Advertisment

ತಾವೇ ತೋಡಿದ ಹಳ್ಳಕ್ಕೆ ಬಿದ್ದ ಗಂಭೀರ್! ಸೋಲಿಗೆ ಅಸಲಿ ಕಾರಣ ರಿವೀಲ್..!

ಟೀಮ್ ಇಂಡಿಯಾ ವೈಟ್​ವಾಶ್​​​​​ ಸರಣಿ ಮುಖಭಂಗಕ್ಕೆ ಹಲವು ಕಾರಣಗಳಿವೆ. ತಾವೇ ತೋಡಿದ ಗುಂಡಿಗೆ ಬಿದ್ದಿರುವ ಕೋಚ್ ಗೌತಮ್ ಗಂಭೀರ್ ಌಂಡ್ ಟೀಮ್, ಬ್ಯಾಟಿಂಗ್-ಬೌಲಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ವೈಫಲ್ಯ ಅನುಭವಿಸಿದೆ.

author-image
Ganesh Kerekuli
Gambhir and agarkar
Advertisment
  • ಸ್ಪಿನ್​ ಎದುರು ಭಾರತೀಯ ಬ್ಯಾಟರ್ಸ್​ ಫ್ಲಾಪ್
  • ಆಟಗಾರರ​ ಆಯ್ಕೆಯಲ್ಲೂ ಬದಲಾವಣೆ
  • ಪ್ಲೇಯಿಂಗ್​ 11ನಲ್ಲಿ ಪದೇ ಪದೇ ಬದಲಾವಣೆ

ಗುವಾಹಟಿ ಟೆಸ್ಟ್​ ಪಂದ್ಯದ ಸೋಲು ಕ್ರಿಕೆಟ್ ಅಭಿಮಾನಿಗಳಿಗೆ ಅರಗಿಸಿಕೊಳ್ಳೋದಕ್ಕೆ ಆಗ್ತಿಲ್ಲ. ಆ ಸೋಲು ಟೀಮ್ ಇಂಡಿಯಾ ಟೆಸ್ಟ್ ಇತಿಹಾಸದಲ್ಲೇ 2ನೇಯ ಅತಿ ದೊಡ್ಡ ಹೀನಾಯ ಸೋಲಾಗಿದೆ.  ಎರಡೂವರೆ ದಶಕದ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಳಪೆ ದಾಖಲೆ ನಿರ್ಮಿಸಿದೆ. 

Advertisment

ಟೀಮ್ ಇಂಡಿಯಾ ವೈಟ್​ವಾಶ್​​​​​ ಸರಣಿ ಮುಖಭಂಗಕ್ಕೆ ಹಲವು ಕಾರಣಗಳಿವೆ. ತಾವೇ ತೋಡಿದ ಗುಂಡಿಗೆ ಬಿದ್ದಿರುವ ಕೋಚ್ ಗೌತಮ್ ಗಂಭೀರ್ ಌಂಡ್ ಟೀಮ್, ಬ್ಯಾಟಿಂಗ್-ಬೌಲಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ವೈಫಲ್ಯ ಅನುಭವಿಸಿದೆ. 

ಇದನ್ನೂ ಓದಿ: ಅಹಮದಾಬಾದ್ ನಲ್ಲಿ 2030ರ ಕಾಮನ್ ವೆಲ್ತ್ ಗೇಮ್ಸ್ ಆಯೋಜನೆಗೆ ಒಪ್ಪಿಗೆ : 20 ವರ್ಷದ ಬಳಿಕ ಭಾರತಕ್ಕೆ ಮತ್ತೆ ಅತಿಥ್ಯದ ಅವಕಾಶ

ತವರಿನಲ್ಲಿ ಸ್ಪಿನ್ನರ್ಸ್​​ ಮಂಕು  

2016ರಿಂದ 2019ರವರೆಗೂ ಟೀಮ್ ಇಂಡಿಯಾ ಸ್ಪಿನ್ನರ್ಸ್​, ತವರಿನಲ್ಲಿ ಸಾಧಾರಣ ಪ್ರದರ್ಶನ ನೀಡಿದ್ರು. ಇಂಡಿಯನ್ ಸ್ಪಿನ್ನರ್ಸ್ 25.4 ಬೌಲಿಂಗ್ ಸರಾಸರಿ ಹೊಂದಿದ್ರೆ ವಿದೇಶಿ ಸ್ಪಿನ್ನರ್ಸ್​ ಭಾರತದಲ್ಲಿ 52.7 ಸರಾಸರಿ ಹೊಂದಿದ್ದರು. 2020ರಿಂದ 2024 ಅಕ್ಟೋಬರ್​​​​​​ವರೆಗೂ ಇಂಡಿಯನ್ ಸ್ಪಿನ್ನರ್ಸ್ 23.2 ಸರಾಸರಿ ಹೊಂದಿದ್ದು, ಸಾಲಿಡ್ ಪರ್ಫಾಮೆನ್ಸ್ ನೀಡಿದ್ರು. ಈ ಅವಧಿಯಲ್ಲಿ ವಿದೇಶಿ ಸ್ಪಿನ್ನರ್​ಗಳೂ​39.5 ಸರಾಸರಿಯೊಂದಿಗೆ ಉತ್ತಮ ಪ್ರದರ್ಶನ ನೀಡಿದ್ರು. 2024 ಅಕ್ಟೋಬರ್ ಬಳಿಕ, ಟೀಮ್ ಇಂಡಿಯಾ ಸ್ಪಿನ್ನರ್ಸ್​ ತವರಿನಲ್ಲಿ ಮಂಕಾದ್ರು. ಆಗ 26.3 ಸರಾಸರಿ ಹೊಂದಿದ್ದ ಇಂಡಿಯನ್ ಸ್ಪಿನ್ನರ್ಸ್, ಹೆಚ್ಚು ಕಡಿಮೆ ವಿದೇಶಿ ಸ್ಪಿನ್ನರ್​​ಗಳಂತೆ ಪರ್ಫಾಮ್​ ಮಾಡಿದ್ರು.   

Advertisment

ಸ್ಪಿನ್​ ಎದುರು ಭಾರತೀಯ ಬ್ಯಾಟರ್ಸ್​ 

2016ರಿಂದ 2019ರವರೆಗೆ ಟೀಮ್ ಇಂಡಿಯಾ ಬ್ಯಾಟರ್ಸ್​, 53.3 ಬ್ಯಾಟಿಂಗ್ ಸರಾಸರಿ ಹೊಂದಿದ್ರೆ 2020ರಿಂದ ಸೆಪ್ಟೆಂಬರ್ 2024ರವರೆಗೂ 35.1 ಬ್ಯಾಟಿಂಗ್ ಸರಾಸರಿಯಲ್ಲಿ ರನ್​ಗಳಿಸಿದ್ದಾರೆ. 2024 ಅಕ್ಟೋಬರ್ ಬಳಿಕ ಟೀಮ್ ಇಂಡಿಯಾ ಬ್ಯಾಟರ್ಸ್​, ಎದುರಾಳಿ ಸ್ಪಿನ್ ವಿರುದ್ಧ ಅಕ್ಷರಶಃ ಸ್ಟನ್ ಆಗಿದ್ದಾರೆ. 27.6ಕ್ಕೆ ಇಂಡಿಯನ್ ಬ್ಯಾಟರ್ಸ್​​, ಌವರೇಜ್ ಕುಸಿದಿದೆ. ಟೀಮ್ ಇಂಡಿಯಾ ಸೋಲಿಗೆ ಸ್ಪಿನ್​​ ಒಂದೇ ಕಾರಣವಲ್ಲ. ಟೀಮ್ ಮ್ಯಾನೇಜ್ಮೆಂಟ್ ಯಡವಟ್ಟು ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದ್ದು ದಕ್ಷಿಣ ಆಫ್ರಿಕಾದ ಈ ಸ್ಟಾರ್​​..!

2024ರ ಬಳಿಕ ಆಟಗಾರರ​ ಬದಲಾವಣೆ 

2024ರ ಬಳಿಕ ವೆಸ್ಟ್ ಇಂಡೀಸ್ ಟೆಸ್ಟ್ ತಂಡದಲ್ಲಿ 25 ಆಟಗಾರರನ್ನ ಬದಲಾವಣೆ ಮಾಡಿದೆ. ಇನ್ನು ಟೀಮ್ ಇಂಡಿಯಾ 24 ಆಟಗಾರರನ್ನ ಚೇಂಜ್ ಮಾಡಿದ್ರೆ, ಪಾಕಿಸ್ತಾನ 23 ಮತ್ತು ಸೌತ್ ಆಫ್ರಿಕಾ 22 ಆಟಗಾರರನ್ನ ಪ್ಲೇಯಿಂಗ್ ಇಲೆವೆನ್​​ನಿಂದ ಬದಲಾವಣೆ ಮಾಡಿದೆ. ಟೀಮ್ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ನಂಬರ್.3 ಸ್ಲಾಟ್. ಚೇತೇಶ್ವರ ಪೂಜಾರ ನಂತರ, ಆ ಸ್ಲಾಟ್​ನಲ್ಲಿ ಆಡುವ ಸೂಕ್ತ ಆಟಗಾರ ತಂಡಕ್ಕೆ ಸಿಗಲಿಲ್ಲ.

Advertisment

2024ರ ಬಳಿಕ ನಂ.3ನಲ್ಲಿ ಬ್ಯಾಟರ್ಸ್​ ಬಳಕೆ 

ಕಳೆದೊಂದು ವರ್ಷದಲ್ಲಿ ಟೀಮ್ ಇಂಡಿಯಾ, ನಂಬರ್.3 ಸ್ಲಾಟ್​​ನಲ್ಲಿ 7 ಆಟಗಾರರನ್ನ ಆಡಿಸಿದೆ. ಆದ್ರೆ ಗಂಭೀರ್ ಪಡೆಯ ಪ್ರಯೋಗ, ಯಶಸ್ವಿಯಾಗಿಲ್ಲ. ಬಾಂಗ್ಲಾದೇಶ ಮತ್ತು ವೆಸ್ಟ್​ ಇಂಡೀಸ್, ತಲಾ 5 ಬಾರಿ ನಂಬರ್​​​​.3 ಸ್ಲಾಟ್​​​ನಲ್ಲಿ ಎಕ್ಸ್​ಪರಿಮೆಂಟ್ ಮಾಡಿದೆ. ಪದೇ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆಯಿಂದಲೂ, ಟೀಮ್ ಇಂಡಿಯಾಕ್ಕೆ ಸೆಟ್​ಬ್ಯಾಕ್ ಆಗಿರೋದಂತೂ ಸುಳ್ಳಲ್ಲ.​​

ಇದನ್ನೂ ಓದಿ: ತವರಿನಲ್ಲೇ ಅಭಿಮಾನಿಗಳಿಗೆ ಕಾಡಿದ ಟೀಂ ಇಂಡಿಯಾದ ಆ ಐದು ಸೋಲುಗಳು..!

ಪ್ಲೇಯಿಂಗ್​ ಇಲೆವೆನ್​ನಲ್ಲಿ ಬದಲಾವಣೆ    

ಒಂದೊಂದು ಟೆಸ್ಟ್ ಸರಣಿಗಳಲ್ಲೂ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​​ನಲ್ಲಿ ಮಹತ್ವದ ಬದಲಾವಣೆ ಮಾಡುತ್ತದೆ. ತಂಡದಲ್ಲಿ 1 ಬದಲಾವಣೆ 3 ಬಾರಿ ಮಾಡಿದ್ರೆ, 2 ಬದಲಾವಣೆ ಸಹ 3 ಬಾರಿ ಮಾಡಿದೆ. ಇನ್ನು 3ಕ್ಕಿಂತ ಹೆಚ್ಚು ಆಟಗಾರರ ಬದಲಾವಣೆಯನ್ನ ಟೀಮ್ ಇಂಡಿಯಾ 5 ಬಾರಿ ಮಾಡಿದೆ. ಇದ್ರಿಂದಾನೇ ತಂಡದ ಬ್ಯಾಲೆನ್ಸ್ ತಪ್ಪಿರೋದು. 

ಟೀಮ್ ಇಂಡಿಯಾದ ಈ ಸ್ಥಿತಿಗೆ ಕೋಚ್ ಗೌತಮ್ ಗಂಭೀರ್ ಪ್ರಮುಖ ಕಾರಣ. ಇಷ್ಟೆಲ್ಲಾ ಆದ್ರೂ ಗಂಭೀರ್ ಟೆಸ್ಟ್ ತಂಡ ಕೋಚ್ ಆಗಿ ಮುಂದುವರೆದ್ರೆ, ಟೀಮ್ ಇಂಡಿಯಾ ಜಿಂಬಾಬ್ವೆ ತಂಡದಂತೆ ಆಗೋದ್ರಲ್ಲಿ ಯಾವದೇ ಅನುಮಾನವಿಲ್ಲ.

Advertisment

ಇದನ್ನೂ ಓದಿ:ಕೋಚ್ ಗಂಭೀರ್ ಮಹಾ ಯಡವಟ್ಟುಗಳು.. ಐದು ಬಿಗ್ ಮಿಸ್ಟೇಕ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gautam Gambhir Shubman Gill Team India
Advertisment
Advertisment
Advertisment