ಗಂಭೀರ್​ಗೆ ಬಂದಿದ್ದ ದೊಡ್ಡ ಟೆನ್ಶನ್ ದೂರವಾಗಿದೆ.. ಅವರೀಗ ನಿರಾಳ..!

ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಶುಭಾರಂಭ ಮಾಡಿದೆ. ಟೈಟಲ್​ ಡಿಫೆಂಡ್​ ಮಾಡಿಕೊಳ್ಳೋ ಸವಾಲಿಗೆ ಸಜ್ಜಾಗಿರೋ ಮೆನ್​ ಇನ್​ ಬ್ಲ್ಯೂ ಪಡೆ ಯುಎಸ್​​ಎ ವಿರುದ್ಧ ಗೆದ್ದು ಪ್ರತಿಷ್ಠಿತ ಟೂರ್ನಿಯಲ್ಲಿ ಕಿಕ್​ ಸ್ಟಾರ್ಟ್​ ಮಾಡಿದೆ.

author-image
Ganesh Kerekuli
Gambhir (4)
Advertisment
  • 2 ವರ್ಷ, 39 ಪಂದ್ಯ, 20.21 ಸರಾಸರಿ, 3 ಡಕೌಟ್​
  • ಫೇಲ್​.. ಫೇಲ್​.. ಫೇಲ್​.. ಸೂರ್ಯನಿಗೆ ಗ್ರಹಣ
  • 2026ರಲ್ಲಿ ಸೂರ್ಯಕುಮಾರ್​ಗೆ ಗ್ರಹಣ ಮೋಕ್ಷ

ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಶುಭಾರಂಭ ಮಾಡಿದೆ. ಟೈಟಲ್​ ಡಿಫೆಂಡ್​ ಮಾಡಿಕೊಳ್ಳೋ ಸವಾಲಿಗೆ ಸಜ್ಜಾಗಿರೋ ಮೆನ್​ ಇನ್​ ಬ್ಲ್ಯೂ ಪಡೆ ಯುಎಸ್​​ಎ ವಿರುದ್ಧ ಗೆದ್ದು ಪ್ರತಿಷ್ಠಿತ ಟೂರ್ನಿಯಲ್ಲಿ ಕಿಕ್​ ಸ್ಟಾರ್ಟ್​ ಮಾಡಿದೆ. ಮೊದಲ ಪಂದ್ಯದ ಗೆಲುವಿನೊಂದಿಗೆ ಮ್ಯಾನೇಜ್​ಮೆಂಟ್​​​ಗಿದ್ದ ದೊಡ್ಡ ತಲೆನೋವು ಕಡಿಮೆಯಾಗಿದೆ. ಸಾರಥಿ ಸೂರ್ಯಕುಮಾರ್​ ಯಾದವ್​ ಅಬ್ಬರದ ಬ್ಯಾಟಿಂಗ್​ ಗೌತಮ್​ ಗಂಭೀರ್​​ಗಿದ್ದ​​ ಟೆನ್ಶನ್​ ರಿಲೀಫ್​ ಮಾಡಿದೆ. 

ಟಿ20 ಕ್ರಿಕೆಟ್​​ನ ರಿಯಲ್​ ಬ್ರ್ಯಾಂಡ್ ಅಂಬಾಸಿಡರ್, ಚುಟುಕು ಕ್ರಿಕೆಟ್​ನ ಈ ಬ್ರ್ಯಾಂಡ್​​ ಒಮ್ಮೆ ಸಿಡಿದು ನಿಂತ್ರೆ ಸ್ಫೋಟ ಫಿಕ್ಸ್​. ಡಾಟ್ ಬಾಲ್​ ಅನ್ನೋ ಪದವನ್ನೇ ಇಷ್ಟ ಪಡದ ಡೆಡ್ಲಿಯೆಸ್ಟ್ ಬ್ಯಾಟರ್. ವಿಶ್ವ ಕ್ರಿಕೆಟ್​ ಲೋಕ ಹೀಗೆ ನಾನಾ ಹೆಸರುಗಳಿಂದ ಸೂರ್ಯಕುಮಾರ್​ ಯಾದವ್​ನ ಕೊಂಡಾಡ್ತಿತ್ತು. ಆದ್ರೆ, ಈ ಕಳೆದ 2 ವರ್ಷಗಳಲ್ಲಿ ಸೂರ್ಯನಿಗೆ ಗ್ರಹಣ ಹಿಡಿದು ಬಿಟ್ಟಿತ್ತು. ಬೌಂಡರಿ, ಸಿಕ್ಸರ್​ ಸುರಿಮಳೆ ಸುರಿಸಿ ರನ್​​​ಹೊಳೆ ಹರಿಸಿ ಪ್ರಜ್ವಲಿಸ್ತಿದ್ದ ಸೂರ್ಯ ಮಂಕಾಗಿದ್ರು.  

ಇದನ್ನೂ ಓದಿ: T20 world cup: ಭಾರತದ ಮುಂದಿನ ಪಂದ್ಯ ಯಾವಾಗ? ಕಂಪ್ಲೀಟ್ ಡಿಟೇಲ್ಸ್

suryakumar yadav (1)

2025ರಲ್ಲಿ 21 ಪಂದ್ಯಗಳನ್ನ ಆಡಿದ್ದ ಸೂರ್ಯ ಒಂದೇ ಒಂದು ಅರ್ಧಶತಕ ಕೂಡ ಸಿಡಿಸಿರಲಿಲ್ಲ. 13.62ರ ಹೀನಾಯ ಸರಾಸರಿಯಲ್ಲಿ 218 ರನ್​ಗಳಿಸಿದ ಇಂಡಿಯನ್​ ಕ್ಯಾಪ್ಟನ್ ​ಕೇವಲ 123.16ರ ಸಾದಾರಣ ಸ್ಟ್ರೈಕ್​ರೇಟ್​ ಹೊಂದಿದ್ರು. 2024ರಲ್ಲೂ ಅದೇ ರಾಗ ಅದೇ ಹಾಡು.. 2024ರ ಕ್ಯಾಲೆಂಡರ್​ ವರ್ಷದಲ್ಲಿ ಕೇವಲ 29.10ರ ಸರಾಸರಿಯಲ್ಲಿ ರನ್​ಗಳಿಸಿದ್ರು. 11 ಪಂದ್ಯವನ್ನಾಡಿದ್ದ ಸೂರ್ಯ ಕೇವಲ 291 ರನ್​ಗಳಿಸಿದ್ರು. 2 ವರ್ಷಗಳಲ್ಲಿ 39 ಪಂದ್ಯಗಳನ್ನಾಡಿದ್ದ ಸೂರ್ಯ ಕೇವಲ 20.21ರ ಸರಾಸರಿಯಲ್ಲಿ ರನ್​ಗಳಿಸಿದ್ರು. 3 ಬಾರಿ ಡಕೌಟ್​ ಕೂಡ ಆಗಿದ್ರು. 

ಬೌಲರ್​​ಗಳಿಗೆ ನಡುಕ..!

ಸತತ 2 ವರ್ಷಗಳ ಕಾಲ ರನ್​ಗಳಿಕೆಗೆ ಪರದಾಟ ನಡೆಸಿದ್ದ ಸೂರ್ಯಕುಮಾರ್​ ಯಾದವ್​ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ರು. ಸಾರಥಿ ಸೂರ್ಯನ ವೈಫಲ್ಯ ಟೀಮ್​ ಮ್ಯಾನೇಜ್​ಮೆಂಟ್​ಗೆ  ವಿಶ್ವಕಪ್​ಗೂ ಮುನ್ನ ಟೆನ್ಶನ್​ ತಂದಿಟ್ಟಿತ್ತು. ಆದ್ರೆ, ಇದೀಗ ಮ್ಯಾನೇಜ್​ಮೆಂಟ್​ ಫುಲ್​ ರಿಲ್ಯಾಕ್ಸ್​ ಆಗಿದೆ. ಸೂರ್ಯನಿಗೆ ಹಿಡಿದಿದ್ದ ಗ್ರಹಣ ಬಿಟ್ಟಿದೆ. 2026ಕ್ಕೆ ಕಾಲಿಟ್ಟ ಬಳಿಕ ಸೂರ್ಯಕುಮಾರ್​ ರೈಟ್​ ಟ್ರ್ಯಾಕ್​ಗೆ ಮರಳಿದ್ದಾರೆ.

ಇದನ್ನೂ ಓದಿ: ಕಾನ್ಪುರದಲ್ಲಿ ಉದ್ಯಮಿ ಪುತ್ರನ ಲಂಬೋರ್ಗಿನಿ ಕಾರ್ ಆಕ್ಸಿಡೆಂಟ್‌ : 6 ಮಂದಿಗೆ ಗಾಯ, ವಾಹನ ಜಖಂ

Surya kumar yadav (2)

ವಿಶ್ವಕಪ್​ಗೂ ಮುನ್ನ ಆಡಿದ ನ್ಯೂಜಿಲೆಂಡ್​​ ವಿರುದ್ಧದ ಪ್ರಿಪರೇಟರಿ ಸರಣಿಯಲ್ಲೇ ಸೂರ್ಯಕುಮಾರ್​ ಶೈನ್​ ಆದ್ರು. ರನ್​ಗಳಿಸಲು ಪರದಾಟ ನಡೆಸಿದ್ದ ಮಿಸ್ಟರ್​ 360 ಡಿಗ್ರಿ ಬ್ಯಾಟರ್​ ಸರಣಿಯ ಮೊದಲ ಪಂದ್ಯದಲ್ಲಿ 32 ರನ್​ಗಳಿಸಿ ರಿಧಮ್​ ಕಂಡುಕೊಂಡ್ರು. ಬಳಿಕ 2ನೇ ಪಂದ್ಯದಲ್ಲಿ ಅಜೇಯ 82 ರನ್​, 3ನೇ ಪಂದ್ಯದಲ್ಲಿ ಅಜೇಯ 57 ರನ್​ ಸಿಡಿಸಿ ಮಿಂಚಿದ್ರು. 4ನೇ ಪಂದ್ಯದಲ್ಲಿ ಫೇಲ್​ ಆದ್ರೂ, 5ನೇ ಪಂದ್ಯದಲ್ಲಿ 63 ರನ್​ಗಳ ಸ್ಪೋಟಕ ಇನ್ನಿಂಗ್ಸ್​ ಕಟ್ಟಿ ಕಿವೀಸ್​ ಕಿವಿ ಹಿಂಡಿದ್ರು. 2025ರ ಇಡೀ ವರ್ಷ ಒಂದೇ ಒಂದು ಅರ್ಧಶತಕ ಸಿಡಿಸಿದ ಸೂರ್ಯ, ನ್ಯೂಜಿಲೆಂಡ್​ ಎದುರು 3 ಹಾಫ್​ ಸೆಂಚುರಿ ಚಚ್ಚಿದ್ರು. 

ಕಿವೀಸ್​ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ಸೂರ್ಯ, ವಿಶ್ವಕಪ್​ನಲ್ಲೂ ಅದೇ ಫಾರ್ಮ್​ ಮುಂದುವರೆಸಿದ್ದಾರೆ. ಓಪನಿಂಗ್​ ಗೇಮ್​ನಲ್ಲಿ ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದ್ದಾಗ ಒತ್ತಡದ ನಡುವೆ ಟಾಪ್​ ಕ್ಲಾಸ್​ ಇನ್ನಿಂಗ್ಸ್​ ಕಟ್ಟಿದ್ರು. ತಾಳ್ಮೆಯಿಂದ ಎಚ್ಚರಿಕೆಯ ಆಟವಾಡಿದ ಸೂರ್ಯಕುಮಾರ್​, ಅಂತಿಮ ಹಂತದಲ್ಲಿ ಸ್ಪೋಟಗೊಂಡ್ರು. ಕೆಚ್ಚೆದೆಯ ಹೋರಾಟ ನಡೆಸಿ 49 ಎಸೆತಗಳಲ್ಲಿ ಅಜೇಯ 84 ರನ್​ಗಳಿಸಿ ಮುಂಬೈಕರ್​ ಮಿಂಚಿದ್ರು. 

2 ವರ್ಷಗಳಿಂದ ಪರದಾಡಿದ್ದ ಸೂರ್ಯ ರೈಟ್​​ಟ್ರ್ಯಾಕ್​ಗೆ ಸರಿಯಾದ ಸಮಯದಲ್ಲಿ ಕಮ್​ಬ್ಯಾಕ್​ ಮಾಡಿದ್ದಾರೆ. ಮಿಸ್ಟರ್​​ 360 ಡಿಗ್ರಿ ಬ್ಯಾಟರ್​ ಕಮ್​ಬ್ಯಾಕ್​ನಿಂದ ಟೀಮ್​ ಇಂಡಿಯಾ ಫುಲ್​ ರಿಲ್ಯಾಕ್ಸ್​ ಆಗಿದೆ. ಆದ್ರೆ, ಎದುರಾಳಿಗಳಿಗೆ ಟೆನ್ಶನ್​ ಶುರುವಾಗಿದೆ. ಅದ್ರಲ್ಲೂ ಬೌಲರ್​​ಗಳಿಗೆ ನಡುಕ ಶುರುವಾಗಿದೆ. ಫಾರ್ಮ್​ನಲ್ಲಿರೋ ಸೂರ್ಯನ್ನ, ಮದವೇರಿದ ಆನೆನಾ ಕಟ್ಟಿ ಹಾಕೋದು ಅಷ್ಟು ಸುಲಭವಲ್ಲ.

ಇದನ್ನೂ ಓದಿ: ಫೈನಲೀ ಬೆಂಗಳೂರಿಗೆ ಬಂದ ಪವಿತ್ರ.. ರಾಧಿಕಾ ಆಫೀಸ್​ನಲ್ಲಿ ಏನಾಯ್ತು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

T20 world cup Surya kumar Yadav
Advertisment