Advertisment

ದೀಪ್ತಿ ಶರ್ಮಾಗೆ ಜಾಕ್​ಪಾಟ್​.. ಅಮೆಲಿಯಾ ಕೇರ್​ಗೆ 3 ಕೋಟಿ ನೀಡಿದ ಮುಂಬೈ ಇಂಡಿಯನ್ಸ್

ಮಹಿಳಾ ಪ್ರೀಮಿಯರ್ ಲೀಗ್​ ಆಕ್ಷನ್​ ಅಂತ್ಯ ಕಂಡಿದೆ. ಕೋಟಿ-ಕೋಟಿ ಹಣದ ಹೊಳೆ ಹರಿಸಿದ ಫ್ರಾಂಚೈಸಿಗಳು ಮುಂದಿನ ಸೀಸನ್​ಗೆ ಬಲಿಷ್ಠ ತಂಡ ಕಟ್ಟುವಲ್ಲಿ ಸಕ್ಸಸ್​ ಕಂಡಿವೆ. ಮೆಗಾ ಆಕ್ಷನ್​ನಲ್ಲಿ ನಮ್ಮ ಆರ್​​ಸಿಬಿಯ ಬಿಡ್ಡಿಂಗ್​ ಹೇಗಿತ್ತು? ಅತಿ ಹೆಚ್ಚು ಮೊತ್ತಕ್ಕೆ ಸೇಲ್​ ಆದ ಟಾಪ್​-5 ಆಟಗಾರ್ತಿಯರು ಯಾರು?

author-image
Ganesh Kerekuli
Deepti and amelia
Advertisment
  • ಶಿಖಾ ಪಾಂಡೆಗಾಗಿ ಆರ್​​ಸಿಬಿ-ಯುಪಿ ಭರ್ಜರಿ ಫೈಟ್​
  • ಗುಜರಾತ್​ ಜೈಂಟ್ಸ್​ ಪಾಲಾದ ಸೋಫಿ ಡಿವೈನ್​
  • ಮೆಗ್​ ಲ್ಯಾನಿಂಗ್​ಗೆ ಯುಪಿ ವಾರಿಯರ್ಸ್​ ಗಾಳ

ಬಹು ನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್​ ಆಕ್ಷನ್​ ಅಂತ್ಯ ಕಂಡಿದೆ. ಕೋಟಿ-ಕೋಟಿ ಹಣದ ಹೊಳೆ ಹರಿಸಿದ ಫ್ರಾಂಚೈಸಿಗಳು ಮುಂದಿನ ಸೀಸನ್​ಗೆ ಬಲಿಷ್ಠ ತಂಡ ಕಟ್ಟುವಲ್ಲಿ ಸಕ್ಸಸ್​ ಕಂಡಿವೆ. ಮೆಗಾ ಆಕ್ಷನ್​ನಲ್ಲಿ ನಮ್ಮ ಆರ್​​ಸಿಬಿಯ ಬಿಡ್ಡಿಂಗ್​ ಹೇಗಿತ್ತು? ಅತಿ ಹೆಚ್ಚು ಮೊತ್ತಕ್ಕೆ ಸೇಲ್​ ಆದ ಟಾಪ್​-5 ಆಟಗಾರ್ತಿಯರು ಯಾರು? 

Advertisment

ಆಕ್ಷನ್ ಅಖಾಡದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಜಾಣ್ಮೆಯ ಹೆಜ್ಜೆ ಇಟ್ಟಿತು. ಪಕ್ಕಾ ಪ್ಲಾನ್​ನೊಂದಿಗೆ ಕಣಕ್ಕಿಳಿದಿದ್ದ ರೆಡ್​ಆರ್ಮಿ ಚೀಪ್​ & ಬೆಸ್ಟ್​ ಆಟಗಾರ್ತಿಯರನ್ನ ಬೇಟೆಯಾಡಿತು. ಯಾರೊಬ್ಬರ ಮೇಲೂ ಕನಿಷ್ಟ 1 ಕೋಟಿ ಹಣವನ್ನೂ ಇನ್ವೆಸ್ಟ್​ ಮಾಡಲಿಲ್ಲ. ಇಂಗ್ಲೆಂಡ್​ ವೇಗಿ ಲಾರೆನ್​ ಬೆಲ್​ಗೆ 90 ಲಕ್ಷ ನೀಡಿದ್ದೇ ಆರ್​​ಸಿಬಿಯ ದುಬಾರಿ ಖರೀದಿ.

ಇದನ್ನೂ ಓದಿ: ಅಭಿಮಾನಿಗಳಿಗೆ ಬೇಸರ ತಂದ ರಾಹುಲ್ ಆಟ.. ಯಾಕೆ ಹೀಗೆ ಮಾಡಿದ್ರು..?

ಸತತ 5 ಪಂದ್ಯದಲ್ಲಿ ಹೀನಾಯ ಸೋಲು.. WPL ಟೂರ್ನಿಯಿಂದಲೇ RCB ಔಟ್‌; ಅಭಿಮಾನಿಗಳ ಆಕ್ರೋಶ!

ಸ್ಮೃತಿ ಮಂದಾನ, ಎಲ್ಲಿಸ್​ ಪೆರ್ರಿ, ರಿಷಾ ಘೋಷ್​, ಶ್ರೇಯಾಂಕ ಪಾಟೀಲ್​ನ ರಿಟೈನ್​ ಮಾಡಿಕೊಂಡಿದ್ದ ಆರ್​​ಸಿಬಿ ಅಳೆದುತೂಗಿ ಲೆಕ್ಕಾಚಾರ ಹಾಕಿ ಆಟಗಾರ್ತಿಯರನ್ನ ಖರೀದಿಸಿತು. ಭಾರತದ ಕ್ಲಾಸ್​ ಆಟಗಾರ್ತಿಯರಾದ ರಾಧಾ ಯಾದವ್​, ಪೂಜಾ ವಸ್ತ್ರಾಕರ್​, ಅರಂಧತಿ ರೆಡ್ಡಿ, ಪ್ರೇಮಾ ಯಾದವ್​ ನ ಯಶಸ್ವಿಯಾಗಿ ಬಿಡ್​ ಮಾಡ್ತು. ಆಸ್ಟ್ರೇಲಿಯಾದ ಝಾರ್ಜಿಯಾ ವೋಲ್​, ಗ್ರೇಸ್​ ಹ್ಯಾರೀಸ್​, ಸೌತ್​ ಆಫ್ರಿಕಾದ ನದಿನೆ ದಿ ಕ್ಲೆರ್ಕ್​​, ಇಂಗ್ಲೆಂಡ್​ ಬೌಲರ್​ ಲಿನ್ಸೀ ಸ್ಮಿತ್​ ​ಆರ್​​ಸಿಬಿ ಖರೀದಿಸಿದ ಪ್ರಮುಖ ವಿದೇಶಿ ಆಟಗಾರ್ತಿಯರು. 

ಹರಾಜಿನಲ್ಲಿ ಆಲ್​​ರೌಂಡರ್​ ದೀಪ್ತಿ ಶರ್ಮಾಗೆ ಜಾಕ್​ಪಾಟ್​.!

ಟೀಮ್​ ಇಂಡಿಯಾ ಆಲ್​​ರೌಂಡರ್​ ದೀಪ್ತಿ ಶರ್ಮಾ ಮೆಗಾ ಹರಾಜಿನ ಮೋಸ್ಟ್​ ಎಕ್ಸ್​ಪೆನ್ಸಿವ್​ ಪ್ಲೇಯರ್​ ಎನಿಸಿದ್ರು. 50 ಲಕ್ಷ ಬೇಸ್​​ ಪ್ರೈಸ್​ಗೆ ಹರಾಜಿನ ಕಣದಲ್ಲಿದ್ದ ದೀಪ್ತಿ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್​ ಹೆಚ್ಚು ಆಸಕ್ತಿ ತೋರಿಸಿತ್ತು. ಆದ್ರೆ, ಆರ್​​ಟಿಎಮ್​ ಅಸ್ತ್ರ ಬಳಸಿದ ಯುಪಿ ವಾರಿಯರ್ಸ್​ 3.20 ಕೋಟಿ ನೀಡಿ ತೆಕ್ಕೆಗೆ ತೆಗೆದುಕೊಳ್ತು. 

Advertisment

ನ್ಯೂಜಿಲೆಂಡ್​ ಆಲ್​​ರೌಂಡರ್​​ ಅಮೆಲಿಯಾ ಕೀರ್​ನ ವಾಪಸ್​ ತಂಡಕ್ಕೆ ಕರೆ ತರುವಲ್ಲಿ ಅಂಬಾನಿ ಬ್ರಿಗೆಡ್​ ಮುಂಬೈ ಇಂಡಿಯನ್ಸ್​ ಯಶಸ್ವಿಯಾಯ್ತು. 50 ಲಕ್ಷ ಬೇಸ್​ ಪ್ರೈಸ್​​ನೊಂದಿಗೆ ಹರಾಜಿನ ಕಣದಲ್ಲಿದ್ದ ಅಮೇಲಿಯಾ ಕೇರ್​ ಖರೀದಿಗೆ ಯುಪಿ ವಾರಿಯರ್ಸ್​ ಹಾಗೂ ಮುಂಬೈ ಜಿದ್ದಿಗೆ ಬಿದ್ದಿದ್ವು. ಅಂತಿಮವಾಗಿ 3 ಕೋಟಿ ನೀಡಿ ಮುಂಬೈ ಖರೀದಿಸಿತು. 

ಭಾರತೀಯ ಅನುಭವಿ ವೇಗಿ ಶಿಖಾ ಪಾಂಡೆ 3ನೇ ಎಕ್ಸ್​ಪೆನ್ಸಿವ್​ ಪ್ಲೇಯರ್​ ಎನಿಸಿದ್ರು. ಶಿಖಾ ಖರೀದಿಗೆ ಆರ್​ಸಿಬಿ-ಯುಪಿ ಫೈಟ್​ ನಡೆಸಿದ್ವು. ಅಂತಿಮವಾಗಿ ಯುಪಿ 2.40 ಕೋಟಿ ನೀಡಿ ಶಿಖಾ ಪಾಂಡೆಯನ್ನ ಖರೀದಿಸಿತು. 

ಇದನ್ನೂ ಓದಿ:ತಾವೇ ತೋಡಿದ ಹಳ್ಳಕ್ಕೆ ಬಿದ್ದ ಗಂಭೀರ್! ಸೋಲಿಗೆ ಅಸಲಿ ಕಾರಣ ರಿವೀಲ್..!

Advertisment

ಮುಂಬೈ ಟೀಮ್​ಗೆ RCB ಗರ್ಲ್ಸ್​ ರಾಯಲ್ ಚಾಲೆಂಜ್.. ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಸ್ಮೃತಿ ಮಂದಾನ

ನ್ಯೂಜಿಲೆಂಡ್ ಆಲ್​​​ರೌಂಡರ್​​ ಸೋಫಿ ಡಿವೈನ್​ ಗುಜರಾತ್​ ಜೈಂಟ್ಸ್​ ತಂಡದ ಪಾಲಾದ್ರು. ಸೋಫಿ ಖರೀದಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಮಾಜಿ ಆಟಗಾರ್ತಿಯನ್ನ ಉಳಿಸಿಕೊಳ್ಳಲು ಆರ್​ಸಿಬಿ ಆರಂಭದಲ್ಲೇ ಪ್ರಯತ್ನಪಡ್ತಿ. ಬಳಿಕ ಗುಜರಾತ್​-ಡೆಲ್ಲಿ ಪೈಪೋಟಿ ನಡೆಸಿದ್ವು. ಅಂತಿಮವಾಗಿ 2 ಕೋಟಿಗೆ ಬಿಡ್​ ಮಾಡಿ ಗುಜರಾತ್,​ ಸೋಫಿ ಡಿವೈನ್​ನ ತೆಕ್ಕೆಗೆ ತೆಗೆದುಕೊಳ್ತು. 

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್​ ಖರೀದಿಗೆ ಯುಪಿ-ಡೆಲ್ಲಿ ನಡುವೆ ಫೈಟ್​ ನಡೀತು. ಮಾಜಿ ನಾಯಕಿಯನ್ನ ಉಳಿಸಿಕೊಳ್ಳಲು 1.80 ಕೋಟಿಯವರೆಗೆ ಡೆಲ್ಲಿ ಕ್ಯಾಪಿಟಲ್ಸ್​ ಬಿಡ್​ ಮಾಡ್ತು. ಅಂತಿಮವಾಗಿ ಮೆಗ್​ ಲ್ಯಾನಿಂಗ್​ 1.90 ಕೋಟಿ ಹಣಕ್ಕೆ ಯುಪಿ ವಾರಿಯರ್ಸ್​ ಪಾಲಾದ್ರು. 

ಒಟ್ಟಿನಲ್ಲಿ ಸ್ಟಾರ್​ ಆಟಗಾರ್ತಿಯರು ಫ್ರಾಂಚೈಸಿಗಳ ಫೇವರಿಟ್​ ಅನ್ನೋದು ನಿನ್ನೆಯ ಮೆಗಾ ಆಕ್ಷನ್​ನಲ್ಲೂ ಪ್ರೂವ್​ ಆಯ್ತು. ನಿರೀಕ್ಷೆಯಂತೆ ಸ್ಟಾರ್​ಗಳ ಮೇಲೆ ನಾ ಮುಂದು, ತಾ ಮುಂದು ಎಂದು ಬಿಡ್​ ಮಾಡಿದ ಫ್ರಾಂಚೈಸಿಗಳು ಕೋಟಿ-ಕೋಟಿ ಖರ್ಚು ಮಾಡಿದ್ವು. 

Advertisment

ಇದನ್ನೂ ಓದಿ:ಮೆಗಾ ಹರಾಜಿನಲ್ಲಿ RCB ಜಾಣ್ಮೆಯ ಆಟ.. ಹೊಸ ಟೀಂ ಹೇಗಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WPL 2026
Advertisment
Advertisment
Advertisment