ಭಾರತಕ್ಕೆ ಸೆಮಿಸ್​ ಸಂಕಷ್ಟ, 2 ಬಿಗ್​ ಚಾಲೆಂಜ್, ಕ್ವಾಲಿಫೈ ಆಗಲು ಏನು ಮಾಡ್ಬೇಕು..?

ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ. ಸೌತ್​ ಆಫ್ರಿಕಾ ಎದುರಿನ ಸೋಲು ಭಾರತ ತಂಡದ ಸೆಮಿಫೈನಲ್​ ಹಾದಿಯನ್ನ ದುರ್ಗಮಗೊಳಿಸಿದೆ. ಟೀಮ್ ಇಂಡಿಯಾ ಸೆಮಿಫೈನಲ್​ಗೆ ಕ್ವಾಲಿಫೈ ಆಗಲ್ವಾ.? ಕ್ವಾಲಿಫೈ ಆಗಬೇಕಂದ್ರೆ ಇರೋ ದಾರಿ ಏನು?

author-image
Ganesh Kerekuli
Team India (19)
Advertisment
  • ಮುಂದಿನ ದಾರಿ ಯಾವುದಯ್ಯಾ ಸೂರ್ಯನ ಸೈನ್ಯಕ್ಕೆ?
  • ಟೀಮ್​ ಇಂಡಿಯಾ ಮುಂದಿವೆ 2 ಬಿಗ್​ ಚಾಲೆಂಜ್
  • ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತಕ್ಕಿದೆ ಅಡ್ವಾಂಟೇಜ್​

T20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾದ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಸೋಲಿಲ್ಲದ ಸರದಾರನಾಗಿ ಸೂಪರ್​ 8 ಹಂತಕ್ಕೆ ಎಂಟ್ರಿ ಕೊಟ್ಟ ಮೆನ್​ ಇನ್​ ಬ್ಲ್ಯೂ ಪಡೆ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ. ಟಿ20 ವಿಶ್ವಕಪ್​ನಲ್ಲಿ ಸತತ 12 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಸೂರ್ಯನ ಸೈನ್ಯ ಒಂದೇ ಒಂದು ಪಂದ್ಯ ಸೋತು ಸಂಕಷ್ಟಕ್ಕೆ ಸಿಲುಕಿದೆ. 

ಟೀಮ್ ಇಂಡಿಯಾಗೆ ಸೆಮಿಸ್​ ಸಂಕಷ್ಟ..!

ಸೂಪರ್​ 8 ಪಂದ್ಯದಲ್ಲಿ ಸೌತ್​ ಆಫ್ರಿಕಾ ನೀಡಿದ್ದ 188 ರನ್​ಗಳ ಟಾರ್ಗೆಟ್​ ಟೀಮ್​ ಇಂಡಿಯಾ ಅಸಾಧ್ಯವಾದ ಗುರಿ ಏನಾಗಿರಲಿಲ್ಲ. ಅಹ್ಮದಾಬಾದ್​​ ಮೈದಾನದಲ್ಲಿ ಇಂಡಿಯನ್​ ಬ್ಯಾಟರ್ಸ್​​ ಹೀನಾಯ ಪರ್ಫಾಮೆನ್ಸ್​ ನೀಡಿದ್ರು. ರನ್​ಗಳಿಕೆಗೆ ಪರದಾಡಿದ ಬ್ಯಾಟರ್ಸ್​ ಪೆವಿಲಿಯನ್ ಪರೇಡ್​ ನಡೆಸಿದ್ರು. ಪರಿಣಾಮ 76 ರನ್ ಅಂತರದಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲುಂಡಿತು. ಈ ಸೋಲಿನೊಂದಿಗೆ ಭಾರತ ತಂಡದ ಸೆಮಿಸ್​ ಹಾದಿಯೂ ಸಂಕಷ್ಟಕ್ಕೆ ಸಿಲುಕಿದೆ. 

ಇದನ್ನೂ ಓದಿ:ಪ್ರತಿದಿನ ಬೆಳಗ್ಗೆ 'ಖಾಲಿ ಹೊಟ್ಟೆಯಲ್ಲಿ' ಎಳನೀರು ಕುಡೀರಿ.. ಆರೋಗ್ಯದಲ್ಲಿ ಆಗುವ ಚಮತ್ಕಾರ ಆನಂದಿಸಿ..

team india (23)

ಟೀಮ್​ ಇಂಡಿಯಾ ಮುಂದೆ 2 ಬಿಗ್​ ಚಾಲೆಂಜ್​.!

ಸೂಪರ್​ 8 ಹಂತದ ಮೊದಲ ಪಂದ್ಯ ಸೋತ ಟೀಮ್ ಇಂಡಿಯಾಗೆ ಇನ್ನೆರಡು ಪಂದ್ಯಗಳು ಬಾಕಿ ಉಳಿದಿದೆ. ಫೆಬ್ರವರಿ 26ರಂದು ಚೆನ್ನೈನಲ್ಲಿ ಜಿಂಬಾಬ್ವೆ ವಿರುದ್ಧ ಸೆಣೆಸಾಡಲಿರೋ ಟೀಮ್ ಇಂಡಿಯಾ, ಮಾರ್ಚ್​​ 1ರಂದು ಕೊಲ್ಕತ್ತಾದ ಈಡನ್​ ಗಾರ್ಡನ್ಸ್​ನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಕಾದಾಡಲಿದೆ. ಈ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲ್ಲಲೇಬೇಕಿದೆ. ಒಂದು ಪಂದ್ಯ ಸೋತರೂ ಟೂರ್ನಿಯಿಂದ ಹೊರ ಬೀಳಲಿದೆ. 

ಭರ್ಜರಿ ಗೆಲುವು ಬೇಕು.!

76 ರನ್​ಗಳ ಬಿಗ್ ಮಾರ್ಜಿನ್​ನಲ್ಲಿ ಸೌತ್​ ಆಫ್ರಿಕಾ ಎದುರು ಸೋಲುಂಡಿದೆ. ಪರಿಣಾಮ ಭಾರತ ತಂಡದ ರನ್​ರೇಟ್​ -3.800ಕ್ಕೆ ಕುಸಿದಿದ್ದು, ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಹೀಗಾಗಿ ಸೆಮಿಫೈನಲ್​ಗೆ ಕ್ವಾಲಿಫೈ ಆಗಬೇಕಂದ್ರೆ, ಉಳಿದ 2 ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಆಗಲ್ಲ. ಭರ್ಜರಿ ಗೆಲುವು ಟೀಮ್ ಇಂಡಿಯಾಗೆ ಬೇಕಿದೆ. 4 ಪಾಯಿಂಟ್​​ಗಳ ಜೊತೆಗೆ ರನ್​ರೇಟ್​​ ಹೆಚ್ಚಿಸಿಕೊಂಡರೆ ಮಾತ್ರ ಸೆಮಿಫೈನಲ್​ಗೆ ಎಂಟ್ರಿ ಕೊಡೋಕೆ ಅವಕಾಶ ಸಿಗಲಿದೆ. 

ಇದನ್ನೂ ಓದಿ: ಮಡಿಕೇರಿ.. ರಸ್ತೆಯಿಂದ 20 ಅಡಿ ಆಳದಲ್ಲಿರುವ ಗದ್ದೆಗೆ ಉರುಳಿದ ಕಾರು..!

Team India (18)

ಮಸ್ಟ್​ ವಿನ್​ ಗೇಮ್​ಗಳಿಗೂ ಮುನ್ನ ಟೀಮ್ ಇಂಡಿಯಾಗೆ ದೊಡ್ಡ ತಲೆನೋವಾಗಿರೋದೆ ಬ್ಯಾಟರ್ಸ್​ ಫಾರ್ಮ್​. ಆರಂಭಿಕರಿಂದ ಹಿಡಿದು ಲೋವರ್​ ಆರ್ಡರ್​ವರೆಗೆ ಎಲ್ಲಾ ಬ್ಯಾಟರ್ಸ್​ ಇನ್​ಕನ್ಸಿಸ್ಟೆಂಟ್​ ಆಟವಾಡ್ತಿದ್ದಾರೆ. ಅಭಿಷೇಕ್ ಶರ್ಮಾ, ತಿಲಕ್​ ವರ್ಮಾ ಆಟವಂತೋ ಮ್ಯಾನೇಜ್​ಮೆಂಟ್​ಗೆ ದೊಡ್ಡ ಟೆನ್ಶನ್​ ತಂದಿಟ್ಟಿದೆ. ಬ್ಯಾಟರ್ಸ್​ ಟ್ರ್ಯಾಕ್​ಗೆ ಮರಳಿದ್ರೆ ಮಾತ್ರ ಟೀಮ್ ಇಂಡಿಯಾ ಸೆಮಿಫೈನಲ್​ ಕನಸು ನನಸಾಗಲಿದೆ. 

ಮೊದಲ ಪಂದ್ಯದಲ್ಲಿ ಸೋತಿದ್ರೂ ಟೀಮ್ ಇಂಡಿಯಾಗೆ ಮುಂದಿನ 2 ಪಂದ್ಯಗಳಲ್ಲಿ ಅಡ್ವಾಂಟೇಜ್ ಕೂಡ ಇದೆ. ಮುಂದಿನ ಪಂದ್ಯಗಳು ನಡೆಯೋ ಚೆನ್ನೈನ ಚೆಪಾಕ್ ಹಾಗೂ ಕೊಲ್ಕತ್ತಾದ ಈಡನ್​ ಗಾರ್ಡನ್ಸ್​ ಮೈದಾನಗಳು ಸ್ಪಿನ್ ಫ್ರೆಂಡ್ಲಿ ಆಗಿದೆ. ಜಿಂಬಾಬ್ವೆ ಹಾಗೂ ವಿಂಡೀಸ್​ ತಂಡದ ಬ್ಯಾಟರ್ಸ್​​ ಸ್ಪಿನ್ ವೀಕ್​ನೆಸ್​​ ಹೊಂದಿರೋದು ಟೀಮ್ ಇಂಡಿಯಾಗೆ ಬಿಗ್ ಅಡ್ವಾಂಟೇಜ್ ಆಗಿದೆ. ಕುಲ್​​​ದೀಪ್​ ಯಾದವ್​, ವರುಣ್​ ಚಕ್ರವರ್ತಿ ಕಾಂಬಿನೇಷನ್​ನಲ್ಲಿ ಕಣಕ್ಕಿಳಿದ್ರೆ ಟೀಮ್ ಇಂಡಿಯಾಗೆ ಸಕ್ಸಸ್​ ಸಿಗೋ ಸಾಧ್ಯತೆಯಿದೆ.

ಜಿಂಬಾಬ್ವೆ ವಿರುದ್ಧ ಮುಂದಿನ ಪಂದ್ಯಕ್ಕೂ ಮುನ್ನ ಟೀಮ್​ ಇಂಡಿಯಾಗೆ ಟೈಮ್ ಇದೆ. ಈ ಅವಧಿಯಲ್ಲಿ ವೀಕ್​ನೆಸ್​​ ಮೇಲೆ ಸೂರ್ಯನ ಸೈನ್ಯ ವರ್ಕೌಟ್​ ಮಾಡಬೇಕಿದೆ. ಮಹತ್ವದ ಪಂದ್ಯಕ್ಕೆ ಟೀಮ್ ಮ್ಯಾನೇಜ್​ಮೆಂಟ್​ ಕೂಡ ಪರ್ಫೆಕ್ಟ್​ ಗೇಮ್​ಪ್ಲಾನ್​ ರೆಡಿ ಮಾಡಬೇಕಿದೆ. ಸರಿಯಾದ ಸಿದ್ಧತೆ ನಡೆಸಿ ಅಖಾಡಕ್ಕಿಳಿದರೆ ಮಾತ್ರ, ಮೆನ್​ ಇನ್​ ಬ್ಲ್ಯೂ ಪಡೆಯ ಸೆಮಿಫೈನಲ್​ ಕನಸು ಜೀವಂತವಾಗಿರಲಿದೆ. 

ಇದನ್ನೂ ಓದಿ: ಬಿಹಾರದಲ್ಲಿ 28 ವರ್ಷದ ಮುಸ್ಲಿಂ ಶಿಕ್ಷಕಿಯನ್ನು ಮದುವೆಯಾದ 60 ವರ್ಷದ ಪ್ರಿನ್ಸಿಪಾಲ್‌!! : ಉದ್ವಿಗ್ನ ಪರಿಸ್ಥಿತಿ ನಿರ್ಮಾಣ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Suryakumar Yadav profile Team India
Advertisment