/newsfirstlive-kannada/media/media_files/2025/09/12/india-vs-pakisthan-1-2025-09-12-13-21-29.jpg)
ಏಷ್ಯಾ ಕಪ್ ಫೈನಲ್ (Asia cup final) ಪಂದ್ಯವು ಭಾರತ ಮತ್ತು ಪಾಕಿಸ್ತಾನ (India vs Pakisthan final ) ನಡುವೆ ನಡೆಯಲಿದೆ. ಈ ಟೂರ್ನಮೆಂಟ್​​ನ 41 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎರಡು ತಂಡಗಳು ಮುಖಾಮುಖಿ ಆಗುತ್ತಿವೆ. ಟೀಮ್ ಇಂಡಿಯಾ ಇದುವರೆಗೆ 8 ಬಾರಿ ಏಷ್ಯಾ ಕಪ್ ಗೆದ್ದಿದೆ. ಪಾಕಿಸ್ತಾನ 2 ಬಾರಿ ಪ್ರಶಸ್ತಿ ಗೆದ್ದಿದೆ.
ಇದನ್ನೂ ಓದಿ:ಭಾರತ vs ಪಾಕಿಸ್ತಾನ ಫೈನಲ್ ಮ್ಯಾಚ್​.. 41 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲು
ಆದರೆ ಎರಡೂ ದೇಶಗಳು ಫೈನಲ್​ನಲ್ಲಿ ಮುಖಾಮುಖಿಯಾಗಿರಲಿಲ್ಲ. ಟೀಂ ಇಂಡಿಯಾ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಫೈನಲ್ ತಲುಪಿದೆ. ಸಲ್ಮಾನ್ ಅಲಿ ಅಘಾ ನಾಯಕತ್ವದಲ್ಲಿ ಪಾಕಿಸ್ತಾನ ಫೈನಲ್ ತಲುಪಿದೆ.
ಈ ಬಾರಿಯ ಏಷ್ಯಾ ಕಪ್​​ನಲ್ಲಿ ಮೂರನೇ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗುತ್ತಿವೆ. ಸೆಪ್ಟೆಂಬರ್ 14 ರಂದು ಲೀಗ್ ಹಂತದಲ್ಲಿ ಮೊದಲ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ಕುಲದೀಪ್ ಯಾದವ್ 3 ವಿಕೆಟ್‌ಗಳನ್ನು ಪಡೆದರು. ಸೂರ್ಯಕುಮಾರ್ ಯಾದವ್ 47 ರನ್ ಗಳಿಸಿ ಗೆಲುವು ತಂದುಕೊಟ್ಟರು. ಸೂಪರ್ ಫೋರ್‌ನಲ್ಲಿ ಮತ್ತೆ ಮುಖಾಮುಖಿಯಾದವು. ಆಗ ಟೀಮ್ ಇಂಡಿಯಾ 6 ವಿಕೆಟ್‌ಗಳಿಂದ ಸೋಲಿಸಿತು. ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 74 ರನ್ ಗಳಿಸಿದರು.
ಇದನ್ನೂ ಓದಿ:ವೈಭವ್ ಸೂರ್ಯವಂಶಿ ಮತ್ತೆ ಸೆನ್ಸೇಷನ್.. ಕ್ರಿಕೆಟ್ ಲೋಕದಲ್ಲಿ ಮತ್ತೊಂದು ಸಾಧನೆ
ಇದೀಗ ಮೂರನೇ ಬಾರಿಗೆ ಸೆಣಸಾಟ ನಡೆಸಲಿವೆ. ಈಗ ಫೈನಲ್ ಆಗಿರುವುದರಿಂದ ಟೀಂ ಇಂಡಿಯಾ ಪಾಕಿಸ್ತಾನವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಭಾರತ ವಿರುದ್ಧ ಮೊದಲ ಸೂಪರ್ ಫೋರ್ ಪಂದ್ಯ ಸೋತ ನಂತರ, ಪಾಕಿಸ್ತಾನ ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಸೋಲಿಸಿದೆ.
ಪಂದ್ಯ ಯಾವಾಗ, ಎಲ್ಲಿ?
ಫೈನಲ್ ಮ್ಯಾಚ್ ಸೆಪ್ಟೆಂಬರ್ 28 ರಂದು ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಯುಎಇಯಲ್ಲಿ ಸಂಜೆ 6:30 ಕ್ಕೆ ಆರಂಭವಾಗಲಿದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್​​ನಲ್ಲಿ ನೇರ ಪ್ರಸಾರ ಇರಲಿದೆ.
ಭಾರತ vs ಪಾಕಿಸ್ತಾನ
ಸೆಪ್ಟೆಂಬರ್ 2022ರಲ್ಲಿ ಜಯಗಳಿಸಿದ ನಂತರ ಭಾರತ ಪಾಕಿಸ್ತಾನದ ವಿರುದ್ಧ ಸತತ ಐದು T20I ಗಳನ್ನು ಗೆದ್ದಿದೆ. ಹೆಡ್-ಟು-ಹೆಡ್ ಸ್ಪರ್ಧೆಯಲ್ಲಿ ಭಾರತ ಮೇಲುಗೈ ಸಾಧಿಸಿದೆ.
- ಒಟ್ಟು ಪಂದ್ಯಗಳು: 15
- ಭಾರತ ಗೆದ್ದಿದೆ: 12
- ಪಾಕಿಸ್ತಾನ ಗೆದ್ದಿದೆ: 3
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ