/newsfirstlive-kannada/media/media_files/2025/10/14/kl-rahul-5-2025-10-14-10-33-11.jpg)
ಕೆಎಲ್ ರಾಹುಲ್ Photograph: (ಬಿಸಿಸಿಐ)
ಕನ್ನಡಿಗ ಕೆ.ಎಲ್.ರಾಹುಲ್​ಗೆ ಏನಾಯ್ತು? ಸೌತ್ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ರಾಹುಲ್ ಬ್ಯಾಟಿಂಗ್​ನಲ್ಲಿ ಡಲ್ ಆಗಿದ್ಯಾಕೆ? ತವರಿನಲ್ಲಿ ರಾಹುಲ್ ಬ್ಯಾಟಿಂಗ್ ಆಡೋದನ್ನೇ ಮರೆತ್ರಾ? ಸ್ಪಿನ್ ವಿರುದ್ಧ ರಾಹುಲ್ ಸ್ಟನ್ ಆಗ್ತಿರೋದು ಯಾಕೆ? ಕರ್ನಾಟಕ ಬ್ಯಾಟ್ಸ್​ಮನ್ ಫಾರ್ಮ್ ಕಳೆದುಕೊಂಡ್ರಾ? ಈ ಪ್ರಶ್ನೆಗಳು ಅಭಿಮಾನಿಗಳ ಕಾಡ್ತಿದೆ.
4 ಇನ್ನಿಂಗ್ಸ್​, ರಾಹುಲ್ ರನ್​ ಎಷ್ಟು?
ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೆ.ಎಲ್.ರಾಹುಲ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ತವರಿನಲ್ಲಿ ರಾಹುಲ್ ಬ್ಯಾಟಿಂಗ್​ನಲ್ಲಿ ಮಿಂಚ್ತಾರೆ. ರಾಹುಲ್, ಆಫ್ರಿಕನ್ ಬೌಲರ್​ಗಳ ಮೇಲೆ ಸವಾರಿ ಮಾಡ್ತಾರೆ ಅಂತೆಲ್ಲಾ ಸರಣಿಗೂ ಮುನ್ನ ಹೈಪ್ ಮಾಡಲಾಗಿತ್ತು. ಅಂದುಕೊಂಡಿದ್ದೇ ಒಂದು. ಆಗಿದ್ದೇ ಇನ್ನೊಂದು. ಪ್ರಸಕ್ತ ಸರಣಿಯಲ್ಲಿ 4 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ಮಾಡಿದ್ದ ರಾಹುಲ್, ಗಳಿಸಿದ್ದು ಕೇವಲ 68 ರನ್​ ಮಾತ್ರ. ರಾಹುಲ್ ಬ್ಯಾಟಿಂಗ್ ಸರಾಸರಿ ಜಸ್ಟ್ 17.
ಇದನ್ನೂ ಓದಿ: ಕೋಚ್ ಗಂಭೀರ್ ಮಹಾ ಯಡವಟ್ಟುಗಳು.. ಐದು ಬಿಗ್ ಮಿಸ್ಟೇಕ್ಸ್​..!
/filters:format(webp)/newsfirstlive-kannada/media/media_files/2025/10/14/kl-rahul-4-2025-10-14-08-00-24.jpg)
ಕೆ.ಎಲ್.ರಾಹುಲ್ ಮೋಸ್ಟ್ ಟ್ಯಾಲೆಂಟೆಡ್ ಕ್ರಿಕೆಟರ್. ರಾಹುಲ್ ಟೆಕ್ನಿಕಲಿ ಸಖತ್ ಸೌಂಡೆಡ್ ಬ್ಯಾಟ್ಸ್​ಮನ್. ಆದ್ರೆ ದಕ್ಷಿಣ ಆಫ್ರಿಕಾ ವಿರುದ್ಧ ರಾಹುಲ್​ಗೆ ಏನಾಯ್ತು..? ಆರಂಭಿಕ ಯಶಸ್ವಿ ಜೈಸ್ವಾಲ್ ಜೊತೆಗೂಡಿ, ಒಂದೇ ಒಂದು ಬಿಗ್ ಇನ್ನಿಂಗ್ಸ್ ಆಡ್ಲಿಲ್ಲ. ತಂಡಕ್ಕೆ ಒಳ್ಳೆ ಸ್ಟಾರ್ಟ್ ಕೂಡ ನೀಡ್ಲಿಲ್ಲ. ಹೋಂ ಕಂಡೀಷನ್ಸ್​​ನಲ್ಲೇ ರನ್​ಗಳಿಸೋಕೆ ಪರದಾಡಿದ ರಾಹುಲ್, ಬ್ಯಾಟಿಂಗ್​ನಲ್ಲಿ ಫ್ಲಾಪ್ ಆಗಿ ತಂಡದ ಹಿನ್ನಡೆಗೆ ಕಾರಣರಾಗಿದ್ದಾರೆ. ಓಪನರ್ ಆಗಿ ಕರಿಯರ್ ಸ್ಟಾರ್ಟ್ ಮಾಡಿದ್ರು, ಓಪನಿಂಗ್ ಸ್ಲಾಟ್​​ನಲ್ಲಿ ರಾಹುಲ್ ಪರದಾಡಿದ್ದಾರೆ.
ಟೀಮ್ ಇಂಡಿಯಾ ಬ್ಯಾಟರ್ಸ್​, ಸ್ಪಿನ್ ಬೌಲಿಂಗ್​ಗೆ ಸಖತ್​ ಆಗಿ ಆಡ್ತಾರೆ. ಸ್ಪಿನ್​ಗೆ ಸಾಲಿಡ್ ಕೌಂಟರ್ ಕೊಡೋ ಟೀಮ್ ಇಂಡಿಯಾ ಆಟಗಾರರು, ಇದೀಗ ಸ್ಪಿನ್ ಆಡೋದನ್ನೇ ಮರೆತಿದ್ದಾರೆ. ರಾಹುಲ್​ ಸಹ ಪ್ರಸಕ್ತ ಸರಣಿಯಲ್ಲಿ, ದಕ್ಷಿಣ ಆಫ್ರಿಕಾದ ಸ್ಪಿನ್ ಟ್ವಿನ್ಸ್​ ಕೇಶವ್ ಮಹಾರಾಜ್ ಮತ್ತು ಸೈಮನ್ ಹಾರ್ಮರ್​ ಬೌಲಿಂಗ್​ನಲ್ಲಿ ಪರದಾಡಿದ್ದಾರೆ. 4 ಇನ್ನಿಂಗ್ಸ್​​ಗಳಲ್ಲಿ ರಾಹುಲ್, 2 ಬಾರಿ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ಬೌಲಿಂಗ್​ನಲ್ಲಿ ಔಟ್ ಆದ್ರೆ, 1 ಬಾರಿ ಆಫ್ ಸ್ಪಿನ್ನರ್ ಸೈಮನ್ ಹಾರ್ಮರ್ ಬೌಲಿಂಗ್​ನಲ್ಲಿ ಔಟ್ ಆಗಿದ್ದಾರೆ.​​​​
ಇದನ್ನೂ ಓದಿ: ತವರಿನಲ್ಲೇ ಅಭಿಮಾನಿಗಳಿಗೆ ಕಾಡಿದ ಟೀಂ ಇಂಡಿಯಾದ ಆ ಐದು ಸೋಲುಗಳು..!
/filters:format(webp)/newsfirstlive-kannada/media/media_files/2025/10/04/kl-rahul-3-2025-10-04-07-20-40.jpg)
ಕೆ.ಎಲ್.ರಾಹುಲ್ ಬ್ಯಾಟಿಂಗ್ ಬಗ್ಗೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಯಾಗ್ತಿದೆ. ರಾಹುಲ್ ದಿನೇ ದಿನೇ ಬ್ಯಾಟಿಂಗ್ ಚಾರ್ಮ್ ಕಳೆದುಕೊಳ್ಳುತ್ತಿದ್ದಾರೆ ಅನ್ನೋದು, ಕ್ರಿಕೆಟ್ ಪಂಡಿತರು ಮತ್ತು ವಿಶ್ಲೇಷಕರ ಅಭಿಪ್ರಾಯ. ಸದ್ಯ ರಾಹುಲ್ ಬ್ಯಾಟಿಂಗ್ ನೋಡ್ತಿದ್ರೆ, ಇದು ನಿಜ ಅನ್ನಿಸುತ್ತದೆ. ಯಾಕಂದ್ರೆ ಉಪಖಂಡದ ಫ್ಲಾಟ್ ಮತ್ತು ಟರ್ನಿಂಗ್ ಟ್ರ್ಯಾಕ್​ಗಳಲ್ಲಿ ರಾಹುಲ್ ಅಬ್ಬರವೇ, ನಿಂತು ಹೋಗಿದೆ. ಅಂದು ಬ್ಯಾಟಿಂಗ್​ನಲ್ಲಿ ಸಂಚಲನ ಮೂಡಿಸುತ್ತಿದ್ದ ರಾಹುಲ್, ಇಂದು ಫುಲ್ ಸೈಲೆಂಟ್ ಆಗ್ಬಿಟ್ಟಿದ್ದಾರೆ.
ಕನ್ನಡಿಗ ರಾಹುಲ್​​ ಎಚ್ಚೆತ್ತುಕೊಳ್ಳಬೇಕು. ರಾಹುಲ್​ಗೆ ತಂಡದಲ್ಲಿ ಕಾಂಪಿಟೇಟರ್ಸ್​ ಹುಟ್ಟಿಕೊಂಡಿದ್ದಾರೆ. ಟೆಸ್ಟ್ ತಂಡದಲ್ಲಿ ಸ್ಥಾನ ಆಕ್ರಮಿಸಿಕೊಳ್ಳಲು ಕಾಯುತ್ತಿದ್ದಾರೆ. ಯಂಗ್ ಌಂಡ್ ಡೈನಾಮಿಕ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್, ಧೃವ್ ಜುರೆಲ್, ಇಶಾನ್ ಕಿಶನ್​ರಂತಹ ಯುವ ಕ್ರಿಕೆಟಿಗರು, ಭಾರೀ ಪೈಪೋಟಿ ನೀಡುತ್ತಿದ್ದಾರೆ. ರಾಹುಲ್ ಸ್ವಲ್ಪ ಯಾಮಾರಿದ್ರೂ, ಸ್ಥಾನಕ್ಕೆ ಕುತ್ತು ತಂದುಕೊಳ್ಳಲಿದ್ದಾರೆ. ಮುಂದೆ ರಾಹುಲ್​ಗೆ ಟಫ್ ಟೈಮ್ ಎದುರಾದ್ರೂ, ಆಶ್ಚರ್ಯವಿಲ್ಲ.
ಇದನ್ನೂ ಓದಿ:ಟೀಂ ಇಂಡಿಯಾ ಸೋಲಿಗೆ ಕಾರಣವಾಗಿದ್ದು ದಕ್ಷಿಣ ಆಫ್ರಿಕಾದ ಈ ಸ್ಟಾರ್​​..!
​​ಕೆ.ಎಲ್.ರಾಹುಲ್​​ಗೆ ತನ್ನ ಕಾಂಪಿಟೇಟರ್ಸ್​ಗೆ ಫೈಟ್ ನೀಡೋದು ಗೊತ್ತು. ಕಮ್​ಬ್ಯಾಕ್ ಮಾಡೋದು ಗೊತ್ತು. ಸದ್ಯ ರನ್​ಗಳಿಸಲು ಪರದಾಡುತ್ತಿರುವ ಕನ್ನಡಿಗ, ಆದಷ್ಟು ಬೇಗ ಫಾರ್ಮ್​ಗೆ ಮರಳಲಿ ಅನ್ನೋದೇ ಕ್ರಿಕೆಟ್ ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us