ಇಂಡಿಯಾ vs ಅಮೆರಿಕಾ: ಟೀಂ ಇಂಡಿಯಾದ ಪ್ಲೇಯಿಂಗ್-11ನಲ್ಲಿ ಯಾಱರು..?

ಟಿ-20 ವಿಶ್ವಕಪ್​​​ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸಿಕೊಂಡಿದೆ. ವಾಂಖೆಡೆಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ USA ತಂಡವನ್ನ ಎದುರಿಸಲಿದೆ. ಟೀಮ್ ಇಂಡಿಯಾ ಈ ಪಂದ್ಯ ಗೆಲ್ಲೋ ಕ್ಲಿಯರ್ ಫೇವರಿಟ್ಸ್. ಅಮೆರಿಕಾ ತಂಡ ಸ್ಕೈ ಪಡೆಗೆ ಪೈಪೋಟಿ ನೀಡಲು ರೆಡಿಯಾಗಿದೆ.

author-image
Ganesh Kerekuli
India vs usa
Advertisment

ಟಿ-20 ವಿಶ್ವಕಪ್​​​ ಮೊದಲ ಪಂದ್ಯಕ್ಕೆ ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸಿಕೊಂಡಿದೆ. ವಾಂಖೆಡೆಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆ USA ತಂಡವನ್ನ ಎದುರಿಸಲಿದೆ. ಟೀಮ್ ಇಂಡಿಯಾ ಈ ಪಂದ್ಯ ಗೆಲ್ಲೋ ಕ್ಲಿಯರ್ ಫೇವರಿಟ್ಸ್. ಅಮೆರಿಕಾ ತಂಡ ಸ್ಕೈ ಪಡೆಗೆ ಪೈಪೋಟಿ ನೀಡಲು ರೆಡಿಯಾಗಿದೆ.

ಡಿಫೆಂಡಿಂಗ್ ಚಾಂಪಿಯನ್ಸ್​ ಟೀಮ್ ಇಂಡಿಯಾ ವಿಶ್ವಕಪ್​​ ಅಖಾಡಕ್ಕೆ ಇಂದು ಎಂಟ್ರಿ ಕೊಡಲಿದೆ. ವಾಂಖೆಡೆ ವಾರ್​ನಲ್ಲಿ ಟೀಮ್ ಇಂಡಿಯಾ ಮತ್ತು USA ತಂಡ ಪರಸ್ಪರ ಮುಖಾಮುಖಿಯಾಗಲಿದೆ. ನ್ಯೂಜಿಲೆಂಡ್ T20 ಸರಣಿ ಮತ್ತು ಸೌತ್ ಆಫ್ರಿಕಾ ವಿರುದ್ಧ ಪ್ರಾಕ್ಟೀಸ್ ಮ್ಯಾಚ್​ನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಸ್ಕೈ ಪಡೆ, ಇಂದು ಅದೇ ಕಾನ್ಫಿಡೆನ್ಸ್​ನಲ್ಲಿ ಯಾವುದೇ ಗೊಂದಲವಿಲ್ಲದೆ ಕಣಕ್ಕಿಳಿಯಲಿದೆ.  

ಪ್ಲೇಯಿಂಗ್ 11ನಲ್ಲಿ ಯಾವುದೇ ಗೊಂದಲ ಇಲ್ಲ

ಅಮೆರಿಕಾ ವಿರುದ್ಧದ ಪಂದ್ಯವನ್ನ ಟೀಮ್ ಇಂಡಿಯಾ ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿ ಬಲಿಷ್ಟ ಪ್ಲೇಯಿಂಗ್ ಇಲೆವೆನ್​​​​ನನ್ನೇ, ಫೀಲ್ಡ್​​ಗೆ ಇಳಿಸಲು ಮುಂದಾಗಿದೆ. ಅಗ್ರೆಸಿವ್ ಫಾರ್ಮುಲಾದೊಂದಿಗೆ ಯುಎಸ್​​ ತಂಡವನ್ನ ಬಗ್ಗುಬಡಿಯಲು ಸಜ್ಜಾಗಿರುವ ಮೆನ್-ಇನ್-ಬ್ಲೂ ಪಡೆ, ಗ್ರೂಪ್​ 'ಎ'ನಲ್ಲಿ ಟಾಪರ್ ಆಗಲು ಹೊರಟಿದೆ.

ಕೋಚ್ ಗೌತಮ್​​ ಗಂಭೀರ್​​ಗೆ, ಆಲ್​ರೌಂಡರ್ಸ್ ಮೇಲೆ ಹೆಚ್ಚು ಒಲವು. ಹಾಗಾಗಿ ವಿಶ್ವಕಪ್ ಟೂರ್ನಿಯಲ್ಲಿ ಆಲ್​ರೌಂಡರ್​ಗಳಿಗೆ, ಹೆಚ್ಚು ಮಣೆ ಹಾಕಲು ನಿರ್ಧರಿಸಿದ್ದಾರೆ. ಇಂದಿನ ಪಂದ್ಯದಲ್ಲೂ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಮೂವರೂ ಕಣಕ್ಕಿಳಿದ್ರೂ ಅಚ್ಚರಿ ಪಡಬೇಕಿಲ್ಲ.

ಬೂಮ್ರಾಗೆ ಆರ್ಷ್​ದೀಪ್ ಸಾಥ್ 

ಟೀಮ್ ಇಂಡಿಯಾ ಬೌಲಿಂಗ್ ಅಟ್ಯಾಕ್​ ಕೂಡ ಸ್ಟ್ರಾಂಗ್ ಆಗಿದೆ. ಜಸ್ಪ್ರೀತ್ ಬೂಮ್ರಾ ಪೇಸ್ ಅಟ್ಯಾಕ್​ನ ಲೀಡರ್ ಆದ್ರೆ ಆರ್ಷ್​ದೀಪ್ ಸಿಂಗ್ ಬೂಮ್ರಾ ಜೊತೆ ನ್ಯೂ ಬಾಲ್ ಶೇರ್ ಮಾಡಿಕೊಳ್ಳಲಿದ್ದಾರೆ. ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್ ಅಲಭ್ಯತೆಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಪೇಸ್ ಅಟ್ಯಾಕ್​ನ ಜವಾಬ್ದಾರಿ ನಿಭಾಯಿಸಲಿದ್ದಾರೆ. 

ಬ್ಯಾಟಿಂಗ್, ಬೌಲಿಂಗ್​ಗಿಂತ ಸೂರ್ಯಕುಮಾರ್ ಯಾದವ್ ಪಡೆ, ಫೀಲ್ಡಿಂಗ್ ಮೇಲೆ ಹೆಚ್ಚು ಗಮನ ಹರಿಸಲು ಮುಂದಾಗಿದೆ. ಪ್ರಮುಖ ಟೂರ್ನಿಗಳಲ್ಲಿ ಟೀಮ್ ಇಂಡಿಯಾಕ್ಕೆ ಹೆಚ್ಚು ಹಿನ್ನಡೆಯಾಗಿದ್ದೇ, ಕ್ಯಾಚ್ ಡ್ರಾಪ್​ಗಳಿಂದಾಗಿ. ಹಾಗಾಗಿ ಪ್ರಸಕ್ತ ವಿಶ್ವಕಪ್​ನಲ್ಲಿ ಫೀಲ್ಡಿಂಗ್​ನಲ್ಲಿ ಒಂದೇ ಒಂದು ತಪ್ಪು ಮಾಡದಿರಲು ಟೀಮ್ ಮ್ಯಾನೇಜ್ಮೆಂಟ್ ಮುಂದಾಗಲಿದೆ.

ಇದನ್ನೂ ಓದಿ:ಅಂಡರ್ 19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ : 6ನೇ ಭಾರಿಗೆ ಅಂಡರ್‌-19 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ

ವಿಶ್ವಕಪ್ ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ನಡೆಯೋದ್ರಿಂದ, ಟೀಮ್ ಇಂಡಿಯಾ ಎಲ್ಲಾ ಪಂದ್ಯಗಳನ್ನ ಪ್ರತಿಷ್ಟೆಯಾಗಿ ತೆಗೆದುಕೊಂಡಿದೆ. ಒಂದೇ ಒಂದು ಪಂದ್ಯ ಸೋತ್ರೂ, ತಂಡದ ಪಾಯಿಂಟ್​ ಟೇಬಲ್​ನಲ್ಲಿ ಏರಿಳಿತ ಆಗಲಿದೆ. ಅದ್ರಲ್ಲೂ ನೆಟ್​ರನ್​ರೇಟ್​ನಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದ್ರೂ, ಸೂಪರ್​ ಏಯ್ಟ್​​ ಹಂತದ ಪ್ರವೇಶಕ್ಕೆ ಮುಳುವಾಗಲಿದೆ. ನೆಟ್​ರನ್​ರೇಟ್ ಬಗ್ಗೆ ಎಚ್ಚರದ ನಡೆ ಇಡಲು, ಟೀಮ್ ಇಂಡಿಯಾ ಪ್ಲಾನ್ ಆಗಿದೆ.

USA ತಂಡದಲ್ಲಿ ಟ್ಯಾಲೆಂಟೆಡ್ ಕ್ರಿಕೆಟರ್ಸ್​..!

ಟೀಮ್ ಇಂಡಿಯಾ ಎದುರಾಳಿ ಅಮೆರಿಕಾ ತಂಡ ಅಂದುಕೊಂಡಂತೆ ದುರ್ಬಲವಾಗಿಲ್ಲ. ತಂಡದಲ್ಲಿ ಪ್ರತಿಭಾವಂತ ಕ್ರಿಕೆಟಿಗರ ದಂಡೇ ಇದೆ. ನಾಯಕ ಮೊನಕ್ ಪಟೇಲ್, ಅಲಿ ಖಾನ್, ಕರ್ನಾಟಕ ಸ್ಪಿನ್ನರ್ ಕೆಂಜಿಗೆ, ಮುಕ್ಕಮಲ್ಲಾ, ಸೌರಭ್ ನೇತ್ರವಲ್ಕರ್ ಸೇರಿದಂತೆ ಅನೇಕ ಟ್ಯಾಲೆಂಟೆಡ್ ಕ್ರಿಕೆಟಿಗರಿದ್ದಾರೆ. ಟೀಮ್ ಇಂಡಿಯಾಕ್ಕೆ ಟಫ್ ಫೈಟ್ ನೀಡಲು ರೆಡಿಯಾಗಿದ್ದಾರೆ. ಟೀಮ್ ಇಂಡಿಯಾ USA ವಿರುದ್ಧ ಗೆದ್ದು ವಿಶ್ವಕಪ್​ನಲ್ಲಿ ಶುಭಾರಂಭ ಮಾಡುವ ತವಕದಲ್ಲಿದ್ರೆ, ಅತ್ತ ಅಮೆರಿಕಾ ಸೂರ್ಯಕುಮಾರ್ ಯಾದವ್ ಪಡೆಗೆ ಟಫ್ ಫೈಟ್ ನೀಡುವ ವಿಶ್ವಾಸದಲ್ಲಿದೆ.

ಇದನ್ನೂ ಓದಿ: ಇವತ್ತು ಓಲಾ, ಉಬರ್​, ಱಪಿಡೋ ಮುಷ್ಕರ.. ಬೆಂಗಳೂರಲ್ಲಿ ಕ್ಯಾಬ್ ಸಿಗಲ್ವಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

india vs usa Surya kumar Yadav T20 world cup
Advertisment