/newsfirstlive-kannada/media/post_attachments/wp-content/uploads/2024/08/SHREYANKA-PATIL.jpg)
ಮಹಿಳಾ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ವನಿತೆಯರು ಏಕದಿನ ವಿಶ್ವಕಪ್​ ಗೆದ್ದಿದ್ದಾಯ್ತು. ಇತಿಹಾಸ ರಚಿಸಿದ್ದಾಯ್ತು. ಇದೀಗ ಕ್ರಿಕೆಟ್​ ಜಗತ್ತಿನ ಫೋಕಸ್​​ ಮಹಿಳಾ ಪ್ರೀಮಿಯರ್​ ಲೀಗ್​ ಕಡೆಗೆ ಶಿಫ್ಟ್​ ಆಗಿದೆ. ಮೆಗಾ ಆಕ್ಷನ್​ಗೂ ಮುನ್ನ ಆಟಗಾರ್ತಿಯರ ರಿಟೈನ್​-ರಿಲೀಸ್​ ಪಟ್ಟಿ ಅನೌನ್ಸ್​ ಮಾಡೋಕೆ ಇವತ್ತೇ ಲಾಸ್ಟ್​ ಡೇಟ್​. ಇಂದು ಸಂಜೆಯೊಳಗೆ ರಿಟೈನ್ಶನ್​ ಲಿಸ್ಟ್​ ಅನೌನ್ಸ್​​ ಮಾಡಬೇಕಿದ್ದು, ಇದಕ್ಕೂ ಮುನ್ನ ಆರ್​​ಸಿಬಿ ಫ್ರಾಂಚೈಸಿ ಗೊಂದಲದ ಗೂಡಾಗಿದೆ. ಆರ್​ಸಿಬಿಯಲ್ಲಿ ಯಾರು ಉಳೀತಾರೆ? ಯಾರು ರಿಲೀಸ್​ ಆಗ್ತಾರೆ? ಅನ್ನೋದು ಸಿಕ್ಕಾಪಟ್ಟೆ ಕುತೂಹಲ ಹುಟ್ಟು ಹಾಕಿದೆ.
ಇದನ್ನೂ ಓದಿ: ಒಂದೇ ಒಂದು ಥ್ರೋನಿಂದ ಬದಲಾಯ್ತು ಅದೃಷ್ಟ.. ವಿಶ್ವಕಪ್ ಗೆದ್ದ ತಾರೆಯರ ಹಾರ್ಟ್​ ಟಚಿಂಗ್ ಸ್ಟೋರಿ..
ಮಹಿಳಾ ಪ್ರೀಮಿಯರ್​​ ಲೀಗ್​ನ ರಿಟೈನ್ಶನ್​ ಲಿಸ್ಟ್​ ಅನೌನ್ಸ್​ಮೆಂಟ್​ಗೆ ಕೌಂಟ್​ಡೌನ್​ ಆರಂಭವಾಗಿದೆ. ಇಂದು ಸಂಜೆಯೊಳಗೆ ಫ್ರಾಂಚೈಸಿಗಳು ರಿಟೈನ್ಶನ್​​ ಲಿಸ್ಟ್​ ಅನೌನ್ಸ್​ ಮಾಡಬೇಕಿದೆ. ಮ್ಯಾಕ್ಸಿಮಮ್​ 5 ಆಟಗಾರ್ತಿಯರನ್ನ ರಿಟೈನ್​ ಮಾಡಿಕೊಳ್ಳೋಕೆ ಅವಕಾಶವಿದ್ದು, ಗರಿಷ್ಠ ಇಬ್ಬರು ಭಾರತೀಯ ಕ್ರಿಕೆಟರ್ಸ್​ ಹಾಗೂ ಇಬ್ಬರು ವಿದೇಶಿ ಆಟಗಾರ್ತಿಯರನ್ನ ರಿಟೈನ್​​ ಮಾಡಿಕೊಳ್ಳಬಹುದು. ಆದ್ರೆ, ಕಡ್ಡಾಯವಾಗಿ ಒಬ್ಬರು ಅನ್​​ಕ್ಯಾಪ್ಡ್ ಪ್ಲೇಯರ್​​ನ ರಿಟೈನ್​ ಮಾಡಿಕೊಳ್ಳಲೇಬೇಕಿದೆ. ಈ ರೂಲ್ಸ್​ನಡಿ ಆರ್​​ಸಿಬಿ ಐವರು ಆಟಗಾರ್ತಿಯರನ್ನ ರಿಟೈನ್​ ಮಾಡಿಕೊಳ್ಳೋಕೆ ರೆಡಿಯಾಗಿದೆ. ಬರೋಬ್ಬರಿ 9.25 ಕೋಟಿ ಹಣವನ್ನ ಇದಕ್ಕಾಗಿ ವ್ಯಯಿಸಲು ಆರ್​​ಸಿಬಿ ಮುಂದಾಗಿದೆ.
RCB ರಿಟೈನ್ಶನ್​ ನಂ.1: ಸ್ಮೃತಿ ಮಂದಾನ
RCB ಫ್ರಾಂಚೈಸಿಗೆ ಚೊಚ್ಚಲ ಕಪ್​ ಗೆಲ್ಲಿಸಿಕೊಟ್ಟ ನಾಯಕಿ ಸ್ಮೃತಿ ಮಂದಾನ ತಂಡದ ಫಸ್ಟ್​ ಚಾಯ್ಸ್​​ ರಿಟೈನ್ಶನ್​.! ಬ್ಯಾಟಿಂಗ್​, ನಾಯಕತ್ವ ಎರಡರಲ್ಲೂ ಮಂದಾನ ಮೋಡಿ ಮಾಡಿದ್ದಾರೆ. ಮಂದಾನ ಇರೋ ಕಾರಣಕ್ಕೆ ಅಪಾರ ಪ್ರಮಾಣದ ಫ್ಯಾನ್​ ಫಾಲೋವಿಂಗ್​ ತಂಡಕ್ಕಿದೆ. ಕೊಹ್ಲಿ ಅಂದ್ರೆ ಹೇಗೆ ಆರ್​​ಸಿಬಿ ಎಂಬ ಮಾತಿದ್ಯೂ ಹಾಗೆ ಮಂದಾನ ಅಂದ್ರೆ ಆರ್​​ಸಿಬಿ ವುಮೆನ್ಸ್​ ಟೀಮ್​ ಎಂಬಂತಾಗಿದೆ. ಹೀಗಾಗಿ 3.50 ಕೋಟಿ ನೀಡಿ ಮಂದಾನ ರಿಟೈನ್​ ಮಾಡಿಕೊಳ್ಳಲು ಫ್ರಾಂಚೈಸಿ ಮುಂದಾಗಿದೆ.
RCB ರಿಟೈನ್ಶನ್​ ನಂ.2: ಎಲ್ಲಿಸ್​ ಪೆರ್ರಿ
ಆಸಿಸ್​ ಆಲ್​​ರೌಂಡರ್, ಅಭಿಮಾನಿಗಳ ನೆಚ್ಚಿನ cheri cheri lady ಎಲ್ಲಿಸ್​​ ಪೆರ್ರಿ RCB ರಿಟೈನ್​ ಮಾಡಿಕೊಳ್ಳೋ ನಂಬರ್​ 2 ಪ್ಲೇಯರ್​​. ಮಹಿಳಾ ಪ್ರೀಮಿಯರ್​ ಲೀಗ್​ನ ಟಾಪ್​ ಸ್ಕೋರರ್​ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರೋ ಪೆರ್ರಿ, ಬೌಲಿಂಗ್​ನಲ್ಲಿ 3 ಸೀಸನ್​​ಗಳಲ್ಲಿ ಬೊಂಬಾಟ್​ ಪ್ರದರ್ಶನ ನೀಡಿದ್ದಾರೆ. ಆರ್​​ಸಿಬಿ ತಂಡದ ಸಕ್ಸಸ್​​ನಲ್ಲಿ ಪ್ರಮುಖ ಪಾತ್ರ ವಹಿಸಿರೋ ಪೆರ್ರಿಯನ್ನ ಚೊಚ್ಚಲ ಆವೃತ್ತಿಗೂ ಮುನ್ನ ನಡೆದ ಹರಾಜಿನಲ್ಲಿ 1.70 ಕೋಟಿ ನೀಡಿ ಫ್ರಾಂಚೈಸಿ ಖರೀದಿಸಿತ್ತು. ಇದೀಗ 2.50 ಕೋಟಿ ನೀಡಿ ರಿಟೈನ್ ಮಾಡಿಕೊಳ್ಳಲು ಚಿಂತಿಸಿದೆ.
RCB ರಿಟೈನ್ಶನ್​ ನಂ.3: ರಿಚಾ ಘೋಷ್​
ಯಂಗ್​ & ಡೇರ್​​ ಡೆವಿಲ್​ ಬ್ಯಾಟರ್​ & ವಿಕೆಟ್​ ಕೀಪರ್​ ರಿಚಾ ಘೋಷ್​ ಆರ್​ಸಿಬಿ ರಿಟೈನ್​ ಲಿಸ್ಟ್​ನಲ್ಲಿರೋ 3ನೇ ಆಟಗಾರ್ತಿ. 22 ವರ್ಷದ ರಿಚಾ ಆಡಿದ 3 ಸೀಸನ್​ಗಳಲ್ಲೇ ಫಿನಿಶಿಂಗ್​ ಸ್ಕಿಲ್​ ಹಾಗೂ ವಿಕೆಟ್​ ಕೀಪಿಂಗ್​ನಿಂದ ಗಮನ ಸೆಳೆದಿದ್ದಾರೆ. ಮಹಿಳಾ ಪ್ರೀಮಿಯರ್​ ಲೀಗ್​​​ನಲ್ಲಿ ಹೆಚ್ಚು ರನ್​ಗಳಿಸಿದ ಆರ್​​ಸಿಬಿಯ 3ನೇ ಆಟಗಾರ್ತಿಯಾಗಿರೋ ರಿಚಾ ಘೋಷ್​​ನ​ ಫ್ರಾಂಚೈಸಿ ಪ್ಯೂಚರ್​ ಸ್ಟಾರ್ ಆಗಿ ನೋಡ್ತಿದೆ. ಹೀಗಾಗಿ 1.75 ಕೋಟಿ ನೀಡಿ ರಿಟೈನ್​ ಮಾಡಿಕೊಳ್ಳೋಕೆ ಮುಂದಾಗಿದೆ.
RCB ರಿಟೈನ್ಶನ್​ ನಂ.4: ಶ್ರೇಯಾಂಕ VS ರೇಣುಕಾ ಫೈಟ್​
ಮೊದಲ 3 ರಿಟೈನ್ಶನ್​ ವಿಚಾರದಲ್ಲಿ ಆರ್​​ಸಿಬಿ ಸ್ಪಷ್ಟವಾಗಿದೆ. 4ನೇ ರಿಟೈನ್ಶನ್ ​ಗೊಂದಲವಾಗಿದೆ. ಆಲ್​​ರೌಂಡರ್​, ಕನ್ನಡತಿ, ಅಭಿಮಾನಿಗಳ ನೆಚ್ಚಿನ ಟಗರುಪುಟ್ಟಿ ಶ್ರೇಯಾಂಕ ಪಾಟೀಲ್​ ಹಾಗೂ ವೇಗಿ ರೇಣುಕಾ ಸಿಂಗ್​ ಇಬ್ಬರಲ್ಲಿ ಒಬ್ಬರ ಆಯ್ಕೆ ಸದ್ಯ ಫ್ರಾಂಚೈಸಿಯ ಮುಂದಿದೆ. 1.5 ಕೋಟಿ ನೀಡಿ ಖರೀದಿಸಿದ್ದ ರೇಣುಕಾ ಸಿಂಗ್ ಕಡಿಮೆ ಮೊತ್ತಕ್ಕೆ ರಿಟೈನ್​ ಆಗೋಕೆ ಒಪ್ಪೋದು ಅನುಮಾನವೇ. ಹೀಗಾಗಿ ಬೇಸ್​ಪ್ರೈಸ್​ 10 ಲಕ್ಷ ನೀಡಿ ಖರೀದಿಸಿದ್ದ ಶ್ರೇಯಾಂಕಾನ 1 ಕೋಟಿ ನೀಡಿ ರಿಟೈನ್​ ಮಾಡಿಕೊಳ್ಳೋಕೆ ಫ್ರಾಂಚೈಸಿ ಒಲವು ತೋರಿದೆ.
RCB ರಿಟೈನ್ಶನ್​ ನಂ.5: ಅನ್​​ಕ್ಯಾಪ್ಡ್​​ ಟೆನ್ಶನ್​.!
ಅನ್​​ಕ್ಯಾಪ್ಡ್​ ಪ್ಲೇಯರ್​​ ರಿಟೈನ್ಶನ್​ ಆರ್​​​ಸಿಬಿಗೆ ದೊಡ್ಡ ಟೆನ್ಶನ್​ ತಂದಿಟ್ಟಿದೆ. ತಂಡದಲ್ಲಿರೋ ಯಾವೊಬ್ಬ ಅನ್​​ಕ್ಯಾಪ್ಡ್​ ಆಟಗಾರ್ತಿ ಕೂಡ ಪ್ರಾಮಿಸಿಂಗ್​ ಅನಿಸಿಲ್ಲ. ಬರೋಬ್ಬರಿ 1.2 ಕೋಟಿ ನೀಡಿ ಖರೀದಿಸಿದ ಪ್ರೇಮಾ ರಾವತ್​ 3 ಪಂದ್ಯ ಆಡಿ ಕೇವಲ 1 ವಿಕೆಟ್​ ಉರುಳಿಸಿದ್ರು. ಬೇಸ್​ ಪ್ರೈಸ್​ಗೆ ತಂಡಕ್ಕೆ ಬಂದ ಜ್ಯೋತಿಶಾ ಇಂಪ್ರೆಸ್ಸಿವ್​ ಅನಿಸಿಲ್ಲ. ಆಲ್​​ರೌಂಡರ್​ ಜಾಗ್ರವಿ ಪವಾರ್​ಗೆ ಅವಕಾಶ ಸಿಕ್ಕಿಲ್ಲ. ಕಡ್ಡಾಯವಾಗಿ ರಿಟೈನ್ಶನ್​ ಮಾಡಬೇಕಿರೋದ್ರಿಂದ ಈ ಮೂವರಲ್ಲೇ ಒಬ್ಬರಿಗೆ ಮಣೆ ಹಾಕೋ ಸಾಧ್ಯತೆಯಿದೆ. ಇದಕ್ಕಾಗಿ 50 ಲಕ್ಷ ವ್ಯಯಿಸಲಿದೆ.
ಸದ್ಯಕ್ಕಂತೂ ಆರ್​​ಸಿಬಿಯ ರಿಟೈನ್ಶನ್​ ಲಿಸ್ಟ್​ ರೆಡಿಯಾಗಿದೆ. ಇದೇ ಫೈನಲ್​ ಅಲ್ಲ.. ಬದಲಾಗಲೂಬಹುದು. ಯಾಕಂದ್ರೆ, 15 ಕೋಟಿಯ ಪರ್ಸ್​ನಲ್ಲಿ 9.25 ಕೋಟಿಯನ್ನ 5 ಆಟಗಾರ್ತಿಯರ ರಿಟೈನ್ಶನ್​ಗೆ ವ್ಯಯಿಸಿದ್ರೆ, ಉಳಿದ 5.75 ಕೋಟಿಯಲ್ಲಿ ಬಲಿಷ್ಟ ತಂಡವನ್ನ ಕಟ್ಟೋದು ಸವಾಲಾಗಲಿದೆ. ಹೀಗಾಗಿ ಇಬ್ಬರು ಅಥವಾ ಮೂವರನ್ನ ರಿಟೈನ್​ಕೊಂಡು ಆಕ್ಷನ್​ ವೇಳೆ ಆರ್​ಟಿಎಮ್​ ದಾಳ ಉರುಳಿಸೋ ಪ್ಲಾನ್​ ಮಾಡಿದ್ರೂ ಅಚ್ಚರಿ ಪಡಬೇಕಿಲ್ಲ.
ಇದನ್ನೂ ಓದಿ: ವಿರಾಟ್​ ಕೊಹ್ಲಿ ಅಂದ್ರೆ ಎಲ್ಲರಿಗೂ ಯಾಕಿಷ್ಟ..? Birthday special!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us