/newsfirstlive-kannada/media/media_files/2026/01/20/rcb-9-2026-01-20-08-38-52.jpg)
ಐಪಿಎಲ್​ ಸೀಸನ್​ 19 ಕಿಕ್​ ಸ್ಟಾರ್ಟ್​ ಮಾಡೋಕೂ ಮುನ್ನ ಆರ್​​​ಸಿಬಿ ಸೇಲ್​ ಡೀಲ್​ ಫೈನಲ್​ ಹಂತ ತಲುಪಿದೆ. ಆರ್​​ಸಿಬಿ ನೂತನ ಮಾಲೀಕ ಯಾರಾಗ್ತಾರೆ? ಅನ್ನೋ ಪ್ರಶ್ನೆಗೆ ಕ್ಲೀಯರ್​ ಪಿಚ್ಚರ್​ ಸಿಕ್ಕಿದೆ. ರೆಡ್​ ಆರ್ಮಿಯ ಓನರ್ ಆಗೋಕೆ ಮಿಲೆನಿಯರ್​ಗಳ ಫೈಟ್​ ನಡೀತಿದೆ. ಪೂರ್ವಾಭಾವಿ ಬಿಡ್​ ಓಪನ್ ಆದ ಬೆನ್ನಲ್ಲೇ ನಾಲ್ಕು ಕಂಪನಿಗಳು ಆರ್​​ಸಿಬಿ ಖರೀದಿಗೆ ಆಸಕ್ತಿ ತೋರಿಸಿ ಬಿಡ್​ ಮಾಡಿವೆ. ಆರ್​​​ಸಿಬಿಗೆ ಫೈನಲ್​ ಬಿಡ್​ ಮಾಡಿರೋದು ಯಾಱರು.
IPL ಸೀಸನ್​ 19ರ ಆರಂಭಕ್ಕೆ 2 ತಿಂಗಳು ಬಾಕಿ ಇರುವಾಗಲೇ ಆರ್​​​ಸಿಬಿ ಫ್ರಾಂಚೈಸಿಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಒಂದ್ಕಡೆ ಹೋಮ್​ಗ್ರೌಂಡ್​ ಹುಡುಕಾಟ, ಮತ್ತೊಂದೆಡೆ ಫ್ರಾಂಚೈಸಿ ಮಾರಾಟದ ಕಾರಣಕ್ಕೆ ಆರ್​​ಸಿಬಿ ಸಖತ್​ ಸುದ್ದಿಯಲ್ಲಿದೆ. ಮುಂದಿನ ಸೀಸನ್​ ಐಪಿಎಲ್​ಗೂ ಮುನ್ನ ಆರ್​​ಸಿಬಿ ತಂಡಕ್ಕೆ ಹೊಸ ಓನರ್​ ಬರೋದಂತೂ ಕನ್ಫರ್ಮ್ ಆಗಿದೆ. ಸೇಲ್​ನ ಡೀಲ್​ ಅಂತಿಮ ಹಂತ ತಲುಪಿದೆ.
ಸದ್ಯ ಹಾಲಿ ಚಾಂಪಿಯನ್​​ ಆರ್​​ಸಿಬಿಯ ಬ್ರ್ಯಾಂಡ್​ ವ್ಯಾಲ್ಯೂ 2 ಬಿಲಿಯನ್​ ಡಾಲರ್​ ಗಡಿ ದಾಟಿದೆ. ಆಧಾರದಲ್ಲಿ ಬೇಸ್ ಪ್ರೈಸ್​ ಫಿಕ್ಸ್​ ಮಾಡಲಾಗಿದೆ. ಮಾರಾಟದ ಡೀಲ್​ ಮಾಡ್ತಿರೋ ಸಿಟಿ ಬ್ಯಾಂಕ್​ ಬಿಡ್ಡಿಂಗ್​ ಓಪನ್​ ಮಾಡೋಕೂ ಮುನ್ನ ಪೂರ್ವಾಭಾವಿಯಾಗಿ ನಾನ್​ ಬಿಡ್ಡಿಂಗ್​ ಬಿಡ್​ ಸಲ್ಲಿಕೆಯಾಗಿದೆ. ಹೊಸ ಖರೀದಿದಾರರು ಸರ್​​ಪ್ರೈಸ್​ ಎಂಟ್ರಿ ಕೊಟ್ಟಿದ್ದು, ಸದ್ಯ 5 ಕಂಪನಿಗಳು ನಾನ್​ ಬಿಡ್ಡಿಂಗ್​ ಬಿಡ್​​​ ಸಲ್ಲಿಕೆ ಮಾಡಿವೆ.
ಆರ್​​​ಸಿಬಿಗೆ ಬಿಡ್​ ಸಲ್ಲಿಸಿದ ಮ್ಯಾಂಚೆಸ್ಟರ್​ ಯುನೈಟೆಡ್​​.!
ವಿಶ್ವದ ಖ್ಯಾತ ಫುಟ್ಬಾಲ್​ ಕ್ಲಬ್​ ಮ್ಯಾಂಚೆಸ್ಟರ್​ ಯುನೈಟೆಡ್​ನ ಕಣ್ಣು ಕೂಡ ಆರ್​​ಸಿಬಿ ತಂಡದ ಓನರ್​ಶಿಪ್​ ಮೇಲೆ ಬಿದ್ದಿದೆ. ಮ್ಯಾಂಚೆಸ್ಟರ್​ ಯುನೈಟೆಡ್​ನ ಕೋ ಓನರ್​ ಅವ್ರಾಮ್​ ಗ್ಲೇಜರ್​ ಆರ್​​ಸಿಬಿಗೆ ಬಿಡ್​ ಸಲ್ಲಿಕೆ ಮಾಡಿದ್ದಾರೆ. ಮೂಲಗಳ ಪ್ರಕಾರ ಅವ್ರಾಮ್​ ಗ್ಲೇಜರ್​ 16, 300 ಕೋಟಿಗೆ ಬಿಡ್​ ಸಲ್ಲಿಕೆ ಮಾಡಿದ್ದಾರೆ. ಅಮೇರಿಕಾ ಬಿಲೆನೀಯರ್​ ಮಲ್ಕಮ್​ ಗ್ಲೇಕರ್​ ಮಗನಾಗಿರೋ ಅವ್ರಾಮ್​ ಮ್ಯಾಂಚೆಸ್ಟರ್​ ಯುನೈಟೆಡ್​ನ ಡೈರೆಕ್ಟರ್​ ಆಗಿದ್ದಾರೆ. ಐಎಲ್​ಟಿ20 ಲೀಗ್​ನಲ್ಲಿ ಡಸರ್ಟ್​ ವಿಸ್ಪರ್ಸ್​ ತಂಡದ ಮಾಲೀಕರಾಗಿದ್ದಾರೆ.
ಇದನ್ನೂ ಓದಿ: ‘ಪ್ರಾಮಾಣಿಕತೆ ಇನ್ನೂ ಸತ್ತಿಲ್ಲ’; ಮರಳಿ ಕೈಸೇರಿದ 10 ಲಕ್ಷದ ಚಿನ್ನಾಭರಣ.. BMTC ಕಂಡಕ್ಟರ್ ದೊಡ್ಡ ಗುಣಕ್ಕೆ ಕಣ್ಣೀರು..!
/filters:format(webp)/newsfirstlive-kannada/media/media_files/2026/02/06/rcb-21-2026-02-06-10-58-24.jpg)
ಆಧಾರ್​ ಪೂನಾವಾಲ ಬಿಡ್
ಆರ್​​ಸಿಬಿ ಸೇಲ್​ಗಿದೆ ಅನ್ನೋ ಸುದ್ದಿ ಹೊರಬಿದ್ದ ಬೆನ್ನಲ್ಲೇ ಸೀರಮ್​ ಇನ್ಸಿಸ್ಟ್ಯೂಟ್​ನ ಆದಾರ್​ ಪೂನಾವಾಲ ಖರೀದಿಗೆ ಆಸಕ್ತಿಯಿದೆ ಎಂದು ಹೇಳಿದ್ರು. ಹೇಳಿದಂತೆ ಇದೀಗ ಆಧಾರ್​ ಪೂನಾವಾಲಾ ಆರ್​​​ಸಿಬಿಗೆ ಬಿಡ್​ ಮಾಡಿದ್ದಾರೆ. ಆರ್​​ಸಿಬಿ ಓನರ್​ ಆಗಬೇಕು ಎಂದು ಅತೀವ ಆಸಕ್ತಿ ಹೊಂದಿರೋ ಆಧಾರ್​ ಪೂನಾವಾಲಾ ಬಿಗ್​ ಅಮೌಂಟ್​ ಕೋಟ್​​​ ಮಾಡಿದ್ದಾರೆ ಎನ್ನಲಾಗಿದೆ. ತಂಡದ ಬಹುಪಾಲು ಷೇರುಗಳು ಆಧಾರ್​ ಪೂನಾವಾಲಾ ಪಾಲಾಗೋ ಸಾಧ್ಯತೆಯಿದೆ ಅನ್ನೋದು ಮಾರ್ಕೆಟ್​​ನ ಸದ್ಯದ ಟಾಕ್.!
ಮಣಿಪಾಲ್ ಗ್ರೂಪ್​ ಎಂಟ್ರಿ
ಆರ್​​ಸಿಬಿ ಖರೀದಿಯ ರೇಸ್​​ ಕರ್ನಾಟಕದ ಮಣಿಪಾಲ್​ ಗ್ರೂಪ್​ ಸರ್​​ಪ್ರೈಸ್​ ಎಂಟ್ರಿಕೊಟ್ಟಿದೆ. ಮಣಿಪಾಲ್​ ಗ್ರೂಪ್​ನ ಚೇರ್​​ಮನ್​ ರಂಜನ್​ ಪೈ ಆರ್​​ಸಿಬಿ ಖರೀದಿಗೆ ನಾನ್​ ಬಿಡ್ಡಿಂಗ್ ಬಿಡ್​​ ಸಲ್ಲಿಕೆ ಮಾಡಿದ್ದಾರೆ. 280 ಕೋಟಿಗೂ ಅಧಿಕ ನೆಟ್​ ವರ್ತ್​ ಹೊಂದಿರೋ ರಂಜನ್​ ಪೈ, ಆಧಾರ್​ ಪೂನಾವಾಲಾಗೆ ಟಫ್​ ಫೈಟ್​ ಕೊಡಲಿದ್ದಾರೆ.
ಬೆಂಗಳೂರು ಮತ್ತೊಂದು ಕಂಪನಿ ಕೂಡ ಆರ್​​​ಸಿಬಿ ಖರೀದಿಗೆ ಹೆಚ್ಚು ಆಸಕ್ತಿ ತೋರಿಸಿದೆ. EQT ಯುಎಸ್​​​ ಇನ್ವೆಸ್ಟ್​ಮೆಂಟ್​ ಕಂಪನಿ ಕೂಡ ನಾನ್​ ಬಿಡ್ಡಿಂಗ್ ಬಿಡ್​ ಸಲ್ಲಿಕೆ ಮಾಡಿದೆ. ಕಂಪನಿಯ ಸಿಇಒ ಗೌತಮ್​ ನಾಡೆಲ್ಲಾ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಖರೀದಿಗೆ ಬಿಗ್​ ಅಮೌಂಟ್​ಗೆ ಕೋಟ್​ ಮಾಡಿದ್ದಾರೆ. ಇದ್ರ ಜೊತೆಗೆ ಪ್ರೇಮ್​ ಜಿ ಇನ್ವೆಸ್ಟ್​ ಎಂಬ ಹೆಸರಿನ ಕಂಪನಿ ಕೂಡ ಆರ್​​​ಸಿಬಿ ಖರೀದಿಗೆ ಆಸಕ್ತಿ ತೋರಿಸಿದೆ.
ನಾನ್​ ಬಿಡ್ಡಿಂಗ್​ ಬಿಡ್​ ಅವಕಾಶದಲ್ಲೇ 5 ಪ್ರಮುಖ ಕಂಪನಿಗಳು ಆರ್​​ಸಿಬಿಯನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿವೆ. ಇವುಗಳ ಜೊತೆಗೆ ಇನ್ನೂ ಹಲವು ಕಂಪನಿಗಳು ಕೂಡ ಆರ್​​ಸಿಬಿ ಮಾಲೀಕತ್ವದ ಗಾದಿಯ ಮೇಲೆ ಕಣ್ಣಿಟ್ಟಿವೆ. ಮುಂದಿನ ದಿನಗಳಲ್ಲಿ ಬಿಡ್ಡಿಂಗ್​ ವಾರ್​ಗೆ ಇನ್ನೂ ಹಲವು ಕಂಪನಿಗಳು ಎಂಟ್ರಿ ಕೊಡೋದ್ರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ:ಚಂದದ ಕುಟುಂಬ ಹಾಳು ಮಾಡಲು ಬಂದಳಾ ಪ್ರಿಯಾ..? ನಂದಗೋಕುಲ ವೀಕ್ಷಕರಲ್ಲಿ ಕಾಡಿದ ಆತಂಕ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us