689 ರನ್​ಗಳ ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ.. ರಣಜಿ ಪಂದ್ಯದ ಹೈಲೈಟ್ಸ್​..!

ರಣಜಿ ಟೂರ್ನಿಯ ಮೊದಲ ಸೆಮಿ​​​ಫೈನಲ್​ ಪಂದ್ಯದಲ್ಲಿ ಕರ್ನಾಟಕ ತಂಡ, ಬೃಹತ್ ಮೊತ್ತ ಕಲೆಹಾಕಿದೆ. ಮೊದಲ ದಿನ ಕೆ.ಎಲ್.ರಾಹುಲ್ ಶತಕ ಸಿಡಿಸಿ ಮಿಂಚಿದ್ರೆ ಎರಡನೇ ದಿನದಾಟದಲ್ಲಿ ನಾಯಕ ಪಡಿಕ್ಕಲ್ ಮತ್ತು ಆರ್​.ಸ್ಮರಣ್ ಭರ್ಜರಿ ಬ್ಯಾಟಿಂಗ್ ನಡೆಸಿದ್ರು.

author-image
Ganesh Kerekuli
ranaji thorphy
Advertisment
  • ಪಡಿಕ್ಕಲ್-ಕರುಣ್ ನಾಯರ್ ಆಟಕ್ಕೆ ಬ್ರೇಕ್..!
  • ಚೊಚ್ಚಲ ದ್ವಿಶತಕ ಸಿಡಿಸಿದ ದೇವದತ್ ಪಡಿಕ್ಕಲ್..!
  • ಗಮನ ಸೆಳೆದ ವಿಕೆಟ್ ಕೀಪರ್ ಕೃತಿಕ್ ಕೃಷ್ಣ ಅರ್ಧಶತಕ..!

ರಣಜಿ ಟೂರ್ನಿಯ ಮೊದಲ ಸೆಮಿ​​​ಫೈನಲ್​ ಪಂದ್ಯದಲ್ಲಿ ಕರ್ನಾಟಕ ತಂಡವು ಉತ್ತರಖಾಂಡ್ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ. ಮೊದಲ ದಿನ ಕೆ.ಎಲ್.ರಾಹುಲ್ ಶತಕ ಸಿಡಿಸಿ ಮಿಂಚಿದ್ರೆ ಎರಡನೇ ದಿನದಾಟದಲ್ಲಿ ನಾಯಕ ಪಡಿಕ್ಕಲ್ ಮತ್ತು ಆರ್​.ಸ್ಮರಣ್ ಭರ್ಜರಿ ಬ್ಯಾಟಿಂಗ್ ನಡೆಸಿದ್ರು. ಲಕ್ನೋ ಮೈದಾನದಲ್ಲಿ ಕರ್ನಾಟಕ ತಂಡದ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ. 

ಕರ್ನಾಟಕ ತಂಡದ ರಣಜಿ ಟುರ್ನಿಯ ಫೈನಲ್ ಹಾದಿ, ದಿನೇ ದಿನೇ ಸುಗಮವಾಗ್ತಿದೆ. ಎರಡನೇ ದಿನದಾಟದಲ್ಲಿ ಕರ್ನಾಟಕ, ಭರ್ಜರಿ ಬ್ಯಾಟಿಂಗ್ ನಡೆಸಿತು. ಉತ್ತರಾಖಂಡ್ ಬೌಲರ್​ಗಳ ಬೆವರಿಳಿಸಿದ ಕರ್ನಾಟಕ, ಬೃಹತ್ ಮೊತ್ತ ಕಲೆಹಾಕಿತು. ಮೊದಲ ದಿನದಾಟದಲ್ಲಿ ಕೆ.ಎಲ್.ರಾಹುಲ್ ಸೆಂಚುರಿ ಸ್ಟಾರ್ ಆದ್ರೆ ಎರಡನೇ ದಿನದಾಟದಲ್ಲಿ ಪಡಿಕ್ಕಲ್ ಮತ್ತು ಸ್ಮರಣ್, ಹೀರೋಗಳಾಗಿ ಮಿಂಚಿದ್ರು. 

ಪಡಿಕ್ಕಲ್-  ಕರುಣ್ ನಾಯರ್ ಆಟಕ್ಕೆ ಬ್ರೇಕ್..!

ಆರಂಭಿಕ ಕೆ.ಎಲ್.ರಾಹುಲ್  ಜೊತೆ  ದ್ವಿಶತಕದ ಜೊತೆಯಾಟವಾಡಿದ್ದ ನಾಯಕ ದೇವದತ್ ಪಡಿಕ್ಕಲ್, ಕರುಣ್ ನಾಯರ್ ಜೊತೆಯೂ ಸಾಲಿಡ್ ಪಾರ್ಟ್ನರ್​ಶಿಪ್ ಬಿಲ್ಡ್ ಮಾಡಿದ್ರು. 3ನೇ ವಿಕೆಟ್​ಗೆ ಪಡಿಕ್ಕಲ್ ಮತ್ತು ಕರುಣ್, 129 ರನ್​ಗಳ ಕಾಣಿಕೆ ನೀಡಿದ್ರು. 105 ಎಸೆತಗಳನ್ನ ಎದುರಿಸಿದ ಕರುಣ್ ನಾಯರ್, 8 ಬೌಂಡ್ರಿ, 1 ಸಿಕ್ಸರ್​ ನೆರವಿನಿಂದ 60 ರನ್​ಗಳಿಸಿ ಔಟಾದ್ರು.

ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಕತ್ತು, ಹೊಟ್ಟೆಗೆ ಬಿಯರ್ ಬಾಟಲಿಯಿಂದ ಇರಿದ ಪ್ರೇಮಿ!

ಕ್ರೀಸ್​​ ಎಂಟ್ರಿ ಕೊಟ್ಟಾಗಿನಿಂದಲೂ ಆತ್ಮವಿಶ್ವಾಸದಿಂದಲೇ ಬ್ಯಾಟ್ ಬೀಸಿದ್ದ ನಾಯಕ ದೇವದತ್ ಪಡಿಕ್ಕಲ್, ಆರ್.ಸ್ಮರಣ್ ಜೊತೆಗೂಡಿ ಅರ್ಧಶತಕ ಕಾಣಿಕೆ ಸಹ ನೀಡಿದ್ರು. ಅಷ್ಟೇ ಅಲ್ಲ..!  ರಣಜಿ ಟೂರ್ನಿಯಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ಮಿಂಚಿದ್ರು. 330 ಎಸೆತಗಳನ್ನ ಫೇಸ್ ಮಾಡಿದ್ದ ಪಡಿಕ್ಕಲ್, 29 ಬೌಂಡ್ರಿ ಮತ್ತು 3 ಸಿಕ್ಸರ್​ಗಳ ನೆರವಿನಿಂದ 232 ರನ್​​ ದಾಖಲಿಸಿದ್ರು. ಪಡಿಕ್ಕಲ್ ಬ್ಯಾಟಿಂಗ್ ಸ್ಟ್ರೈಕ್​ರೇಟ್ 70.30 
ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಕೃತಿಕ್ ಕೃಷ್ಣ, ಬ್ಯಾಟಿಂಗ್​ನಲ್ಲಿ ಇಂಪ್ರೆಸ್ ಮಾಡಿದ್ರು. 6ನೇ ವಿಕೆಟ್​ಗೆ ಸ್ಮರಣ್ ಜೊತೆಗೂಡಿ ಕೃತಿಕ್, 123 ರನ್​ಗಳ ಜೊತೆಯಾಟವಾಡಿದ್ರು. ಈ ನಡುವೆ ಕೃತಿಕ್, 60 ರನ್​ಗಳಿಸಿ ಪೆವಿಲಿಯನ್ ಸೇರಿಕೊಂಡ್ರು. ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಶತಕ ಮಿಸ್​ ಮಾಡಿಕೊಂಡಿದ್ದ ಇನ್​ಫಾರ್ಮ್ ಬ್ಯಾಟರ್ ಆರ್.ಸ್ಮರಣ್, ಉತ್ತರಖಂಡ್ ವಿರುದ್ಧ ಚಾನ್ಸ್ ಮಿಸ್ ಮಾಡಿಕೊಳ್ಳಲಿಲ್ಲ. 191 ಎಸೆತಗಳಲ್ಲಿ ಅಜೇಯ 121 ರನ್​ ಕಲೆಹಾಕಿರುವ ಸ್ಮರಣ್, ಕ್ರಿಸ್​ಕಾಯ್ದುಕೊಂಡಿದ್ದಾರೆ.​​​​

ಸ್ಮರಣ್​ಗೆ ಸಾಥ್ ನೀಡಿದ್ದ ವಿದ್ಯಾಧರ್ ಪಾಟೀಲ್, ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ್ದಾರೆ. 107 ಎಸೆತಗಳಲ್ಲಿ ವಿದ್ಯಾಧರ್ ಅಜೇಯ 35 ರನ್​ಗಳಿಸಿದ್ದಾರೆ. ಅಂತಿಮವಾಗಿ ಕರ್ನಾಟಕ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 689 ರನ್​ಗಳಿಸಿತು. ಮೂರನೇ ದಿನವಾದ ಇಂದು, ಕರ್ನಾಟಕ ಭೋಜನ ವಿರಾಮದವರೆಗೂ, ಬ್ಯಾಟಿಂಗ್ ಮಾಡುವ ಲೆಕ್ಕಾಚಾರದಲ್ಲಿದೆ. ಆ ಮೂಲಕ 700 ರನ್​ಗಡಿ ದಾಟುವ, ಪ್ಲಾನ್​ನಲ್ಲಿದೆ.

ಇದನ್ನೂ ಓದಿ:ನಾಯಕತ್ವ ಬದಲಾವಣೆ ಗದ್ದಲ; ರಾತ್ರೋರಾತ್ರಿ ಆಸ್ಟ್ರೇಲಿಯಾ ವಿಮಾನ ಏರಲು ಸಜ್ಜಾದ 20 ಶಾಸಕರು! ಲಿಸ್ಟ್ ಇಲ್ಲಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Ranji Trophy Karnataka team
Advertisment