ರಜ್ಞಾನದ ಸುಲಭ ಬಳಕೆಯ ಹಿಂದೆ ಜನರ ವೈಯಕ್ತಿಕ ಗೌಪ್ಯತೆ ಬಲಿಯಾಗುತ್ತಿದೆ ಎಂಬುದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ:ಕರ್ನಾಟಕ ಬಜೆಟ್: ಸಿದ್ದು ಲೆಕ್ಕದ ಮೇಲೆ ಬೆಟ್ಟದಷ್ಟು ನಿರೀಕ್ಷೆ.. ಶಿಕ್ಷಣ, ಕೃಷಿ, ಸಾರಿಗೆ ಕ್ಷೇತ್ರದಲ್ಲಿನ ಡಿಮ್ಯಾಂಡ್ ಏನೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Meta AI Smart Glasses ಮೆಟಾ ಎಐ ಸ್ಮಾರ್ಟ್ ಗ್ಲಾಸ್
Advertisment
Advertisment
Advertisment