/newsfirstlive-kannada/media/post_attachments/wp-content/uploads/2023/06/Test-Team-India-1.jpg)
ಸೋಲು.. ಹೀನಾಯ ಸೋಲು.. ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ದೊಡ್ಡ ಅಂತರದ ಸೋಲು. ಹೋಮ್​ಗ್ರೌಂಡ್​ನಲ್ಲಿ 2 ವರ್ಷದ ಅಂತರದಲ್ಲಿ 2ನೇ ಬಾರಿ ವೈಟ್​ವಾಷ್​ ಮುಖಭಂಗ. ಸೌತ್​ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾ ಹೀನಾತಿಹೀನ ಪರ್ಫಾಮೆನ್ಸ್​ ನೀಡಿತು. ಬ್ಯಾಟಿಂಗ್​, ಬೌಲಿಂಗ್​, ಫೀಲ್ಡಿಂಗ್​.. ಮೂರೂ ವಿಭಾಗದಲ್ಲಿ ಅತ್ಯಂತ ಕಳಪೆ ಪರ್ಫಾಮೆನ್ಸ್​ ನೀಡಿದ ಟೀಮ್​ ಇಂಡಿಯಾ ಸೋಲುಂಡು ಕ್ರಿಕೆಟ್​ ಅಭಿಮಾನಿಗಳ ಎದುರು ತಲೆತಗ್ಗಿಸಿದೆ.
ಈ ಸೋಲು ಇದೀಗ ಮುಗಿದ ಅಧ್ಯಾಯ. ಮುಂದಾದ್ರೂ ಈ ತಪ್ಪಾಗದಂತೆ ತಿದ್ದಿಕೊಳ್ಳಬೇಕಿದೆ. ಟೆಸ್ಟ್​ನಲ್ಲಿ ಟೀಮ್​ ಇಂಡಿಯಾದ ಹೀನಾಯ ಪರ್ಫಾಮೆನ್ಸ್​ಗೆ ಹಲವು ಕಾರಣಗಳಿವೆ. ಅದ್ರಲ್ಲಿ ಪ್ರಮುಖವಾದ ಕಾರಣ ನಂಬರ್​ 3 ಸ್ಲಾಟ್​. ಈ ಗೊಂದಲ ಬಗೆ ಹರಿಯದೇ ಇದ್ರೆ ಟೀಮ್ ಇಂಡಿಯಾಗೆ ಹಿನ್ನಡೆ ತಪ್ಪಿದ್ದಲ್ಲ.
ಇದನ್ನೂ ಓದಿ:ಮೆಗಾ ಹರಾಜಿನಲ್ಲಿ RCB ಜಾಣ್ಮೆಯ ಆಟ.. ಹೊಸ ಟೀಂ ಹೇಗಿದೆ..?
/filters:format(webp)/newsfirstlive-kannada/media/media_files/2025/10/31/pant_kohli-2025-10-31-10-40-44.jpg)
ಬಗೆಹರಿಯದ ನಂಬರ್​ 3 ಸ್ಲಾಟ್​ ಗೊಂದಲ.!
ಟೆಸ್ಟ್​ ಕ್ರಿಕೆಟ್​ನಲ್ಲಿ ಟೀಮ್​ ಇಂಡಿಯಾದ ಬ್ಯಾಟಿಂಗ್​ ಆರ್ಡರ್​ ಸೆಟಲ್​ ಆಗಿಲ್ಲ. ಅದ್ರಲ್ಲೂ ನಂಬರ್​ 3 ಸ್ಲಾಟ್​ ಅಂತೂ ಮ್ಯೂಸಿಕಲ್​ ಚೇರ್​ ಆಗಿ ಬಿಟ್ಟಿದೆ. ಲೆಜೆಂಡರಿ ರಾಹುಲ್​ ದ್ರಾವಿಡ್​ ನಿವೃತ್ತಿ ಬಳಿಕ ಚೇತೇಶ್ವರ್​ ಪೂಜಾರ ಆ ಸ್ಥಾನವನ್ನ ಸಮರ್ಥವಾಗಿ ತುಂಬಿದ್ರು. ಆದರೆ, ಪೂಜಾರ ನಿವೃತ್ತಿಯಾದ ಮೇಲೆ ಆ ಸ್ಥಾನಕ್ಕೆ ಸಮರ್ಥ ಆಟಗಾರನೇ ಬಂದಿಲ್ಲ. ಸರಣಿಗೆ ಒಬ್ಬೊಬ್ಬ ಆಟಗಾರರು ಬಂದು ಆಡಿದ್ದಾರೆ.
7 ಮಂದಿ ನಂ.3ನಲ್ಲಿ ಕಣಕ್ಕೆ.!
ಸೌತ್​ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಮ್ಯಾಚ್​ನಲ್ಲಿ ವಾಷಿಂಗ್ಟನ್​ ಸುಂದರ್​ ನಂಬರ್​ 3 ಸ್ಲಾಟ್​ನಲ್ಲಿ ಆಡಿದ್ರು. ಎರಡೂ ಇನ್ನಿಂಗ್ಸ್​ಗಳಲ್ಲಿ ಉಳಿದೆಲ್ಲಾ ಬ್ಯಾಟರ್​ಗಳಿಗಿಂತ ಉತ್ತಮ ಆಟವನ್ನೇ ಆಡಿದ್ರು. ಆದ್ರೆ, 2ನೇ ಟೆಸ್ಟ್​ನಲ್ಲಿ ನೋಡಿದ್ರೆ ಸುಂದರ್​ ಮತ್ತೆ ಲೋವರ್​ ಆರ್ಡರ್​ಗೆ ಶಿಫ್ಟ್​ ಆಗಿದ್ರು. ಸಾಯಿ ಸುದರ್ಶನ್​ ಮತ್ತೆ ನಂಬರ್​ 3ಯಲ್ಲಿ ಬ್ಯಾಟಿಂಗ್​ ನಡೆಸಿದ್ರು. ಮತ್ತದೇ ಫ್ಲಾಪ್​ ಶೋ ನೀಡಿದ್ರು.
ಇಂಗ್ಲೆಂಡ್​ನಲ್ಲಿ ನಡೆದ ಟೆಸ್ಟ್​ ಸರಣಿಯಲ್ಲೂ ಇದೇ ಕಥೆ. ಆರಂಭಿಕ ಪಂದ್ಯಗಳಲ್ಲಿ ಕರುಣ್​ ನಾಯರ್​, ಆ ಬಳಿಕ ಸಾಯಿ ಸುದರ್ಶನ್​ 3ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ್ರು. ಇಬ್ಬರೂ ನೀಡಿದ್ದು ಫ್ಲಾಪ್​ ಶೋನೇ. ನೀವು ನಂಬ್ತಿರೋ ಇಲ್ವೋ.. ಸಪ್ಟೆಂಬರ್​ 2024ರ ಬಳಿಕ ಈವರೆಗೆ ಬರೋಬ್ಬರಿ 7 ಮಂದಿ ಆಟಗಾರರು ನಂಬರ್​ 3ನಲ್ಲಿ ಆಡಿದ್ದಾರೆ. 2024ರ ಸಪ್ಟೆಂಬರ್​​ ಬಳಿಕ ಶುಭ್​ಮನ್ ಗಿಲ್ ನಂಬರ್​ 3 ಸ್ಲಾಟ್​ನಲ್ಲಿ​ 13 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿದ್ದು 401 ರನ್​ಗಳಿಸಿದ್ದಾರೆ. ಸಾಯಿ ಸುದರ್ಶನ್​ 11 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್​ ಬೀಸಿ ಕೇವಲ 302 ರನ್​ಗಳಿಸಿದ್ರೆ, ಕರುಣ್​ ನಾಯರ್​ 4 ಇನ್ನಿಂಗ್ಸ್​ಗಳಿಂದ 111 ರನ್​ಗಳಿಸಿದ್ದಾರೆ. 2 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್​ ನಡೆಸಿರೋ ಕೊಹ್ಲಿ 70, ವಾಷಿಂಗ್ಟನ್​ ಸುಂದರ್​ 60, ದೇವದತ್ತ್​ ಪಡಿಕ್ಕಲ್​ 25 ಹಾಗೂ ರಾಹುಲ್​ 24 ರನ್​ಗಳಿಸಿದ್ದಾರೆ.
/filters:format(webp)/newsfirstlive-kannada/media/media_files/2025/08/25/cheteshwar_pujara_bat-2025-08-25-10-23-44.jpg)
ಈ ಆಟಗಾರರ ಪೈಕಿ ಕೊಹ್ಲಿ ರಿಟೈರ್​ ಆಗಿದ್ರೆ ಗಿಲ್​ 4ನೇ ಕ್ರಮಾಂಕಕ್ಕೆ ಶಿಫ್ಟ್​ ಆಗಿದ್ದಾರೆ. ರಾಹುಲ್​ ಓಪನರ್​ ಆಗಿ ಫಿಕ್ಸ್ ಆಗಿದ್ರೆ, ಕರುಣ್​ ನಾಯರ್​ಗೆ ಮತ್ತೆ ಡೋರ್​ ಓಪನ್​ ಆಗೋದು ಅನುಮಾನವೇ. ಸಾಯಿ ಸುದರ್ಶನ್​, ವಾಷಿಂಗ್ಟನ್ ಸುಂದರ್​, ದೇವದತ್​ ಪಡಿಕ್ಕಲ್​ ಈ ಮೂವರೇ ಸದ್ಯ ಮ್ಯಾನೇಜ್​ಮೆಂಟ್​ಗಿರೋ ಆಯ್ಕೆಯಾಗಿದ್ದಾರೆ. ಸುದರ್ಶನ್​ ವೈಫಲ್ಯ ಅನುಭವಿಸಿರೋದ್ರಿಂದ ಪಡಿಕ್ಕಲ್​ಗೆ ಹೆಚ್ಚು ಅವಕಾಶ ನೀಡೋ ಆಯ್ಕೆ ಮ್ಯಾನೇಜ್​ಮೆಂಟ್​ ಮುಂದಿದೆ.
ಟೀಮ್​ ಇಂಡಿಯಾ ಮುಂದಿನ ಟೆಸ್ಟ್​ ಸರಣಿ ನಡೆಯೋದು 2026ರ ಆಗಸ್ಟ್​ನಲ್ಲಿ.​​ ಅಲ್ಲಿಯವರೆಗೆ ಸುದೀರ್ಘ ಕಾಲ ಸೆಲೆಕ್ಟರ್ಸ್​ ಹಾಗೂ ಮ್ಯಾನೇಜ್​ಮೆಂಟ್​ ಮುಂದೆ ಸಮಯವಿದೆ. ಇರೋ ಆಟಗಾರನ್ನೇ ಮುಂದುವರೆಸಬೇಕಾ.? ಅಥವಾ ಡೊಮೆಸ್ಟಿಕ್​​ ಕ್ರಿಕೆಟ್​ನತ್ತ ಗಮನ ಹರಿಸಿ ಯುವ ಆಟಗಾರನನ್ನ 3ನೇ ಕ್ರಮಾಂಕಕ್ಕೆ ರೆಡಿ ಮಾಡಬೇಕಾ.? ಅನ್ನೋದನ್ನ ಮ್ಯಾನೇಜ್​ಮೆಂಟ್​, ಸೆಲೆಕ್ಷನ್​ ಕಮಿಟಿ & ಬಿಸಿಸಿಐ ನಿರ್ಧರಿಸಬೇಕಿದೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us