/newsfirstlive-kannada/media/media_files/2025/11/13/gambhir-2025-11-13-09-43-52.jpg)
ಕೊಲ್ಕತ್ತಾ ಟೆಸ್ಟ್ ಪಂದ್ಯದ ಬಳಿಕ ಇದೀಗ ಗುವಾಹಟಿ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾ ಸೋತು ಸುಣ್ಣವಾಗಿದೆ. ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಫ್ಲಾಪ್ ಶೋ ನೀಡಿರುವ ರಿಷಭ್ ಪಂತ್ ಪಡೆ ವೈಟ್​ವಾಶ್ ಮುಖಭಂಗ ಅನುಭವಿಸಿದೆ. ಮತ್ತೊಂದೆಡೆ ಕೋಚ್ ಗೌತಮ್ ಗಂಭೀರ್ ಕಾರ್ಯವೈಖರಿ ಬಗ್ಗೆ ಪ್ರಶ್ನಿಸಿರುವ ಕ್ರಿಕೆಟ್ ಅಭಿಮಾನಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ಯಾರಿ ಕಸ್ಟನ್, ಡಂಕನ್ ಫ್ಲೆಚರ್, ಅನಿಲ್ ಕುಂಬ್ಳೆ, ರವಿ ಶಾಸ್ತ್ರಿ, ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್ ಆದಾಗ, ಇಷ್ಟೊಂದು ಟೀಕೆಗಳನ್ನ ಎದುರಿಸಲಿಲ್ಲ. ಗೌತಮ್ ಗಂಭೀರ್ ಕೋಚ್ ಆದ್ಮೇಲೆ, ಎಲ್ಲರೂ ಟೀಕಿಸುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗಂಭೀರ್ ಮತ್ತೆ ಗ್ರೇಗ್ ಚಾಪೆಲ್ ERAನ ನೆನಪಿಸುತ್ತಿದ್ದಾರೆ ಅಂತ ಅಭಿಮಾನಿಗಳು ಗರಂ ಆಗಿದ್ದಾರೆ. ಅಷ್ಟಕ್ಕೂ ಟೆಸ್ಟ್ ಕ್ರಿಕೆಟ್​​ನಲ್ಲಿ ಗಂಭೀರ್ ಕೋಚ್ ಆಗಿ ಫೇಲ್ ಆಗ್ತಿರೋದೆಲ್ಲಿ? ರೆಡ್ ಬಾಲ್ ಕ್ರಿಕೆಟ್​ನಲ್ಲಿ ಗಂಭೀರ್ ಮಾಡ್ತಿರೋ ತಪ್ಪುಗಳೇನು ಗೊತ್ತಾ?
ಇದನ್ನೂ ಓದಿ:ತವರಿನಲ್ಲೇ ಅಭಿಮಾನಿಗಳಿಗೆ ಕಾಡಿದ ಟೀಂ ಇಂಡಿಯಾದ ಆ ಐದು ಸೋಲುಗಳು..!
/filters:format(webp)/newsfirstlive-kannada/media/media_files/2025/11/27/gambhir-and-gill-2025-11-27-10-31-33.jpg)
ಮಿಸ್ಟೇಕ್ ನಂ.1
ಗೌತಮ್ ಗಂಭೀರ್​​ ಮೈಂಡ್​​ಸೆಟ್ ಇತರೆ ಕೋಚ್​ಗಳಿಗಿಂತ ತುಂಬಾ ಡಿಫರೆಂಟ್. ಗಂಭೀರ್ ವೈಟ್​​ಬಾಲ್​ ಮೈಂಡ್​ಸೆಟ್​​ ಅನ್ನ ರೆಡ್​ಬಾಲ್​ನಲ್ಲೂ ಅನುಸರಿಸಲು ನೋಡ್ತಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ಗಂಭೀರ್, ಆಲ್​ರೌಂಡರ್​ಗಳ ಮೇಲೆ ಹೆಚ್ಚು ಆಸಕ್ತಿ ತೋರ್ತಾರೆ. ಬ್ಯಾಟಿಂಗ್ ಡೆಪ್ತ್ ಬಗ್ಗೆ ಆಲೋಚಿಸ್ತಾರೆ. ಗಂಭೀರ್ ಸ್ಪೆಷಲಿಸ್ಟ್ ಬೌಲರ್​ಗಳನ್ನ ಕಡೆಗಣಿಸ್ತಾರೆ. ಐಪಿಎಲ್​​​​ ಅಥವಾ ಇನ್ಯಾವುದೇ ವೈಟ್​ಬಾಲ್ ಕ್ರಿಕೆಟ್​ನಲ್ಲಿ ಒಳ್ಳೆ ಪರ್ಫಾಮೆನ್ಸ್ ನೀಡಿದ್ರೆ, ಅಂತಹ ಆಟಗಾರರನ್ನ ರೆಡ್​ಬಾಲ್ ಕ್ರಿಕೆಟ್​​ಗೆ ಫಿಟ್ ಮಾಡಲು ನೋಡ್ತಾರೆ. ಇದು ಗಂಭೀರ್ ಮಾಡ್ತಿರೋ ಮೊದಲ ದೊಡ್ಡ ತಪ್ಪು.
ಮಿಸ್ಟೇಕ್ ನಂ.2
ಟೆಸ್ಟ್​ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್​ ಕ್ಯೂಶಿಯಲ್ ಮೊಮೆಂಟ್ಸ್​ನಲ್ಲಿ ಫೇಲ್ ಆಗಿದ್ದಾರೆ. ಇದಕ್ಕೆ ಕಾರಣ ಬ್ಯಾಟಿಂಗ್ ಆರ್ಡರ್​ನಲ್ಲಿ ಪದೇ ಪದೆ ಬದಲಾವಣೆ. ಓಪನರ್ಸ್​​ಗೆ ಬಿಟ್ರೆ ಉಳಿದ ಬ್ಯಾಟ್ಸ್​ಮನ್​​ಗಳಿಗೆ ಫಿಕ್ಸ್ಡ್​ ಸ್ಲಾಟ್ ಇಲ್ಲ. ಇದು ಬ್ಯಾಟಿಂಗ್ ಮೇಲೆ ಕೆಟ್ಟ ಪರಿಣಾಮ ಬೀರುವಂತೆ ಮಾಡಿದೆ. ಬೌಲಿಂಗ್​ನಲ್ಲಿ ಟೀಮ್ ಇಂಡಿಯಾ ಬೌಲರ್ಸ್​ ಪರದಾಟ, ಹೊಸದೇನಲ್ಲ. ಪ್ರಮುಖ ಸರಣಿಗಲ್ಲಿ ಬೌಲರ್​ಗಳು, ಇಂಪ್ಯಾಕ್ಟ್​​ಫುಲ್ ವಿಕೆಟ್ಸ್ ಪಡೆಯಲು ವಿಫಲರಾಗಿದ್ದಾರೆ. ಬೌಲರ್ಸ್ ಶಾರ್ಟೇಜ್ ಅಥವಾ ಕೀ ಬೌಲರ್​ಗಳು ಇಲ್ಲದ ಕಾರಣ, ತಂಡಕ್ಕೆ ಹಿನ್ನಡೆ ಉಂಟು ಮಾಡಿದೆ.
/filters:format(webp)/newsfirstlive-kannada/media/media_files/2025/10/10/team-india-2025-10-10-07-15-09.jpg)
ಮಿಸ್ಟೇಕ್ ನಂ.3
ಕೊಹ್ಲಿ ಟೆಸ್ಟ್ ತಂಡದ ನಾಯಕನಾಗಿದ್ದಾಗ ಟೀಮ್ ಇಂಡಿಯಾ ಆಟಗಾರರು ಆನ್​ಫೀಲ್ಡ್​ನಲ್ಲಿ ಸಿಕ್ಕಾಪಟ್ಟೆ ಅಗ್ರೆಸಿವ್ ಌಟಿಟ್ಯೂಡ್ ತೋರಿಸ್ತಿದ್ರು. ನಾಯಕ ಕೊಹ್ಲಿಯಂತೆ ಕೋಚ್ ರವಿ ಶಾಸ್ತ್ರಿ ಸಹ, ಆಟಗಾರರಲ್ಲಿ ಕಿಚ್ಚನ್ನ ತುಂಬುತ್ತಿದ್ರು. ಆದ್ರೀಗ ಟೀಮ್ ಇಂಡಿಯಾ ಆಟಗಾರರಲ್ಲಿ ಆ ಪಾಸಿಟಿವ್ನೆಸ್​​​​​ ಕಾಣ್ತಿಲ್ಲ. ಆಟಗಾರರ ಬಾಡ್ ಲಾಂಗ್ವೇಜೇ, ಌಟಿಟ್ಯೂಡ್ ಎಲ್ಲವೂ ಸಿಕ್ಕಾಪಟ್ಟೆ LOW ಆಗಿ ಕಾಣ್ತಿದೆ. ಆಟಗಾರರಲ್ಲಿ ಫೈಟಿಂಗ್ ಸ್ಪಿರಿಟ್ ಅನ್ನೋದೇ ಮಾಯವಾಗಿದೆ.
ಮಿಸ್ಟೇಕ್ ನಂ.4
ಕೋಚ್ ಗೌತಮ್ ಗಂಭೀರ್ ಮಾಡಿದ ದೊಡ್ಡ ಮಿಸ್ಟೇಕ್ ಇದೇ ನೋಡಿ. ಟ್ರ್ಯಾನ್ಸಿಷನ್ ಪಿರಿಯಡ್​ನ ಸರಿಯಾಗಿ ಹ್ಯಾಂಡಲ್ ಮಾಡದ ಕೋಚ್ ಗಂಭೀರ್, ಭಾರೀ ಬೆಲೆಯನ್ನೇ ಕಟ್ಟುತ್ತಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾರಂತಹ ಹಿರಿಯ ಆಟಗಾರರನ್ನ ತರಾತುರಿಯಲ್ಲಿ ನಿವೃತ್ತಿ ಘೋಷಿಸಿಬಿಟ್ರು. ಚೆತೇಶ್ವರ ಪೂಜಾರ ಮತ್ತು ಅಜಿಂಕ್ಯಾ ರಹಾನೆಯಂತಹ ಆಟಗಾರರನ್ನ ಮರೆತೇಬಿಟ್ರು. ಟಾಪ್ 4ನಲ್ಲಿ ಆಡುವ ಆಟಗಾರರನ್ನ ಗಂಭೀರ್​, ಸೈಡ್​ಲೈನ್ ಮಾಡಿ ತಪ್ಪು ಮಾಡಿದ್ರು. ಓಲ್ಡ್ ಜನರೇಷನ್ ಟು ನ್ಯೂ ಜನರೇಷನ್ ಶಿಫ್ಟ್ ಮಾಡಲು ಯಡವಿದ್ದಾರೆ.​
ಇದನ್ನೂ ಓದಿ: ರಮ್ಯಾ ಪ್ರಕಾರ ಯಾರು ಸಿಎಂ ಆಗಬೇಕಂತೆ ಗೊತ್ತಾ..? ಕುರ್ಚಿ ಕಿತ್ತಾಟದ ಬಗ್ಗೆ ಹೇಳಿದ್ದೇನು?
/filters:format(webp)/newsfirstlive-kannada/media/media_files/2025/11/19/gambhir-and-agarkar-2025-11-19-13-32-58.jpg)
ಮಿಸ್ಟೇಕ್ ನಂ.5
ಗಂಭೀರ್ ಮತ್ತು ಇತರೆ ಸಪೋರ್ಟಿಂಗ್ ಸ್ಟಾಫ್​​​​​​​ ಕಾರ್ಯವೈಖರಿ ಬಗ್ಗೆ ಭಾರೀ ಅಸಮಾಧಾನ ವ್ಯಕ್ತವಾಗ್ತಿದೆ. ಸ್ಟ್ರಾಟಜಿ, ಪ್ಲಾನ್ಸ್​ ಮತ್ತು ಪ್ರಪಿರೇಷನ್​ನಲ್ಲಿ ಕೋಚ್ ಗಂಭೀರ್ ಎಡವಿದ್ದಾರೆ. ಯಾವುದೇ ಪಂದ್ಯಗಳ ವೇಳೆ ಕೋಚ್ ಸೈಡ್​​​ಲೈನ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಫೀಲ್ಡ್ ಸೆಟ್ಟಿಂಗ್ಸ್​, ಕ್ರಂಚ್ ಸಿಚ್ಯುವೇಶನ್​ನಲ್ಲಿ ಮ್ಯಾಚ್ ಮ್ಯಾನೇಜ್ಮೆಂಟ್​​ ಬಗ್ಗೆ ಆಸಕ್ತಿ ತೋರೋದಿಲ್ಲ. ಟೆಸ್ಟ್ ಕ್ರಿಕೆಟ್ ಡಿಮ್ಯಾಂಡ್ ಮಾಡುವಂತಹ ಸ್ಟ್ರಾಟಜಿಯನ್ನ ಗಂಭೀರ್ ಅಳವಡಿಸಿಕೊಂಡಿಲ್ಲ. ಜೊತೆಗೆ ಕೋಚ್ ಮತ್ತು ಆಟಗಾರರ ನಡುವೆ ಮಿಸ್ ಕಮ್ಯೂನಿಕೇಷನ್ ಕೊರತೆ ಎದ್ದು ಕಾಡ್ತಿದೆ.
ಗಂಭೀರ್ ಮೇಲೆ ಅಪಾರ ನಿರೀಕ್ಷೆಯಿಂದಲೇ ನಿರಾಸೆಗೆ ಕಾರಣವಾಗಿದೆ. ಗಂಭೀರ್ ಕೋಚ್ ಆದ್ಮೇಲೆ ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ, ಬೇಡವಾದ ದಾಖಲೆಗಳನ್ನ ಬರೆಯುತ್ತಿದೆ. ಹಾಗಾಗಿ ಗುವಾಹಟಿ ಟೆಸ್ಟ್ ಪಂದ್ಯದ ನಂತರ ಕೋಚ್ ಗಂಭೀರ್​​​​​​​​​​​ ದಾರಿ ಯಾವುದು ಅನ್ನೋದನ್ನ ಕಾದುನೋಡೋಣ.
ಇದನ್ನೂ ಓದಿ: ತಮ್ಮ ವಿರುದ್ಧ ಕಾಮೆಂಟ್ ಮಾಡಿ ಜೈಲು ಪಾಲಾಗಿದ್ದವರನ್ನು ಕ್ಷಮಿಸಿದ ನಟಿ ರಮ್ಯಾ : ಈ ಬಗ್ಗೆ ರಮ್ಯಾ ಕೊಟ್ಟ ಸಮರ್ಥನೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us