/newsfirstlive-kannada/media/media_files/2025/09/22/suryakumar-yadav-1-2025-09-22-08-27-56.jpg)
ಏಷ್ಯಾ ಕಪ್‌ನಲ್ಲಿ ಭಾರತದ ವಿರುದ್ಧ ಸತತ ಸೋಲಿನಿಂದ ಕಂಗೆಟ್ಟಿರುವ ಪಾಕಿಸ್ತಾನ, ಸೂರ್ಯಕುಮಾರ್ ಯಾದವ್ ವಿರುದ್ಧ ಐಸಿಸಿಗೆ ದೂರು ದಾಖಲಿಸಿದೆ. ಟೀಂ ಇಂಡಿಯಾದ ಕ್ಯಾಪ್ಟನ್ ನೀಡಿರುವ ಹೇಳಿಕೆಯ ಬಗ್ಗೆ ದೂರು ಕೊಟ್ಟಿದೆ. ಬೆನ್ನಲ್ಲೇ ಐಸಿಸಿ ಮ್ಯಾಚ್ ರೆಫರಿ ಭಾರತೀಯ ಕ್ರಿಕೆಟ್ ತಂಡಕ್ಕೆ ಇ-ಮೇಲ್ ಮಾಡಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಗಳಿಗೆ ಸಂಬಂಧಿಸಿ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ವಿವರಣೆ ಕೇಳಿದ್ದಾರೆ. ಅಂದ್ಹಾಗೆ ಸೂರ್ಯ ವಿರುದ್ಧ ಪಿಸಿಬಿ, ಐಸಿಸಿಗೆ ಎರಡು ದೂರುಗಳನ್ನು ಸಲ್ಲಿಸಿದೆ. ಅಂತೆಯೇ ಐಸಿಸಿ ಟೀಂ ಇಂಡಿಯಾಗೆ ಎರಡು ನೋಟಿಸ್ ನೀಡಿದೆ.
ಇದನ್ನೂ ಓದಿ:IND vs PAK ಫೈನಲ್​.. ಹೈವೋಲ್ಟೇಜ್ ಪಂದ್ಯ ಯಾವಾಗ? ಎಲ್ಲಿ ನಡೆಯುತ್ತೆ?
ಸೂರ್ಯಕುಮಾರ್ ಯಾದವ್ ಹೇಳಿಕೆಗಳು ಕ್ರಿಕೆಟ್ ದಕ್ಕೆ ಉಂಟುಮಾಡಿದೆ ಎಂದು ಭಾವಿಸಲಾಗಿದೆ. ಇದು ಆರೋಪ. ಸೂರ್ಯ ಕುಮಾರ್ ಯಾದವ್ ಆರೋಪಗಳನ್ನು ಒಪ್ಪಿಕೊಳ್ಳದಿದ್ದರೆ, ವಿಚಾರಣೆ ನಡೆಸಲಾಗುವುದು ಎಂದು ಇ-ಮೇಲ್‌ನಲ್ಲಿ ಐಸಿಸಿ ತಿಳಿಸಲಾಗಿದೆ.
ಸೂರ್ಯ ಏನ್ ಹೇಳಿದ್ದರು?
ಏಷ್ಯಾ ಕಪ್‌ನ ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ಸೋಲಿಸಿದ ನಂತರ, ಸೂರ್ಯ ಗೆಲುವನ್ನು ಪುಲ್ವಾಮಾ ಸಂತ್ರಸ್ತರಿಗೆ ಅರ್ಪಿಸುವುದಾಗಿ ಹೇಳಿದರು. ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಗೆಲುವಿನ ನಂತರ ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕುವುದಿಲ್ಲ ಎಂದು ಸರ್ಕಾರ ಮತ್ತು ಬಿಸಿಸಿಐನಿಂದ ಸೂಚನೆಗಳು ಬಂದಿವೆ ಎಂದು ಸೂರ್ಯ ಹೇಳಿದ್ದರು.
ಸೂರ್ಯ ಬ್ಯಾನ್?
ಐಸಿಸಿ ನಿಯಮಗಳ ಪ್ರಕಾರ.. ಈ ಪ್ರಕರಣವನ್ನು ಲೆವೆಲ್ 1 ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ಯಾವುದೇ ಆಟಗಾರನನ್ನು ನಿಷೇಧಿಸಲಾಗುವುದಿಲ್ಲ. ಅವರಿಗೆ ಪಂದ್ಯ ಶುಲ್ಕವನ್ನು ಮಾತ್ರ ದಂಡದ ರೂಪದಲ್ಲಿ ವಿಧಿಸಬಹುದು. ಉಲ್ಲಂಘನೆಯು ಲೆವೆಲ್ 2, 3, ಅಥವಾ 4 ಉಲ್ಲಂಘನೆಯಾಗಿದ್ದರೆ ಮಾತ್ರ ಆಟಗಾರ ನಿಷೇಧಿಸಲಾಗುತ್ತದೆ.
ಇದನ್ನೂ ಓದಿ:ಭಾರತ vs ಪಾಕಿಸ್ತಾನ ಫೈನಲ್ ಮ್ಯಾಚ್​.. 41 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.