/newsfirstlive-kannada/media/media_files/2025/11/27/kolara-dog-2025-11-27-10-09-06.jpg)
ಆ ಜಿಲ್ಲೆಯ ಜನರು ಬೀದಿ ನಾಯಿಗಳ ಕಿರುಕುಳದಿಂದ ಬೇಸತ್ತು ಹೋಗಿದ್ದಾರೆ. ಕೇವಲ ಹತ್ತು ತಿಂಗಳಲ್ಲಿ ಸಾವಿರಾರು ಮಂದಿ ನಾಯಿಗಳಿಂದ ಕಚ್ಚಿಸಿಕೊಂಡಿದ್ದಾರೆ. ಹಾಗಾಗಿ ಬೀದಿನಾಯಿಗಳ ಕಾಟಕ್ಕೆ ಕಡಿವಾಣ ಹಾಕಲು ಕೋಲಾರ ಜಿಲ್ಲಾಡಳಿತ ಹಾಗೂ ಜನ ಪ್ರತಿನಿಧಿಗಳು ಹೊಸ ಯೋಜನೆ ಮಾಡುತ್ತಿದ್ದಾರೆ. ಆ ಯೋಜನೆ ಬಗ್ಗೆ ಕೇಳಿ ಜಿಲ್ಲೆಯ ಜನರು ಶಾಕ್​ ಆಗಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ದಿನೇ ದಿನೇ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, 11 ತಿಂಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿಗೆ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಜಿಲ್ಲೆಯಲ್ಲಿ ಸರಿ ಸುಮಾರು 30 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು ಅವುಗಳ ನಿಯಂತ್ರಣಕ್ಕೆ ಯೋಜನೆ ರೂಪಿಸಬೇಕಿದೆ.
ಇದನ್ನೂ ಓದಿ:ಘನ ಘೋರ ದುರಂತ.. 44 ಮಂದಿ ಸಜೀವ ದಹನ -ಅಸಲಿಗೆ ಆಗಿದ್ದೇನು..?
ಈ ನಿಟ್ಟಿನಲ್ಲಿ ಕೋಲಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಯೋಜನೆಯೊಂದನ್ನು ರೂಪಿಸುವ ಕುರಿತು ಚರ್ಚೆ ನಡೆಸಲಾಯಿತು. ಯೋಜನೆಯ ಅಂದಾಜು ವೆಚ್ಚದ ಪ್ರಕಾರವಾಗಿ 25 ಬೀದಿ ನಾಯಿಗಳನ್ನು ಪುನರ್ವಸತಿ ಕೇಂದ್ರದಲ್ಲಿ ನೋಡಿಕೊಳ್ಳಲು ಒಂದು ವರ್ಷಕ್ಕೆ ಸರಾಸರಿ 88 ಲಕ್ಷ ರೂಪಾಯಿ ಖರ್ಚು ಬರುವುದಾಗಿ ತಿಳಿಸಿದ್ದಾರೆ. ಅಂದರೆ ಒಂದು ವರ್ಷಕ್ಕೆ ಒಂದು ಬೀದಿ ನಾಯಿಯ ನಿರ್ವಹಣೆ ಸರಾಸರಿ ಮೂರುವರೆ ಲಕ್ಷ ರೂಪಾಯಿ ಖರ್ಚು ಮಾಡಬೇಕಿದೆ.
ಇದನ್ನೂ ಓದಿ:ಖಾದಿಗಳ ಕುರ್ಚಿ ಕದನಕ್ಕೆ ಖಾವಿಗಳ ರಂಗಪ್ರವೇಶ.. ಸಿದ್ದರಾಮನಂದ ಮಹಾಪುರಿ ಸ್ವಾಮೀಜಿ ಬೇಸರ
/filters:format(webp)/newsfirstlive-kannada/media/media_files/2025/11/27/kolara-dog-1-2025-11-27-10-10-18.jpg)
ಜಿಲ್ಲಾಧಿಕಾರಿಗಳ ಮಾತು ಕೇಳಿ ಒಂದು ಕ್ಷಣ ಉಸ್ತುವಾರಿ ಸಚಿವರೇ ಶಾಕ್​​ ಆದ್ರು.. ಸದ್ಯ ಜಿಲ್ಲಾಡಳಿತದ ಪ್ರಸ್ತಾವನೆ ಬಗ್ಗೆ ಸಚಿವರು ಆಕ್ಷೇಪಣೆ ಎತ್ತಿದ್ದು, ಬೀದಿ ನಾಯಿಗೆ ಅಷ್ಟೊಂದು ಖರ್ಚು ಮಾಡವಷ್ಟು ಶ್ರೀಮಂತ ದೇಶ ನಮ್ಮದಲ್ಲ.. ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಬೇರೆ ಪ್ಲಾನ್​ ಮಾಡಲಾಗುತ್ತದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದ್ರು.
ಇದನ್ನೂ ಓದಿ: ಖಾದಿಗಳ ಕುರ್ಚಿ ಕದನಕ್ಕೆ ಖಾವಿಗಳ ರಂಗಪ್ರವೇಶ.. ಸಿದ್ದರಾಮನಂದ ಮಹಾಪುರಿ ಸ್ವಾಮೀಜಿ ಬೇಸರ
ಒಟ್ಟಾರೆ.. ಕೋಲಾರದಲ್ಲಿ ಬೀದಿ ನಾಯಿಗಳ ಉಪಟಳ ಒಂದು ಕಡೆಯಾದರೆ.. ಮತ್ತೊಂದಡೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಲಕ್ಷ ಲಕ್ಷ ಬೇಕಾಗುತ್ತೆ ಎಂದು ಜಿಲ್ಲಾಡಳಿತ ಹೇಳ್ತಿದೆ. ಹೀಗಾಗಿ ಬೀದಿ ನಾಯಿ ನಿಯಂತ್ರಣವೇ ಕೋಲಾರ ಜನರಿಗೆ ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us