/newsfirstlive-kannada/media/media_files/2025/11/27/gambhir-and-gill-2025-11-27-10-31-33.jpg)
ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಅಡ್ರೆಸ್ ಇಲ್ಲದಂತೆ ಆಗ್ತಿದೆ. ಕಳೆದ ವರ್ಷ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ವೈಟ್​ವಾಶ್. ಇದೀಗ ಸೌತ್ ಆಫ್ರಿಕಾ ವಿರುದ್ಧ ವೈಟ್​ವಾಶ್ ಆಗಿರುವ ಟೀಮ್ ಇಂಡಿಯಾ, ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್ ಪಾಯಿಂಟ್​​ ಟೇಬಲ್​ನಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ಟೀಮ್ ಇಂಡಿಯಾದ ಈ ಸ್ಥಿತಿಗೆ ಆ 5 ಟೆಸ್ಟ್ ಪಂದ್ಯಗಳ ಸೋಲೇ ಪ್ರಮುಖ ಕಾರಣ. ​
ಒಂದಲ್ಲ..ಎರಡಲ್ಲ.. ಐದು ಟೆಸ್ಟ್ ಪಂದ್ಯಗಳ ಸೋಲು ಟೀಮ್ ಇಂಡಿಯಾವನ್ನ ಛಿದ್ರ ಛಿದ್ರಗೊಳಿಸಿದೆ. ಅದ್ರಲ್ಲೂ ತವರಿನಲ್ಲಿ, ಅದು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮುಂದೆಯೇ ಅನುಭವಿಸಿದ್ದ ಸೋಲು, ಮರೆಯಲು ಹೇಗೆ ಸಾಧ್ಯ ಹೇಳಿ? ಎದುರಾಳಿಗಳು ನಮ್ಮ ದೇಶಕ್ಕೆ ಬಂದು, ನಮ್ಮದೇ ನೆಲದಲ್ಲಿ, ನಮ್ಮವರನ್ನೇ ಸೋಲಿಸೋದು ಅಂದ್ರೆ ತಮಾಷೆ ಮಾತಲ್ಲ. ಅಭಿಮಾನಿಗಳು ಈ ಘನಘೋರ ಸೋಲುಗಳನ್ನ ತಮ್ಮ ಕಣ್ಮುಂದೆ ನೋಡಬೇಕಾಯ್ತು.
ಈಡನ್ ಗಾರ್ಡನ್ಸ್ ಟೆಸ್ಟ್, 30 ರನ್​ ಸೋಲು
ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಟೀಮ್ ಇಂಡಿಯಾ, ಸೌತ್ ಆಫ್ರಿಕಾದ ಆಫ್​ಸ್ಪಿನ್ನರ್​ ಸೈಮನ್ ಹಾರ್ಮರ್ ಸ್ಪಿನ್ ದಾಳಿಗೆ ಸಿಲುಕಿ, 30 ರನ್​ಗಳ ಸೋಲು ಅನುಭವಿಸಿತ್ತು. 124 ರನ್​​ ಚೇಸ್ ಮಾಡಲಾಗದ ಭಾರತ, ಎದುರಾಳಿಗಳಿಗೆ ಸುಲಭವಾಗಿ ಶರಣಾಯ್ತು.
ಇದನ್ನೂ ಓದಿ: ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದ್ದು ದಕ್ಷಿಣ ಆಫ್ರಿಕಾದ ಈ ಸ್ಟಾರ್​​..!
/filters:format(webp)/newsfirstlive-kannada/media/media_files/2025/10/10/team-india-2025-10-10-07-15-09.jpg)
ಗುವಾಹಟಿ ಟೆಸ್ಟ್​, 408 ರನ್ ಸೋಲು
ಅಸ್ಸಾಂನ ಗುವಾಹಟಿಯಲ್ಲಿ ಟೀಮ್ ಇಂಡಿಯಾ ಆಟ, ಬೆಚ್ಚಿಬೀಳಿಸುವಂತಿತ್ತು. ಬ್ಯಾಟಿಂಗ್, ಬೌಲಿಂಗ್​ ಎರಡರಲ್ಲೂ ಪಂತ್ ಪಡೆ ಎಡವಿತು. ಆಫ್ರಿಕ್ ವೇಗಿ ಮಾರ್ಕೊ ಯಾನ್ಸನ್ ಮತ್ತು ಸೈಮನ್ ಹಾರ್ಮರ್ ಬೌಲಿಂಗ್​​​​​​​​​ ಫೇಸ್ ಮಾಡಲಾಗದ ಪಂತ್ ಪಡೆ, 408 ರನ್​ಗಳ ಹೀನಾಯ ಸೋಲು ಅನುಭವಿಸಿತು.
ಬೆಂಗಳೂರು ಟೆಸ್ಟ್, 8 ವಿಕೆಟ್ ಸೋಲು
ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವೇಗಿಗಳಾದ ಮ್ಯಾಟ್ ಹೆನ್ರಿ ಮತ್ತು ವಿಲಿಯಮ್ ಓ'ರೂರ್ಕ್ ಸೂಪರ್ ಸ್ಪೆಲ್​ಗೆ, ಕಂಗಾಲ್ ಆಯ್ತು. ಆ ಪಂದ್ಯದಲ್ಲಿ 15 ವಿಕೆಟ್ ಪಡೆದ ಹೆನ್ರಿ ಮತ್ತು ಓ'ರೂರ್ಕ್, ಟೀಮ್ ಇಂಡಿಯಾದ 8 ವಿಕೆಟ್ ಸೋಲಿಗೆ ಕಾರಣರಾದ್ರು.
/filters:format(webp)/newsfirstlive-kannada/media/media_files/2025/11/16/team-india-2-2025-11-16-08-57-09.jpg)
ಪುಣೆ ಟೆಸ್ಟ್, 113 ರನ್ ಸೋಲು
ಮಹಾರಾಷ್ಟ್ರದ ಪುಣೆ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಸುಲಭವಾಗಿ ಶರಣಾಗಿತ್ತು. ಎಡಗೈ ಸ್ಪಿನ್ನರ್ ಮಿಚ್ಚೆಲ್ ಸ್ಯಾಂಟ್ನರ್​​​​​​​ ದಾಳಿಗೆ ಸಿಲುಕಿದ ರೋಹಿತ್ ಶರ್ಮಾ ಪಡೆ, 113 ರನ್​ಗಳ ಮುಖಭಂಗ ಅನುಭವಿಸಿತು. ಆ ಪಂದ್ಯದಲ್ಲಿ ಸ್ಯಾಂಟ್ನರ್ 13 ವಿಕೆಟ್ ಪಡೆದಿದ್ರು.
ವಾಂಖೆಡೆ ಟೆಸ್ಟ್, 25 ರನ್ ಸೋಲು
ಮುಂಬೈನ ಐಕಾನಿಕ್ ವಾಂಖೆಡೆ ಸ್ಟೇಡಿಯಮ್​ನಲ್ಲಿ ಟೀಮ್ ಇಂಡಿಯಾ, ಕಿವೀಸ್​ ವಿರುದ್ಧ ಫುಲ್ ಡಲ್ ಆಯ್ತು. ಸ್ಯಾಂಟ್ನರ್ ನಂತರ ಮತ್ತೊಬ್ಬ ಎಡಗೈ ಸ್ಪಿನ್ನರ್ ಏಜಾಝ್ ಪಟೇಲ್​ ಸ್ಪಿನ್​ಗೆ ಸಿಲುಕಿದ ಭಾರತ 25 ರನ್​ಗಳಿಂದ ಪಂದ್ಯವನ್ನ ಕೈಚೆಲ್ಲಿತ್ತು.
ಟೀಮ್ ಇಂಡಿಯಾ ದೇಶ-ವಿದೇಶಗಳಲ್ಲಿ ಸಾಕಷ್ಟು ಪಂದ್ಯಗಳನ್ನ ಗೆದ್ದಿದೆ. ಹಾಗೆ ಸೋತಿದೆ ಕೂಡ. ಆದ್ರೆ ಕಳೆದೊಂದು ವರ್ಷದಲ್ಲಿ, ಅದು ತವರಿನಲ್ಲಿ ಟೀಮ್ ಇಂಡಿಯಾ ಸೋಲುಗಳನ್ನ ಊಹಿಸಿಕೊಳ್ಳೋದಕ್ಕೂ ಆಗ್ತಿಲ್ಲ.
ಇದನ್ನೂ ಓದಿ: 25 ಬೀದಿ ನಾಯಿ ಸಾಕೋಕೆ ವರ್ಷಕ್ಕೆ 88 ಲಕ್ಷ.. ಜಿಲ್ಲಾಡಳಿತ ಪ್ರಸ್ತಾವನೆಗೆ ಸಚಿವರೇ ಶಾಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us