/newsfirstlive-kannada/media/media_files/2025/09/15/india-vs-pakisthan-4-2025-09-15-12-59-38.jpg)
ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದೆ. ಗೆಲುವಿನ ಸಂದರ್ಭದಲ್ಲಿ ಕ್ಯಾಪ್ಟನ್ ಸೂರ್ಯ ಕುಮಾರ್ ಯಾದವ್, ವಿನ್ನಿಂಗ್ ಸಿಕ್ಸರ್ ಬಾರಿಸಿದರು. ಆ ಮೂಲಕ ಪಾಕ್ ವಿರುದ್ಧ ಟೀಂ ಇಂಡಿಯಾ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು.
ಪಂದ್ಯ ಗೆದ್ದ ನಂತರ ಕ್ರೀಸ್‌ನಲ್ಲಿದ್ದ ನಾಯಕ ಸೂರ್ಯಕುಮಾರ್ ಮತ್ತು ಶಿವಂ ದುಬೆ ಪರಸ್ಪರ ಕೈಕುಲುಕಿ ನೇರವಾಗಿ ಡ್ರೆಸ್ಸಿಂಗ್ ಕೋಣೆಗೆ ತೆರಳಿದರು. ಭಾರತೀಯ ಬ್ಯಾಟ್ಸ್‌ಮನ್‌ಗಳು ಯಾವುದೇ ಪಾಕಿಸ್ತಾನಿ ಆಟಗಾರನೊಂದಿಗೆ ಕೈಕುಲುಕಲಿಲ್ಲ.
ಇದನ್ನೂ ಓದಿ:ಪಾಕ್ ವಿರುದ್ಧ ಗೆದ್ದು ಸೂರ್ಯ ಖಡಕ್ ಸಂದೇಶ.. ಕ್ಯಾಪ್ಟನ್ ಹೇಳಿದ್ದೇನು..?
ಸೂರ್ಯಕುಮಾರ್ ಯಾದವ್ ಮತ್ತು ದುಬೆ ಡ್ರೆಸ್ಸಿಂಗ್ ರೂಮ್ಗೆ ಬಂದ ನಂತರ ಟೀಂ ಇಂಡಿಯಾ ರೂಮ್ನ ಬಾಗಿಲು ಹಾಕಲಾಯಿತು. ಡ್ರೆಸ್ಸಿಂಗ್ ರೂಮ್ನ ಬಾಗಿಲು ಹಾಕಿದ ಕ್ಷಣ, ಪಾಕ್ ಆಟಗಾರರ ಮುಖದ ಮೇಲೆ ಬಾಗಿಲು ಮುಚ್ಚಿದಂತೆ ಇತ್ತು. ಇತ್ತ, ಪಾಕಿಸ್ತಾನಿ ಕ್ರಿಕೆಟಿಗರು ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರ ಬರುವಿಕೆಗಾಗಿ ಕಾದು ನಿಂತಿದ್ದರು. ಕೊನೆಗೆ ನಿರಾಸೆಯಿಂದ ಮೈದಾನದ ಆಚೆ ಹೋಗಬೇಕಾಯಿತು.
ನಿನ್ನೆ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದ್ದ ಟೀಂ ಇಂಡಿಯಾ, ಪಾಕಿಸ್ತಾನವನ್ನು ಕೇವಲ 127 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿ ಆಯಿತು. 128 ರನ್ಗಳ ಗುರಿ ಬೆನ್ನು ಹತ್ತಿದ್ದ ಭಾರತ 15.5 ಓವರ್ನಲ್ಲಿ 3 ವಿಕೆಟ್ ಕಳೆದುಕೊಂಡು 131 ರನ್ಗಳಿಸಿತು.
ಇದನ್ನೂ ಓದಿ:ಟಾಸ್ ಹಾಕುವಾಗ, ಮ್ಯಾಚ್ ಗೆದ್ದ ಮೇಲೆ ಪಾಕ್ಗೆ ಭಾರೀ ಅವಮಾನ.. ಟೀಮ್ ಇಂಡಿಯಾ ಮಾಡಿದ್ದೇನು?
No handshake by Indian team.
— Aman (@dharma_watch) September 14, 2025
Pakistan waited for handshake but India went to the dressing room and closed the doors.
What a humiliation by Indian team 🤣
Belt treatment for Porkis#INDvPAK#IndianCricket#INDvsPAK#indvspak2025#AsiaCupT20#AsiaCup#ShubmanGill#ViratKohli𓃵pic.twitter.com/zXMXZEmiuP
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ