/newsfirstlive-kannada/media/media_files/2025/09/09/suryakumar-yadav-abhishek-sharma-2025-09-09-08-21-23.jpg)
ಇವತ್ತಿನಿಂದ ಬಹುನಿರೀಕ್ಷಿತ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿ ಆರಂಭಗೊಳ್ಳಲಿದೆ. ಭಾರತ, ಪಾಕಿಸ್ತಾನ ಸೇರಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ.
ಒಟ್ಟು 20 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ 19 ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 28ರಂದು ಫೈನಲ್ ಪಂದ್ಯ ನಿಗದಿಯಾಗಿದೆ. UAEನ ಎರಡು ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಉದ್ಘಾಟನಾ ಪಂದ್ಯದಲ್ಲಿ ಇವತ್ತು ಅಫ್ಘಾನಿಸ್ತಾನಕ್ಕೆ ಹಾಂಕಾಂಗ್ ಚಾಲೆಂಜ್ ಹಾಕಲಿದೆ. ಟೀಂ ಇಂಡಿಯಾ ನಾಳೆ ಯುಎಇ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.
ಇದನ್ನೂ ಓದಿ:ಹದ್ದಿನ ಕಣ್ಣಿಟ್ಟ ಸೂರ್ಯಕುಮಾರ್ ಸೇನೆ.. ಭರ್ಜರಿ ಬ್ಯಾಟಿಂಗ್, ಬೌಲಿಂಗ್ ಸಮರಾಭ್ಯಾಸ
ಭಾರತ, ಪಾಕಿಸ್ತಾನ, ಯುಎಇ ಹಾಗೂ ಒಮಾನ್ ಎ ಗುಂಪಿನಲ್ಲಿವೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಹಾಂಕಾಂಗ್ ಬಿ ಗುಂಪಿನಲ್ಲಿವೆ. ಪ್ರತಿ ತಂಡಗಳು ಗುಂಪು ಹಂತದಲ್ಲಿ ಒಮ್ಮೆ ಪರಸ್ಪರ ಸೆಣಸಾಡಲಿವೆ. ಗುಂಪಿನ ಅಗ್ರ-2 ತಂಡಗಳು ಸೂಪರ್-4 ಹಂತ ಪ್ರವೇಶಿಸಲಿವೆ. ಸೂಪರ್-4ನಲ್ಲಿ ಅಗ್ರ-2 ಸ್ಥಾನ ಪಡೆದ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
3ನೇ ಬಾರಿ ಟಿ20 ಮಾದರಿ
1984ರಲ್ಲಿ ಏಷ್ಯಾಕಪ್ ಆರಂಭಗೊಂಡಿದೆ. ಈ ಮೊದಲು ಏಕದಿನ ಮಾದರಿಯಲ್ಲಿ ಏಷ್ಯಾಕಪ್ ನಡೆಯುತ್ತಿತ್ತು. 2016ರಿಂದ ಪ್ರತಿ ಆವೃತ್ತಿಗೆ ಆಟದ ಮಾದರಿ ಬದಲಾಗುತ್ತಿದೆ. 2016ರಲ್ಲಿ ಟಿ20, 2018 ರಲ್ಲಿ ಏಕದಿನ, 2022ರಲ್ಲಿ ಟಿ20, 2023ರಲ್ಲಿ ಏಕದಿನ ಮಾದರಿಯಲ್ಲಿ ಟೂರ್ನಿ ನಡೆದಿತ್ತು.
ಏಷ್ಯಾಕಪ್ನಲ್ಲಿ ಭಾರತ 8 ಬಾರಿ, ಶ್ರೀಲಂಕಾ 6 ಬಾರಿ, ಪಾಕಿಸ್ತಾನ ಎರಡು ಬಾರಿ ಚಾಂಪಿಯನ್ ಆಗಿದೆ. ಒಟ್ಟು ಬಾರಿ ಏಷ್ಯಾಕಪ್ ಟೂರ್ನಿ ಆಯೋಜನೆಗೊಂಡಿದೆ. ಅದರಲ್ಲಿ ಭಾರತ 8 ಪ್ರಶಸ್ತಿ ಗೆಲ್ಲುವುದರ ಜೊತೆಗೆ ಮೂರು ಆವೃತ್ತಿಗಳಲ್ಲಿ ರನ್ನರ್ಅಪ್ ಆಗಿದೆ. ಇನ್ನು ಏಷ್ಯಾಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 8 ತಂಡಗಳು ಸೆಣಸಾಟ ನಡೆಸ್ತಿವೆ. ಇವರೆಗೆ ಗರಿಷ್ಠ 6 ತಂಡಗಳು ಸೆಣಸಾಟ ನಡೆಸಿದ್ದವು.
ಇದನ್ನೂ ಓದಿ:ಗಿಲ್ಗಾಗಿ ಯಶಸ್ವಿ ಜೈಸ್ವಾಲ್ ಬಲಿ.. ಏಷ್ಯಾಕಪ್ ಓಪನರ್ ಸ್ಲಾಟ್ನಲ್ಲಿ ಮತ್ಯಾರು ಟಾರ್ಗೆಟ್?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ